ಸಂತರ ಮತ್ತು ಸಾಧಕರ ಬಗ್ಗೆ ಎಲ್ಲ ರೀತಿಯಿಂದಲೂ ಕಾಳಜಿ ವಹಿಸುವ ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕನಸಿನಲ್ಲಿ ಬಂದು ಸದ್ಗುರು ಡಾ. ಮುಕುಲ ಗಾಡಗೀಳರಿಗೆ ಅನಾರೋಗ್ಯವಿರುವುದಾಗಿ ಹೇಳುವುದು ಮತ್ತು ವಾಸ್ತವದಲ್ಲಿ ಹಾಗೇ ಇರುವುದು

ಸದ್ಗುರು ಡಾ. ಮುಕುಲ ಗಾಡಗೀಳ

 

ಆಧುನಿಕ ವೈದ್ಯ ಉಜ್ವಲ ಕಾಪಡಿಯಾ

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕನ ಕನಸಿನಲ್ಲಿ ಬಂದು ಸದ್ಗುರು ಡಾ. ಮುಕುಲ ಗಾಡಗೀಳ ಇವರ ಆರೋಗ್ಯದ ಬಗ್ಗೆ ವಿಚಾರಿಸುವುದು : ‘೧೯.೫.೨೦೨೩ ರಂದು ತೀವ್ರ ಆಧ್ಯಾತ್ಮಿಕ ತೊಂದರೆ ಯಿಂದಾಗಿ ನನ್ನ ಪ್ರಾಣಶಕ್ತಿ ಬಹಳ ಕಡಿಮೆಯಾಗಿತ್ತು. ಆದುದರಿಂದ ನಾನು ಬೆಳಗ್ಗೆಯಿಂದ ರಾಮನಾಥಿ ಆಶ್ರಮದ ಒಂದು ಕೋಣೆಯಲ್ಲಿ ಮಲಗಿದ್ದೆನು. ಮಧ್ಯಾಹ್ನ ೩ ಗಂಟೆಗೆ ನನಗೆ ಕನಸು ಬಿದ್ದಿತು. ಕನಸಿನಲ್ಲಿ ನಾನು ಪ.ಪೂ. ಡಾಕ್ಟರರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ) ಇವರ ಎದುರಿಗೆ ಕುಳಿತಿದ್ದೆನು. ನನ್ನೊಂದಿಗೆ ಇತರ ಕೆಲವು ಸಾಧಕರೂ ಅಲ್ಲಿ ಉಪಸ್ಥಿತರಿದ್ದರು. ಆ ಸಮಯದಲ್ಲಿ ಪ.ಪೂ. ಡಾಕ್ಟರರು ನನಗೆ, ‘ಪೂ. ಗಾಡಗೀಳಕಾಕಾ ಈಗ ಹೇಗಿದ್ದಾರೆ ?’ ಎಂದು ಕೇಳಿದರು. ಪ.ಪೂ. ಡಾಕ್ಟರರು ಇದ್ದಕ್ಕಿದ್ದಂತೆಯೇ ಈ ಪ್ರಶ್ನೆಯನ್ನು ಕೇಳಿದಾಗ ನಾನು ಗಲಿಬಿಲಿಗೊಂಡೆನು ಮತ್ತು, ‘ಚೆನ್ನಾಗಿದ್ದಾರೆ’ ಎಂದು ಉತ್ತರಿಸಿದೆನು. ಅದಕ್ಕೆ ಅವರು, ‘ಹಾಗಾದರೆ ಅವರಿಗೆ ಮೇಲಿಂದ ಮೇಲೆ ಏಕೆ ಜ್ವರ ಬರುತ್ತದೆ ? ಈಗಲೂ ಅವರಿಗೆ ಜ್ವರ ಇದೆ’, ಎಂದು ಹೇಳಿದರು. ನಾನು ‘ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ’, ಎಂದು ಅವರಿಗೆ ಹೇಳಿದಾಗ ಅವರು ನನಗೆ, ‘ಅವರಿಗೆ ಈಗ ಜ್ವರ ಇದೆ. ನೀನು ಇಲ್ಲಿಂದ ಹೋದ ತಕ್ಷಣ ಅವರ ಆರೋಗ್ಯದ ಬಗ್ಗೆ ವಿಚಾರಿಸು’, ಎಂದು ಹೇಳಿದರು.

