ನವರಾತ್ರಿಯ ಕಾಲದಲ್ಲಿ ಆಗುವ ಧರ್ಮಹಾನಿಯನ್ನು ತಡೆಯಿರಿ ಮತ್ತು ‘ಆದರ್ಶ ನವರಾತ್ರ್ಯುತ್ಸವ’ವನ್ನು ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಗೆ ಪಾತ್ರರಾಗಿ !

ಸಾಧಕರಿಗೆ ಸೂಚನೆ ಮತ್ತು ಧರ್ಮಪ್ರೇಮಿ ಹಾಗೂ ಹಿಂದುತ್ವನಿಷ್ಠರಿಗೆ ವಿನಂತಿ

‘೧೫.೧೦.೨೦೨೩ ರಿಂದ ನವರಾತ್ರ್ಯುತ್ಸವವು ಆರಂಭವಾಗುತ್ತದೆ. ಇಡೀ ಭಾರತದಲ್ಲಿ ತುಂಬಾ ಉತ್ಸಾಹ ಮತ್ತು ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸಲಾಗುತ್ತದೆ. ಈ ಕಾಲದಲ್ಲಿ ದೇವಿತತ್ತ್ವವು ಇತರ ದಿನಗಳಿಗಿಂತ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ನವರಾತ್ರಿಯ ನಿಮಿತ್ತ ವ್ಯಾಪಕ ಧರ್ಮಪ್ರಸಾರವಾಗಲು ಮುಂದಿನ ಪ್ರಯತ್ನಗಳನ್ನು ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ.

೧. ದೇವಿ ದೇವಸ್ಥಾನಗಳ ವಿಶ್ವಸ್ಥರನ್ನು ಮತ್ತು ಅರ್ಚಕರನ್ನು ಸಂಪರ್ಕಿಸುವುದು

ಅ. ದೇವಿ ದೇವಸ್ಥಾನಗಳ ವಿಶ್ವಸ್ಥ ಮತ್ತು ಅರ್ಚಕರನ್ನು ಭೇಟಿಯಾಗಿ ಸನಾತನ ನಿರ್ಮಿತ ದೇವಿ ನಾಮಜಪದ ಪಟ್ಟಿಗಳನ್ನು ದೇವಸ್ಥಾನದ ಪರಿಸರದಲ್ಲಿ ಹಚ್ಚಲು ಮನವಿ ಮಾಡಬೇಕು.
ಆ. ದೇವಿಗೆ ಕುಂಕುಮಾರ್ಚನೆ ಮಾಡಲು ಸನಾತನದ ಕುಂಕುಮವನ್ನು ಬಳಸಲು ಅರ್ಚಕರಿಗೆ ವಿನಂತಿ ಮಾಡಬೇಕು.
ಇ. ದೇವಿ ದೇವಸ್ಥಾನದ ಪರಿಸರದಲ್ಲಿ ಸನಾತನವು ಪ್ರಕಟಿಸಿದ ಗ್ರಂಥ ಗಳು, ಕಿರುಗ್ರಂಥಗಳು, ಸಾತ್ತ್ವಿಕ ಉತ್ಪಾದನೆಗಳು ಮತ್ತು ಪಂಚಾಂಗಗಳ ಪ್ರದರ್ಶನವನ್ನು ಏರ್ಪಡಿಸಬೇಕು. ಹಾಗೆಯೇ ‘ಶಾಸ್ತ್ರೋಕ್ತ ಪದ್ಧತಿಯಿಂದ ದೇವಿ ಉಪಾಸನೆಯನ್ನು ಹೇಗೆ ಮಾಡಬೇಕು ?’, ಈ ಕುರಿತು ಜನಸಾಮಾನ್ಯರಿಗೆ ಅಮೂಲ್ಯ ಜ್ಞಾನವನ್ನು ನೀಡುವ ಧರ್ಮಶಿಕ್ಷಣ ಫಲಕಗಳನ್ನು ಹಚ್ಚಬೇಕು.

