ಆಂಧ್ರಪ್ರದೇಶದ ಚಿರಾಲಾದ ಶ್ರೀಮತಿ ಆಂಡಾಳ ಆರವಲ್ಲಿ (೮೭ ವರ್ಷ) ಇವರು ಸಂತಪದವಿಯಲ್ಲಿ ವಿರಾಜಮಾನ !

ಪೂ. (ಶ್ರೀಮತಿ) ಆಂಡಾಳ ಆರವಲ್ಲಿ ಅಜ್ಜಿ ಇವರಿಗೆ ಶ್ರೀಕೃಷ್ಣನ ಚಿತ್ರವನ್ನು ನೀಡಿ ಸನ್ಮಾನ ಮಾಡುತ್ತಿರುವ ಶ್ರೀ. ಚೇತನ ಜಿ.

 

ಶ್ರೀ. ಬದರೀ ನಾರಾಯಣ ಆರವಲ್ಲಿ ಇವರಿಗೆ ಶ್ರೀಕೃಷ್ಣನ ಚಿತ್ರವನ್ನು ನೀಡಿ ಸತ್ಕಾರ ಮಾಡುತ್ತಿರುವ ಶ್ರೀ. ಚೇತನ ಜಿ.

(‘ಆಂಡಾಳ’ ಇದು ವಿಷ್ಣುಪತ್ನಿಯ ಹೆಸರು) ಚಿರಾಲಾ (ಆಂಧ್ರಪ್ರದೇಶ) – ಇಲ್ಲಿನ ಶ್ರೀಮತಿ ಆಂಡಾಳ ರಂಗನಾಯಕಾಚಾರ್ಯುಲು ಆರವಲ್ಲಿ ಇವರು ಸಂತಪದವಿಯನ್ನು ತಲುಪಿದ್ದಾರೆ ಎಂದು ೧೨.೯.೨೦೨೩ ರಂದು ಅವರ ನಿವಾಸಸ್ಥಾನದಲ್ಲಿ ಆದ ಒಂದು ಭೇಟಿಯ ವೇಳೆ ಘೋಷಣೆ ಮಾಡಲಾಯಿತು. ಪೂ. ಅಜ್ಜಿಯವರ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಬರೆದಿರುವ ಒಂದು ಸಂದೇಶವನ್ನು ಶ್ರೀ. ಚೇತನ ಜಿ. ಇವರು ಓದಿ ಹೇಳಿದರು ಹಾಗೂ ಅದರ ಮೂಲಕ ಅವರ ಸಂತಪದವಿಯನ್ನು ಘೋಷಿಸಲಾಯಿತು.

ಶ್ರೀ. ಬದರೀ ನಾರಾಯಣ ಆರವಲ್ಲಿ

ಶ್ರೀ. ಚೇತನ ಜಿ. ಇವರು ಶ್ರೀಕೃಷ್ಣನ ಚಿತ್ರವನ್ನು ನೀಡಿ ಅವರನ್ನು ಸನ್ಮಾನಿಸಿದರು. ಈ ಭಾವಸಮಾರಂಭದಲ್ಲಿ ಪೂ. ಶ್ರೀಮತಿ ಆಂಡಾಳ ಆರವಲ್ಲಿ ಅಜ್ಜಿಯ ಪುತ್ರ ಶ್ರೀ. ಶ್ರೀಬದರೀ ನಾರಾಯಣ ಆರವಲ್ಲಿ (ವಯಸ್ಸು ೫೨ ವರ್ಷ) ಇವರು ಕೂಡ ಶೇ. ೬೧ ಆಧ್ಯಾತ್ಮಿಕ ಮಟ್ಟವನ್ನು ತಲಪಿರುವುದಾಗಿ ಘೋಷಣೆ ಮಾಡಲಾಯಿತು.

