ಆಯುರ್ವೇದವನ್ನು ಮರೆತು ತಮಗೂ ಮತ್ತು ದೇಶಕ್ಕೂ ಹಾನಿ ಮಾಡುತ್ತಿರುವ ಭಾರತೀಯರು !

ಇನ್ನೊಂದು ಹಾನಿಯೆಂದರೆ ಈ ವಿದೇಶಿ ಕಂಪನಿಗಳು ನಮ್ಮ ಹಣವನ್ನೇ, ನಮ್ಮ ಜೀವದ ಮೇಲೆ ಆಟವಾಡಿ ನಮ್ಮ ಜೀವನವನ್ನೇ ವಿನಾಶಗೊಳಿಸಿ, ಭಾರತದಿಂದ ನೂರುಕೋಟಿಗಳಷ್ಟು ರೂಪಾಯಿಗಳ ಲಾಭವನ್ನು ಮಾಡಿಕೊಂಡು ತಮ್ಮ ದೇಶಗಳಿಗೆ ತೆಗೆದುಕೊಂಡು ಹೋಗುತ್ತಿವೆ. ನಾವು ಮಾತ್ರ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿಕೊಂಡು ಕುಳಿತಿದ್ದೇವೆ. ನಮ್ಮಂತಹ ದುರ್ದೈವಿಗಳು ನಾವೇ ಆಗಿದ್ದೇವೆ !

ಆಯುರ್ವೇದದ ಮಹತ್ವ

‘ಮೂಲದಲ್ಲಿ ಆಯುರ್ವೇದ ಶಾಸ್ತ್ರವನ್ನು ಸೃಷ್ಟಿಯ ಮೂಲ ಸ್ವರೂಪವನ್ನಾಧರಿಸಿ ಪಂಚಮಹಾಭೂತಗಳ ಗುಣಾವಗುಣಗಳಿಂದ ನಿರ್ಧರಿಸಲಾಗಿದೆ. ಇದರಲ್ಲಿ ಮಾನವನ ಮನಸ್ಸು ಬುದ್ಧಿ ಮತ್ತು ಆತ್ಮದ ವಿಚಾರವನ್ನು ಮಾಡಲಾಗಿದೆ. ಋಷಿಗಳು ಆಯುರ್ವೇದಶಾಸ್ತ್ರವನ್ನು ಮಾನವನ ಉನ್ನತಿ, ಸಾಮರ್ಥ್ಯ ಮತ್ತು ಆನಂದ ದಿಂದ ಜೀವನವನ್ನು ನಡೆಸಲು  ರಚಿಸಲಾಗಿದೆ.

ವ್ಯಕ್ತಿಯ ಸರ್ವಾಂಗೀಣ ವಿಕಾಸವನ್ನು ಸಾಧಿಸುವ ವ್ಯಾಪಕ ಆಯುರ್ವೇದ !

ಜೀವನವನ್ನು ಆರೋಗ್ಯವಂತವನ್ನಾಗಿಡಲು ಸದಾಚಾರದ ಪಾಲನೆಯೊಂದಿಗೆ ದಿನಚರ್ಯೆ, ಋತುಚರ್ಯೆ, ತಕ್ಷಣ ಗುಣಪಡಿಸುವ ಅಗ್ನಿಕರ್ಮ ಮತ್ತು ವೇಧನಚಿಕಿತ್ಸೆ, ಶರೀರ ಮತ್ತು ಮನಸ್ಸಿನ ಸಮತೋಲನಕ್ಕಾಗಿ ಯೋಗಾಸನಗಳು, ಆಹಾರ-ವಿಹಾರ, ಆಧ್ಯಾತ್ಮಿಕ ಉಪಾಯಗಳು (ಜಪ, ಹೋಮ, ನಾಮಸ್ಮರಣೆ, ಮಂತ್ರೋಚ್ಚಾರಣೆ), ಸ್ವದೇಶಿ ವಸ್ತುಗಳ ಬಳಕೆ, ಸಂಸ್ಕೃತಿ ಮತ್ತು ಪರಿಸರದ ರಕ್ಷಣೆ ಇತ್ಯಾದಿ ವಿಷಯಗಳನ್ನು ಸಮಾವೇಶಗೊಳಿಸಲಾಗಿದೆ.

ರೋಗಗಳು ಬರಬಾರದೆಂದು ಆಯುರ್ವೇದವು ಹೇಳಿದ ಕೆಲವು ಉಪಾಯಗಳು

ವಸಂತ ಋತುವಿನಲ್ಲಿ ಕಫ ಹೆಚ್ಚಾಗಬಾರದೆಂದು ವಾಂತಿಯನ್ನು ಮಾಡಿಕೊಳ್ಳುವುದು, ಶರದ ಋತುವಿನಲ್ಲಿ ಪಿತ್ತ ಹೆಚ್ಚಾಗಬಾರದೆಂದು ರೇಚಕವನ್ನು ತೆಗೆದುಕೊಳ್ಳುವುದು ಮತ್ತು ಮಳೆಗಾಲದಲ್ಲಿ ವಾತ ಹೆಚ್ಚಾಗಬಾರದೆಂದು ಎನಿಮಾ ತೆಗೆದುಕೊಳ್ಳಬೇಕು.

