ಕೊಬ್ಬರಿ ಎಣ್ಣೆ – ಒಂದು ಬಹುಗುಣಿ ಔಷಧ

೧. ಸತತವಾಗಿ ಕೆಮ್ಮು ಬರುವುದು, ದಮ್ಮು ಬರುವುದು ಈ ರೋಗಗಳ ನಿವಾರಣೆಗಾಗಿ ಕೊಬ್ಬರಿ ಎಣ್ಣೆಯನ್ನು ದಿನದಲ್ಲಿ ೨-೩ ಬಾರಿ ೧-೨ ಚಮಚಗಳಷ್ಟು ಕುಡಿಯ ಬೇಕು. ಇದರಿಂದ ಕೆಮ್ಮು ತಕ್ಷಣ ನಿಲ್ಲುತ್ತದೆ.

೨. ಧೂಳಿನ ‘ಅಲರ್ಜಿ’ ಇರುವವರು ದಿನದಲ್ಲಿ ೫-೬ ಬಾರಿ ಕೊಬ್ಬರಿ ಎಣ್ಣೆಯ ಬಾಟಲಿಯಲ್ಲಿ ೧ ಕಿರುಬೆರಳನ್ನು ಮುಳುಗಿಸಿ ಅದಕ್ಕೆ ಅಂಟಿದ ಎಣ್ಣೆಯನ್ನು ಮೂಗಿನ ಹೊಳ್ಳೆಗಳ ಒಳಗೆ ಹಚ್ಚಬೇಕು. ಇದರಿಂದ ಮೂಗಿನಲ್ಲಿ ಬರುವ ಧೂಳು ಎಣ್ಣೆಗೆ ಅಂಟುವುದರಿಂದ ಅದು ಉಸಿರಾಟದ ಮಾರ್ಗದಲ್ಲಿ ಹೋಗುವುದಿಲ್ಲ ಮತ್ತು ಧೂಳಿನಿಂದಾಗುವ ತೊಂದರೆಯು ಕಡಿಮೆಯಾಗುತ್ತದೆ.

೩. ೧ ಚಮಚ ಕೊಬ್ಬರಿ ಎಣ್ಣೆಯನ್ನು ನೆತ್ತಿಯಲ್ಲಿ ಇಂಗಿಸಬೇಕು. ಬ್ರಹ್ಮರಂಧ್ರದ ಸ್ಥಳದಲ್ಲಿ ೫-೧೦ ನಿಮಿಷಗಳ ಕಾಲ ತಟ್ಟಬೇಕು ಮತ್ತು ತಿಕ್ಕಬೇಕು.

೪. ಪ್ರತಿದಿನ ಸ್ನಾನದ ಮೊದಲು ಶರೀರಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಚರ್ಮದ ಶುಷ್ಕತೆಯು ದೂರವಾಗಿ ಸಂದುಗಳಿಗೆ ಕೀಲೆಣ್ಣೆ ಸಿಗುತ್ತದೆ.

– ವೈದ್ಯ ಸುವಿನಯ ದಾಮಲೆ, ಕುಡಾಳ, ಸಿಂಧುದುರ್ಗ