ಭಾರತವನ್ನು ‘ಹೈಡ್ರೊಕ್ಸಿಕ್ಲೊರೊಕ್ವೀನ್ನ ಎಲ್ಲಕ್ಕಿಂತ ದೊಡ್ಡ ಉತ್ಪಾದಕವನ್ನಾಗಿ ಮಾಡಿದ ಮಹಾನ್ ವಿಜ್ಞಾನಿ ಪ್ರಫುಲ್ಲಚಂದ್ರ ರೇ !

ಸದ್ಯಕ್ಕೆ ‘ಕೋವಿಡ್-೧೯ ರೋಗಕ್ಕೆ ಚಿಕಿತ್ಸೆ ನೀಡಲು ಜಗತ್ತಿನಾದ್ಯಂತ ಚರ್ಚಿಸಲ್ಪಡುತ್ತಿರುವ ‘ಕ್ಲೊರೊಕ್ವೀನ್ ಎಂಬ ಔಷಧಿಯ ನಿಮಿತ್ತದಿಂದ ಮಹಾನ್ ವಿಜ್ಞಾನಿ ಆಚಾರ್ಯ ಪ್ರಫುಲ್ಲಚಂದ್ರ ರೇ ಇವರ ಕುರಿತು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ಭಾರತ ದೇಶವು ಜೀವರಕ್ಷಣೆಯ ಔಷಧಿಗಳಿಗಾಗಿ ಪಶ್ಚಿಮ ದೇಶಗಳ ಎದುರು ಯಾಚನೆ ಮಾಡಬಾರದು ಎನ್ನುವುದು ಆಚಾರ್ಯ ಪ್ರಫುಲ್ಲಚಂದ್ರರ ಕನಸಾಗಿತ್ತು. ಆಚಾರ್ಯ ಪ್ರಫುಲ್ಲಚಂದ್ರರು ‘ಬಂಗಾಲ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯೂಟಿಕಲ್ ಎಂಬ ಕಂಪನಿಯನ್ನು ಸ್ಥಾಪಿಸಿ, ಅದರಲ್ಲಿ ‘ಕ್ಲೊರೊಕ್ವೀನ್ ಔಷಧಿಯನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದರು. ಇಂದು ಜಗತ್ತಿನ ಅನೇಕ ಶಕ್ತಿಶಾಲಿ ದೇಶಗಳು ಕೊರೊನಾ ರೋಗವನ್ನು ಎದುರಿಸಲು ‘ಹೈಡ್ರೊಕ್ಸಿಕ್ಲೊರೊಕ್ವೀನ್ನ ಔಷಧಿಯ ಮಾಧ್ಯಮದಿಂದ ಭಾರತದ ಸಹಾಯ ಪಡೆಯುವ ನಿರೀಕ್ಷೆಯಲ್ಲಿವೆ. ಇಂತಹ ಈ  ಸ್ಥಿತಿಯಲ್ಲಿ ಯಾರ ದೂರದರ್ಶಿ ವಿಚಾರದಿಂದ ಭಾರತಕ್ಕೆ ಇಂದು ಕೊರೊನಾವನ್ನು ಎದುರಿಸಲು ಸಕ್ಷಮಗೊಳಿಸಿರುವ ಮಹಾನ್ ವಿಜ್ಞಾನಿ, ಸ್ವಾತಂತ್ರ್ಯ ಸೈನಿಕ ಮತ್ತು ಸಮಾಜಸುಧಾರಕ ಆಚಾರ್ಯ ಪ್ರಫುಲ್ಲಚಂದ್ರ ರೇ ಇವರ ಬಗ್ಗೆ ತಿಳಿದುಕೊಳ್ಳೋಣ.