ಪ್ರೀತಿ, ನಿರಪೇಕ್ಷತೆ ಹಾಗೂ ಶ್ರೀ ನಾರಾಯಣನ ನಾಮಾನುಸಂಧಾನದಲ್ಲಿರುವ ಶ್ರೀಮತಿ ಆಂಡಾಳ ರಂಗನಾಯಕಾಚಾರ್ಯುಲು ಆರವಲ್ಲಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಚಿರಾಲಾದ (ಪ್ರಕಾಶಮ್‌ ಜಿಲ್ಲೆ, ಆಂಧ್ರಪ್ರದೇಶ) ಶ್ರೀಮತಿ ಆಂಡಾಳ ರಂಗನಾಯಕಾಚಾರ್ಯುಲು ಆರವಲ್ಲಿ (೮೭ ವರ್ಷ) ಇವರು ವೈಷ್ಣವ ಸಂಪ್ರದಾಯಕ್ಕನುಸಾರ ಸಾಧನೆ ಮಾಡುತ್ತಾರೆ. ಅವರಿಗೆ ಶ್ರೀ ನಾರಾಯಣನ ಮೇಲೆ ಅಪಾರ ಶ್ರದ್ಧೆ ಇದೆ ಹಾಗೂ ನಾರಾಯಣನ ಅಖಂಡ ನಾಮಜಪದಲ್ಲಿ ಮಗ್ನರಾಗಿರುತ್ತಾರೆ. ಅವರ ಜೀವನದಲ್ಲಿ ಅನೇಕ ಕಠಿಣ ಪ್ರಸಂಗಗಳು ಬಂದಿವೆ. ಆದರೂ ಅವರು ವಿಚಲಿತರಾಗದೆ ನಾಮಜಪದ ಮೇಲಿನ ಶ್ರದ್ಧೆಯ ಬಲದಲ್ಲಿ ಆ ಪ್ರಸಂಗಗಳನ್ನು ಧೈರ್ಯದಿಂದ ಎದುರಿಸಿದರು. ಸಂಬಂಧಿಕರಿಂದ ಅವರಿಗೆ ಯಾವುದೇ ಅಪೇಕ್ಷೆಯಿಲ್ಲ. ‘ನನ್ನ ಸಂಬಂಧ ಕೇವಲ ಭಗವಂತನೊಂದಿಗಿದೆ’, ಎಂಬ ಭಾವ ಅವರಲ್ಲಿದೆ. ‘ಪ್ರತಿಯೊಂದು ಪರಿಸ್ಥಿತಿಯಲ್ಲಿ ದೇವರು ನಮ್ಮನ್ನು ಕಾಪಾಡುತ್ತಾರೆ’, ಎಂಬುದು ಅವರ ದೃಢ ಶ್ರದ್ಧೆ ಯಾಗಿದೆ. ಅಜ್ಜಿಯವರಿಗೆ ಅವರ ಅನುಭವದ ಬಗ್ಗೆ ಎಳ್ಳಷ್ಟೂ ಅಹಂಕಾರವಿಲ್ಲ. ಅವರು ನಿರಂತರ ಕಲಿಯುವ ಸ್ಥಿತಿಯಲ್ಲಿರುತ್ತಾರೆ.

ಅಜ್ಜಿಯವರ ಪತಿ (ದಿ.) ರಂಗನಾಯಕಾಚಾರ್ಯುಲು ಆರವಲ್ಲಿ ಇವರು ವೈಷ್ಣವ ಸಂಪ್ರದಾಯದ ‘ಆಚಾರ್ಯ’ರ ಸ್ಥಾನಲ್ಲಿದ್ದರು. ಆಗ ಅವರನ್ನು ಹಾಗೂ ಅಜ್ಜಿಯವರನ್ನು ಆಸನದ ಮೇಲೆ ಕುಳ್ಳಿರಿಸಿ ಅವರ ಪಾದ್ಯಪೂಜೆ ಮಾಡಲಾಗುತ್ತಿತ್ತು. ಆಗ ‘ನಮ್ಮಿಬ್ಬರ ಸ್ಥಾನದಲ್ಲಿ ಸಾಕ್ಷಾತ್‌ ಶ್ರೀವಿಷ್ಣು ಹಾಗೂ ಶ್ರೀ ಲಕ್ಷ್ಮೀಯ ಅಸ್ತಿತ್ವವಿರುತ್ತದೆ, ಹಾಗೂ ಎಲ್ಲರೂ ತಮ್ಮ ಪೂಜೆ ಮಾಡುತ್ತಾರೆ, ಎನ್ನುವ ಭಾವ ಅಜ್ಜಿಯಲ್ಲಿರುತ್ತಿತ್ತು.