೨. ನವರಾತ್ರ್ಯುತ್ಸವ ಸಮಿತಿಗಳ ಮುಖ್ಯಸ್ಥರನ್ನು ಭೇಟಿಯಾಗುವುದು

ಅ. ಧರ್ಮಶಾಸ್ತ್ರಕ್ಕನುಸಾರ ಈ ಉತ್ಸವವನ್ನು ಆಚರಿಸಲು ಮತ್ತು ವ್ಯಾಪಕ ಧರ್ಮಪ್ರಸಾರವಾಗಲು ನವರಾತ್ರಿ ಉತ್ಸವ ಸಮಿತಿಗಳ ಮುಖ್ಯಸ್ಥರನ್ನು ಭೇಟಿಯಾಗಿ ವಿಚಾರ ಮಂಡಿಸಬೇಕು. ಇದಕ್ಕಾಗಿ ಧರ್ಮಶಿಕ್ಷಣ ವರ್ಗದ ಧರ್ಮಪ್ರೇಮಿ ಮತ್ತು ಹಿಂದುತ್ವನಿಷ್ಠರ ಸಹಾಯ ಪಡೆಯಬಹುದು.
ಆ. ಅನೇಕ ಉತ್ಸವ ಸಮಿತಿಗಳು ದೇವಿಯ ಅಶಾಸ್ತ್ರೀಯ ಮೂರ್ತಿಯ ಪ್ರತಿಷ್ಠಾಪನೆ ಮಾಡುತ್ತವೆ. ಅವರಿಗೆ ಧರ್ಮಶಾಸ್ತ್ರಕ್ಕನುಸಾರ ಯೋಗ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಪ್ರೇರೇಪಿಸಬೇಕು.
ಇ. ಉತ್ಸವ ಸಮಿತಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುತ್ತವೆ. ಆ ಸಂದರ್ಭದಲ್ಲಿ ‘ಶಕ್ತಿಯ ಉಪಾಸನೆಯ ಮಹತ್ವ’, ‘ಸಾಧನೆ’, ‘ಹಿಂದೂ ರಾಷ್ಟ್ರ ಏಕೆ ಬೇಕು ?’ ಮುಂತಾದ ವಿಷಯಗಳ ಮೇಲೆ ಪ್ರವಚನಗಳನ್ನು ಆಯೋಜಿಸಬಹುದು. ‘ಹಿಂದೂ ಯುವಕ-ಯುವತಿಯರು ಸ್ವರಕ್ಷಣಾ ತರಬೇತಿಯನ್ನು ಪಡೆಯುವ ಅಗತ್ಯ’, ಈ ವಿಷಯವನ್ನು ಮಂಡಿಸಿ ಅದರ ಪ್ರಾತ್ಯಕ್ಷಿಕೆಯನ್ನು ತೋರಿಸಬಹುದು.
ಈ. ಉತ್ಸವ ಸಮಿತಿಗಳು ಆಯೋಜಿಸುವ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವಾಗಿ ಮತ್ತು ಕಾರ್ಯಕ್ರಮಕ್ಕೆ ಭೇಟಿ ನೀಡುವ ಅತಿಥಿಗಳಿಗೆ ಸನಾತನದ ಗ್ರಂಥಗಳು, ಕಿರುಗ್ರಂಥಗಳು ಮತ್ತು ಇತರ ಉತ್ಪಾದನೆಗಳನ್ನು ಉಡುಗೊರೆಯಾಗಿ ಕೊಡಲು ಸೂಚಿಸಬೇಕು.
ಉ. ದೇವಿಪೂಜೆಗಾಗಿ ಊದುಬತ್ತಿ, ಕರ್ಪೂರ, ಕುಂಕುಮ, ಅಷ್ಟಗಂಧ ಮುಂತಾದ ಸನಾತನ-ನಿರ್ಮಿತ ಸಾತ್ತ್ವಿಕ ಉತ್ಪಾದನೆಗಳನ್ನು ಉಪ ಯೋಗಿಸಲು ವಿನಂತಿಸಬೇಕು.

