‘ಚಂದ್ರಯಾನ-೩’ ಮತ್ತು ಶಿವಸಂಕಲ್ಪಸೂಕ್ತ

ಶ್ರೀ. ದುರ್ಗೇಶ ಪರುಳಕರ

ಹಿಂದೂಸ್ಥಾನದ ದೃಷ್ಟಿಯಿಂದ ವಿಚಾರ ಮಾಡಿದರೆ ೨೩ ಆಗಸ್ಟ್ ೨೦೨೩ ಈ ದಿನವು ‘ಐತಿಹಾಸಿಕ ದಿನ’ವಾಯಿತು. ಈ ದಿನ ಹಿಂದೂಸ್ಥಾನದ ‘ಚಂದ್ರಯಾನ ೩’ ಈ ‘ವಿಕ್ರಮ ಲ್ಯಾಂಡರ್’ ಚಂದ್ರನ ಭೂಭಾಗದ ಮೇಲೆ ಇಳಿಯಿತು. ಇಂದಿನ ವರೆಗೆ ಜಗತ್ತಿನ ಯಾವುದೇ ದೇಶಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಪಾದಾರ್ಪಣೆ ಮಾಡಲು ಸಾಧ್ಯವಾಗಿಲ್ಲ. ಈ ಗೌರವವನ್ನು ಹಿಂದೂಸ್ಥಾನ ಗಳಿಸಿತು. ಇದರ ಬಗ್ಗೆ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಅಭಿಮಾನವಿದೆ. ಈ ಸುವರ್ಣಾವಕಾಶ ಹಿಂದೂಸ್ಥಾನದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲದಲ್ಲಿ ಲಭಿಸಿದೆ. ಇದು ನಮ್ಮ ದೃಷ್ಟಿಯಲ್ಲಿ ಭಾಗ್ಯದ ವಿಷಯವಾಗಿದೆ.

ಚಂದ್ರಯಾನ ಚಂದ್ರನ ಮೇಲೆ ಇಳಿದ ದಿನದಂದು ನಮ್ಮ ದೇಶದ ಪ್ರಧಾನಮಂತ್ರಿಗಳು ವಿದೇಶದಲ್ಲಿದ್ದರು. ಆದುದರಿಂದ ಅವರಿಗೆ ತಮ್ಮ ದೇಶದ ವಿಜ್ಞಾನಿಗಳನ್ನು ಪ್ರತ್ಯಕ್ಷ ಭೇಟಿಯಾಗಿ ಅವರನ್ನು ಅಭಿನಂದಿಸಲು ಸಾಧ್ಯವಾಗಲಿಲ್ಲ. ವಿದೇಶ ಪ್ರವಾಸದಿಂದ ಹಿಂದೂಸ್ಥಾನದ ಭೂಮಿಯ ಮೇಲೆ ಕಾಲಿಟ್ಟ ಕೂಡಲೇ ಪ್ರಧಾನಮಂತ್ರಿಗಳು ಬೆಳಗ್ಗೆ ೬ ಗಂಟೆಗೆ ವಿಜ್ಞಾನಿಗಳನ್ನು ಪ್ರತ್ಯಕ್ಷ ಭೇಟಿಯಾದರು. ಅವರನ್ನು ತುಂಬಾ ಕೊಂಡಾಡಿದರು. ಅಭಿನಂದನೆಗಳನ್ನು ನೀಡಿದರು ಮತ್ತು ಅವರೊಂದಿಗೆ ಸಂಭಾಷಣೆ ನಡೆಸಿದರು. ಆಗ ಅವರು ಅಗಸ್ಟ್ ೨೩ ‘ರಾಷ್ಟ್ರೀಯ ಅಂತರಿಕ್ಷ ದಿನ’ವೆಂದು ಘೋಷಣೆ ಮಾಡಿದರು ಮತ್ತು ‘ಚಂದ್ರಯಾನ-೩’ರ ವಿಕ್ರಮ ಲ್ಯಾಂಡರ್’ ಚಂದ್ರನ ಭೂಮಿಯ ಮೇಲೆ ಎಲ್ಲಿ ಇಳಿಯಿತೋ, ಆ ಸ್ಥಳಕ್ಕೆ ‘ಶಿವಶಕ್ತಿ’, ಎಂದು ನಾಮಕರಣ ಮಾಡಿದರು. ಹೀಗೆ ನಾಮಕರಣ ಮಾಡುವುದರ ಹಿಂದಿನ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸುವಾಗ ನರೇಂದ್ರ ಮೋದಿಯವರು ‘ಶಿವಸಂಕಲ್ಪಸೂಕ್ತ’ದಲ್ಲಿನ ಎರಡನೇ ಮಂತ್ರವನ್ನು ಸಾವಕಾಶ ಉಚ್ಚರಿಸಿದರು,

