ಹವಾಮಾನ ಬದಲಾವಣೆಯ ವಿರುದ್ಧ ಅಭಿವೃದ್ಧಿ ಹೊಂದಿದ ದೇಶಗಳು ನಿಷ್ಕ್ರಿಯವಾಗಿವೆ ! – ಭಾರತದ ನಿಲುವು

ನ್ಯೂಯಾರ್ಕ್ (ಅಮೇರಿಕಾ) – ಮೊದಲ `ಗ್ಲೋಬರ ಸ್ಟಾಕ್ ಟೆಕ್’ ನ ಆದ್ಯತೆ 2020 ರ ಹಿಂದಿನ ಕಾಲಾವಧಿಯಲ್ಲಿ ಜಾಗತಿಕ ಹವಾಮಾನ ಬದಲಾವಣೆಯನ್ನು ತಡೆಯಲು ಯಾವ ಪ್ರಯತ್ನಗಳನ್ನು ಮಾಡಲಾಯಿತು ಎನ್ನುವುದು ಆಗಿರಬೇಕು. ಇದರೊಂದಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಿಷ್ಕ್ರಿಯತೆಯ ಮೇಲೆಯೂ ಬೆಳಕು ಚೆಲ್ಲಬೇಕಾಗಿದೆ ಎಂದು ಸ್ಪಷ್ಟ ನಿಲುವನ್ನು ಭಾರತ ತಳೆದಿದೆ. `ಗ್ಲೋಬಲ್ ಸ್ಟಾಕ್ಟೇಕ್’ ಇದು ವಿಶ್ವಸಂಸ್ಥೆಯ 2 ವರ್ಷಗಳ ವರದಿಯಾಗಿದೆ, ಇದರಲ್ಲಿ ಪ್ಯಾರಿಸ್ ಒಪ್ಪಂದದ ನಂತರ ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ದೇಶಗಳು ಎಷ್ಟು ಕ್ರಮ ಕೈಗೊಂಡಿವೆ ಎಂಬುದನ್ನು ವಿವರಿಸಲಿದೆ. ಈ ವರದಿಯನ್ನು ಬರುವ ಡಿಸೆಂಬರ್ ನಲ್ಲಿ ನಡೆಯಲಿರುವ ‘ಕಾಪ್ 28’ ಹವಾಮಾನ ಬದಲಾವಣೆ ಸಂದರ್ಭದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಪರಿಷತ್ತಿನಲ್ಲಿ ಮಂಡಿಸಲಿದ್ದಾರೆ.

ಈ ಬಗ್ಗೆ ಭಾರತ ಮುಂದುವರಿದು,

1. ಅಭಿವೃದ್ಧಿ ಹೊಂದಿದ ದೇಶಗಳು ಜವಾಬ್ದಾರಿಯುತವಾಗಿ ವರ್ತಿಸಿ, ತಮ್ಮ ದೇಶಗಳಲ್ಲಿ ನಡೆಯುವ `ಗ್ರೀನಹೌಸ ಗ್ಯಾಸಸ್’ (‘ಹಸಿರುಮನೆ ಅನಿಲಗಳು’) ನಂತಹ ಹಾನಿಕಾರಕ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರೊಂದಿಗೆ ಹಣಕಾಸು, ತಂತ್ರಜ್ಞಾನ ಅಭಿವೃದ್ಧಿ ಇತ್ಯಾದಿಗಳ ವಿಷಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಸಹಾಯ ಮಾಡಲು ಆದ್ಯತೆಯಿಂದ ಪ್ರಯತ್ನಿಸಬೇಕು.

2. ಈ ವರದಿಯ ಮೂಲಕ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ಸಾಮಾಜಿಕ ಅಂತರವನ್ನು ಕಡಿಮೆ ಮಾಡಲು ಪ್ರೋತ್ಸಾಹಿಸಬೇಕು.