೨. ಸದ್ಗುರು ಡಾ. ಮುಕುಲ ಗಾಡಗೀಳಕಾಕಾ ಇವರ ಬಗ್ಗೆ ವಿಚಾರಿಸಿದಾಗ ಅವರಿಗೆ ಅನಾರೋಗ್ಯವಿರುವುದಾಗಿ ತಿಳಿಯುವುದು ಮತ್ತು ಅವರಿಗೆ ಔಷಧಿ ನೀಡಿದ ನಂತರ ಅವರಿಗಾಗುವ ತೊಂದರೆ ನಿಲ್ಲುವುದು : ಇದರ ನಂತರ ನನಗೆ ಕೂಡಲೇ ಎಚ್ಚರವಾಯಿತು. ‘ನನಗೇಕೆ ಈ ಕನಸು ಬಿದ್ದಿತು ?’, ಎಂದು ನನಗೆ ತಿಳಿಯಲಿಲ್ಲ; ಆದುದರಿಂದ ನಾನು ಸದ್ಗುರು ಡಾ. ಮುಕುಲ ಗಾಡಗೀಳಕಾಕಾರವರ ಸೇವೆಯಲ್ಲಿರುವ ಸಾಧಕನಿಗೆ ಸಂಚಾರವಾಣಿ ಕರೆ ಮಾಡಿ ಈ ಕನಸಿನ ಬಗ್ಗೆ ಹೇಳಿದೆನು. ಅವನು ತಕ್ಷಣ ಸದ್ಗುರು ಗಾಡಗೀಳಕಾಕಾ ಇವರಿಗೆ ಸಂಚಾರವಾಣಿಯನ್ನು ನೀಡಿದನು. ಆಗ ಸದ್ಗುರು ಗಾಡಗೀಳಕಾಕಾ ಇವರು, ‘ಬೆಳಗ್ಗೆಯಿಂದ ನನ್ನ ಗಂಟಲು ಕೆರೆಯುತ್ತಿದೆ. ಅರಿಶಿಣದ ನೀರು ಮತ್ತು ದ್ರವೌಷಧಿಯನ್ನೂ ತೆಗೆದುಕೊಂಡಿದ್ದೇನೆ. ಈಗಲೂ ಗಂಟಲು ಕೆರೆಯುತ್ತಿದೆ. ಇನ್ನೂ ಬೇರೆ ಯಾವುದಾದರೂ ಔಷಧಿಯನ್ನು ತೆಗೆದುಕೊಳ್ಳಬೇಕೇ ?” ಎಂದು ಕೇಳಿದರು. ನಾನು ಅವರಿಗೆ ಅದಕ್ಕಾಗಿ ಒಂದು ಮಾತ್ರೆಯನ್ನು ನೀಡಿದೆನು ಮತ್ತು ಅನಂತರ ಮರುದಿನ ಅವರನ್ನು ಕೇಳಿದಾಗ, ಅವರ ಗಂಟಲು ಕೆರೆತ ಈಗ ಪೂರ್ತಿಯಾಗಿ ನಿಂತಿದೆ ಎಂದು ತಿಳಿಯಿತು.

೩. ಸದ್ಗುರು ಗಾಡಗೀಳಕಾಕಾರವರೊಂದಿಗೆ ಮಾತನಾಡಿದ ನಂತರ ಸಾಧಕನಿಗೆ ಆಗುವ ಆಧ್ಯಾತ್ಮಿಕ ತೊಂದರೆಯೂ ದೂರವಾಗುವುದು : ‘ಗುರುಗಳು ಪ್ರತಿಯೊಬ್ಬ ಸಾಧಕನ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ?’ ಎಂದು ಈ ಅನುಭೂತಿಯಿಂದ ನನ್ನ ಗಮನಕ್ಕೆ ಬಂದಿತು. ಮೇಲಿನ ಪ್ರಸಂಗದಲ್ಲಿ ನನಗೆ ಬೆಳಗ್ಗೆಯಿಂದ ತೀವ್ರ ತೊಂದರೆಯಾಗುತ್ತಿತ್ತು; ಆದರೆ ಕನಸು ಬಿದ್ದ ನಂತರ ನಾನು ಸದ್ಗುರು ಗಾಡಗೀಳ ಕಾಕಾರೊಂದಿಗೆ ಮಾತನಾಡಿದ ನಂತರ ನನಗೆ ಬೆಳಗ್ಗೆಯಿಂದ ಆಗುವ ಆಧ್ಯಾತ್ಮಿಕ ತೊಂದರೆ ಕೂಡಲೇ ಇಲ್ಲದಂತಾಯಿತು ಮತ್ತು ನನಗೆ ಉತ್ಸಾಹವೆನಿಸತೊಡಗಿತು. ‘ನನ್ನ ತೊಂದರೆ ದೂರವಾಗಲೆಂದೇ ದೇವರು ನನಗೆ ಈ ಅನುಭೂತಿಯನ್ನು ನೀಡಿದ್ದಾನೆ’, ಎಂದು ನನ್ನ ಗಮನಕ್ಕೆ ಬಂದಿತು.’

– ಆಧುನಿಕ ವೈದ್ಯ ಉಜ್ವಲ ಕಾಪಡಿಯಾ, ಫೋಂಡಾ, ಗೋವಾ (೨೯.೫.೨೦೨೩)