ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಅಮುಲ್ಯ ಲಿಯೋನಾ ಅವರ ಜಾಮೀನು ಅರ್ಜಿಗೆ ಪೊಲೀಸರಿಂದ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ರ್ಯಾಲಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ 19 ವರ್ಷದ ವಿದ್ಯಾರ್ಥಿನಿ ಅಮುಲ್ಯ ಲಿಯೋನಾ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದಾರೆ. ಅಮುಲ್ಯ ಪ್ರಭಾವಿ ವ್ಯಕ್ತಿಯಾಗಿದ್ದಾರೆ.

‘ಅಶ್ವಗಂಧ’ದಿಂದ ನಿರ್ಮಿಸಿದ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು ! – ಐಐಟಿ ದೆಹಲಿಯ ತೀರ್ಮಾನ

ಐಐಟಿ ದೆಹಲಿಯ ‘ಬಯೋಕೆಮಿಕಲ್’ ಇಂಜಿನಿಯರಿಂಗ್‌ನ ಪ್ರಾ. ಡಿ. ಸುಂದರ ಇವರು ಮಾಡಿದಂತಹ ಶೋಧನೆಗನುಸಾರ ‘ಅಶ್ವಗಂಧ’ದಿಂದ ತಯಾರಿಸಿದ ನೈಸರ್ಗಿಕ ಔಷಧಿಯು ಕೊರೋನಾ ಪೀಡಿತ ರೋಗಿಗಳನ್ನು ಗುಣಮುಖ ಮಾಡಬಹುದು. ಅಶ್ವಗಂಧದ ಒಂದು ರಾಸಾಯನಿಕ ಪದಾರ್ಥವು ಕೊರೋನಾದ ಜೀವಕೋಶವನ್ನು ಹೆಚ್ಚಾಗಿಸುವುದನ್ನು ತಡೆಗಟ್ಟಲು ಪರಿಣಾಮಕಾರಿಯಾಗಬಹುದು.

ಹೊಸೂರು (ಬೆಳಗಾವಿ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಕೊಲೆಗೆ ಯತ್ನ

ಹೊಸೂರಿನ (ತಾಲ್ಲೂಕು ಬೈಲಹೋಂಗಲ) ಗ್ರಾಮದ ಮೂರು ಸಾವಿರ ಮಠದ ಗಂಗಾಧರ ಸ್ವಾಮೀಜಿಯವರ ಮೇಲೆ ಮೇ 20 ರಂದು ತಡರಾತ್ರಿ ಮಾರಣಾಂತಿಕ ಹಲ್ಲೆಯಾಗಿದೆ. ಅಜ್ಞಾತ ವ್ಯಕ್ತಿಯೊಬ್ಬ ತಡರಾತ್ರಿ ಕಳ್ಳತನ ಮಾಡುವ ಉದ್ದೇಶದಿಂದ ಮಠಕ್ಕೆ ಪ್ರವೇಶಿಸಿ ಸ್ವಾಮೀಜಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಸರಸಂಘಚಾಲಕರು ಪ್ರಧಾನಮಂತ್ರಿಯವರಿಗೆ ನಿರ್ಭಯವಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸೂಚಿಸಬೇಕು ! – ಆಚಾರ್ಯ ಧರ್ಮೇಂದ್ರಜಿ ಮಹಾರಾಜ, ವಿಶ್ವ ಹಿಂದೂ ಪರಿಷತ್ತು

ವಿಶ್ವದ ಎಲ್ಲಕ್ಕಿಂತ ದೊಡ್ಡ ಸ್ವಯಂಸೇವಕ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತರವರು ಭಯ ಹಾಗೂ ಆತಂಕ ಈ ಕಾರಣಗಳಿಂದ ವ್ಯಕ್ತವಾಗುವ ಹಾಗೂ ಭಯಗೊಂಡ ಕೆಲವು ಮುಸಲ್ಮಾನರ ಬಗ್ಗೆ ದ್ವೇಷ ವ್ಯಕ್ತವನ್ನು ಮಾಡದೇ ಅನುಕಂಪವನ್ನು ತೋರಬೇಕು, ಎಂದು ಸೂಚಿಸಿದ್ದರು.

