ರೋಗಗಳು ಬರಬಾರದೆಂದು ಆಯುರ್ವೇದವು ಹೇಳಿದ ಕೆಲವು ಉಪಾಯಗಳು

೧. ಪ್ರಜ್ಞಾಪರಾಧ ಆಗಬಾರದು

೨. ಮನಸ್ಸು ಮತ್ತು ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಮತ್ತು ಕಾಮ, ಕ್ರೋಧ ಇತ್ಯಾದಿಗಳ ವೇಗವನ್ನು ನಿಯಂತ್ರಿಸಬೇಕು. ಕೆಮ್ಮು, ಶೌಚ, ಮೂತ್ರ ಮುಂತಾದ ನೈಸರ್ಗಿಕ ವೇಗವನ್ನು ತಡೆಯಬಾರದು

೩. ಆರೋಗ್ಯಕ್ಕಾಗಿ ಹಿತಕರ ಆಹಾರ-ವಿಹಾರವನ್ನು ಮಾಡಬೇಕು

೪. ವಸಂತ ಋತುವಿನಲ್ಲಿ ಕಫ ಹೆಚ್ಚಾಗಬಾರದೆಂದು ವಾಂತಿಯನ್ನು ಮಾಡಿಕೊಳ್ಳುವುದು, ಶರದ ಋತುವಿನಲ್ಲಿ ಪಿತ್ತ ಹೆಚ್ಚಾಗಬಾರದೆಂದು ರೇಚಕವನ್ನು ತೆಗೆದುಕೊಳ್ಳುವುದು ಮತ್ತು ಮಳೆಗಾಲದಲ್ಲಿ ವಾತ ಹೆಚ್ಚಾಗಬಾರದೆಂದು ಎನಿಮಾ ತೆಗೆದುಕೊಳ್ಳಬೇಕು.

೫. ದೇಶ-ಕಾಲಕ್ಕನುಸಾರ ದಿನಚರ್ಯೆ ಮತ್ತು ಋತುಚರ್ಯೆವನ್ನು ಪಾಲಿಸಬೇಕು

೬. ಪ್ರತಿಯೊಂದು ಕೃತಿಯನ್ನು ವಿಚಾರ ಪೂರ್ವಕವಾಗಿಯೇ ಮಾಡಬೇಕು

೭. ವಿಷಯದ ಆಸಕ್ತಿಯನ್ನು ಇಟ್ಟುಕೊಳ್ಳಬಾರದು

೮. ದಾನ ಮತ್ತು ಇತರರಿಗೆ ಸಹಾಯ ಮಾಡಬೇಕು

೯. ಸತ್ಯವನ್ನೇ ನುಡಿಯ ಬೇಕು, ತಪ ಮತ್ತು ಯೋಗ ಸಾಧನೆಯನ್ನು ಮಾಡಬೇಕು

೧೦. ಆಪ್ತರ (ಜ್ಞಾನ ಪ್ರಾಪ್ತವಾಗಿರುವ) ಸೇವೆಯನ್ನು ಮಾಡಬೇಕು, ಅವರ ಉಪದೇಶದಂತೆ ನಡೆದುಕೊಳ್ಳಬೇಕು

೧೧. ಅಧ್ಯಾತ್ಮದ ಅಧ್ಯಯನವನ್ನು ಮಾಡಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು

೧೨. ಸದ್ವರ್ತನೆಯನ್ನು ಮಾಡಬೇಕು, ಎಲ್ಲರೊಂದಿಗೆ ಸ್ನೇಹಭಾವದಿಂದ ಮತ್ತು ಸಮಾನತೆಯಿಂದ ನಡೆದುಕೊಳ್ಳಬೇಕು.

– ಗುರುದೇವ ಡಾ. ಕಾಟೇಸ್ವಾಮೀಜಿ (‘ಘನಗರ್ಜಿತ, ಮೇ ೨೦೧೧)