ಆಯುರ್ವೇದವು ತಡವಾಗಿ ಅಲ್ಲ, ಆದರೆ ತಕ್ಷಣ ಗುಣಪಡಿಸುವ ಶಾಸ್ತ್ರವಾಗಿದೆ !

ಗುರುಕುಲ ಶಿಕ್ಷಣಪದ್ಧತಿಯು ಲೋಪಗೊಂಡಿದ್ದರಿಂದ ಆಯುರ್ವೇದದ ಪರಿಪೂರ್ಣ ಜ್ಞಾನವಿರುವ ವೈದ್ಯರ ಸಂಖ್ಯೆಯು ತುಲನೆಯಲ್ಲಿ ಕಡಿಮೆ ಇದೆ. ಹೆಚ್ಚಿನ ವೈದ್ಯರು ರೋಗಿಯ ಪ್ರಕೃತಿ, ರೋಗದ ಕಾರಣಗಳು ಇತ್ಯಾದಿಗಳ ಬಗ್ಗೆ ವಿಚಾರ ಮಾಡದೇ ಅಲೋಪತಿಯ ಆಧಾರದಲ್ಲಿ ಆಯುರ್ವೇದಿಕ ಉಪಚಾರ ನೀಡುತ್ತಿರುವುದರಿಂದ ಮತ್ತು ರೋಗಿಯೂ ಪಥ್ಯ ಇತ್ಯಾದಿಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸದಿರುವುದರಿಂದ ‘ಆಯುರ್ವೇದಿಕ ಔಷಧಿಗಳಿಂದ ತಡವಾಗಿ ಗುಣಮುಖವಾಗುತ್ತದೆ’, ಎಂಬ ತಪ್ಪು ತಿಳುವಳಿಕೆಯು ರೂಢಿಗೆ ಬಂದಿದೆ.’

ಆಯುರ್ವೇದಕ್ಕನುಸಾರ ವ್ಯಾಯಾಮವನ್ನು ಮಾಡುವುದರಿಂದ ಆಗುವ ಲಾಭಗಳು !

‘ವ್ಯಾಯಾಮದಿಂದ ಚಕ್ರಗಳ ಸ್ಥಳಗಳ  ಮೇಲೆ (ಅಂದರೆ ಆ ಬಿಂದುಗಳ ಮೇಲೆ) ಒತ್ತಡ ನಿರ್ಮಾಣವಾಗುವುದರಿಂದ ಶರೀರದಲ್ಲಿನ ಸೂಕ್ಷ್ಮಚಕ್ರಗಳ (ಸಪ್ತಚಕ್ರಗಳ) ಸುತ್ತಲಿನ ಕಪ್ಪು ಶಕ್ತಿಯ ಆವರಣ ಪ್ರಾರಂಭದಲ್ಲಿ ವಿರಳವಾಗುತ್ತದೆ ಮತ್ತು ವ್ಯಾಯಾಮವನ್ನು ನಿರಂತರವಾಗಿ ಮಾಡಿದರೆ ಅದು ನಾಶವಾಗುತ್ತದೆ. ಇದರಿಂದ ಸೂಕ್ಷ್ಮ ಚಕ್ರಗಳ ಆಧೀನದಲ್ಲಿರುವ ಅವಯವಗಳ ಕಪ್ಪು ಶಕ್ತಿಯು ವಿರಳವಾಗುತ್ತದೆ

ದಿನಚರ್ಯೆಯು ಸುಲಭ ಹಾಗೂ ಆರೋಗ್ಯಕರವಾಗಿರಲು ಮಾಡಬೇಕಾದ ಕೃತಿಗಳು

ಶರೀರಕ್ಕೆ ಎಣ್ಣೆ ಹಚ್ಚಿರುವುದರಿಂದ ಸ್ನಾನಕ್ಕೆ ಬೆಚ್ಚಗಿನ ನೀರನ್ನು ಉಪಯೋಗಿಸಬೇಕು. ಸ್ನಾನ ಮಾಡುವಾಗ ಮೊದಲು ನಮ್ಮ ತಲೆ ಅನಂತರ ಕಾಲನ್ನು ನೆನೆಸಬೇಕು. ಮೊದಲೇ ಕಾಲನ್ನು ನೆನೆಸಿದರೆ ಶರೀರದ ಉಷ್ಣತೆ ಮೇಲೆ ಹೋಗಿ ಆರೋಗ್ಯ ಕೆಡುವ ಸಾಧ್ಯತೆಯಿದೆ. ತಲೆಗೆ ಬಿಸಿ ನೀರನ್ನು ಹಾಕಿದರೆ ಕೂದಲು ಉದುರುತ್ತವೆ, ಆದ್ದರಿಂದ ತಲೆಗೆ ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಬೇಕು. ತಣ್ಣೀರಿನಿಂದ ಸ್ನಾನ ಮಾಡುವವರು ತಲೆಗೆ ತಣ್ಣೀರು ಹಾಕಬಹುದು.

