ಮಸೀದಿಯ ಶಿಲಾನ್ಯಾಸಕ್ಕೆ ನನಗೆ ಯಾರೂ ಕರೆಯುವುದೂ ಇಲ್ಲ ಮತ್ತು ನಾನೂ ಹೋಗುವುದೂ ಇಲ್ಲ! – ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥರ ಹೇಳಿಕೆಯ ನಂತರ ಸಮಾಜವಾದಿ ಪಕ್ಷದ ಡೊಂಬರಾಟ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಅಯೋಧ್ಯೆಯಲ್ಲಿ ಮಸೀದಿಯ ಶಿಲಾನ್ಯಾಸಕ್ಕೆ ಯಾರೂ ನನಗೆ ಕರೆಯುವುದಿಲ್ಲ ಮತ್ತು ನಾನೂ ಹೋಗುವುದೂ ಇಲ್ಲ. ಒಂದು ವೇಳೆ ನಾನು ಆ ಸ್ಥಳಕ್ಕೆ ಹೋದರೆ, ಅಲ್ಲಿ ಅನೇಕರು ಜಾತ್ಯತೀತೆಯ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದರು. ಈ ಹೇಳಿಕೆ ನಂತರ ವಿಪಕ್ಷವು ಯೋಗಿ ಆದಿತ್ಯನಾಥರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ. ಶ್ರೀರಾಮಜನ್ಮಭೂಮಿಯ ಶ್ರೀರಾಮಮಂದಿರದ ಭೂಮಿಪೂಜೆಯ ನಂತರ ಪತ್ರಕರ್ತರು ‘ನೀವು ಮಸೀದಿಯ ಶಿಲಾನ್ಯಾಸಕ್ಕೆ ಹೋಗುವಿರಾ ?’ ಎಂದು ಪ್ರಶ್ನೆ ಕೇಳಿದಾಗ, ಅದಕ್ಕೆ ಯೋಗಿ ಆದಿತ್ಯನಾಥರು ಈ ಮೇಲಿನ ಉತ್ತರವನ್ನು ನೀಡಿದ್ದರು.

ಸಮಾಜವಾದಿ ಪಕ್ಷದ ವಕ್ತಾರರಾದ ಪವನ ಪಾಂಡೇಯರವರು ಮಾತನಾಡುತ್ತಾ, ಈ ರೀತಿಯ ಹೇಳಿಕೆಯನ್ನು ನೀಡಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿ ಸ್ಥಾನದ ಪ್ರಮಾಣವಚನದ ಉಲ್ಲಂಘನೆ ಮಾಡಿದ್ದಾರೆ. ಅವರು ಕೇವಲ ಹಿಂದೂಗಳಿಗೆ ಮಾತ್ರವಲ್ಲದೇ, ಇಡೀ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರ ಈ ಹೇಳಿಕೆಗಾಗಿ ಅವರು ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. (ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸರಕಾರ ಇದ್ದಾಗ ಅದು ಮುಸಲ್ಮಾನರ ಅಭಿವೃದ್ಧಿಗೆ ಮಾತ್ರ ಕೆಲಸ ಮಾಡುತ್ತಿತ್ತು ಎಂಬುದು ಹಿಂದೂಗಳಿಗೆ ತಿಳಿದಿದೆ. ಆದುದರಿಂದ ಸಮಾಜವಾದಿ ಪಕ್ಷದ ನಾಯಕರು ಅಧಿಕಾರದಲ್ಲಿರುವಾಗ ಪ್ರಮಾಣವಚನವನ್ನು ಎಷ್ಟು ಪಾಲಿಸಿದರು ಎಂಬುದನ್ನು ಮೊದಲಿಗೆ ಹೇಳಬೇಕು. ಮುಸಲ್ಮಾನರನ್ನು ಓಲೈಸಲೆಂದೇ ಸಮಾಜವಾದಿ ಪಕ್ಷದ ಸ್ಥಾಪನೆಯಾಗಿದೆ. ೧೯೯೦ ರಲ್ಲಿ ಸಮಾಜವಾದಿ ಪಕ್ಷದ ಸರಕಾರದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರು ಕರಸೇವಕರ ಮೇಲೆ ಗುಂಡು ಹಾರಿಸಿ ಅವರ ದೇಹಗಳನ್ನು ಕಲ್ಲುಗಳಿಂದ ಕಟ್ಟಿ ಶರಯೂ ನದಿಯಲ್ಲಿ ಮುಳುಗಿಸಿದ್ದರು. ಹಿಂದೂಗಳಿಗೆ ಈ ಇತಿಹಾಸ ತಿಳಿದಿದೆ. – ಸಂಪಾದಕರು)

ಕಾಂಗ್ರೆಸ್ಸಿನ ಮಾಧ್ಯಮ ಸಂಯೋಜಕರಾದ ಲಲ್ಲನ ಮುಕಾರ ಅವರು ಮಾತನಾಡುತ್ತಾ, ಮಸೀದಿಯ ಬಗೆಗಿನ ಯೋಗಿ ಆದಿತ್ಯನಾಥರ ಹೇಳಿಕೆಗೆ ನಮಗೆ ಯಾವುದೇ ರೀತಿಯ ಅಭಿಪ್ರಾಯ ಹೇಳಲಿಕ್ಕೆ ಇಲ್ಲ ಎಂದು ಹೇಳಿದ್ದಾರೆ. (ಕಾಂಗ್ರೆಸ್ ಕೇವಲ ಮುಸಲ್ಮಾನರ ಓಲೈಕೆ ಮಾಡಿದೆ ಮತ್ತು ಹಿಂದೂಗಳನ್ನು ಕಡೆಗಣಿಸಿದ್ದರಿಂದ ಅವರು ಯಾವ ಮುಖ ಇಟ್ಟು ಮಾತನಾಡುವರು ? – ಸಂಪಾದರಕರು) ಪ್ರಭು ಶ್ರೀರಾಮ ಎಲ್ಲರದ್ದಾಗಿದ್ದಾನೆ. ಅವನು ಕೇವಲ ಭಾಜಪದವನಾಗಿದ್ದಾನೆ ಎಂದು ಬಿಂಬಿಸಲು ಪಕ್ಷವು ಪ್ರಯತ್ನಿಸುತ್ತಿದೆ ಮತ್ತು ಇದು ಅದರ ತಪ್ಪು ಅಭಿಪ್ರಾಯವಾಗಿದೆ, ಎಂದಿದ್ದಾರೆ. (‘ಪ್ರಭು ಶ್ರೀರಾಮ ಕಾಲ್ಪನಿಕವಾಗಿದ್ದಾನೆ’, ಎಂದು ಕಾಂಗ್ರೆಸ್ ಸರ್ವೋಚ್ಚ ನ್ಯಾಯಾಲಯದಲ್ಲಿ ಬರೆದುಕೊಟ್ಟಿತ್ತು. ಈಗ ಅದೇ ಕಾಂಗ್ರೆಸ್ ‘ಪ್ರಭು ಶ್ರೀರಾಮ ಎಲ್ಲರದ್ದಾಗಿದ್ದಾನೆ’, ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ – ಸಂಪಾದಕರು)