ವ್ಯಾಯಾಮದಿಂದ ಶರೀರ ಮತ್ತು ಸೂಕ್ಷ್ಮಚಕ್ರಗಳಲ್ಲಿನ ಕಪ್ಪು ಶಕ್ತಿಯ ಆವರಣವು ನಾಶವಾಗಿ ಅವುಗಳ ಶುದ್ಧಿಯಾಗುತ್ತದೆ
‘ವ್ಯಾಯಾಮದಿಂದ ಚಕ್ರಗಳ ಸ್ಥಳಗಳ ಮೇಲೆ (ಅಂದರೆ ಆ ಬಿಂದುಗಳ ಮೇಲೆ) ಒತ್ತಡ ನಿರ್ಮಾಣವಾಗುವುದರಿಂದ ಶರೀರದಲ್ಲಿನ ಸೂಕ್ಷ್ಮಚಕ್ರಗಳ (ಸಪ್ತಚಕ್ರಗಳ) ಸುತ್ತಲಿನ ಕಪ್ಪು ಶಕ್ತಿಯ ಆವರಣ ಪ್ರಾರಂಭದಲ್ಲಿ ವಿರಳವಾಗುತ್ತದೆ ಮತ್ತು ವ್ಯಾಯಾಮವನ್ನು ನಿರಂತರವಾಗಿ ಮಾಡಿದರೆ ಅದು ನಾಶವಾಗುತ್ತದೆ. ಇದರಿಂದ ಸೂಕ್ಷ್ಮ ಚಕ್ರಗಳ ಆಧೀನದಲ್ಲಿರುವ ಅವಯವಗಳ ಕಪ್ಪು ಶಕ್ತಿಯು ವಿರಳವಾಗುತ್ತದೆ ಮತ್ತು ಶರೀರದಲ್ಲಿರುವ ಸೂಕ್ಷ್ಮಚಕ್ರಗಳ ಶುದ್ಧಿಯಾಗಿ ದೇಹದಲ್ಲಿನ ಚೈತನ್ಯದಲ್ಲಿ ಹೆಚ್ಚಳವಾಗುತ್ತದೆ.
ವ್ಯಾಯಾಮದಿಂದ ಸ್ನಾಯು ಮತ್ತು ಎಲುಬುಗಳ ಕಾರ್ಯಕ್ಷಮತೆ ಹೆಚ್ಚಾಗುವುದು
ವ್ಯಾಯಾಮದಿಂದ ಆಗುವ ಸ್ನಾಯುಗಳ ಮತ್ತು ಎಲುಬುಗಳ ಲಯಬದ್ಧ ಚಲನವಲನ, ಸ್ನಾಯುಗಳ ಆಕುಂಚನ – ಪ್ರಸರಣ ಕ್ರಿಯೆಗಳಿಂದ ಸ್ನಾಯುಗಳ ಮತ್ತು ಎಲುಬುಗಳ ಸುತ್ತಲಿರುವ ಕಪ್ಪು ಶಕ್ತಿಯ ಪದರು, ಅಂದರೆ ರಜ-ತಮ ಕಣಗಳ ಬಂಧಗಳು ವಿರಳವಾಗುತ್ತವೆ. ಸ್ನಾಯುಗಳು ಮತ್ತು ಎಲುಬುಗಳು ಸಡಿಲವಾಗಿ ಅವುಗಳಲ್ಲಿರುವ ಜಡತ್ವ ಕಡಿಮೆಯಾಗಿ ಹಗುರತನದ ಅರಿವಾಗುತ್ತದೆ ಮತ್ತು ಶಿಥಿಲತೆಯು ಕಡಿಮೆಯಾಗಿ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ವ್ಯಾಯಾಮ ಮಾಡುವಾಗ ಪ್ರಾರ್ಥನೆ ಮತ್ತು ನಾಮಜಪವನ್ನು ಮಾಡಿದರೆ ಸ್ನಾಯು ಮತ್ತು ಎಲುಬುಗಳ ಚೈತನ್ಯವನ್ನು ಗ್ರಹಿಸುವ ಕ್ಷಮತೆಯು ವೃದ್ಧಿಸಿ ಅದು ಸ್ಥಿರವಾಗಿರುತ್ತದೆ .
