ಡಾಕ್ಟರರು : ‘ರಕ್ತಸ್ರಾವ ನಿಲ್ಲಲು ಮಾತ್ರೆಗಳನ್ನು ಬರೆದುಕೊಡುತ್ತೇನೆ, ಮತ್ತು ರಕ್ತವನ್ನು ಹೆಚ್ಚಿಸುವ ಮಾತ್ರೆಗಳನ್ನೂ ಆರಂಭಿಸಿರಿ… ನಿಜ ಹೇಳಬೇಕೆಂದರೆ ರಕ್ತವನ್ನು ಹೆಚ್ಚಿಸುವ ಚುಚ್ಚುಮದ್ದುಗಳನ್ನು (ಇಂಜೆಕ್ಶನ್) ತೆಗೆದುಕೊಂಡರೆ, ಬೇಗನೇ ಗುಣಮುಖರಾಗಬಹುದು.’’
ರೋಗಿ : ”ಬೇಡ, ಬೇಡ ಡಾಕ್ಟರ್.. ಇಂಜೆಕ್ಶನ್ ಬೇಡ. ನೀವು ನನಗೆ ‘ಹಾರ್ಮೋನ್ಸ್’ಗಳ (ಸಂಪ್ರೇರಕಗಳ) ಮಾತ್ರೆಗಳನ್ನು ಕೊಟ್ಟಿದ್ದೀರಿ, ಅವುಗಳಿಂದ ಅಡ್ಡಪರಿಣಾಮ (ಸೈಡ್ ಇಫೆಕ್ಟ್) ಆಗುತ್ತದೆ. ನನಗೆ ರಕ್ತವನ್ನು ಹೆಚ್ಚಿಸುವ ಮಾತ್ರೆಗಳೂ ಸಹನವಾಗುವುದಿಲ್ಲ. ನಿಜ ಹೇಳಬೇಕೆಂದರೆ ನನಗೆ ಯಾವುದೇ ಮಾತ್ರೆಗಳು ಸಹಿಸಲು ಆಗುವುದಿಲ್ಲ…’’
ಡಾಕ್ಟರರು : ಈಗ ನೀವೇ ನನಗೆ ಹೇಳಿ, ಯಾವುದೇ ಔಷಧಗಳನ್ನು ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ಬೇಡವಾಗಿದ್ದರೆ, ಡಾಕ್ಟರರ ಬಳಿ ಜಾದುವಿನ ಛಡಿ ಇದೆಯೇ ? ಅದನ್ನು ರೋಗಿಯ ತಲೆಯ ಮೇಲೆ ತಿರುಗಿಸಿದರೆ ತಕ್ಷಣ ಗುಣಮುಖರಾಗುವರು ? ಹೀಗಿರುತ್ತದೆ ಏನು ? ಮತ್ತು ಈಗ ರಕ್ತಸ್ರಾವವಾಗಿ ಶರೀರದಲ್ಲಿ ಅರ್ಧದಷ್ಟೇ ರಕ್ತ ಉಳಿದಿದೆ, ಆದುದರಿಂದ ‘ಮಾತ್ರೆಗಳನ್ನು ತೆಗೆದು ಕೊಂಡರೆ ನಿಮ್ಮ ಜೀವ ಉಳಿಯಲಿದೆ ಮತ್ತು ಏನೂ ಮಾಡದಿದ್ದರೆ, ತುರ್ತು ನಿಗಾ ಘಟಕ (ಐ.ಸಿ.ಯು.)ದಲ್ಲಿ ಭರ್ತಿ ಮಾಡಿ ರಕ್ತವನ್ನು ಕೊಡಬೇಕಾಗುವುದು’
ಡಾಕ್ಟರರು : ಹೀಗೆ ರೋಗಿಗಳಿಗೆ ತಿಳಿಸಿ ಹೇಳಬೇಕಾಗುತ್ತದೆ. ನಂತರ ರೋಗಿಗಳು, ‘ಡಾಕ್ಟರರು ಸುಮ್ಮನೆ ಹೆದರಿಸುತ್ತಾರೆ !’ ಎಂದು ಹೇಳುತ್ತಾರೆ.