ಈಗ ಅಜ್ಜಿಯವರ ಮುಖ ಮೊದಲಿಗಿಂತ ಹೆಚ್ಚು ತೇಜಸ್ವಿಯಾಗಿ ಕಾಣಿಸುತ್ತದೆ. ‘ಅಜ್ಜಿಯವರ ಸಾಧನೆಯಿಂದ ಅವರಲ್ಲಿನ ಚೈತನ್ಯದ ಪ್ರಮಾಣ ಹೆಚ್ಚಾಗಿದೆ’, ಎಂದು ಅನಿಸುತ್ತದೆ. ಅಜ್ಜಿಯವರು ಮಾಡಿದ ಸಾಧನೆಯ ಸಂಸ್ಕಾರದಿಂದ ಅವರ ಕುಟುಂಬದವರೂ ಸಾಧನೆ ಮಾಡುತ್ತಿದ್ದಾರೆ. ಅಜ್ಜಿಯವರ ಪುತ್ರ ಶ್ರೀ. ಶ್ರೀಬದರಿ ನಾರಾಯಣ ಆರವಲ್ಲಿ ಇವರು ಕೂಡ ವೈಷ್ಣವ ಸಂಪ್ರದಾಯಕ್ಕನುಸಾರ ಸಾಧನೆ ಮಾಡುತ್ತಾರೆ. ಅಜ್ಜಿಯವರ ಮಗಳು ಸೌ. ಜಾನಕಿದೇವಿ ಮಾಡಭೂಷಿ, ಮೊಮ್ಮಗಳು (ಮಗಳ ಮಗಳು) ಸೌ. ತೇಜಸ್ವಿ ವೆಂಕಟಾಪುರ ಹಾಗೂ (ಮೊಮ್ಮಗಳ ಪತಿ) ಶ್ರೀ. ಪ್ರಸನ್ನ ವೆಂಕಟಾಪುರ ಇವರು ಭಾಗ್ಯನಗರ (ತೆಲಂಗಾಣಾ)ದಲ್ಲಿ ಸನಾತನ ಸಂಸ್ಥೆಯ ಮಾರ್ಗದರ್ಶನ ಕ್ಕನುಸಾರ ಸಾಧನೆ ಮಾಡುತ್ತಿದ್ದಾರೆ. ಅವರ ಮರಿ ಮಗ ಚಿ. ಬಲರಾಮ ವೆಂಕಟಾಪುರ (೫ ವರ್ಷ) ಇವನು ಮಹಾಲೋಕದಿಂದ ಪೃಥ್ವಿಯಲ್ಲಿ ಜನ್ಮ ಪಡೆದಿರುವ ದೈವೀ ಬಾಲಕನಾಗಿದ್ದು ಅವನ ಆಧ್ಯಾತ್ಮಿಕ ಮಟ್ಟ ಶೇ. ೬೧ ಇದೆ. ನಿರಪೇಕ್ಷ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಜೀವನ ನಡೆಸಬೇಕು ?’, ಎನ್ನುವ ಆದರ್ಶವನ್ನು ಎಲ್ಲರ ಮುಂದೆ ಇಟ್ಟಿರುವ ಶ್ರೀಮತಿ ಆಂಡಾಳ ಆರವಲ್ಲಿ ಅಜ್ಜಿಯವರ ಆಧ್ಯಾತ್ಮಿಕ ಉನ್ನತಿ ಶೀಘ್ರಗತಿಯಲ್ಲಿ ಆಗುತ್ತಿದೆ. ‘ಪ್ರೇಮಭಾವ, ಭಗವಂತನ ಮೇಲೆ ಅಪಾರ ಭಾವ ಹಾಗೂ ನಿರಂತರ ನಾಮಾನುಸಂಧಾನದಲ್ಲಿರುವುದು’ ಇತ್ಯಾದಿ ಅನೇಕ ಗುಣಗಳಿಂದಾಗಿ ಇಂದಿನ ಶುಭಮುಹೂರ್ತದಲ್ಲಿ (೧೨.೯.೨೦೨೩ರಂದು) ಅವರು ಶೇ. ೭೧ ಆಧ್ಯಾತ್ಮಿಕ ಮಟ್ಟ ತಲುಪಿ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.

