ಆಯುರ್ವೇದವನ್ನು ಮರೆತು ತಮಗೂ ಮತ್ತು ದೇಶಕ್ಕೂ ಹಾನಿ ಮಾಡುತ್ತಿರುವ ಭಾರತೀಯರು !

ವೈದ್ಯ ಸುವಿನಯ ದಾಮಲೆ

ನಮ್ಮಲ್ಲಿರುವ ಸ್ವದೇಶಿ ಔಷಧಿಯೆಂದರೆ ಆಯುರ್ವೇದ ! ನಿಸರ್ಗವು ಮುಕ್ತಹಸ್ತದಿಂದ ನೀಡಿದ ಅಮೂಲ್ಯ ಖಜಾನೆ ! ಆಯುರ್ವೇದಿಕ ಔಷಧಿಗಳು ಮಂತ್ರಗಳನ್ನಾಧರಿಸಿವೆ. ನಮ್ಮ ಋಷಿಮುನಿಗಳು ಆಳವಾಗಿ ಅಧ್ಯಯನ ಮಾಡಿ, ಕಠೋರ ತಪಸ್ಸು, ಅಂದರೆ ಸಾಧನೆಯನ್ನು ಮಾಡಿ ಮಂತ್ರಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ ಮತ್ತು ನಮಗೆ ಇಷ್ಟು ಬೆಲೆಬಾಳುವ ಈ ಖಜಾನೆಯನ್ನು ನೀಡಿದ್ದಾರೆ.

ನಮ್ಮ ಮೇಲೆ ವಿದೇಶಿ ಪ್ರಭಾವ ಎಷ್ಟಿದೆಯೆಂದರೆ, ನಾವು ಈ ಸ್ವದೇಶಿ ಮಂತ್ರವನ್ನೇ ಮರೆತಿದ್ದೇವೆ. ಯಾರು ಕಾಯಿಲೆ ಬಿದ್ದರೂ, ‘ವಿದೇಶಿ ಔಷಧಿಗಳನ್ನು ಸೇವಿಸಿ ನಾವೇ ನಮ್ಮ ಕಾಲುಗಳ ಮೇಲೆ ಬಂಡೆಗಲ್ಲನ್ನು ಹಾಕಿಕೊಳ್ಳುತ್ತಿದ್ದೇವೆ; ಈ ರೀತಿ ನಾವು ಮಾಡುತ್ತೇವೆ. ಈ ಔಷಧಿಗಳ ದುಷ್ಪರಿಣಾಮ (Side Effects) ಗಳನ್ನು ಮಾತ್ರ ನಾವು ಮರೆಯುತ್ತೇವೆ. ಭಾರತದಲ್ಲಿ ಸಿಗುವ ಬ್ರೂಫೆನ್, ಅನಾಲ್ಜಿನ್‌ಗಳಂತಹ ನೋವು ನಿವಾರಕ ಔಷಧಿಗಳನ್ನು ವಿದೇಶಗಳಲ್ಲಿ ೧೦-೧೨ ವರ್ಷಗಳ ಹಿಂದೆಯೇ ಮಾರಾಟ ಮಾಡಲು ಕಾನೂನಿನ ನಿಷೇಧವಿದೆ; ಕಾರಣ ಅದರಲ್ಲಿರುವ ಘಾತಕ ದುಷ್ಪರಿಣಾಮಗಳು; ಭಾರತದಲ್ಲಿ ಮಾತ್ರ ಅವುಗಳನ್ನು ಸಾರಾಸಗಟಾಗಿ ಉಪಯೋಗಿಸಲಾಗುತ್ತದೆ. ನಮ್ಮಲ್ಲಿನ ತಜ್ಞರೂ ಇದರ ಅಧ್ಯಯನವನ್ನು ಯಾವತ್ತೂ ಮಾಡಿಲ್ಲವೇ ?

ಇನ್ನೊಂದು ಹಾನಿಯೆಂದರೆ ಈ ವಿದೇಶಿ ಕಂಪನಿಗಳು ನಮ್ಮ ಹಣವನ್ನೇ, ನಮ್ಮ ಜೀವದ ಮೇಲೆ ಆಟವಾಡಿ ನಮ್ಮ ಜೀವನವನ್ನೇ ವಿನಾಶಗೊಳಿಸಿ, ಭಾರತದಿಂದ ನೂರುಕೋಟಿಗಳಷ್ಟು ರೂಪಾಯಿಗಳ ಲಾಭವನ್ನು ಮಾಡಿಕೊಂಡು ತಮ್ಮ ದೇಶಗಳಿಗೆ ತೆಗೆದುಕೊಂಡು ಹೋಗುತ್ತಿವೆ. ನಾವು ಮಾತ್ರ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿಕೊಂಡು ಕುಳಿತಿದ್ದೇವೆ. ನಮ್ಮಂತಹ ದುರ್ದೈವಿಗಳು ನಾವೇ ಆಗಿದ್ದೇವೆ !

(ಸಂಸ್ಕೃತಿ ದರ್ಶನ : ವೈದ್ಯ ಸುವಿನಯ ದಾಮಲೆ, ಕುಡಾಳ, ಸಿಂಧುದುರ್ಗ.)

ಧರ್ಮಾರ್ಥಕಾಮಮೋಕ್ಷಾಣಾಮ್ ಆರೋಗ್ಯಮೂಲಮುತ್ತಮಮ್ |

ಅರ್ಥ : ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ಪುರುಷಾರ್ಥಗಳ ಪ್ರಾಪ್ತಿಗಾಗಿಯೇ ನಮಗೆ ಆರೋಗ್ಯವು ಬೇಕು.

– ಗುರುದೇವ ಡಾ. ಕಾಟೆಸ್ವಾಮೀಜಿ

ಆಯುರ್ವೇದೋಪದೇಶೇಷು

ವಿಧೇಯಃ ಪರಮಾದರಃ |

– ಅಷ್ಟಾಂಗಹೃದಯ, ಸೂತ್ರಸ್ಥಾನ, ಅಧ್ಯಾಯ ೧, ಶ್ಲೋಕ ೧

ಅರ್ಥ : ಆಯುರ್ವೇದದಲ್ಲಿ ಹೇಳಿದ ಜ್ಞಾನದ ಕುರಿತು ಅತ್ಯಂತ ಗೌರವಭಾವವನ್ನು ಇಟ್ಟುಕೊಳ್ಳಬೇಕು.