ಅದು ಹೀಗಿದೆ –

ಯೇನ ಕರ್ಮಾಣ್ಯಪಸೋ ಮನೀಷಿಣೋ
ಯಜ್ಞೆ ಕೃಣ್ವನ್ತಿ ವಿದಥೇಷು ಧೀರಾಃ |
ಯದಪೂರ್ವ ಯಕ್ಷಮನ್ತಃ ಪ್ರಜಾನಾನ್ತನ್ಮೆ ಮನಃ
ಶಿವಸಙ್ಕಲ್ಪಮಸ್ತು ||
– ಯಜುರ್ವೇದ, ಅಧ್ಯಾಯ ೩೪ ಕಂಡಿಕಾ ೨

ಭಾವಾರ್ಥ : ಯಜ್ಞಕಾರ್ಯದಲ್ಲಿ ಅತ್ಯಂತ ಕುಶಲ, ಧೈರ್ಯಶಾಲಿ ಮತ್ತು ಮನನಶೀಲವಾಗಿರುವ ಯಾವ ವಿದ್ವಾಂಸರು, ಬುದ್ಧಿಶಾಲಿ ಜನರಿದ್ದಾರೆಯೋ, ಅವರು ತಮ್ಮ ಮನಸ್ಸಿನ ಪ್ರೇರಣೆಯಿಂದ ಎಲ್ಲ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಮಾಡಬಹುದು. ಈ ಮನಸ್ಸು ಪ್ರಾಣಿಮಾತ್ರರ ಅಂತರಂಗದಲ್ಲಿ, ಅಂದರೆ ಹೃದಯದಲ್ಲಿ ವಾಸಿಸುತ್ತದೆ. ಹಾಗೆಯೇ ಈ ಮನಸ್ಸು ಪೂಜನೀಯ ಕಾರ್ಯದಲ್ಲಿ ಅತುಲ, ಅದ್ಭುತ ಕಾರ್ಯವನ್ನು ಮಾಡುತ್ತದೆ. ನನ್ನ ಮನಸ್ಸು ಕೂಡ ಶುಭಕಲ್ಯಾಣಕಾರಿಯಾಗಲಿ, ಶುಭ ಸಂಕಲ್ಪಯುಕ್ತವಾಗಿ ಸುಂದರ ಮತ್ತು ಪವಿತ್ರ ವಿಚಾರಗಳಿಂದ ವ್ಯಾಪಿಸಿಕೊಳ್ಳಲಿ, ಅಂದರೆ ಶಿವನಲ್ಲಿ ಲೀನವಾಗಲಿ.

ಈ ಸಂಪೂರ್ಣ ‘ಶಿವಸಂಕಲ್ಪಸೂಕ್ತ’ ೬ ಮಂತ್ರಗಳದ್ದಾಗಿದೆ. ಈ ಸಂಪೂರ್ಣ ಸೂಕ್ತದಲ್ಲಿ ಮನಸ್ಸಿನ ವಸ್ತುನಿಷ್ಠ ವರ್ಣನೆಯನ್ನು ಕೆಲವೇ ಅರ್ಥಪೂರ್ಣ ಶಬ್ದಗಳಲ್ಲಿ ಮಾಡಲಾಗಿದೆ.

