ಆಯುರ್ವೇದವು ತಡವಾಗಿ ಅಲ್ಲ, ಆದರೆ ತಕ್ಷಣ ಗುಣಪಡಿಸುವ ಶಾಸ್ತ್ರವಾಗಿದೆ !

ವೈದ್ಯ ಮೇಘರಾಜ ಪರಾಡಕರ್

‘ಮಹರ್ಷಿ ವಾಗ್ಭಟ್ಟರು ತಮ್ಮ ಗ್ರಂಥದಲ್ಲಿ ರೋಗಗಳಿಗೆ ಚಿಕಿತ್ಸೆ ಹೇಳುವ ‘ಚಿಕಿತ್ಸಾಸ್ಥಾನ’ ಹೆಸರಿನ ಪ್ರಕರಣವನ್ನು ರಚಿಸಿದಾಗ ಈ ಪ್ರಕರಣದ ಬಗ್ಗೆ ಮುಂದಿನ ಶ್ಲೋಕವನ್ನು ಅದರಲ್ಲಿ ಬರೆದಿಟ್ಟಿದ್ದಾರೆ. –

ಆಯುರ್ವೇದಫಲಂ ಸ್ಥಾನಮ್ ಏತತ್ ಸದ್ಯೋಽರ್ತಿ ನಾಶನಮ್ |

– ಅಷ್ಟಾಂಗಹೃದಯ, ಚಿಕಿತ್ಸಾಸ್ಥಾನ, ಅಧ್ಯಾಯ ೨೨, ಶ್ಲೋಕ ೭೩

ಅರ್ಥ : ಈ ಗ್ರಂಥದಲ್ಲಿ ಚಿಕಿತ್ಸಾಸ್ಥಾನದಲ್ಲಿ ಹೇಳಲಾದ ಉಪಚಾರವು ತಕ್ಷಣ ದುಃಖವನ್ನು ನಾಶ ಮಾಡುವುದಾಗಿದೆ; ಆದ್ದರಿಂದ ಚಿಕಿತ್ಸಾಸ್ಥಾನವು ಆಯುರ್ವೇದದ ಫಲವಾಗಿದೆ.

ತುಂಬಾ ಪ್ರಾಚೀನ ಕಾಲದಿಂದ ಆಯುರ್ವೇದವು ತಕ್ಷಣ ಗುಣಪಡಿಸುವ ಶಾಸ್ತ್ರವೆಂದು ಪ್ರಸಿದ್ಧವಾಗಿದೆ.

ಗುರುಕುಲ ಶಿಕ್ಷಣಪದ್ಧತಿಯು ಲೋಪಗೊಂಡಿದ್ದರಿಂದ ಆಯುರ್ವೇದದ ಪರಿಪೂರ್ಣ ಜ್ಞಾನವಿರುವ ವೈದ್ಯರ ಸಂಖ್ಯೆಯು ತುಲನೆಯಲ್ಲಿ ಕಡಿಮೆ ಇದೆ. ಹೆಚ್ಚಿನ ವೈದ್ಯರು ರೋಗಿಯ ಪ್ರಕೃತಿ, ರೋಗದ ಕಾರಣಗಳು ಇತ್ಯಾದಿಗಳ ಬಗ್ಗೆ ವಿಚಾರ ಮಾಡದೇ ಅಲೋಪತಿಯ ಆಧಾರದಲ್ಲಿ ಆಯುರ್ವೇದಿಕ ಉಪಚಾರ ನೀಡುತ್ತಿರುವುದರಿಂದ ಮತ್ತು ರೋಗಿಯೂ ಪಥ್ಯ ಇತ್ಯಾದಿಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸದಿರುವುದರಿಂದ ‘ಆಯುರ್ವೇದಿಕ ಔಷಧಿಗಳಿಂದ ತಡವಾಗಿ ಗುಣಮುಖವಾಗುತ್ತದೆ’, ಎಂಬ ತಪ್ಪು ತಿಳುವಳಿಕೆಯು ರೂಢಿಗೆ ಬಂದಿದೆ.’ (ಮುಂಬರುವ ಹಿಂದೂ ರಾಷ್ಟ್ರದಲ್ಲಿ ಗುರುಕುಲ ಪದ್ಧತಿಗನುಸಾರ ಆಯುರ್ವೇದಿಕ ಶಿಕ್ಷಣವನ್ನು ಕೊಡಲಾಗುವುದು. – ಸಂಪಾದಕರು)

– ವೈದ್ಯ ಮೇಘರಾಜ ಮಾಧವ ಪರಾಡಕರ, ಆಯುರ್ವೇದಿಕ ಚಿಕಿತ್ಸಕರು, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೪.೨೦೧೪)