ಭಾರತವನ್ನು ‘ಹೈಡ್ರೊಕ್ಸಿಕ್ಲೊರೊಕ್ವೀನ್ನ ಎಲ್ಲಕ್ಕಿಂತ ದೊಡ್ಡ ಉತ್ಪಾದಕವನ್ನಾಗಿ ಮಾಡಿದ ಮಹಾನ್ ವಿಜ್ಞಾನಿ ಪ್ರಫುಲ್ಲಚಂದ್ರ ರೇ !

ಭಾರತ ದೇಶವು ಜೀವರಕ್ಷಣೆಯ ಔಷಧಿಗಳಿಗಾಗಿ ಪಶ್ಚಿಮ ದೇಶಗಳ ಎದುರು ಯಾಚನೆ ಮಾಡಬಾರದು ಎನ್ನುವುದು ಆಚಾರ್ಯ ಪ್ರಫುಲ್ಲಚಂದ್ರರ ಕನಸಾಗಿತ್ತು. ಆಚಾರ್ಯ ಪ್ರಫುಲ್ಲಚಂದ್ರರು ‘ಬಂಗಾಲ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯೂಟಿಕಲ್ ಎಂಬ ಕಂಪನಿಯನ್ನು ಸ್ಥಾಪಿಸಿ, ಅದರಲ್ಲಿ ‘ಕ್ಲೊರೊಕ್ವೀನ್ ಔಷಧಿಯನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದರು.

ಸನಾತನ ಸಂಸ್ಥೆಯ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ‘ಸನಾತನ ಚೈತನ್ಯವಾಣಿ ಆಪ್ ಲೋಕಾರ್ಪಣೆ !

‘ಅಕ್ಷಯ ತೃತೀಯದ ಶುಭಮುಹೂರ್ತದಲ್ಲಿ ಸನಾತನ ಸಂಸ್ಥೆಯ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ಈ ಆಪ್ ಅನ್ನು ಪ್ರಕಾಶಿಸಲಾಯಿತು. ಲಾಕ್‌ಡೌನ್ ಇದ್ದುದರಿಂದ ಅತ್ಯಂತ ಸರಳವಾಗಿ ಹಾಗೂ ‘ಸೋಶಿಯಲ್ ಡಿಸ್ಟೆಂಸಿಂಗ್ ಅನ್ನು ಪಾಲಿಸುತ್ತ ಮಂತ್ರೋಚ್ಚಾರದೊಂದಿಗೆ ಗೋವಾದ ಸನಾತನ ಆಶ್ರಮದಲ್ಲಿ ಪ್ರಕಾಶನ ಮಾಡಲಾಯಿತು.

ಲಾಕ್ ಡೌನ್ ಸಮಯದಲ್ಲಿ ಅಂತರರಾಜ್ಯ ಪ್ರಯಾಣಕ್ಕಾಗಿ ಇ-ಪಾಸ್ ಪಡೆಯಲು ಕೇಂದ್ರ ಸರ್ಕಾರದಿಂದ ವೆಬ್‌ಸೈಟ್ ಆರಂಭ

೧೭ ರಾಜ್ಯಗಳಿಂದ ಇ-ಪರ್ಮಿಟ್‌ಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ. ಈ ವಿಭಾಗಗಳಲ್ಲಿ ವಿದ್ಯಾರ್ಥಿಗಳು, ಅಗತ್ಯ ಸೇವಾ ಪೂರೈಕೆದಾರರು, ಪ್ರವಾಸಿಗರು, ಯಾತ್ರಿಕರು, ತುರ್ತು / ವೈದ್ಯಕೀಯ ಪ್ರಯಾಣ ಮತ್ತು ಮದುವೆ ಇವುಗಳಿಗಾಗಿ ಅರ್ಜಿ ಸಲ್ಲಿಸಬಹುದು.

