ಟಿಕ್-ಟಾಕ್ ನಿಷೇಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಮನವಿ
ಈ ಹಿಂದೆಯೂ, ಫೈಜಲ್ ಸಿದ್ದಿಕಿಯು ‘ಟಿಕ್ ಟಾಕ್’ ಮೂಲಕ ಯುವತಿಯರ ಮೇಲೆ ಆಸಿಡ್ ದಾಳಿ ಮಾಡುವ ಬಗ್ಗೆ ಪ್ರೋತ್ಸಾಹನೆ ನೀಡುವ ವಿಡಿಯೋ ಪ್ರಸಾರ ಮಾಡಿದ್ದನು. ಅದಕ್ಕೂ ಮೊದಲು, ‘ಕೊರೋನಾದಿಂದ ಏನೂ ಆಗುವುದಿಲ್ಲ’ ಎಂಬಂತಹ ಹಲವಾರು ‘ವೀಡಿಯೊಗಳನ್ನು’ ಮತಾಂಧರು ಪ್ರಸಾರ ಮಾಡಿದ್ದರು. ಈ ಮೂಲಕ ಮತಾಂಧರು ‘ಟಿಕ್ ಟಾಕ್ ಜಿಹಾದ್’ ಅನ್ನು ನಡೆಸುತ್ತಿಲ್ಲವಲ್ಲ? ಎಂಬ ಪ್ರಶ್ನೆ ಉದ್ಭವಿಸಿದರೆ ಅದಕ್ಕೆ ಆಶ್ಚರ್ಯಪಡಬೇಕಿಲ್ಲ!
ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ ? ಸರ್ಕಾರ ಏಕೆ ಸ್ವತಃ ಕ್ರಮ ತೆಗೆದುಕೊಳ್ಳುವುದಿಲ್ಲ ?
ನವ ದೆಹಲಿ : ಮುಜಿಬುರ್ ರಹಮಾನ್ ಮತ್ತು ಅವರ ಸಹಚರರಿಂದ ‘ಟಿಕ್-ಟಾಕ್’ ಆಪ್ ಮೂಲಕ ‘ಅತ್ಯಾಚಾರ’ಕ್ಕೆ ಪ್ರೊತ್ಸಾಹ ನೀಡುವ ವಿಡಿಯೋವನ್ನು ತಯಾರಿಸಿದ್ದಾರೆ. ‘ವೀಡಿಯೋದಲಿ’ ‘ಇಬ್ಬರು ಯುವಕರು ಪ್ಯಾಂಟ್ ಹಾಕಿಕೊಳ್ಳುತ್ತಿದ್ದಾರೆ ಮತ್ತು ಅವರ ಮುಂದೆ ಓರ್ವ ಯುವತಿಯು ಅವಳ ಬಟ್ಟೆಯನ್ನು ಸರಿಪಡಿಸುತ್ತ ಅಳುತ್ತಿದ್ದಾಳೆ’, ಈ ರೀತಿಯಲ್ಲಿ ತೋರಿಸಲಾಗಿದೆ. ಈ ‘ವಿಡಿಯೋ’ಗೆ ತೀವ್ರ ವಿರೋಧವಾಗುತ್ತಿದೆ.
೧. ದೆಹಲಿಯ ಬಿಜೆಪಿ ವಕ್ತಾರರಾದ ತೇಜಿಂದರ್‌ಪಾಲ್ ಸಿಂಗ್ ಬಗ್ಗಾ ಇವರು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಇವರಿಗೆ ಆ ‘ವಿಡಿಯೋ’ದ ಮಾಹಿತಿಯನ್ನು ನೀಡಿದ್ದಾರೆ. ಬಗ್ಗಾ ಅವರು ಮಾತನಾಡುತ್ತ, ‘ಆಯೋಗದ ಅಧ್ಯಕ್ಷರು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ’.
೨. ಇದರ ಬಗ್ಗೆ ರೇಖಾ ಶರ್ಮಾ ಅವರು ಮಾತನಾಡುತ್ತ, ಭಾರತದಲ್ಲಿ ‘ಟಿಕ್ ಟಾಕ್’ ಅನ್ನು ನಿಷೇಧಿಸಬೇಕು . ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ’ಎಂದು ಹೇಳಿದರು.