ಜಗದ್ಗುರು ಭಗವಾನ ಶ್ರೀಕೃಷ್ಣನ ಜೀವನದ ವೈಶಿಷ್ಟ್ಯಪೂರ್ಣ ಅಂಗಗಳು !
‘ಅರ್ಜುನನು ಸರ್ವಶ್ರೇಷ್ಠ ಧನುರ್ಧರನಾಗಿದ್ದನು’, ಎಂದು ತಿಳಿಯಲಾಗುತ್ತದೆ; ಆದರೆ ವಾಸ್ತವದಲ್ಲಿ ಶ್ರೀಕೃಷ್ಣನು ಈ ವಿದ್ಯೆಯಲ್ಲಿ ಸರ್ವಶ್ರೇಷ್ಠನಾಗಿದ್ದನು ಮತ್ತು ಅದು ಸಿದ್ಧವೂ ಆಗಿತ್ತು. ಮದ್ರ ರಾಜಕುಮಾರಿ ಲಕ್ಷ್ಮಣಾ ಇವಳ ಸ್ವಯಂವರದಲ್ಲಿನ ಪ್ರತಿಜ್ಞೆಯು ದ್ರೌಪದಿಯ ಸ್ವಯಂವರದಲ್ಲಿನ ಪ್ರತಿಜ್ಞೆಗಿಂತಲೂ ಕಠಿಣವಾಗಿತ್ತು. ಆಗ ಕರ್ಣ ಮತ್ತು ಅರ್ಜುನರಿಬ್ಬರೂ ವಿಫಲಗಿದ್ದರು. ಆಗ ಶ್ರೀಕೃಷ್ಣನು ಗುರಿಯನ್ನು ಭೇದಿಸಿ ಲಕ್ಷ್ಮಣಾಳ ಇಚ್ಛೆಯನ್ನು ಪೂರ್ಣಗೊಳಿಸಿದನು.