ನಮ್ಮ ಸಮಾಜದಲ್ಲಿ ಜನರು ಔಷಧಗಳ ದುಷ್ಪರಿಣಾಮಗಳ ಬಗ್ಗೆ ಎಷ್ಟು ದೊಡ್ಡ ಬೆದರುಗೊಂಬೆ ನಿರ್ಮಿಸಿದ್ದಾರೆಂದರೆ, ಅನೇಕ ವರ್ಷಗಳಿಂದ ಅನೇಕ ವಿಜ್ಞಾನಿಗಳು ಶ್ರಮವಹಿಸಿ ಕಂಡು ಹಿಡಿದ ಔಷಧಗಳ ಪರಿಣಾಮವನ್ನು ನಾವು ಸಲೀಸಾಗಿ ಮರೆತೇ ಬಿಡುತ್ತೇವೆ. ಇಂದು ಈ ಔಷಧಿಗಳಿಂದಾಗಿ ಮಾನವನ ಜೀವಿತಾವಧಿ (ಆಯುಷ್ಯ) ಹೆಚ್ಚಾಗಿದೆ ಮತ್ತು ಜೀವನದ ಗುಣಮಟ್ಟ ಸುಧಾರಿಸಿದೆ, ಇದನ್ನು ಮರೆತರೆ ಹೇಗೆ ? ಯಾರಿಗಾದರೂ ಟೈಫೈಡ್ (ವಿಷಮ ಜ್ವರ) ಆಗಿದ್ದರೆ, ಪರಿಣಾಮಕಾರಿ ಪ್ರತಿಜೀವಕಗಳಿಂದಲೇ (‘ಯಾಂಟಿಬಯೋಟಿಕ್ಸ್’ ಗಳಿಂದಲೇ) ಅವನ ಜೀವವು ಉಳಿಯುತ್ತದೆ. ಹೀಗಿರುವಾಗ ಆ ಪ್ರತಿಜೀವಕಗಳಿಂದ ಒಂದು ವೇಳೆ ಪಿತ್ತವಾದರೆ, ಹೊಟ್ಟೆ ಕೆಟ್ಟರೆ, ಬಾಯಿ ರುಚಿ ಇಲ್ಲದಂತಾದರೆ, ಈ ರೀತಿಯ ತಕರಾರುಗಳನ್ನು ಮಾಡುವುದೆಂದರೆ ‘ಬೆಂಕಿ ಆರಿಸಲು ಬಂದ ಅಗ್ನಿಶಾಮಕ ವಾಹನದಿಂದ ಬಹಳ ಧ್ವನಿ ಬರುತ್ತಿದೆ’, ಎಂದು ದೂರು ಹೇಳಿದಂತೆ ಆಗಿದೆ. ಈ ರೀತಿಯ ಹುಚ್ಚುತನದ ತಿಳುವಳಿಕೆ ಯಿಂದಾಗಿ ಕೆಲವು ಜನರು ಮಧುಮೇಹ ಮತ್ತು ರಕ್ತದೊತ್ತಡದ ಔಷಧಗಳನ್ನು ತಮ್ಮ ಮನಸ್ಸಿನಂತೆ ನಿಲ್ಲಿಸುತ್ತಾರೆ ಮತ್ತು ತಮ್ಮ ಆರೋಗ್ಯವನ್ನು ಅಪಾಯದಲ್ಲಿ ಸಿಲುಕಿಸುತ್ತಾರೆ. ದುಷ್ಪರಿಣಾಮಗಳ ವ್ಯರ್ಥ ಭಯದಿಂದಾಗಿ ರಕ್ತದೊತ್ತಡದ ಔಷಧಗಳನ್ನು ನಿಲ್ಲಿಸಿ ಪಾರ್ಶ್ವವಾಯುವಿನ (ಪ್ಯಾರಾಲಿಸೀಸ) ಆಘಾತವಾಗಿ ಜೀವನದಾದ್ಯಂತ ಹಾಸಿಗೆ ಹಿಡಿದ ರೋಗಿಗಳನ್ನು ನಾವು ನೋಡುತ್ತೇವೆ. ಮಧುಮೇಹದ ಔಷಧಗಳನ್ನು ತಮ್ಮ ಮನಸ್ಸಿನಂತೆ ನಿಲ್ಲಿಸಿದ್ದರಿಂದ ‘ರಕ್ತದಲ್ಲಿನ ಸಕ್ಕರೆ’ ಹೆಚ್ಚಾಗಿ ಪ್ರಜ್ಞಾಹೀನ ಸ್ಥಿತಿಗೆ (ಕೋಮಾ) ಹೋದ ರೋಗಿಗಳು, ಕಾಲಿನ ಗಾಯ ಬೆಳೆದು ಕಾಲು ಕತ್ತರಿಸುವ ಹಾಗೆ ಆದ ರೋಗಿಗಳನ್ನು ನೋಡುವುದು, ಇದು ತುರ್ತು ನಿಗಾ ಘಟಕಗಳಲ್ಲಿ ಕೆಲಸ ಮಾಡುವ ಆಧುನಿಕ ವೈದ್ಯರಿಗೆ ನಿತ್ಯದ ವಿಷಯವಾಗಿದೆ. ಇನ್ನೊಂದೆಡೆ ಆಧುನಿಕ ವೈದ್ಯರನ್ನು ಕೇಳದೇ ಮೊಣಕಾಲು ನೋಯುತ್ತಿದೆ ಎಂದು ತಮ್ಮ ಮನಸ್ಸಿನಂತೆ ‘ಸ್ಟಿರೈಡ್ಸ್’ನಂತಹ ಅತಿ ಅಪಾಯಕಾರಿ ಮಾತ್ರೆ ತೆಗೆದುಕೊಳ್ಳುವ ಇನ್ನೊಂದು ವರ್ಗವೂ ಇದೆ.
೧. ಔಷಧಗಳ ದುಷ್ಪರಿಣಾಮಗಳಿಗಿಂತ ಅವುಗಳ ಪರಿಣಾಮಗಳ ವಿಚಾರ ಮಾಡಿ !
ಜಗತ್ತಿನಲ್ಲಿನ ಎಲ್ಲ ಔಷಧಗಳಿಂದ ಅಲ್ಪಸ್ವಲ್ಪ ದುಷ್ಪರಿಣಾಮ ಗಳು ಇದ್ದೇ ಇರುತ್ತವೆ. ಆ ಔಷಧಗಳ ಉಪಯೋಗ ಮತ್ತು ಪರಿಣಾಮವನ್ನು ಗಮನದಲ್ಲಿರಿಸಿ ಅವುಗಳ ಅಡ್ಡಪರಿಣಾಮ ಗಳನ್ನು (ಸಾಯಿಡ್ ಇಫೆಕ್ಟ) ದುರ್ಲಕ್ಷಿಸಬಹುದು. ಕೆಲವೊಮ್ಮೆ ಈ ಅಡ್ಡಪರಿಣಾಮಗಳು ಹೆಚ್ಚು ಹಾನಿಕರವಾಗಿವೆ ಎಂದು ಅನಿಸಿದರೆ, ಅಂತಹ ಔಷಧಗಳನ್ನು ಮಾರುಕಟ್ಟೆಗೆ ಬರಲು ಬಿಡುವುದಿಲ್ಲ ಅಥವಾ ಅಂತಹ ಔಷಧಗಳು ಮಾರುಕಟ್ಟೆಗೆ ಬಂದಿದ್ದರೆ, ಅವುಗಳನ್ನು ನಿಷೇಧಿಸಲಾಗುತ್ತದೆ ಮತ್ತು ಅವುಗಳ ಕಂಪನಿಗಳು ಅವುಗಳನ್ನು ಹಿಂಪಡೆಯುತ್ತವೆ.