ಆಚಾರ್ಯ ಪ್ರಫುಲ್ಲಚಂದ್ರ ರೇ ಇವರ ಪರಿಚಯ

ಆಚಾರ್ಯ ಪ್ರಫುಲ್ಲಚಂದ್ರ ರೇ ಇವರನ್ನು ಭಾರತೀಯ ಫಾರ್ಮಾಸ್ಯೂಟಿಕಲ್ ಉದ್ಯೋಗದ  ಜನಕರೆಂದು ತಿಳಿಯಲಾಗುತ್ತದೆ. ಅವರು ಆಗಸ್ಟ್ ಎರಡು ೧೮೬೧ ರಂದು ಬಂಗಾಲದ ಖುಲನಾ ಜಿಲ್ಲೆಯಲ್ಲಿನ (ಇಂದಿನ ಬಾಂಗ್ಲಾದೇಶ) ರರೂಲೀ ಕತಿಪರಾದಲ್ಲಿ ಜನಿಸಿದರು. ಪ್ರಫುಲ್ಲಚಂದ್ರ ಇವರ ತಂದೆ ಹರಿಶ್ಚಂದ್ರರಾಯ್ ಪಾರಸಿ ಭಾಷೆಯ ವಿದ್ವಾಂಸರಾಗಿದ್ದರು. ತಂದೆಯವರು ತಮ್ಮ ಊರಲ್ಲಿ ‘ಮಾಡೆಲ್ ಸ್ಕೂಲ್ ಹೆಸರಿನ ಒಂದು ಶಾಲೆಯನ್ನು ಸ್ಥಾಪಿಸಿದ್ದರು. ಈ ಶಾಲೆಯಲ್ಲಿ ಪ್ರಫುಲ್ಲಚಂದ್ರ ಇವರು ಪ್ರಾಥಮಿಕ ಶಿಕ್ಷಣವನ್ನು ಪಡೆದರು. ವಯಸ್ಸಿನ ೧೨ ನೇ ವಯಸ್ಸಿನಲ್ಲಿ ಅಂದರೆ ಮಕ್ಕಳು ಬಾಲ ಕಥೆಗಳನ್ನು ಓದುವಂತಹ ಚಿಕ್ಕ ವಯಸ್ಸಿನಲ್ಲಿ ಪ್ರಫುಲ್ಲಚಂದ್ರರಿಗೆ ಗೆಲಿಲಿಯೋ ಮತ್ತು ನ್ಯೂಟನ್‌ರಂತಹ ವಿಜ್ಞಾನಿಗಳ ಜೀವನ ಚರಿತ್ರೆಗಳನ್ನು ಓದುವ ಹವ್ಯಾಸವಿತ್ತು. ಅವರ ಮೇಲೆ ವಿಜ್ಞಾನಿಗಳ  ಜೀವನಚರಿತ್ರೆಯ  ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿತ್ತು. ಅವರು ಒಂದು ಆಂಗ್ಲ ಲೇಖಕರ ಪುಸ್ತಕದಲ್ಲಿ ‘ಒಂದು ಸಾವಿರ ಮಹಾನ್ ಶ್ರೇಷ್ಠಜನರ ಪಟ್ಟಿಯಲ್ಲಿ ಭಾರತದ ಕೇವಲ ರಾಜಾ ರಾಮ ಮೋಹನ ರಾಯ್ ಇವರ ಹೆಸರನ್ನು ಓದಿದರು. ಆಗ ಅವರು ಈ ಪಟ್ಟಿಯಲ್ಲಿ ತಮ್ಮ ಹೆಸರು ಬರಬೇಕು ಎಂದು ನಿರ್ಧರಿಸಿದರು. ಅವರಿಗೆ ರಸಾಯನಶಾಸ್ತ್ರ ಅತ್ಯಧಿಕ ಪ್ರಿಯವಾಗಿತ್ತು.