ವ್ಯಾಯಾಮದಿಂದ ಕ್ಷಾತ್ರವೃತ್ತಿ ಹೆಚ್ಚಾಗುವುದು
ಸಾಧಕರಿಗೆ ವ್ಯಾಯಾಮ ಮಾಡುವುದು ಒಂದು ರೀತಿಯಲ್ಲಿ ಯುದ್ಧವೇ ಆಗಿದ್ದು, ವ್ಯಾಯಾಮದಿಂದ ಸಾಧಕರ ಕ್ಷಾತ್ರವೃತ್ತಿ ಶೇ. ೩೦ ರಷ್ಟು ಹೆಚ್ಚಾಗುತ್ತದೆ.
ವ್ಯಾಯಾಮದಿಂದ ಮೆದುಳು ಮತ್ತು ಮನಸ್ಸನ್ನು ಜೋಡಿಸುವ ಕೃಷ್ಣ ತತ್ತ್ವದ ಬಂಧವು ಪ್ರಕಾಶಮಾನವಾಗಿ ಚೈತನ್ಯ ದೊರಕುತ್ತದೆ
ವ್ಯಾಯಾಮದಿಂದ ಮನಸ್ಸಿನಲ್ಲಿನ ರಜ-ತಮ ಕಣಗಳು ಕಡಿಮೆಯಾಗಿ ಕಪ್ಪು ಶಕ್ತಿಯ ಆವರಣ ಅಲ್ಪವಾಗುತ್ತದೆ. ಇದರಿಂದ ಮನಸ್ಸಿನ ಶಕ್ತಿ ಶೇ. ೨ ರಷ್ಟು ಹೆಚ್ಚಾಗುತ್ತದೆ. ವ್ಯಾಯಾಮದಿಂದ ಮನಸ್ಸು ಮತ್ತು ಮಿದುಳನ್ನು ಜೋಡಿಸುವ ಕೃಷ್ಣತತ್ತ್ವದ ಬಂಧವು ಪ್ರಕಾಶಮಾನವಾಗಿ ಅದರ ಚೈತನ್ಯವು ಮನಸ್ಸಿನ ಮೇಲೆ ಪರಾವರ್ತ ವಾಗುತ್ತದೆ. ಇದರಿಂದ ಮನಸ್ಸು ಪ್ರಸನ್ನ ಮತ್ತು ಆನಂದಿತವಾಗುತ್ತದೆ. ಇದೇ ಚೈತನ್ಯವು ಮುಂದೆ ಶರೀರದ ಎಲ್ಲ ಅವಯವಗಳಲ್ಲಿ ಹರಡುತ್ತದೆ. ಇದರಿಂದ ಕಪ್ಪು ಶಕ್ತಿ ನಾಶವಾಗಿ ವ್ಯಾಯಾಮ ಮಾಡುವ ವ್ಯಕ್ತಿಯ ಶರೀರ ಹೊಳೆಯುತ್ತದೆ ಮತ್ತು ಚೈತನ್ಯಮಯವಾಗುತ್ತದೆ.