ನೀವು ತೀರಾ ‘ಪ್ಯಾರಾಸಿಟಾಮಾಲ್’ನ ಪರಿಣಾಮವನ್ನು ಬಿಟ್ಟು ದುಷ್ಪರಿಣಾಮದ ಕಡೆಗೆ ಗಮನವನ್ನು ಕೊಡುವುದು ಎಂದು ನಿರ್ಧರಿಸಿದ್ದರೆ, ನೀವು ಎಂದಿಗೂ ಯಾವುದೇ ಔಷಧಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ದುಷ್ಪರಿಣಾಮಗಳು ಮಾನಸಿಕವೂ ಆಗಿರುತ್ತವೆ. ರೋಗಿಯ ಮನಸ್ಸಿನಲ್ಲಿ ಔಷಧಗಳ ಬಗ್ಗೆ ಮೊದಲೇ ಪೂರ್ವಗ್ರಹವಿದ್ದರೆ ಇರುವ ಮತ್ತು ಇಲ್ಲಸಲ್ಲದ ಎಲ್ಲ ದುಷ್ಪರಿಣಾಮಗಳು ಕಂಡು ಬರುತ್ತವೆ. ಆದುದರಿಂದ ಆಧುನಿಕ ವೈದ್ಯರು ಪ್ರತಿಯೊಂದು ಔಷಧಿಯನ್ನು ಕೊಡುವಾಗ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಹೇಳುವುದಿಲ್ಲ. ‘ಯಾವುದೇ ಒಬ್ಬ ರೋಗಿಗೆ ಆಮ್ಲಪಿತ್ತವಾಗುತ್ತದೆ, ಎಂದು ಹೇಳಿದರೆ ಅವನಿಗೆ ಖಂಡಿತವಾಗಿಯೂ ಆಮ್ಲಪಿತ್ತ ಆಗುತ್ತದೆ ಮತ್ತು ಆ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೆ, ಏನೂ ಆಗುವುದಿಲ್ಲ’, ಇದನ್ನು ನಾವು ಬಹಳಷ್ಟು ಸಲ ನೋಡುತ್ತೇವೆ. ಪ್ರತಿಯೊಬ್ಬ ಆಧುನಿಕ ವೈದ್ಯನಿಗೆ ಕೊನೆಗೆ ರೋಗಿಯ ಮಾನಸಿಕತೆಯನ್ನು ನೋಡಿಯೇ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ.
೨. ಔಷಧ ಸೇವಿಸುವಾಗ ರೋಗಿಗಳಿಂದಾಗುವ ತಪ್ಪುಗಳು !
