ಅಪಹಾಸ್ಯಕ್ಕೀಡಾದ ಖಲಿಸ್ತಾನಿ ‘ಟ್ರುಡೋ’ !

ಖಲಿಸ್ತಾನಿ ಭಯೋತ್ಪಾದನೆಯನ್ನು ಬೆಂಬಲಿಸಿದ್ದಕ್ಕಾಗಿ ಈಗ ಭಾರತ-ಕೆನಡಾ ನಡುವಿನ ಸಂಬಂಧ ಹದಗೆಡಲು ಆರಂಭವಾಗಿದೆ. ಭೌಗೋಲಿಕ ದೃಷ್ಟಿಯಲ್ಲಿ ಜಗತ್ತಿನ ಮೂಲೆಯಲ್ಲಿರುವ ಕೆನಡಾವು, ಇತ್ತೀಚೆಗೆ ದೆಹಲಿಯಲ್ಲಿ ನೆರವೇರಿದ ಜಿ-೨೦ ಪರಿಷತ್ತಿನಲ್ಲಿ ಅಧ್ಯಕ್ಷತೆಯನ್ನು ನಿರ್ವಹಿಸಿದ ಭಾರತದ ನೇತೃತ್ವದಲ್ಲಿ ಈಗ ಪೂರ್ಣ ಮೂಲೆ ಗುಂಪಾಯಿತು. ಇದರಿಂದ ಸಿಟ್ಟಿಗೆದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಕೆನಡಾಗೆ ತಲುಪಿದ ತಕ್ಷಣ ಅಲ್ಲಿ ನೆಲೆಸಿದ್ದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಜೂನ್ ತಿಂಗಳಲ್ಲಿ ಆಗಿರುವ ಹತ್ಯೆಗೆ ಭಾರತವೇ ಹೊಣೆಯೆಂದು ಹೇಳಿದರು. ಇಷ್ಟು ಮಾತ್ರವಲ್ಲ, ಭಾರತೀಯ ರಾಯಭಾರಿ ಕಚೇರಿಯ ಓರ್ವ ಹಿರಿಯ ಅಧಿಕಾರಿಗೆ ದೇಶ ತೊರೆಯುವಂತೆ ಆದೇಶಿಸಿದರು. ಭಾರತ ಕೂಡ ಇದಕ್ಕೆ ‘ಮುಯ್ಯಿಗೆ ಮುಯ್ಯಿ’ ಎನ್ನುವಂತೆ ಉತ್ತರ ನೀಡುತ್ತಾ ಭಾರತದಲ್ಲಿನ ರಾಯಭಾರಿ ಕಚೇರಿಯ ಕೆನಡಾದ ಓರ್ವ ಅಧಿಕಾರಿಯನ್ನು ಹೊರದಬ್ಬಿತು.ರಾಜನೈತಿಕ ಸಂಬಂಧಗಳ ದೃಷ್ಟಿಕೋನದಿಂದ ಇಂತಹ ಕಾರ್ಯಾಚರಣೆ ಯಲ್ಲಿ ಅಯೋಗ್ಯವೇನೂ ಇಲ್ಲ; ಆದರೆ ಪ್ರಧಾನಮಂತ್ರಿಯ ಹುದ್ದೆಯಲ್ಲಿರುವ ಅಸಹಿಷ್ಣು ಹಾಗೂ ಅಪರಿಪಕ್ವ ವ್ಯಕ್ತಿಯು ಭಾರತದಂತಹ ಒಂದು ಸಾರ್ವಭೌಮ ದೇಶದ ಮೇಲೆ ಆರೋಪ ಹೊರಿಸಿದ್ದರಿಂದ ಈ ಘಟನೆಯ ತೀವ್ರತೆ ಸ್ಫೋಟಕವಾಗಿದೆ.

ಕೆನಡಾಗೆ ಇದನ್ನು ಯಾರು ಹೇಳುವರು ?

ಜಗಮೀತ ಸಿಂಹನು ಭಾರತಕ್ಕೆ ಮಾರಕವೆನಿಸುವ ಕಾರ್ಯಾಚರಣೆ ಮಾಡುವುದರ ಹಿಂದೆ ಟ್ರುಡೋ ಇವರ ಕೆಲವು ಸಮಸ್ಯೆಗಳಿವೆ, ಎಂದು ಹೇಳಲಾಗುತ್ತದೆ. ಇದರಲ್ಲಿ ಕೆನಡಾದ ಸಂಸತ್ತಿನಲ್ಲಿ ೧೫೮ ಸಂಸದರಿರುವ ಅವರ ‘ಲಿಬರಲ್ ಪಾರ್ಟಿ’ಗೆ ಖಲಿಸ್ತಾನವಾದಿ ಶಕ್ತಿಯನ್ನು ಬಹಿರಂಗವಾಗಿ ಸಮರ್ಥಿಸುವ ