ನಾಗಠಾಣಾ ಬುದ್ರುಕ (ನಾಂದೇಡ್ ಜಿಲ್ಲೆ) ಇಲ್ಲಿಯ ಶ್ರೀ ಷ.ಬ್ರ. ೧೦೮ ಬಾಲvಪ್ಪಸ್ವಿ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜ್ ಸಹಿತ ಮತ್ತೋರ್ವರ ಹತ್ಯೆ
ನಾಂದೇಡ್ ಜಿಲ್ಲೆಯ ಮರಿ ತಾಲೂಕಿನ ನಾಗಠಾಣಾ ಬುದ್ರುಕದಲ್ಲಿ ಮೇ ೨೩ ರ ರಾತ್ರಿ ಒಂದುವರೆಯ ಸಮಯದಲ್ಲಿ ಕೆಲವು ಕಳ್ಳರು ಶ್ರೀ ಷ. ಬ್ರ. ೧೦೮ ಬಾಲತಪಸ್ವೀ ಶಿವಾಚಾರ್ಯ ನಿರ್ವಾಣರುದ್ರ ಪಶುಪತಿನಾಥ್ ಮಹಾರಾಜರ ಮಠವನ್ನು ಪ್ರವೇಶಿಸಿ ಅವರಿಂದ ನಗದನ್ನು ಲೂಟಿ ಮಾಡಿದರು. ನಂತರ ಅವರ ಕುತ್ತಿಗೆಯನ್ನು ಹಿಸುಕಿ ಹತ್ಯೆ ಮಾಡಲಾಯಿತು, ಅದೇರೀತಿ ಅಲ್ಲಿಯ ಸ್ನಾನಗೃಹದಲ್ಲಿ ಭಗವಾನ ಶಿಂದೆ ಈ ವ್ಯಕ್ತಿಯ ಶವ ಸಿಕ್ಕಿದೆ.