ಸಾಧ್ಯವಿದ್ದರೆ ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಇಟ್ಟು ಮಲಗಬೇಕು. ‘ಪಶ್ಚಿಮ ಅಥವಾ ಉತ್ತರಕ್ಕೆ ತಲೆಯಿಟ್ಟು ಮಲಗಿದರೆ ಆಯುಷ್ಯ ಕಡಿಮೆಯಾಗುತ್ತದೆ, ಎಂದು ವಿಷ್ಣು ಹಾಗೂ ವಾಮನ ಪುರಾಣಗಳಲ್ಲಿ ಹೇಳಲಾಗಿದೆ. ಮಲಗುವಾಗ ಅತೀ ಹೆಚ್ಚು ಗಾಳಿಯನ್ನು ಸೇವಿಸಬಾರದು; ಏಕೆಂದರೆ ಹಾಗೆ ಮಾಡಿದರೆ ಶರೀರ ಒಣಗುತ್ತದೆ. ಚರ್ಮದ ಆರೋಗ್ಯ ಕೆಡುತ್ತದೆ ಹಾಗೂ ಸಂಧುಗಳಲ್ಲಿ ಘರ್ಷಣೆಯಾಗುತ್ತದೆ. ಪ್ರತಿಯೊಬ್ಬರೂ ತಮಗೆ ಬೇಕಾಗುವಷ್ಟು ನಿದ್ರೆ ಮಾಡಬೇಕು. ಸಾಮಾನ್ಯ ವ್ಯಕ್ತಿಗೆ ಸುಮಾರು ೬ ರಿಂದ ೮ ಗಂಟೆ ನಿದ್ರೆ ಸಾಕಾಗುತ್ತದೆ. ‘ನಾವು ಎಷ್ಟು ಗಂಟೆ ನಿದ್ರೆ ಮಾಡಿದರೆ ದಿನವಿಡೀ ನಮ್ಮ ಕಾರ್ಯಕ್ಷಮತೆ ಚೆನ್ನಾಗಿರುತ್ತದೆ, ಎಂಬುದನ್ನು ನಾವೇ ತಿಳಿದುಕೊಂಡು ಅದಕ್ಕನುಸಾರ ನಮ್ಮ ನಿದ್ರೆಯ ಅವಧಿಯನ್ನು ನಿರ್ಧರಿಸಬೇಕು.