ಅ. ಬಹಳಷ್ಟು ಸಲ ರೋಗಿಗಳು ಯಾವಾಗಲೋ ನೀಡಿದ ಔಷಧದ ಚೀಟಿಯನ್ನು ಬಳಸಿ ಆಧುನಿಕ ವೈದ್ಯರ ಸಲಹೆ ಪಡೆಯದೇ ಮೇಲಿಂದ ಮೇಲೆ ಆ ಔಷಧವನ್ನು ತೆಗೆದು ಕೊಳ್ಳುತ್ತಿರುತ್ತಾರೆ. ಸಹಜವಾಗಿಯೇ ಅದರ ದುಷ್ಪರಿಣಾಮ ಕಂಡುಬಂದರೆ ಔಷಧ ಮತ್ತು ಆಧುನಿಕ ವೈದ್ಯರ ಮೇಲೆ ದೋಷಾರೋಪಣೆಯನ್ನು ಮಾಡುತ್ತಾರೆ. ರೋಗಿಗಳು ಔಷಧ ಗಳನ್ನು ತೆಗೆದುಕೊಳ್ಳುವಾಗ ಸಾಮಾನ್ಯ ಸೂಚನೆಗಳನ್ನೂ ಪಾಲಿಸು ವುದಿಲ್ಲ. ಕೆಲವು ಔಷಧಗಳನ್ನು ಖಾಲಿ ಹೊಟ್ಟೆಯಲ್ಲಿ, ಕೆಲವನ್ನು ಭೋಜನದ ನಂತರ ತೆಗೆದುಕೊಳ್ಳುವುದಿರುತ್ತದೆ. ಅದೇ ರೀತಿ ಕೆಲವು ಔಷಧಗಳನ್ನು ಒಟ್ಟಿಗೆ ತೆಗೆದುಕೊಳ್ಳಲಿಕ್ಕಿರುವುದಿಲ್ಲ. ಈ ಸೂಚನೆಗಳನ್ನು ದುರ್ಲಕ್ಷಿಸಿದರೆ ರೋಗಿಗಳಿಗೆ ತೊಂದರೆಯಾಗ ಬಹುದು. ಮಾತ್ರೆಗಳನ್ನು ಅವುಗಳ ಹೊದಿಕೆಯಿಂದ ತೆಗೆದಿಡು ವುದೂ ಅಯೋಗ್ಯವಾಗಿದೆ. ಇದರಿಂದ ಅವುಗಳ ಪರಿಣಾಮವು ಕಡಿಮೆಯಾಗುತ್ತದೆ.
ಆ. ಇನ್ನೊಂದು ತಮಾಷೆಯ ವಿಷಯವೆಂದರೆ, ಒಂದು ಕಡೆ ಆಧುನಿಕ ವೈದ್ಯ(ಡಾಕ್ಟರ)ರಿಗೆ ಔಷಧಗಳ ದುಷ್ಪರಿಣಾಮಗಳ ಬಗ್ಗೆ ಕೇಳಿ ತಬ್ಬಿಬ್ಬುಗೊಳಿಸುವ ರೋಗಿಗಳಿದ್ದರೆ, ಇನ್ನೊಂದೆÀಡೆ ಯಾವುದೇ ವೈದ್ಯಕೀಯ ಶಿಕ್ಷಣ ಪಡೆಯದ ಔಷಧಿ ಅಂಗಡಿಯ ಮಾರಾಟಗಾರರಿಂದ ಕಾರಣಾಂತರದಿಂದ ಮುಟ್ಟನ್ನು (ಋತು ಸ್ರಾವ) ಮುಂದೂಡುವುದು ಮತ್ತು ಗರ್ಭನಿರೋಧಕವನ್ನು ಬಳಸದೇ ಇದ್ದುದರಿಂದ ಕೊನೆ ಗಳಿಗೆಯಲ್ಲಿ (ಗರ್ಭಧಾರಣೆ ಆದಾಗ) ತೆಗೆದುಕೊಳ್ಳುವ ಮಾತ್ರೆ ತೆಗೆದುಕೊಳ್ಳುವವರೂ ಇದ್ದಾರೆ. ಕೆಲವೊಮ್ಮೆ ಕಾನೂನುಬಾಹಿರ ಗರ್ಭಪಾತದ ಮಾತ್ರೆ ಗಳನ್ನೂ ತೆಗೆದುಕೊಳ್ಳಲು ಹಿಂಜರಿಯದ ಜನರಿದ್ದಾರೆ. ಈ ಮಾತ್ರೆಗಳಿಂದಾಗಿ ಸ್ತ್ರೀಯರ ಸಂತಾನೋತ್ಪತ್ತಿ ವ್ಯವಸ್ಥೆಗೆ ಮತ್ತು ಜೀವಕ್ಕೆ ಅಪಾಯವಾಗಬಹುದು, ಎಂಬ ಬಗ್ಗೆ ಯಾವುದೇ ಕಾಳಜಿಯನ್ನು ಅವರು ವಹಿಸುವುದಿಲ್ಲ.
