ಲಾಕ್ ಡೌನ್ ಸಮಯದಲ್ಲಿ ಅಂತರರಾಜ್ಯ ಪ್ರಯಾಣಕ್ಕಾಗಿ ಇ-ಪಾಸ್ ಪಡೆಯಲು ಕೇಂದ್ರ ಸರ್ಕಾರದಿಂದ ವೆಬ್‌ಸೈಟ್ ಆರಂಭ

ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ಜನರು ದೇಶಾದ್ಯಂತ ಪ್ರಯಾಣಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರ ಇ-ಪಾಸ್ ನೀಡಿದೆ. ಅದಕ್ಕಾಗಿ serviceonline.gov.in/epass/ ಎಂಬ ಹೊಸ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದೆ. ೧೭ ರಾಜ್ಯಗಳಿಂದ ಇ-ಪರ್ಮಿಟ್‌ಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ. ಈ ವಿಭಾಗಗಳಲ್ಲಿ ವಿದ್ಯಾರ್ಥಿಗಳು, ಅಗತ್ಯ ಸೇವಾ ಪೂರೈಕೆದಾರರು, ಪ್ರವಾಸಿಗರು, ಯಾತ್ರಿಕರು, ತುರ್ತು / ವೈದ್ಯಕೀಯ ಪ್ರಯಾಣ ಮತ್ತು ಮದುವೆ ಇವುಗಳಿಗಾಗಿ ಅರ್ಜಿ ಸಲ್ಲಿಸಬಹುದು.

೧. ಈ ಸೇವೆಯನ್ನು ಬಳಸಿಕೊಂಡು ಮೂವ್‌ಮೆಂಟ್ ಪಾಸ್‌ಗಾಗಿ ಒಬ್ಬ ವ್ಯಕ್ತಿ ಅಥವಾ ಗುಂಪು ಅರ್ಜಿ ಸಲ್ಲಿಸಬಹುದು; ಆದರೆ ಇದಕ್ಕಾಗಿ ಅವರು ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ನೀಡಬೇಕಾಗುತ್ತದೆ.

೨. ಇ-ಪಾಸ್‌ಗಾಗಿ ಅರ್ಜಿ ಸಲ್ಲಿಸುವ ಮೊದಲು, ಅವರು ಅಗತ್ಯವಿರುವ ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಲ್ಲಿಸಬೇಕು ಮತ್ತು ಒಟಿಪಿ ಪರಿಶೀಲನೆಗಾಗಿ ಮೊಬೈಲ್ ಸಂಖ್ಯೆಯನ್ನು ಸಹ ಸಲ್ಲಿಸಬೇಕಾಗುತ್ತದೆ.

೩. ಇ-ಪಾಸ್ ಅರ್ಜಿದಾರರ ಹೆಸರು, ವಿಳಾಸ, ಸಿಂಧುತ್ವ ಮತ್ತು ಕ್ಯೂಆರ್ ಕೋಡ್ ಅನ್ನು ಒಳಗೊಂಡಿದೆ. ಪಾಸ್ ಪಡೆದ ನಂತರ, ಅರ್ಜಿದಾರನು ಪ್ರಯಾಣಿಸುವಾಗ ಅದರ ಪ್ರತ್ಯಕ್ಷ ಅಥವಾ ಕಂಪ್ಯೂಟರ್ ನಕಲನ್ನು ಹೊಂದಿರಬೇಕು.

೪. ಅರ್ಜಿಯ ನಂತರ ಅರ್ಜಿದಾರರಿಗೆ ಒಂದು ಸಂಖ್ಯೆಯನ್ನು ನೀಡಲಾಗುವುದು. ಅದರಿಂದ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.