ಕೊಬ್ಬರಿ ಎಣ್ಣೆ – ಒಂದು ಬಹುಗುಣಿ ಔಷಧ

ಧೂಳಿನ ‘ಅಲರ್ಜಿ’ ಇರುವವರು ದಿನದಲ್ಲಿ ೫-೬ ಬಾರಿ ಕೊಬ್ಬರಿ ಎಣ್ಣೆಯ ಬಾಟಲಿಯಲ್ಲಿ ೧ ಕಿರುಬೆರಳನ್ನು ಮುಳುಗಿಸಿ ಅದಕ್ಕೆ ಅಂಟಿದ ಎಣ್ಣೆಯನ್ನು ಮೂಗಿನ ಹೊಳ್ಳೆಗಳ ಒಳಗೆ ಹಚ್ಚಬೇಕು. ಇದರಿಂದ ಮೂಗಿನಲ್ಲಿ ಬರುವ ಧೂಳು ಎಣ್ಣೆಗೆ ಅಂಟುವುದರಿಂದ ಅದು ಉಸಿರಾಟದ ಮಾರ್ಗದಲ್ಲಿ ಹೋಗುವುದಿಲ್ಲ ಮತ್ತು ಧೂಳಿನಿಂದಾಗುವ ತೊಂದರೆಯು ಕಡಿಮೆಯಾಗುತ್ತದೆ.

ರಾತ್ರಿ ಹಾಲು ಕುಡಿಯುವ ವಿಷಯದಲ್ಲಿ ಮಾರ್ಗದರ್ಶಕ ಅಂಶ ಮತ್ತು ಅದನ್ನು ಕುಡಿಯುವಾಗ ಪಾಲಿಸಬೇಕಾದ ಪಥ್ಯಗಳು

ರಾತ್ರಿ ಮಲಗುವಾಗ ಹಾಲು ಕುಡಿಯುವುದರಿಂದ ಪಚನಶಕ್ತಿ ಮಂದವಾಗುತ್ತದೆ ಹಾಗೂ ಕಫದ ರೋಗವಾಗುತ್ತದೆ. ಆದ್ದರಿಂದ ರಾತ್ರಿ ಹಾಲು ಕುಡಿಯುವ ಬದಲು ಬೆಳಗ್ಗೆ ಎದ್ದು ಸ್ನಾನವಾದ ನಂತರ ಹಾಲು ಕುಡಿಯಬೇಕು. ಹಾಲು ಕುಡಿದ ನಂತರ ಅಥವಾ ಹಾಲಿನ ಜೊತೆಗೆ ಏನೂ ತಿನ್ನಬಾರದು; ಏಕೆಂದರೆ ಇತರ ಪದಾರ್ಥಗಳಲ್ಲಿ ಉಪ್ಪಿನ ಅಂಶವಿರುತ್ತದೆ. ಅದು ಹಾಲಿನೊಂದಿಗೆ ಮಿಶ್ರಣವಾದಾಗ ಶರೀರಕ್ಕೆ ಅಪಾಯವಾಗಬಹುದು.

ಮಲಗುವ ಪದ್ಧತಿ

ಸಾಧ್ಯವಿದ್ದರೆ ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಕು. ‘ಪಶ್ಚಿಮ ಅಥವಾ ಉತ್ತರಕ್ಕೆ ತಲೆಯಿಟ್ಟು ಮಲಗಿದರೆ ಆಯುಷ್ಯ ಕಡಿಮೆಯಾಗುತ್ತದೆ, ಎಂದು ವಿಷ್ಣು ಹಾಗೂ ವಾಮನ ಪುರಾಣಗಳಲ್ಲಿ ಹೇಳಲಾಗಿದೆ. ಮಲಗುವಾಗ ಅತೀ ಹೆಚ್ಚು ಗಾಳಿಯನ್ನು ಸೇವಿಸಬಾರದು; ಏಕೆಂದರೆ ಹಾಗೆ ಮಾಡಿದರೆ ಶರೀರ ಒಣಗುತ್ತದೆ. ಚರ್ಮದ ಆರೋಗ್ಯ ಕೆಡುತ್ತದೆ ಹಾಗೂ ಸಂಧುಗಳಲ್ಲಿ ಘರ್ಷಣೆಯಾಗುತ್ತದೆ.