೩. ಮಗುವಿಗಿಂತ ಗರ್ಭವತಿಯ ಜೀವ ಮಹತ್ವದ್ದಾಗಿರುತ್ತದೆ !
ನಮ್ಮಂತಹ ಸ್ತ್ರೀರೋಗತಜ್ಞರು ಗರ್ಭವತಿಗೆ ಔಷಧಗಳನ್ನು ಕೊಡುವಾಗ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಯಾವುದೇ ಔಷಧಿಯನ್ನು ಕೊಡುವಾಗ ಶಿಶುವಿನ ಮೇಲೆ ಯಾವ ಪರಿಣಾಮ ವಾಗಬಹುದು ? ಎಂಬ ನಿಖರವಾದ ವಿಚಾರ ಮಾಡ ಬೇಕಾಗುತ್ತದೆ; ಆದರೆ ತಾಯಿಯ ಜೀವಕ್ಕೆ ಅಪಾಯವಿದ್ದರೆ, ಶಿಶುವಿಗಿಂತ ನಾವು ಯಾವಾಗಲೂ ತಾಯಿಯ ವಿಚಾರ ಮಾಡಿ ಔಷಧೋಪಚಾರವನ್ನು ಮಾಡುತ್ತೇವೆ. ಉದಾಹರಣೆಗೆ ತಾಯಿಗೆ ಮಲೇರಿಯಾ, ವಿಷಮ ಜ್ವರ(ಟೈಫೈಡ್), ಡೆಂಗ್ಯು ಇವುಗಳಂತಹ ರೋಗವಾಗಿದ್ದರೆ, ಶಿಶುವಿನ ಬಗ್ಗೆ ಹೆಚ್ಚು ವಿಚಾರ ಮಾಡದೇ ಔಷಧಗಳನ್ನು ಕೊಡಲಾಗುತ್ತದೆ. ಅರ್ಬುದ ರೋಗದ ರೋಗಿಗಳಿಗೆ ಚಿಕಿತ್ಸೆ ಮಾಡುವಾಗ ದುಷ್ಪರಿಣಾಮಗಳ ವಿಚಾರ ಮಾಡುತ್ತಾ ಕುಳಿತರೆ ರೋಗಿಯನ್ನು ಕಳೆದುಕೊಳ್ಳಬೇಕಾಗುತ್ತದೆ.
೪. ಗಂಭೀರ ರೋಗವನ್ನು ತಪ್ಪಿಸಲು ರೋಗವನ್ನು ಮೈಮೇಲೆ ಎಳೆದುಕೊಳ್ಳುವ ವೃತ್ತಿಯನ್ನು ಬಿಡಿ !
ರೋಗಿಗಳು ಇವೆಲ್ಲವುಗಳನ್ನು ಸರಿಯಾಗಿ ತಿಳಿದುಕೊಳ್ಳು ವುದು ಆವಶ್ಯಕವಾಗಿದೆ. ಆದುದರಿಂದಲೇ ‘ಈ ಔಷಧಗಳಿಂದ ಏನೆಲ್ಲ ದುಷ್ಪರಿಣಾಮಗಳು ಆಗಬಹುದು ?’, ಎಂದು ಕೇಳಿದಾಗ ‘ನಿಮ್ಮ ರೋಗಿ ಹೆಚ್ಚಿನಾಂಶ ಜೀವಂತ ಉಳಿಯಬಹುದು !’, ಎಂಬಂತಹ ಮಾತುಗಳಲ್ಲಿ ಆಧುನಿಕ ವೈದ್ಯರ ಮನಸ್ಸಿನ ಉದ್ವಿಗ್ನತೆ ಹೊರಗೆ ಬರುತ್ತದೆ.