ವ್ಯಾಯಮದಿಂದ ಶರೀರದಲ್ಲಿರುವ ಊರ್ಜೆಯು ಶಕ್ತಿಯಲ್ಲಿ ಮತ್ತು ರಸವು ಚೈತನ್ಯರಸದಲ್ಲಿ ರೂಪಾಂತರವಾಗುತ್ತದೆ
ಆಯುರ್ವೇದದಲ್ಲಿ ‘ವ್ಯಾಯಾಮವು ಶರೀರದಲ್ಲಿನ ರಸ ಮತ್ತು ತೇಜತತ್ತ್ವವನ್ನು ಜಾಗೃತಗೊಳಿಸುವಂತಹದ್ದಾಗಿದೆ ಎಂದು ಹೇಳಲಾಗಿದೆ. ವ್ಯಾಯಾಮದಿಂದ ಶರೀರದಲ್ಲಿ ತಯಾರಾಗುವ ಊರ್ಜೆ ಮತ್ತು ರಸವು ಶೇಖರಿಸಲ್ಪಡುತ್ತದೆ. ಮುಂದೆ ಅದು ಶಕ್ತಿ ಮತ್ತು ಚೈತನ್ಯರಸದಲ್ಲಿ ರೂಪಾಂತರಗೊಳ್ಳುತ್ತದೆ. ಇದರಿಂದ ಶರೀರ ಮತ್ತು ಮನಸ್ಸಿನ ಶುದ್ಧಿಯಾಗಿ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಶರೀರದಲ್ಲಿನ ರಸವು ಜಾಗೃತವಾಗುವುದರಿಂದ ಶರೀರದಲ್ಲಿನ ಆಪತತ್ವದ ಪ್ರಮಾಣ ಸಮತೋಲವಾಗಿರುತ್ತದೆ. ಶರೀರದಲ್ಲಿ ಸೂಕ್ಷ್ಮರೂಪದಲ್ಲಿರುವ ಶರೀರದಿಂದ ಹೊರಹಾಕಲಿರುವ (ಬೇಡವಾದ) ಮೂಲದ್ರವ್ಯಗಳು ಕೊಬ್ಬಿನ ಸ್ವರೂಪದಲ್ಲಿರುತ್ತವೆ. ಅವು ವ್ಯಾಯಾಮ ಮಾಡುವುದರಿಂದ ಬೆವರಿನ ಮೂಲಕ ಹೊರಗೆ ಬರುತ್ತವೆ. – ಸೌ. ಕೋಮಲ ಜೋಶಿ, ಸನಾತನ ಆಶ್ರಮ, ದೇವದ, ಪನವೇಲ(ವರ್ಷ ೨೦೦೬)
ಆಯುರ್ವೇದದಲ್ಲಿ ಹೇಳಿದ ನಿಯಮಗಳನ್ನು ತಿಳಿದುಕೊಂಡು ಅವುಗಳಂತೆ ತಮ್ಮ ದಿನಚರಿ ಅಥವಾ ಋತುಚರ್ಯವನ್ನು ನಿಗದಿಪಡಿಸಿಕೊಂಡರೆ ‘ಜೀವೇತ ಶರದಃ ಶತಮ್! ನಂತೆ ೧೦೦ ವರ್ಷಗಳವರೆಗೆ ಆರೋಗ್ಯ ಸಂಪನ್ನ ಆಯುಷ್ಯದ ಜೀವನವನ್ನು ಜೀವಿಸಿ, ಎನ್ನುವ ಆಯುರ್ವೇದ ಋಷಿಮುನಿಗಳ ಆಶೀರ್ವಾದ ಪ್ರತಿಯೊಬ್ಬರಿಗೂ ಖಂಡಿತವಾಗಿಯೂ ಸಿಗುವುದು.ಆಯುರ್ವೇದದ ಅಭಿವೃದ್ಧಿಗಾಗಿ ಸಮಾಜದಲ್ಲಿ ವಿಚಾರವಂತರು ಸಾರ್ವಜನಿಕ ವ್ಯಾಸಪೀಠ, ವರ್ತಮಾನಪತ್ರಿಕೆಗಳು ಮತ್ತು ವಿವಿಧ ಪ್ರಚಾರ ಪ್ರಸಾರ ಮಾಧ್ಯಮಗಳ ಮೂಲಕ ತಮ್ಮ ಬೇಡಿಕೆಗಳ ಪುನರುಚ್ಚಾರವನ್ನು ಮಾಡಬೇಕು. ಹಾಗಾದರೆ ಮಾತ್ರ ಆಯುರ್ವೇದದ ಆಗ್ರಹದ ಬೇಡಿಕೆಯು ಗಮನವನ್ನು ಸೆಳೆಯಬಲ್ಲದು. ಅದರಿಂದಲೇ ಆಯುರ್ವೇದದ ರಕ್ಷಣೆ ಮತ್ತು ಸಂವರ್ಧನೆಯಾಗುವುದು. ಆಯುರ್ವೇದವನ್ನು ಅಂಗೀಕರಿಸುವುದು ಕಾಲದ ಆವಶ್ಯಕತೆಯಾಗಿದ್ದು, ಆಯುರ್ವೇದಕ್ಕೆ ಅದರ ಪುನರ್‌ವೈಭವವನ್ನು ದೊರಕಿಸಿಕೊಡುವುದು ಪ್ರತಿಯೊಬ್ಬರ ಕರ್ತವ್ಯವೇ ಆಗಿದೆ.