೧. ಮನಸ್ಸಿನ ಮೇಲೆ ಕಲ್ಯಾಣಕಾರಿ ಸಂಸ್ಕಾರಗಳನ್ನು ಮಾಡುವುದರ ಮಹತ್ವ !

ಮನುಷ್ಯನ ಮನಸ್ಸು ಅತ್ಯಂತ ಚಂಚಲವಾಗಿದೆ. ಮನುಷ್ಯನು ಜಾಗೃತವಾಗಿರುವಾಗ ವಿವಿಧ ಪ್ರಕಾರದ ವ್ಯವಹಾರಗಳನ್ನು ಮಾಡುತ್ತಿರುತ್ತಾನೆ. ಹಾಗೆಯೇ ಅವನಿಗೆ ಅನೇಕ ಒಳ್ಳೆಯ ಮತ್ತು ಕೆಟ್ಟ ವಿಷಯಗಳೊಂದಿಗೆ ಸಂಬಂಧ ಬರುತ್ತದೆ. ಇವೆಲ್ಲವುಗಳಿಂದÀ ಅವನ ಮನಸ್ಸಿನ ಮೇಲೆ ಪರಿಣಾಮವಾಗುತ್ತಿರುತ್ತದೆ. ಇಂತಹ ಮನಸ್ಸಿನ ಮೇಲೆ ಮನುಷ್ಯನ ಸಂಪೂರ್ಣ ನಿಯಂತ್ರಣ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಹಾಗೆಯೇ ಮನುಷ್ಯ ನಿದ್ರೆಯಲ್ಲಿರುವಾಗ ಕೂಡ ಅವನ ಮನಸ್ಸು ಇತರ ಕಡೆ ಅಲೆದಾಡುತ್ತಿರುತ್ತದೆ. ಇಂತಹ ಮನಸ್ಸು ಎಲ್ಲ ಇಂದ್ರಿಯಗಳಿಗೆ ಪ್ರಕಾಶ ನೀಡುವು
ದಾಗಿದೆ. ಆದ್ದರಿಂದ ಈ ಮನಸ್ಸಿನ ಮೇಲೆ ಕಲ್ಯಾಣಕಾರಿ ವಿಚಾರಗಳ ಸಂಸ್ಕಾರಗಳು ಆಗುವುದು ಅತ್ಯಂತ ಆವಶ್ಯಕವಾಗಿದೆ. ಸೂರ್ಯನಿಂದ ಹೊರಡುವ ಪ್ರಕಾಶ ಕಿರಣಗಳು ಎಲ್ಲೆಡೆ ಹರಡಿರುತ್ತವೆ. ಆದ್ದರಿಂದ ಆ ಕಿರಣಗಳಲ್ಲಿರುವ ತೇಜಸ್ವಿತಾ (ತೇಜಸ್ಸು) ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಆ ಕಿರಣಗಳು ಯಾವಾಗ ಒಟ್ಟಾಗುತ್ತವೆಯೋ, ಆಗ ಅವುಗಳ ತೇಜಸ್ವಿತಾ ಹೆಚ್ಚು ಪ್ರಖರವಾಗುತ್ತದೆ. ಮನುಷ್ಯನ ಮನಸ್ಸು ಕೂಡ ಹೀಗೆಯೆ ತೇಜಸ್ವಿ ಮತ್ತು ಪ್ರಖರವಾಗಿರಬೇಕು. ಇಂತಹ ಮನಸ್ಸು ಶುಭಸಂಕಲ್ಪ ಮತ್ತು ವಿಚಾರಗಳಿಂದ ತುಂಬಿರಬೇಕು. ಹಾಗಾದರೆ ಮಾತ್ರ ಸಂಪೂರ್ಣ ಸೃಷ್ಟಿಯನ್ನು ಉದ್ಧಾರ ಮಾಡುವ ಬುದ್ಧಿ ಮನುಷ್ಯನಲ್ಲಿ ನಿರ್ಮಾಣವಾಗಬಹುದು. ಇಂದ್ರಿಯಗಳಿಗಿಂತ ಮನಸ್ಸು ಶ್ರೇಷ್ಠ ಮತ್ತು ಮನಸ್ಸಿಗಿಂತ ಬುದ್ಧಿ ಶ್ರೇಷ್ಠವಾಗಿದೆ. ಮನಸ್ಸಿನ ಮೇಲೆ ಒಳ್ಳೆಯ ಸಂಸ್ಕಾರಗಳಾಗಿದ್ದರೆ, ಆ ಮನಸ್ಸು ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಇಡಬಹುದು ಮತ್ತು ಬುದ್ಧಿಯ ಆಜ್ಞೆಯನ್ನು ಪಾಲಿಸಬಹುದು, ಅದಕ್ಕಾಗಿ ಮನಸ್ಸು ಶುಭಸಂಕಲ್ಪಯುಕ್ತವಾಗಿರಬೇಕು.