ಕಲಕತ್ತಾ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾದವರೆಗೆ ಶಿಕ್ಷಣವನ್ನು ಪಡೆದ ಬಳಿಕ ‘ಗಿಲ್ಕ್ರಾಯಿಸ್ಟ ಶಿಷ್ಯವೇತನವನ್ನು ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದರು. ೧೮೮೭-೮೮ ನೇ ಇಸವಿಯಲ್ಲಿ ಎಡಿನ್‌ಬರಾ ವಿದ್ಯಾಪೀಠದಲ್ಲಿ ರಸಾಯನ ಶಾಸ್ತ್ರದ ಸೊಸೈಟಿಯು ಅವರನ್ನು ಉಪಾಧ್ಯಕ್ಷರೆಂದು ಆಯ್ಕೆ ಮಾಡಿತು. ಸ್ವದೇಶವನ್ನು ಪ್ರೀತಿಸುವ ಪ್ರಫುಲ್ಲಚಂದ್ರರು ವಿದೇಶದಲ್ಲಿಯೂ ಭಾರತೀಯ ಉಡುಪುಗಳನ್ನೇ ಧರಿಸುತ್ತಿದ್ದರು. ೧೮೮೮ ನೇ ಇಸವಿಯಲ್ಲಿ ಭಾರತಕ್ಕೆ ಮರಳಿದ ಬಳಿಕ ಅವರು ತಮ್ಮ ಸ್ವಂತದ ಪ್ರಯೋಗಾಲಯದಲ್ಲಿ ಆಗಿನ ಪ್ರಸಿದ್ಧ ವಿಜ್ಞಾನಿ ಮತ್ತು ಅವರ ಮಿತ್ರ ಜಗದೀಶಚಂದ್ರ ಬೋಸರೊಂದಿಗೆ ಬಹಳ ಕಷ್ಟಪಟ್ಟು ಕೆಲಸ ಮಾಡಿದರು. ೧೮೮೯ ನೇ ಇಸವಿಯಲ್ಲಿ ಕಲಕತ್ತಾದ ಪ್ರೆಸಿಡೆನ್ಸಿ ವಿದ್ಯಾಲಯದಲ್ಲಿ ಅವರು ರಸಾಯನಶಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕರೆಂದು ಕೆಲಸವನ್ನು ಮಾಡತೊಡಗಿದರು. ಪ್ರಫುಲ್ಲಚಂದ್ರ ರೇ ಇವರು ಕೇವಲ ವಿಜ್ಞಾನದಿಂದಷ್ಟೇ ಅಲ್ಲ, ತಮ್ಮ ರಾಷ್ಟ್ರವಾದಿ ವಿಚಾರಗಳಿಂದಲೂ ಜನರ ಮೇಲೆ ಪ್ರಭಾವವನ್ನು ಬೀರುತ್ತಿದ್ದರು. ಅವರ ಎಲ್ಲ ಲೇಖನಗಳು ಲಂಡನ್ನಿನ ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಈ ಲೇಖನಗಳಲ್ಲಿ ಆಂಗ್ಲರು ಭಾರತವನ್ನು ಯಾವ ರೀತಿ ಲೂಟಿ ಮಾಡಿದರು ಮತ್ತು ಭಾರತೀಯರು ಯಾವ ರೀತಿಯ ಯಾತನೆಗಳನ್ನು ಅನುಭವಿಸುತ್ತಿದ್ದಾರೆ. ಈ ವಿಷಯಗಳ ಕುರಿತು ಬರೆಯುತ್ತಿದ್ದರು. ಮಾತೃಭಾಷೆಯ ಪ್ರೇಮಿಗಳಾದ ಡಾ. ಪ್ರಫುಲ್ಲಚಂದ್ರ ರೇ ಇವರು ತಮ್ಮ ವಿದ್ಯಾರ್ಥಿಗಳಿಗೆ ರಶಿಯನ್ ವಿಜ್ಞಾನಿ ನಿಮೆತ್ರಿ ಮೆಂಡಲೀಪ್ ಇವರು ಶೋಧಿಸಿದ ಪಿರಿಯೋಡಿಕ್ ಟೇಬಲ್ ಅನ್ನು ಆಂಗ್ಲ ಭಾಷೆಯಲ್ಲಿ ಪ್ರಕಟಿಸದೇ ರಶಿಯನ್ ಭಾಷೆಯಲ್ಲಿ ಪ್ರಕಟಿಸಿರುವ ಕುರಿತು ಹೇಳುತ್ತಿದ್ದರು.

