ಸನಾತನ ಸಂಸ್ಥೆಯ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ‘ಸನಾತನ ಚೈತನ್ಯವಾಣಿ ಆಪ್ ಲೋಕಾರ್ಪಣೆ !

ಈ ಆಡಿಯೋ ಆಪ್‌ನಲ್ಲಿ ಏನಿದೆ ?

ಸಾತ್ತ್ವಿಕ ಪುರೋಹಿತರು ಹೇಳಿದ ಶ್ರೀದುರ್ಗಾ ಸಪ್ತಶ್ಲೋಕ, ಶ್ರೀ ಗಣೇಶ ಅಥರ್ವಶೀರ್ಷ, ಶ್ರೀರಾಮರಕ್ಷಾಸ್ತೋತ್ರ, ಮಾರುತಿ ಸ್ತೋತ್ರ, ಶ್ರೀಕೃಷ್ಣಾಷ್ಟಕ, ಅಗಸ್ತ್ಯೋಕ್ತ-ಆದಿತ್ಯಹೃದಯ-ಸ್ತೋತ್ರ

ಸಂತರು ಸ್ವತಃ ವಿಶಿಷ್ಟ ಲಯದಲ್ಲಿ ಹೇಳಿದ ಶ್ರೀರಾಮ, ಶ್ರೀಕೃಷ್ಣ, ಶ್ರೀಗಣೇಶ, ಶ್ರೀದುರ್ಗಾ ದೇವಿ, ದತ್ತಾತ್ರೇಯ ಹಾಗೂ ಶಿವ ಈ ದೇವತೆಗಳ ನಾಮಜಪಗಳು

ಭಾವಪೂರ್ಣಲಯದಲ್ಲಿ ಸಾಧಕರು ಹಾಡಿದ ವಿವಿಧ ದೇವತೆಗಳ ಆರತಿಗಳು ಸಂಗ್ರಹ ಇತ್ಯಾದಿ.

ಮುಂಬೈ – ಸದ್ಯ ಬಿಡುವಿಲ್ಲದ ಜೀವನದಲ್ಲಿ ಹಾಗೂ ಈಗಿರುವ ಸಂಕಟದ ಕಾಲದಲ್ಲಿ ಅನೇಕರಿಗೆ ಸನಾತನ ಧರ್ಮದತ್ತ ಸೆಳೆತವು ಹೆಚ್ಚಾಗಿರುವುದು ಕಂಡುಬಂದಿದೆ. ಸಮಾಜ ಧರ್ಮ ಹಾಗೂ ಅಧ್ಯಾತ್ಮ ಇವುಗಳ ಬಗ್ಗೆ ಜಿಜ್ಞಾಸೆಯಿಂದ ನೋಡುತ್ತಿದ್ದಾರೆ. ಸಮಾಜಕ್ಕೆ ಶುದ್ಧ ಹಾಗೂ ಯೋಗ್ಯ ಉಚ್ಚಾರ, ಶುದ್ಧ ಭಾಷೆ, ಶಾಸ್ತ್ರಶುದ್ಧ ಪದ್ದತಿಯಿಂದ ಹಾಗೂ ಭಾವಪೂರ್ಣ ಧ್ವನಿಯಲ್ಲಿ ಹೇಳಿರುವ; ಅದೇರೀತಿ ಎಲ್ಲಕ್ಕಿಂತ ಮಹತ್ವದ ಅಂಶವೆಂದರೆ ಸಂತರ ಹಾಗೂ ಸಾಧನೆಯನ್ನು ಮಾಡುವ ಸಾಧಕರ ಸಾತ್ತ್ವಿಕವಾಣಿಯಿಂದ ಉಚ್ಚರಿಸಲಾದ ಚೈತನ್ಯದಾಯಕ ಆಡಿಯೋ ಎಲ್ಲರಿಗಾಗಿ ಲಭ್ಯವಾಗಬೇಕು, ಅದಕ್ಕಾಗಿ ಸನಾತನ ಸಂಸ್ಥೆಯು ‘ಸನಾತನ ಚೈತನ್ಯವಾಣಿ ಈ ಆಡಿಯೋವನ್ನು ಒದಗಿಸಿಕೊಟ್ಟಿದೆ. ಈ ಆಪ್‌ನಲ್ಲಿ, ಸಾತ್ತ್ವಿಕ ಸ್ತೋತ್ರ, ಶ್ಲೋಕ, ಆರತಿಗಳು ಹಾಗೂ ನಾಮಜಪ ಇವುಗಳ ಸಂಗ್ರಹವಿದೆ. ‘ಅಕ್ಷಯ ತೃತೀಯದ ಶುಭಮುಹೂರ್ತದಲ್ಲಿ ಸನಾತನ ಸಂಸ್ಥೆಯ ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಹಸ್ತದಿಂದ ಈ ಆಪ್ ಅನ್ನು ಪ್ರಕಾಶಿಸಲಾಯಿತು. ಲಾಕ್‌ಡೌನ್ ಇದ್ದುದರಿಂದ ಅತ್ಯಂತ ಸರಳವಾಗಿ ಹಾಗೂ ‘ಸೋಶಿಯಲ್ ಡಿಸ್ಟೆಂಸಿಂಗ್ ಅನ್ನು ಪಾಲಿಸುತ್ತ ಮಂತ್ರೋಚ್ಚಾರದೊಂದಿಗೆ ಗೋವಾದ ಸನಾತನ ಆಶ್ರಮದಲ್ಲಿ ಪ್ರಕಾಶನ ಮಾಡಲಾಯಿತು. ಇಂದು ‘ಸನಾತನ ಚೈತನ್ಯವಾಣಿ ಆಪ್ ‘ಗೂಗಲ್ ಪ್ಲೇ ಸ್ಟೋರ್ನಲ್ಲಿ ಎಲ್ಲರಿಗಾಗಿ ಲಭ್ಯ ಮಾಡಿಕೊಟ್ಟಿದೆ. ಮರಾಠಿ ಭಾಷೆಯಲ್ಲಿರುವ ಈ ಆಪ್ ಇತರ ಭಾಷೆಗಳಿಗೂ ಶೀಘ್ರವೇ ಬರಲಿದೆ. ಹೆಚ್ಚೆಚ್ಚು ಜನರು ಈ ಆಪ್‌ಅನ್ನು ಡೌನ್‌ಲೋಡ್ ಮಾಡಿಕೊಂಡು ಅದರ ಉಪಯೋಗವನ್ನು ಮಾಡಬೇಕು ಹಾಗೂ ಸಾತ್ತ್ವಿಕ ಸ್ತೋತ್ರ, ಆರತಿ, ಶ್ಲೋಕ, ನಾಮಜಪ ಮುಂತಾದವುಗಳ ಲಾಭವನ್ನು ಪಡೆದುಕೊಳ್ಳಿ, ಎಂದು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಕರೆಯನ್ನು ನೀಡಿದರು.

ಸನಾತನ ಹಿಂದೂ ಧರ್ಮದ ತೇಜಸ್ವೀ ಪರಂಪರೆಯನ್ನು ಜೋಪಾನ, ಸಂವರ್ಧನೆ ಹಾಗೂ ಪ್ರಸಾರವಾಗಬೇಕು, ಅದಕ್ಕಾಗಿ ಸನಾತನ ಸಂಸ್ಥೆಯು ಪ್ರಾಮಾಣಿಕವಾಗಿ ಪ್ರಯತ್ಮಿಸುತ್ತಿದ್ದು ಆ ದೃಷ್ಟಿಯಿಂದ ಈ ಆಪ್‌ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಆಪ್‌ನಲ್ಲಿ ಸಮಾವೇಶಗೊಂಡಿವೆ. ಈ ಆಪ್ ‘ಗೂಗಲ್ ಪ್ಲೇ ಸ್ಟೋರ್ನ ಈ ಮುಂದಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಬೇಕು, ಎಂದು ಸನಾತನ ಸಂಸ್ಥೆ ಹೇಳಿದೆ.

https://play.google.com/store/apps/details?id=sanatan.audios.musicplayer