೨. ಮನಸ್ಸು ಶುಭ ಸಂಕಲ್ಪಕಾರಕ ಆಗುವುದರ ಹಿಂದಿನ ಆವಶ್ಯಕತೆ !

ಶಿವ ಈ ದೇವತೆಯು ಶುಭ ಮತ್ತು ಕಲ್ಯಾಣಕಾರಿಯಾಗಿದ್ದಾನೆ. ಆದ್ದರಿಂದ ಮನಸ್ಸನ್ನು ಶಿವನೆÀಡೆಗೆ ಆಕರ್ಷಿತವಾಗÀಬೇಕು. ಶಿವನ ಕಡೆಗೆ ಆಕರ್ಷಿತವಾದ ಮನಸ್ಸಿಗೆ ಶಿವನ ಶಕ್ತಿ ಪ್ರಾಪ್ತವಾಗುತ್ತದೆ. ಇದರಿಂದ ಮಾನವ ಮತ್ತು ಸೃಷ್ಟಿಯ ಕಲ್ಯಾಣದ ಕಾರ್ಯ ಮಾನವನಿಂದ ಆಗಬಹುದು. ಕುವಿಚಾರಗಳು ಶುಭ ಮತ್ತು ಕಲ್ಯಾಣಕಾರಿ ಸಂಕಲ್ಪಗಳ ಸಮೀಪ ಸುಳಿಯುವುದಿಲ್ಲ. ಮನಸ್ಸು ಜ್ಞಾನಯುಕ್ತ, ಚಿಂತನಶೀಲ ಮತ್ತು ಧೈರ್ಯಶಾಲಿ ಆಗಿರಬೇಕು, ಹಾಗಿದ್ದರೆ ಮಾತ್ರ ಅದು ಪ್ರಾಣಿಮಾತ್ರರ ಅಂತರಂಗದಲ್ಲಿ ಅವಿನಾಶಿ ಅಮೃತಮಯ ಜ್ಯೋತಿಯ ರೂಪದಲ್ಲಿ ವಾಸ ಮಾಡಬಹುದು. ಮನುಷ್ಯನ ಕೈಯಿಂದಾಗುವ ಯಾವುದೇ ಕಾರ್ಯವು ಮನಸ್ಸಿನ ಒಪ್ಪಿಗೆಯಿಲ್ಲದೆ ಆಗುವುದಿಲ್ಲ. ಆದುದರಿಂದಲೆ ಮನಸ್ಸು ಶುಭ ಸಂಕಲ್ಪಕಾರಿಯಾಗುವುದು ಆವಶ್ಯಕವಾಗಿದೆ. ಅದಕ್ಕಾಗಿಯೆ ಅದು ಸುಂದರ ಮತ್ತು ಪವಿತ್ರ ವಿಚಾರಗಳಿಂದ ವ್ಯಾಪಿಸಲು ಶಿವನಲ್ಲಿ ಏಕಾಗ್ರವಾಗಬೇಕು.