‘ಹಾರ್ಮೋನ್ಸಗಳು’ ಒಂದು ರೀತಿಯ ವಿಷ ಎಂಬಂತಹ ತೀವ್ರ ಮೂಢನಂಬಿಕೆಯನ್ನು ಇಟ್ಟುಕೊಂಡಿರುವ ಸ್ತ್ರೀಯರು ‘ಪ್ವಾಲಿಸಿಸ್ಟಿಕ್ ಓವರಿಯನ್ ಡಿಸಿಜ್’ ನಂತಹ ಮುಟ್ಟಿನ ರೋಗವನ್ನು ವರ್ಷಗಟ್ಟಲೇ ಮೈಮೇಲೆ ಎಳೆದುಕೊಂಡು ತಮ್ಮ ಶರೀರ ಮತ್ತು ಮನಸ್ಸನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗೆಯೇ ಬಂಜೆತನ, ಸ್ಥೂಲಕಾಯ ಮತ್ತು ಕೊನೆಗೆ ಮಧುಮೇಹ, ಕೆಲವೊಮ್ಮೆ ಅರ್ಬುದರೋಗ ಇವುಗಳಂತಹ ರೋಗಗಳನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಾರೆ. ಆದುದರಿಂದ ಯಾವುದೇ ಔಷಧಿಯನ್ನು ಯಾರು, ಯಾವಾಗ, ಏತಕ್ಕಾಗಿ ಮತ್ತು ಎಷ್ಟು ಕಾಲಾವಧಿಗಾಗಿ ನೀಡಿದ್ದಾರೆ ? ಎಂಬುದರ ಮೇಲೆ ಆ ಔಷಧದ ಪರಿಣಾಮ ಮತ್ತು ದುಷ್ಪರಿಣಾಮವನ್ನು ನಿರ್ಧರಿಸಲಾಗುತ್ತದೆ.
೫. ಆಧುನಿಕ ವೈದ್ಯ ಮತ್ತು ವೈದ್ಯಕೀಯ ಶಾಸ್ತ್ರದ ಮೇಲೆ ರೋಗಿಗಳಿಗೆ ನಂಬಿಕೆ ಇರುವುದು ಮಹತ್ವದ್ದಾಗಿದೆ !
ಆದುದರಿಂದ ಮುಂದಿನ ಬಾರಿ ಆಧುನಿಕ ವೈದ್ಯರು ಔಷಧಗಳನ್ನು ಬರೆದು ಕೊಟ್ಟಾಗ ಅದರ ದುಷ್ಪರಿಣಾಮಗಳು ಏನಾಗಬಹುದು ? ಎಂಬುದರ ವಿಚಾರ ಮಾಡುವುದಕ್ಕಿಂತ ಆ ಔಷಧಿಗಳಿಂದ ನಿಮಗೆ ಆರಾಮವಾಗಲಿದೆ ಎಂಬ ವಿಚಾರ ವನ್ನು ಮಾಡುವುದು ಮಹತ್ವದ್ದಾಗಿದೆ. ಅದಕ್ಕಾಗಿ ನಿಮ್ಮ ಹೆಗಲ ಮೇಲೆ ಕುಳಿತಿರುವ ದುಷ್ಪರಿಣಾಮಗಳ ಬೆದರುಗೊಂಬೆಯನ್ನು ಕೆಳಗೆ ಇಳಿಸಿ ಅದಕ್ಕೆ ಮುಕ್ತಿಯನ್ನು ಕೊಡುವಿರೇನು ? ಮೇಲಿನ ವಿಷಯ ನಿಮಗೆ ಒಪ್ಪಿಗೆಯಾಗುತ್ತಿದೆಯೇನು ನೋಡಿ ?
– ಡಾ. ಶಿಲ್ಪಾ ಚಿಟಣೀಸ್-ಜೋಶಿ, ಸ್ತ್ರೀರೋಗ ಮತ್ತು ಬಂಜೆತನ ತಜ್ಞರು, ಕೊಥರೂಡ, ಪುಣೆ.