‘ಎಫಿಡೆವಿಟ್’ (ಪ್ರತಿಜ್ಞಾಪತ್ರ) ಅಂದರೆ ಏನು ? – ನ್ಯಾಯವಾದಿ ಶೈಲೇಶ ಕುಲಕರ್ಣಿ

೧. ಎಫಿಡೆವಿಟ್’ (ಪ್ರತಿಜ್ಞಾಪತ್ರ) ಅನ್ನು ಯಾವುದಕ್ಕಾಗಿ ಉಪಯೋಗಿಸುತ್ತಾರೆ ?

ನ್ಯಾಯವಾದಿ ಶೈಲೇಶ ಕುಲಕರ್ಣಿ

‘ಎಫಿಡೆವಿಟ್’ ಈ ಶಬ್ದ ಸದ್ಯಕ್ಕೆ ಬಹಳ ಪರಿಚಿತವಾಗಿದೆ. ನ್ಯಾಯಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯವುದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಥವಾ ಯಾವುದೇ ಸರಕಾರಿ-ಸರಕಾರೇತರ ಕಚೇರಿಗಳಲ್ಲಿ ‘ಎಫಿಡೆವಿಟ್’ ಸಲ್ಲಿಸುವುದು ಕಡ್ಡಾಯವಾಗಿದೆ. ಕಾನೂನಿನ, ಅಂದರೆ ‘ನಾಗರಿಕ ಪ್ರ್ರಕ್ರಿಯೆ ಸಂಹಿತೆ’ಯ (‘ಸಿಪಿಸಿ’ಯ) ಪುಸ್ತಕದಲ್ಲಿ ಎಲ್ಲಿಯೂ ‘ಎಫಿಡೆವಿಟ್’ ಈ ಶಬ್ದ ಬಂದಿಲ್ಲ. ‘ಜನರಲ್‌ ಕ್ಲಾಜ್‌ ಆಕ್ಟ’ನ (ಸಾಮಾನ್ಯ ಷರತ್ತುಗಳ ಕಾಯಿದೆಯ) ಪರಿಚ್ಛೇದ ೩ ರಲ್ಲಿ ‘ಎಫಿಡೆವಿಟ್‌’ನ ಅರ್ಥವನ್ನು ಸ್ಪಷ್ಟಪಡಿಸಲಾಗಿದೆ. ಸಾಧಾರಣ ಇದಕ್ಕೆ ‘ಪ್ರತಿಜ್ಞಾಪತ್ರ’ ಎಂದೂ ಕರೆಯುತ್ತಾರೆ. ಯಾವುದಾದರೊಂದು ವಿಷಯ ಸತ್ಯವಾಗಿದೆ, ಆದರೆ ಅದನ್ನು ಸಿದ್ಧಪಡಿಸಲು ಯಾವುದೇ ಕಾಗದಪತ್ರಗಳು ಉಪಲಬ್ಧವಿಲ್ಲದಿದ್ದಲ್ಲಿ, ‘ಎಫಿಡೆವಿಟ್‌’, ಪ್ರತಿಜ್ಞಾಪತ್ರ ಅಥವಾ ‘ಸೆಲ್ಫ್ ಡಿಕ್ಲÃರೇಶನ್’ (ಸ್ವಯಂಘೋಷಣಾ ಪತ್ರ) ಈ ಕಾಗದಪತ್ರಗಳಿಂದ ‘ಆ ವಿಷಯ ಅಥವಾ ಆ ವಸ್ತುಸ್ಥಿತಿ ಸತ್ಯವಾಗಿದೆ’, ಎಂದು ಒಪ್ಪಿಕೊಳ್ಳಲಾಗುತ್ತದೆ. ಆದುದರಿಂದ ‘ಎಫಿಡೆವಿಟ್‌’ಅನ್ನು ‘ಸ್ಟ್ಯಾಂಪ್‌ ಪೇಪರ್’ ಮೇಲೆಯೇ ಮಾಡ ಲಾಗುತ್ತದೆ. ತಾಂತ್ರಿಕ ಅರ್ಥಕ್ಕನುಸಾರ ಸ್ಟ್ಯಾಂಪ್‌ ಪೇಪರ ಮೇಲೆ ಮಾಡಿದ ಹೇಳಿಕೆಯನ್ನು ಒಬ್ಬ ಜವಾಬ್ದಾರಿಯುತ ಮೂರನೇ ವ್ಯಕ್ತಿಯ ಸಾಕ್ಷಿಯಲ್ಲಿ ಛಾಯಾಂಕಿತ (ನೋಟರಿ) ಮಾಡಿದರೆ ಅವು ಕಾಗದಪತ್ರಗಳಾಗುತ್ತವೆ. ‘ಭಾರತೀಯ ಪುರಾವೆ ಕಾನೂನಿ’ಗನುಸಾರ ‘ಎಫಿಡೆವಿಟ್’ ಇದು ಕೇವಲ ಒಂದು ಕಾಗದಪತ್ರವಾಗಿದೆ, ಪುರಾವೆ ಅಲ್ಲ.

೨. ‘ಎಫಿಡೆವಿಟ್‌’ನ ಬಗ್ಗೆ ‘ಜನರಲ್‌ ಕ್ಲಾಜ್‌ ಆಕ್ಟ ೧೮೯೭’ ರಲ್ಲಿ ಹೇಳಲಾಗಿರುವ ಮಾಹಿತಿ ‘ಜನರಲ್‌ ಕ್ಲಾಜ್‌ ಆಕ್ಟ ೧೮೯೭’ ಕ್ಕನುಸಾರ ‘ಎಫಿಡೆವಿಟ್’ ನ ಬಗ್ಗೆ ಪರಿಚ್ಛೇದ ೩ ರಲ್ಲಿ ಕೆಳಗಿನ ಮಾಹಿತಿಯನ್ನು ಕೊಡಲಾಗಿದೆ.

೩. ೧ – ‘ಎಫಿಡೆವಿಟ್’ ಸತ್ಯವಾಗಿದೆ ಎಂದು ಗ್ರಹಿಸಲಾಗುತ್ತದೆ.

೩. ೨ – ಯಾವುದನ್ನು ‘ಎಫಿಡೆವಿಟ್‌’ನಲ್ಲಿ ಹೇಳ ಲಾಗಿದೆಯೋ, ಅದನ್ನು, ಒಂದು ವೇಳೆ ‘ಕ್ರಾಸ್‌ ಎಕ್ಸಾಮಿನ್’ (ಅಡ್ಡಪರೀಕ್ಷೆ) ಮಾಡಿದ್ದರೆ, ಅದು ಪುರಾವೆ (ಸಾಕ್ಷಿ) ಆಗುತ್ತದೆ.

೩. ೩ – ಒಂದು ವೇಳೆ ‘ಎಫಿಡೆವಿಟ್‌’ನ ‘ವೆರಿಫಿಕೇಶನ’ (ಸತ್ಯತೆ) ಆಗದೇ ಇದ್ದರೆ, ಅದು ನಿರುಪಯೋಗಿ ಆಗುತ್ತದೆ.

೩. ೪. – ಒಂದು ವೇಳೆ ‘ಎಫಿಡೆವಿಟ್‌’ನಲ್ಲಿ ಏನಾದರೂ ತಪ್ಪು ಅಥವಾ ಕುಂದುಕೊರತೆಗಳು ಕಂಡು ಬಂದರೆ ಅದನ್ನು ಹೊಸ ದಾಗಿ ಮಾಡಲು ಬರುತ್ತದೆ ಮತ್ತು ಅದನ್ನು ಎಷ್ಟು ಸಲ ಬೇಕಾದರೂ ಮಾಡಬಹುದು ಅಥವಾ ಬದಲಾಯಿಸಬಹುದು.

೩. ೬ – ಮಧ್ಯಂತರ ಆದೇಶ (ಇಂಟರಿಮ್‌ ಆರ್ಡರ) ಅಥವಾ ‘ಇಂಟರ ಲ್ಯಾಕ್ಯುಟರಿ ಅಪ್ಲಿಕೇಶನ’ಗೆ (ಯಾವುದಾದರೊಂದು ತಾತ್ಕಾಲಿಕ ಆದೇಶಕ್ಕೆ) ಒಂದು ವೇಳೆ ‘ಎಫಿಡೆವಿಟ್‌’ಅನ್ನು ಜೋಡಿಸಿದರೆ, ಅದನ್ನು ಪುರಾವೆ ಎಂದು ಒಪ್ಪಿಕೊಳ್ಳಲಾಗುತ್ತದೆ.

೩.೭ – ಒಂದು ವೇಳೆ ‘ಎಫಿಡೆವಿಟ್‌’ನಲ್ಲಿ ಬರೆದಿರುವ ಪ್ರಕ್ರಿಯೆ ಪೂರ್ಣವಾಗಿದೆ ಆದರೆ ಪ್ರತ್ಯಕ್ಷ ಕೃತಿ ಆಗಿಲ್ಲದಿದ್ದರೆ, ನ್ಯಾಯಾಲಯವನ್ನು ಅಪಮಾನಿಸಿದ ಬಗ್ಗೆ (ಕಂಟೆಂಪ್ಟ ಆಫ್‌ ಕೋರ್ಟಕ್ಕನುಸಾರ) ಸಂಬಂಧಿಸಿದವರಿಗೆ ಶಿಕ್ಷೆಯಾಗಬಹುದು.