೩. ಮನಸ್ಸನ್ನು ಶಿವನೊಂದಿಗೆ ಜೋಡಿಸಬೇಕು !

ಮನುಷ್ಯನ ಮನಸ್ಸು ಅವಿನಾಶಿಯಾಗಿದೆ. ಈ ಮನಸ್ಸು ಭೂತ, ಭವಿಷ್ಯ ಮತ್ತು ವರ್ತಮಾನ ಕಾಲದ ಎಲ್ಲ ವಿಷಯಗಳನ್ನು ವ್ಯಾಪಿಸಿದೆ. ಆದ್ದರಿಂದ ನಮ್ಮ ಮನಸ್ಸು ಶಿವಸಂಕಲ್ಪಕಾರಕ ಆಗಲೇಬೇಕು. ಒಂದು ವೇಳೆ ಮನಸ್ಸು ಅಪವಿತ್ರ, ಅಶುಭ ಮತ್ತು ಅಯೋಗ್ಯವಾಗಿದ್ದರೆ, ಶರೀರದ ಮೂಲಕ ಯೋಗ್ಯರೀತಿಯಲ್ಲಿ ವಿಶ್ವಕಾರ್ಯ ಮಾಡಲು ನಮ್ಮಿಂದಾಗುವುದಿಲ್ಲ; ಆದ್ದರಿಂದ ನಮ್ಮ ಮನಸ್ಸನ್ನು ಶಿವನೊಂದಿಗೆ ಜೋಡಿಸಬೇಕು. ರಥಕ್ಕೆ ಚಕ್ರವಿರುತ್ತದೆ. ಆ ಚಕ್ರದ ಕೇಂದ್ರದ ಸುತ್ತಲೂ ಇರುವ ಕಟ್ಟಿಗೆಯ ತುಂಡುಗಳು ಸ್ಥಿರವಾಗಿರುತ್ತವೆ. ಅದೇ ರೀತಿ ನಮ್ಮ ಮನಸ್ಸಿನಲ್ಲಿ ಋಗ್ವೇದ, ಯುಜುರ್ವೇದ, ಸಾಮವೇದದಲ್ಲಿನ ಮಂತ್ರಗಳು (ರುಚಾಗಳು) ಸ್ಥಿರವಾಗಿರಬೇಕು. ಹಾಗೆ ಆದರೆ ಮಾತ್ರ ಮನಸ್ಸಿನಲ್ಲಿ ಪ್ರಾಣಿ ಮಾತ್ರರ ವಿಷಯದಲ್ಲಿ ಕಳಕಳಿ, ತನ್ನತನ (ಆತ್ಮೀಯತೆ), ಪ್ರೀತಿ ನಿರ್ಮಾಣವಾಗಬಹುದು. ಇಂತಹ ಭಾವನಾಯುಕ್ತ ಮನಸ್ಸು ಶುಭಸಂಕಲ್ಪಕಾರಿಯಾಗುತ್ತದೆ. ರಥದ ಚಕ್ರದ ಕಟ್ಟಿಗೆಯ ತುಂಡು ಗಳು ಕೇಂದ್ರದೊಂದಿಗೆ ಸ್ಥಿರವಾಗಿರದೆ ಹೊರಗೆ ಬಂದರೆ ಸಂಪೂರ್ಣ ರಥ ಯೋಗ್ಯ ದಿಕ್ಕಿನಲ್ಲಿ ಚಲಿಸಲು ಸಾಧ್ಯವಿಲ್ಲ ಮತ್ತು ರಥದಲ್ಲಿ ಕುಳಿತಿರುವ ಪ್ರಯಾಣಿಕರು ತಮ್ಮ ಸ್ಥಾನವನ್ನು ತಲುಪಲು ಸಾಧ್ಯವಿಲ್ಲ. ಅದೇ ರೀತಿ ಮನಸ್ಸು ಶುಭ ಕಲ್ಯಾಣಕಾರಕ ಸಂಕಲ್ಪಗಳೊಂದಿಗೆ ವ್ಯವಸ್ಥಿತವಾಗಿ ಜೋಡಿಸಿಕೊಂಡಿದ್ದರೆ ಅದು ಆಚೀಚೆ ದಾರಿ ತಪ್ಪದೆ ಯೋಗ್ಯ ದಿಕ್ಕಿನಲ್ಲಿ ವೇಗವಾಗಿ ಪ್ರಯಾಣ ಮಾಡಿ ಧ್ಯೇಯವನ್ನು ತಲುಪುವುದು. ಅದರ ಪರಿಣಾಮದಿಂದ ಸಂಪೂರ್ಣ ಸೃಷ್ಟಿಯ ಕಲ್ಯಾಣದ ಮಹಾನ ಕಾರ್ಯ ನಮ್ಮ ಕೈಯಿಂದ ಪೂರ್ಣವಾಗುವುದು. ಅದಕ್ಕಾಗಿಯೆ ನಮ್ಮ ಮನಸ್ಸು ಶಿವನೊಂದಿಗೆ ಜೊತೆಗೂಡಬೇಕು. ಶಿವನೊಂದಿಗೆ ಜೊತೆಗೂಡಿರುವ ಮನಸ್ಸಿಗೆ ಶಕ್ತಿ ಪ್ರಾಪ್ತ ವಾಗುತ್ತದೆ. ಕುಶಲ ಸಾರಥಿ ಹೇಗೆ ವೇಗವಾನ ಕುದುರೆಗಳನ್ನು ಯೋಗ್ಯ ಮಾರ್ಗದಲ್ಲಿಯೇ ಒಯ್ಯುತ್ತಾನೆಯೋ, ಹಾಗೆಯೆ ಮನಸ್ಸು ಕೂಡ ಆಚೀಚೆ ಹೋಗದೆ ಸನ್ಮಾರ್ಗದಿಂದ ಬುದ್ಧಿಯ ಮಾರ್ಗದರ್ಶನಕ್ಕನುಸಾರ ಪ್ರಯಾಣ ಮಾಡುವುದು. ಅದಕ್ಕಾಗಿ ಮನುಷ್ಯನು ತನ್ನ ಮನಸ್ಸನ್ನು ಶುಭಸಂಕಲ್ಪಯುಕ್ತಗೊಳಿಸಲು ಶಿವನಲ್ಲಿ ಲೀನವಾಗಬೇಕು. ಈ ಶುಭಸಂಕಲ್ಪ ಮಾನವನ ಮನಸ್ಸನ್ನು ಆಚೀಚೆ ಹೋಗದಂತೆ ರಕ್ಷಿಸುತ್ತದೆ. ಧ್ಯೇಯವನ್ನು ತಲುಪಲು ಮತ್ತು ತನ್ನ ಕೈಯಿಂದ ಸತ್ಕರ್ಮವಾಗಬೇಕೆಂದು ಮನಸ್ಸನ್ನು ನಿಯಂತ್ರಣದಲ್ಲಿಡಲು ಬುದ್ಧಿಗೆ ಪೂರಕ ಶಕ್ತಿ ನೀಡುತ್ತದೆ.

೪. ಹಿಂದೂ ಸಂಸ್ಕೃತಿಯ ಶ್ರೇಷ್ಠತೆ !