೩. ಜನಸಾಮಾನ್ಯರಿಗೆ ಪ್ರಬೋಧನೆ ಮತ್ತು ವ್ಯಾಪಕ ಸಂಘಟನೆ ಮಾಡುವುದು

ಅ. ಹೆಚ್ಚೆಚ್ಚು ದೇವಿತತ್ತ್ವದ ಲಾಭವಾಗಲು ದೇವಿಭಕ್ತರ ಸಹಾಯದಿಂದ ‘ಶ್ರೀ ದುರ್ಗಾದೇವ್ಯೈ ನಮಃ |’ ಎಂಬ ನಾಮಜಪವನ್ನು ಸಾಮೂಹಿಕ ವಾಗಿ ಜಪಿಸುವ ಆಯೋಜನೆ ಮಾಡಬೇಕು.
ಆ. ಅನೇಕ ಜನರು ನವರಾತ್ರಿಯಲ್ಲಿ ಪ್ರತಿದಿನ ಕುಮಾರಿಕಾ ಪೂಜೆಯನ್ನು ಮಾಡಿ ಅವಳಿಗೆ ಭೋಜನ ಮತ್ತು ಉಡುಗೊರೆಯನ್ನು ಕೊಡುತ್ತಾರೆ. ಅವರನ್ನು ಸಂಪರ್ಕಿಸಿ ಸನಾತನದ ಬಾಲಸಂಸ್ಕಾರ ಮಾಲಿಕೆಯಲ್ಲಿನ
‘ನೀತಿಕಥೆಗಳು’, ಅಧ್ಯಯನ ಹೇಗೆ ಮಾಡಬೇಕು ?’, ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸಗಳು’ ಮುಂತಾದ ಗ್ರಂಥಗಳನ್ನು ಕುಮಾರಿಗೆ ಉಡುಗೊರೆಯಾಗಿ ನೀಡಲು ವಿನಂತಿ ಮಾಡಬೇಕು.
ಇ. ಕೋಲಾಟ (ದಾಂಡಿಯಾ) ಗರಬಾ ಮುಂತಾದ ಮಾಧ್ಯಮಗಳಿಂದ ಅಸಭ್ಯ ನೃತ್ಯವನ್ನು ಮಾಡುವುದು, ಅಂಗಪ್ರದರ್ಶನ ಮಾಡುವುದು ಮುಂತಾದ ವಿಕೃತಿಗಳು ನಡೆಯುತ್ತಿವೆ. ಹಾಗೆಯೇ ‘ಲವ್‌ ಜಿಹಾದ್’ ನಂತಹ ಘಟನೆಗಳ ಪ್ರಮಾಣ ಹೆಚ್ಚುತ್ತಿದೆ. ಆದ್ದರಿಂದ ಪವಿತ್ರವಾಗಿರುವ ಈ ನೃತ್ಯೋಪಾಸನೆಗೆ ವಿಕೃತ ಸ್ವರೂಪ ಬಂದಿದೆ. ಆ ಕುರಿತು ಯುವಕ-ಯುವತಿಯರಿಗೆ ಪ್ರಬೋಧನೆ ಮಾಡಬೇಕು.
ಈ. ‘ಸನಾತನ ಚೈತನ್ಯವಾಣಿ ಆಪ್‌’ನಲ್ಲಿರುವ ಶ್ರೀ ದುರ್ಗಾ ಸಪ್ತಶತಿ ಶ್ಲೋಕ, ಶ್ರೀ ದುರ್ಗಾದೇವಿಯ ನಾಮಜಪ ಇತ್ಯಾದಿ ಮಾಹಿತಿಗಳನ್ನು ಹೇಳಿ ‘ಆಪ್‌ ಡೌನ್‌ಲೋಡ್’ ಮಾಡಲು ವಿನಂತಿಸಬೇಕು. ಅದರಲ್ಲಿನ ಸಾತ್ತ್ವಿಕ ನಾಮಜಪದ ಲಾಭವನ್ನು ಪಡೆಯಲು ಪ್ರೇರೇಪಿಸಬೇಕು.
ನವರಾತ್ರಿ ಉತ್ಸವದಲ್ಲಿ ಆಗುವ ಧರ್ಮಹಾನಿಯನ್ನು ತಡೆಯಲು ಕಾನೂನಿನ ಪ್ರಕಾರ ಪ್ರಯತ್ನಿಸಿ ಉತ್ಸವದ ಪಾವಿತ್ರ್ಯವನ್ನು ಕಾಪಾಡುವುದು
ಪ್ರತಿಯೊಬ್ಬ ಹಿಂದೂವಿನ ಆದ್ಯ ಕರ್ತವ್ಯವಾಗಿದೆ.

ಈ ಉತ್ಸವದ ವಿಕೃತಿಗಳನ್ನು ತಡೆದು ‘ಆದರ್ಶ ನವರಾತ್ರೋತ್ಸವ’ ವನ್ನು ಆಚರಿಸುವುದು ಮತ್ತು ಅದಕ್ಕಾಗಿ ಇತರರನ್ನೂ ಪ್ರೋತ್ಸಾಹಿಸುವುದು, ಇದು ದೇವಿಯ ಶ್ರೇಷ್ಠವಾದ ಉಪಾಸನೆಯಾಗಿದೆ !’ (೧೫.೯.೨೦೨೩)