‘ಪೂ. (ಶ್ರೀಮತಿ) ಆಂಡಾಳ ಆರವಲ್ಲಿ ಇವರ ಮುಂದಿನ ಆಧ್ಯಾತ್ಮಿಕ ಪ್ರಗತಿ ಹೀಗೆಯೆ ಶೀಘ್ರಗತಿಯಲ್ಲಿ ಮುಂದುವರಿಯಲಿ’, ಎಂದು ನಾನು ಶ್ರೀ ನಾರಾಯಣನ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.’

– (ಪರಾತ್ಪರ ಗುರು) ಡಾ. ಆಠವಲೆ (೧೨.೯.೨೦೨೩)

ಪೂ. (ಶ್ರೀಮತಿ) ಆಂಡಾಳ ಅಜ್ಜಿಯವರು ವ್ಯಕ್ತಪಡಿಸಿದ ಮನೋಗತ

ಪೂ. (ಶ್ರೀಮತಿ) ಆಂಡಾಳ ಆರವಲ್ಲಿ ಅಜ್ಜಿ

೧. ಸೌ. ಪದ್ಮಾ ಜನಾರ್ದನ ಇವರು ನನ್ನ ಮೊದಲ ಗುರು ಆಗಿದ್ದಾರೆ. ಅವರನ್ನು ಮೊದಲ ಬಾರಿ ಭೇಟಿಯಾದಾಗ ನಾನು ಯಾವ ಜಪ ಮಾಡಬೇಕೆಂದು ಅವರಲ್ಲಿ ಕೇಳಿದ್ದೆ. ಅವರು ನನಗೆ ‘ಶ್ರೀ ಗುರುದೇವ ದತ್ತ’ ನಾಮಜಪ ಮಾಡಲು ಹೇಳಿದ್ದರು. ಅಂದಿನಿಂದ ನಾನು ಈ ನಾಮಜಪ ಮಾಡುತ್ತಿದ್ದೇನೆ.

೨. ‘ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ) ಆರೋಗ್ಯ ಚೆನ್ನಾಗಿರಲಿ ಹಾಗೂ ಸನಾತನ ಸಂಸ್ಥೆಯ ಕಾರ್ಯ ಉತ್ತರೋತ್ತರ ವೃದ್ಧಿಯಾಗಲಿ’, ಎಂದು ನಾನು ನಿರಂತರ ಪ್ರಾರ್ಥನೆ ಮಾಡುತ್ತಿದ್ದೇನೆ.

೩. ನನ್ನ ಜೀವನದಲ್ಲಿ ಶ್ರೀ ಪೆರುಮಾಳದೇವರ ತೀರ್ಥ ಹಾಗೂ ಪ್ರಸಾದ ನನಗೆ ಮಹತ್ವದ್ದಾಗಿದೆ. ನನಗೆ ಪ್ರತಿದಿನ ಕೇವಲ ಈ ತೀರ್ಥ ಸಿಕ್ಕಿದರೂ ಸಾಕು.