ವಿಜ್ಞಾನವು ಎರಡೂ ಬದಿಗೆ ಹರಿತವಾಗಿರುವ ಶಸ್ತ್ರ ವಾಗಿದೆ. ಚಂಚಲ ಮತ್ತು ಚಪಲ ಮನಸ್ಸಿಗೆ ವಿವಿಧ ಪ್ರಕಾರದ ವಾಸನೆಗಳು ಮತ್ತು ಆಕರ್ಷಣೆಗಳು ಕುಪ್ರವೃತ್ತಿಯ ಕಡೆಗೆ ತಿರುಗಿಸುತ್ತವೆ. ಆ ಮೇಲೆ ಮನುಷ್ಯ ಯಾವಾಗ ರಾಕ್ಷಸ ಪ್ರವೃತ್ತಿ ಯವನಾಗುತ್ತಾನೆ ಎಂಬುದು ಅವನಿಗೇ ತಿಳಿಯುವುದಿಲ್ಲ. ಪ್ರಾಪ್ತವಾಗಿರುವ ‘ವಿಜ್ಞಾನವನ್ನು ಮಾನವತೆಯ ಕಲ್ಯಾಣಕ್ಕಾಗಿಯೆ ಉಪಯೋಗಿಸಬೇಕು. ಆ ಜ್ಞಾನವನ್ನು ವಿನಾಶಕ್ಕಾಗಿ ಉಪಯೋಗಿಸಿದರೆ ಎಲ್ಲೆಡೆ ಹಾಹಾಕಾರ ಆರಂಭವಾಗಬಹುದು. ಸೃಷ್ಟಿಯ ಸಮತೋಲನ ಕೆಡಬಹುದು. ಆದ್ದರಿಂದ ನಮ್ಮ ಕೈಯಿಂದ ಯಾವುದೇ ಪ್ರಕಾರದ ದುಷ್ಕರ್ಮ ನಡೆಯಬಾರದು. ಅದಕ್ಕಾಗಿ ನಾವೇ ಜಾಗರೂಕರಾಗಿರಬೇಕು ಮತ್ತು ಉದ್ದೇಶಪೂರ್ವಕ ತಮ್ಮನ್ನು ಶಿವಶಕ್ತಿಯೊಂದಿಗೆ ಜೋಡಿಸಬೇಕು’, ಎಂಬ ಮಹಾನ ಸಂದೇಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಮಂತ್ರದ ಮೂಲಕ ಸಂಪೂರ್ಣ ಜಗತ್ತಿಗೆ ನೀಡಿದ್ದಾರೆ. ಹಿಂದೂ ಸಂಸ್ಕೃತಿಯ ಈ ಮಹಾನತೆಯನ್ನು ‘ಋಗ್ವೇದ’ದ ವ್ಯಾಪಕತೆಯನ್ನು ಈ ನಿಮಿತ್ತದಲ್ಲಿ ಹೇಳುವ ಅವಕಾಶವನ್ನು ಪ್ರಧಾನಮಾಂತ್ರಿ ಮೋದಿಯವರು ಕಳೆದುಕೊಳ್ಳಲಿಲ್ಲ. ಅದೇರೀತಿ ಅವರು ವಿಜ್ಞಾನದ ಹೊಕ್ಕಳಬಳ್ಳಿ ಹಿಂದೂ ಧರ್ಮಶಾಸ್ತ್ರಕ್ಕನುಸಾರ ಹೇಗೆ ಜೋಡಿಸಲ್ಪಟ್ಟಿದೆ, ಎಂಬುದನ್ನೂ ಸಹಜವಾಗಿಯೆ ಹೇಳಿದರು. ಆದ್ದರಿಂದ ನಾವು ಪ್ರಧಾನಮಂತ್ರಿಗಳ ಈ ಭಾಷಣವನ್ನು ಗಂಭೀರವಾಗಿ ನೋಡಿ ಅದನ್ನು ಅರಿತುಕೊಳ್ಳುವುದು ಆವಶ್ಯಕವಾಗಿದೆ. – ಶ್ರೀ. ದುರ್ಗೇಶ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು ಡೊಂಬಿವಿಲಿ. (೧.೯.೨೦೨೩)