ದಾವಣಗೆರೆಯಲ್ಲಿ ಮುಸಲ್ಮಾನ ಮಹಿಳೆಯರು ಹಿಂದೂ ಅಂಗಡಿಯಿಂದ ವಸ್ತು ಖರೀದಿಸಿದರೆಂದು ಮತಾಂಧರಿಂದ ಅವಾಚ್ಯ ಬೈಗುಳ

ಮುಂಬರುವ ಈದ್‌ಗಾಗಿ ಹಿಂದೂಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದ್ದರಿಂದ ಮತಾಂಧರು ಮುಸಲ್ಮಾನ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲಿ ಮತಾಂಧರು ಆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಅವರ ಕೈಯಲ್ಲಿರುವ ಬಟ್ಟೆಯ ಕೈಚೀಲಗಳನ್ನು ಕಸಿದುಕೊಂಡು ಎಸೆಯುತ್ತಿರುವುದು ಕಾಣಿಸುತ್ತಿದೆ.

ಕರ್ನಾಟಕ ‘ಇಸ್ಲಾಮಿಕ್ ದೇಶ ಆಗುತ್ತಿದೆಯೇ? – ಶೋಭಾ ಕರಂದ್ಲಾಜೆ ಪ್ರಶ್ನೆ

‘ತಬ್ಲಿಘಿಗಳಿಂದ ಶಿವಮೊಗ್ಗದಲ್ಲಿ ಕೊರೋನಾ ರೋಗಾಣುಗಳ ಸೋಂಕು ಹರಡಿತು’ ಎಂದು ಆರೋಪಿಸಿದ ಭಾಜಪದ ಸಂಸದೆ ಶೋಭಾ ಕರಂದ್ಲಾಜೆ ಇವರ ವಿರುದ್ಧ ‘ಅರೆಸ್ಟ್ ಶೋಭಾ’ ಎಂಬ ಟ್ವಿಟ್ಟರ್ ಅಭಿಯಾನ ನಡೆಸಲಾಗಿತ್ತು. ಅದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ‘ಕರ್ನಾಟಕ ಇಸ್ಲಾಮಿಕ್ ದೇಶ ಆಗುತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

ಚೀನಾದ ಹೆಚ್ಚುತ್ತಿರುವ ಕಿತಾಪತಿಗಳನ್ನು ತಡೆಗಟ್ಟಲು ಭಾರತದಿಂದ ಲಡಾಖ್ ನಲ್ಲಿ ಸೇನೆಯ ಹೆಚ್ಚುವರಿ ತುಕಡಿಗಳ ನೇಮಕ

ಭಾರತವು ಲಡಾಖನ ಡೆಮಚಾಕ್, ಚುಮಾರ, ದೌಲತ್ ಬೇಗ ಓಲ್ಡಿ ಹಾಗೂ ಗಾಲವಾನ ವ್ಯಾಲಿ ಈ ಪ್ರದೇಶಗಳಲ್ಲಿ ಸೇನೆಯ ಹೆಚ್ಚುವರಿ ತುಕಡಿಗಳನ್ನು ನೇಮಿಸಿದೆ. ಮೇ ತಿಂಗಳ ಮೊದಲನೇ ವಾರದಲ್ಲಿ ಲಡಾಖನ ಪ್ಯಾನಗಾಂಗ್‌ದಲ್ಲಿ ಭಾರತ ಮತ್ತು ಚೀನಾದ ಸೈನಿಕರಲ್ಲಿ ಪರಸ್ಪರ ಹೊಡೆದಾಟ ನಡೆದಿತ್ತು. ಆ ಸಮಯದಲ್ಲಿ ಎರಡೂ ದೇಶದ ಸೈನಿಕರು ಗಾಯಗೊಂಡಿದ್ದರು.