೩. ೧೦ – ಯಾವುದೇ ‘ಎಫಿಡೆವಿಟ್‌’ಗೆ ‘ಕೌಂಟರ ಎಫಿಡೆವಿಟ್‌ನಿಂದ’ (ಪ್ರತಿ

ಪ್ರತಿಜ್ಞಾಪತ್ರದ ಮೂಲಕ) ಸವಾಲೆಸಗಲು ಸಾಧ್ಯ ಆಗುವುದಿಲ್ಲ.

೩.’ಎಫಿಡೆವಿಟ್‌’ನ ವಿಷಯದಲ್ಲಿ ಇತರ ಮಾಹಿತಿ

‘ಎಫಿಡೆವಿಟ್’ ಮಾಡುವವನಿಗೆ ‘ಡೆಪೊನಂಟ್’ (ಆಣೆ ಮಾಡಿ ಸಾಕ್ಷಿ ನೀಡುವವನು), ಎಂದು ಹೇಳುತ್ತಾರೆ. ‘ಎಫಿಡೆವಿಟ್’ ಮಾಡುವಾಗ ಎಷ್ಟು ರೂಪಾಯಿಗಳ ಸ್ಟ್ಯಾಂಪ್‌ ಪೇಪರ್‌ ಬೇಕಾಗುತ್ತದೆ ಎನ್ನುವುದನ್ನು ಮೊದಲು ದೃಢಪಡಿಸಿಕೊಳ್ಳಬೇಕು. ‘ಎಫಿಡೆವಿಟ್‌’ನ ಕಾಲಾವಧಿ ಶಾಶ್ವತ ಸ್ವರೂಪದ್ದೇ ಆಗಿರುತ್ತದೆ. ಅದಕ್ಕೆ ಯಾವುದೇ ಸಮಯಮಿತಿ (ಎಕ್ಸಪೈರಿ) ಇತ್ಯಾದಿ ಇರುವುದಿಲ್ಲ; ಆದರೆ ‘ಡೆಪೊನಂಟ್‌’ನ ಮರಣವಾದರೆ ‘ಎಫಿಡೆವಿಟ್’ ನ ಅವಧಿ (ಕಾಲಾವಧಿ) ಮುಗಿಯುತ್ತದೆ. ಆದಾಗ್ಯೂ ಕೆಲವು ಸ್ಥಳಗಳಲ್ಲಿ ‘ಎಫಿಡೆವಿಟ್‌’ಗೆ ಒಂದು ವರ್ಷದ ಕಾಲಾವಧಿ ಇರುತ್ತದೆ ಎಂದು ತಿಳಿಯಲಾಗುತ್ತದೆ. ಒಂದು ವರ್ಷದ ಬಳಿಕ ಹೊಸ ‘ಎಫಿಡೆವಿಟ್’ ಮಾಡಬೇಕಾಗುತ್ತದೆ. ‘ಎಫಿಡೆವಿಟ್’ ಅನ್ನು ಯಾವುದಾದರೊಬ್ಬ ಜೀವಂತವಿರುವಂತಹ ವ್ಯಕ್ತಿಯ ಬಗ್ಗೆ ಮಾತ್ರ ಮಾಡಲು ಬರುತ್ತದೆ; ಆದರೆ ಸಂಸ್ಥೆ, ಶಾಖೆ, ಕಂಪನಿ ಇವುಗಳಂತಹ ‘ಆರ್ಟಿಫಿಶಲ್‌ ಪರ್ಸನ’ (ಕೃತಕ ವ್ಯಕ್ತಿ)ಗೆ ಮಾಡಲು ಬರುವುದಿಲ್ಲ ಅಥವಾ ಎಲ್ಲರೂ ಒಟ್ಟಾಗಿಯೂ ಮಾಡಲು ಬರುವುದಿಲ್ಲ ‘ಎಫಿಡೆವಿಟ್’ ಯಾವಾಗಲೂ ಲಿಖಿತ ಸ್ವರೂಪದಲ್ಲಿಯೇ ಇರಬೇಕಾಗುತ್ತದೆ. ಮೌಖಿಕವಾಗಿ ಮಾಡಿದ ‘ಎಫಿಡೆವಿಟ್’ ಅಸ್ತಿತ್ವದಲ್ಲಿರುವುದಿಲ್ಲ.

– ನ್ಯಾಯವಾದಿ ಶೈಲೇಶ ಕುಲಕರ್ಣಿ, ಫೋಂಡಾ, ಗೋವಾ