3. 2015 ರಲ್ಲಿ ಪ್ಯಾರಿಸ್ ಒಪ್ಪಂದದ ನಂತರ, ಅಭಿವೃದ್ಧಿ ಹೊಂದಿದ ದೇಶಗಳು `ಗ್ರೀನ್ ಹೌಸ ಗ್ಯಾಸ’ (‘ಹಸಿರುಮನೆ ಅನಿಲ’) ಹೊರಸೂಸುವಿಕೆಯನ್ನು ಪ್ರತಿಬಂಧಿಸಲು ಏನೇನು ಮಾಡಿದೆ ಎನ್ನುವುದರ ಮೇಲೆಯೂ ಪ್ರಾಮುಖ್ಯತೆಯಿಂದ ವಿಷಯವನ್ನು ಸಾದರ ಪಡಿಸಬೇಕು. ಕೇವಲ ಮುಂಬರುವ ಅವಧಿಯಲ್ಲಿ ಏನು ಮಾಡಬೇಕು ಎನ್ನುವುದನ್ನು ಚರ್ಚಿಸುವುದರಿಂದ ಪ್ರಯೋಜನವಾಗುವುದಿಲ್ಲ.

4. ಭಾರತವು, ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪ್ಯಾರಿಸ್ ಒಪ್ಪಂದದಲ್ಲಿನ ಒಂದು ಷರತ್ತನ್ನು ತಪ್ಪಾಗಿ ಅರ್ಥೈಸಿಕೊಂಡು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ‘ಪಳೆಯುಳಿಕೆ ಇಂಧನ’ಗಳ(ಫಾಸಿಲ್ ಫ್ಲೂಯೆನ್ಸ) ಅಭಿವೃದ್ಧಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿವೆ ಎಂದು ಭಾರತ ಆರೋಪಿಸಿದೆ. ಆದರೆ, ಮತ್ತೊಂದೆಡೆ ತಾವು ಮಾತ್ರ ಈ ವಲಯದಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಪ್ರತಿಬದ್ಧತೆಯಿಂದ ದೂರ ಸರಿಯುತ್ತಿದ್ದಾರೆ.

‘ಪ್ಯಾರಿಸ್ ಒಪ್ಪಂದ’ ಏನು ಹೇಳುತ್ತದೆ ?

2015 ರಲ್ಲಿ ಜಾಗತಿಕ ಮಟ್ಟದಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದರಡಿಯಲ್ಲಿ ಹವಾಮಾನ ಬದಲಾವಣೆಯ ಭೀಕರತೆಯ ವಿರುದ್ಧ ಕಾರ್ಯ ಮಾಡಲು ಕೆಲವು ನಿಯಮಗಳನ್ನು ರಚಿಸಲಾಯಿತು. ಇದನ್ನು ಎಲ್ಲಾ ದೇಶಗಳು ಅನುಸರಿಸುವಂತೆ ಕಡ್ಡಾಯಗೊಳಿಸಲಾಯಿತು. ಪ್ಯಾರಿಸ್ ಒಪ್ಪಂದದ ಮೂಲಕ, ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನದಲ್ಲಿ 2 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನ ಹೆಚ್ಚಾಗಲು ಉಪಾಯ ಯೋಜನೆಗಳನ್ನು ಕಂಡು ಹಿಡಿದು ಅದಕ್ಕಾಗಿ ಪ್ರಯತ್ನಿಸಲು ನಿರ್ಧರಿಸಲಾಗಿತ್ತು.

ಸಂಪಾದಕೀಯ ನಿಲುವು

ಇಲ್ಲಿಯವರೆಗೆ ಅಭಿವೃದ್ಧಿ ಹೊಂದಿದ ದೇಶಗಳ ದುಷ್ಕೃತ್ಯಗಳನ್ನು ಪ್ರಶ್ನಿಸಲು ಯಾರೂ ಇರಲಿಲ್ಲ, ಹಾಗೆ ಪ್ರಶ್ನಿಸಲು ಬೇರೆ ಯಾವ ದೇಶಗಳೂ ಬಹುತೇಕವಾಗಿ ಧೈರ್ಯ ಮಾಡುತ್ತಿರಲಿಲ್ಲ. ಭಾರತದ ಇಂತಹ ನಿಲುವಿನಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಕಪಾಳಮೋಕ್ಷವಾಗುತ್ತಿದೆ !