ವ್ಯಕ್ತಿಯ ಸರ್ವಾಂಗೀಣ ವಿಕಾಸವನ್ನು ಸಾಧಿಸುವ ವ್ಯಾಪಕ ಆಯುರ್ವೇದ !

ಆಯುರ್ವೇದವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆಯುರ್ವೇದವು ಮಾನವನ ಆಯುಷ್ಯವನ್ನು ಹೆಚ್ಚಿಸುವ ಮೂಲಮಂತ್ರ. ಆಯುರ್ವೇದದಲ್ಲಿ ರೋಗನಿವಾರಣೆ ಮಾತ್ರವಲ್ಲ ರೋಗನಿರೋಧಕ ಉಪಾಯಗಳನ್ನೂ ಹೇಳಲಾಗಿದೆ. ಆಯುರ್ವೇದದಲ್ಲಿ ವ್ಯಕ್ತಿಯ ಸರ್ವಾಂಗೀಣ, ಅಂದರೆ ಅವನ ಪ್ರಕೃತಿಯ ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಇವೆಲ್ಲ ಸ್ತರಗಳಲ್ಲಿ ವಿಚಾರವನ್ನು ಮಾಡಲಾಗುತ್ತದೆ. ಜೀವನವನ್ನು ಆರೋಗ್ಯವಂತವನ್ನಾಗಿಡಲು ಸದಾಚಾರದ ಪಾಲನೆಯೊಂದಿಗೆ ದಿನಚರ್ಯೆ, ಋತುಚರ್ಯೆ, ತಕ್ಷಣ ಗುಣಪಡಿಸುವ ಅಗ್ನಿಕರ್ಮ ಮತ್ತು ವೇಧನಚಿಕಿತ್ಸೆ, ಶರೀರ ಮತ್ತು ಮನಸ್ಸಿನ ಸಮತೋಲನಕ್ಕಾಗಿ ಯೋಗಾಸನಗಳು, ಆಹಾರ-ವಿಹಾರ, ಆಧ್ಯಾತ್ಮಿಕ ಉಪಾಯಗಳು (ಜಪ, ಹೋಮ, ನಾಮಸ್ಮರಣೆ, ಮಂತ್ರೋಚ್ಚಾರಣೆ), ಸ್ವದೇಶಿ ವಸ್ತುಗಳ ಬಳಕೆ, ಸಂಸ್ಕೃತಿ ಮತ್ತು ಪರಿಸರದ ರಕ್ಷಣೆ ಇತ್ಯಾದಿ ವಿಷಯಗಳನ್ನು ಸಮಾವೇಶಗೊಳಿಸಲಾಗಿದೆ. ಇಷ್ಟು ವ್ಯಾಪಕ ದೃಷ್ಟಿಯಿರುವ ಚಿಕಿತ್ಸೆಯು ಕೇವಲ ಮತ್ತು ಕೇವಲ ಆಯುರ್ವೇದದಲ್ಲಿದೆ. – ವೈದ್ಯ ಸುವಿನಯ ದಾಮಲೆ, ಸಿಂಧುದುರ್ಗ