ಡಾ. ಪ್ರಫುಲ್ಲಚಂದ್ರರ ರಸಾಯನಶಾಸ್ತ್ರದ ಸಂಶೋಧನೆಗಳು

೧೮೯೪ ರಲ್ಲಿ ಡಾ. ಪ್ರಫುಲ್ಲಚಂದ್ರರು ಮೊದಲನೆಯ ಸಂಶೋಧನೆಯನ್ನು ‘ಮರ್ಕ್ಯೂರಿಯ (ಪಾದರಸದ) ಮೇಲೆ ಮಾಡಿದರು. ಅವರು ‘ಮರ್ಕ್ಯೂರಸ್ ನೈಟ್ರೇಟ್ ಎಂಬ ಅಸ್ಥಿರ ಪದಾರ್ಥವನ್ನು ಪ್ರಯೋಗಾಲಯದಲ್ಲಿ ತಯಾರಿಸಿ ತೋರಿಸಿದರು. ಈ ಪದಾರ್ಥದ ಸಹಾಯದಿಂದ ೮೦ ಹೊಸ ಯೌಗಿಕಗಳನ್ನು ಸಿದ್ಧಪಡಿಸಿದರು ಮತ್ತು ಅತ್ಯಂತ ಕಠಿಣ ಸಮಸ್ಯೆಗಳನ್ನು ಬಿಡಿಸಿದರು. ಈ ಅಸಾಮಾನ್ಯ ಕಾರ್ಯದಿಂದಲೇ ವಿಶ್ವದಲ್ಲಿ ರಸಾಯನ ಶಾಸ್ತ್ರದ ಶ್ರೇಷ್ಠ ವಿಜ್ಞಾನಿಗಳಲ್ಲಿ ಅವರನ್ನು ಪರಿಗಣಿಸತೊಡಗಿದರು. ಈ ಶೋಧಗಳ ಬಗೆಗಿನ ಅವರ ಪ್ರಕಟಣೆಗಳಿಂದ ಜಗತ್ತಿನಲ್ಲಿ ಅಲ್ಲೋಲಕಲ್ಲೋಲ ವೆದ್ದಿತು. ಡಾ. ಪ್ರಫುಲ್ಲಚಂದ್ರರಿಗೆ ತಮ್ಮ ಜ್ಞಾನ ಮತ್ತು ಕಾರ್ಯವು ದೇಶದ ಜನರಿಗಾಗಿ ಉಪಯೋಗವಾಗಬೇಕು ಎಂದು ಅನಿಸುತ್ತಿತ್ತು. ಭಾರತವು ಜೀವರಕ್ಷಣೆಯ ಔಷಧಿಗಳಿಗಾಗಿ ವಿದೇಶಗಳನ್ನು ಅವಲಂಬಿಸಿರುವುದು ಅವರಿಗೆ ತಿಳಿದಿತ್ತು. ಆದುದರಿಂದ ಅವರು ದೇಶದಲ್ಲಿ ಔಷಧಿಗಳನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದರು. ತಮ್ಮ ಸಂಪಾದನೆಯ ಅತ್ಯಧಿಕ ಹಣವನ್ನು ಅವರು ಇದೇ ಕಾರ್ಯಕ್ಕಾಗಿ ಉಪಯೋಗಿಸುತ್ತಿದ್ದರು. ಪ್ರಾಣಿಗಳ ಎಲುಬುಗಳನ್ನು ಸುಟ್ಟು ಮನೆಯಲ್ಲಿಯೇ ಶಕ್ತಿವರ್ಧಕ ಕ್ಯಾಲ್ಶಿಯಮ್, ಫಾಸ್ಫೇಟ್‌ನ್ನು ತಯಾರಿಸುತ್ತಿದ್ದರು. ಅವರು ‘ಬಂಗಾಲ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯೂಟಿಕಲ್ ಕಂಪನಿಯನ್ನು ಸ್ಥಾಪಿಸಿದರು.

‘ಬಂಗಾಳ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯೂಟಿಕಲ್’ನ ಸ್ಥಾಪನೆ

ಇಂದಿಗೂ ಅವರು ರಸಾಯನಶಾಸ್ತ್ರವನ್ನು ಅಧ್ಯಯನ ಮಾಡುವ ಭಾರತದ ಯುವಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಮೇಘನಾದ ಸಾಹಾ ಮತ್ತು ಶಾಂತಿಸ್ವರೂಪ ಭಟ್ನಾಗರ ಇವರಂತಹ ಪ್ರಸಿದ್ಧ ವಿಜ್ಞಾನಿಗಳು ಅವರ ಶಿಷ್ಯರಾಗಿದ್ದರು. ‘ಔದ್ಯೋಗಿಕರಣಗೊಂಡರೆ ಭಾರತದ ಪ್ರಗತಿಯಾಗುವುದು, ಎಂಬುದು ಡಾ. ಪ್ರಫುಲ್ಲಚಂದ್ರರ ಅಭಿಪ್ರಾಯವಾಗಿತ್ತು. ಅವರು ತಮ್ಮ ಮನೆಯಲ್ಲಿಯೇ ಕಡಿಮೆ ಉಪಕರಣಗಳನ್ನು ಉಪಯೋಗಿಸಿ ಕೇವಲ ೭೦೦ ರೂಪಾಯಿಗಳ ಅಲ್ಪ ಮೊತ್ತದಿಂದ ಭಾರತದ ಮೊಟ್ಟಮೊದಲ ಕಾರ್ಖಾನೆಯನ್ನು ಪ್ರಾರಂಭಿಸಿದರು. ೧೯೦೧ ನೇ ಇಸವಿಯಲ್ಲಿ ಅವರ ಅತ್ಯಧಿಕ ಪರಿಶ್ರಮದಿಂದ ‘ಬಂಗಾಲ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯೂಟಿಕಲ್ ಎಂಬ ಕಂಪನಿಯನ್ನು ಸ್ಥಾಪಿಸಿದರು. ಇಂದು ೧೦೦ ವರ್ಷಗಳ ಸಮೃದ್ಧ ಪರಂಪರೆಯ ಬಳಿಕವೂ ‘ಬಂಗಾಳ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯೂಟಿಕಲ್ ದೊಡ್ಡ ಹೆಸರು ಪಡೆದಿದೆ.(ಸೌಜನ್ಯ : ದೈನಿಕ ‘ಅಮರ ಉಜಾಲಾ)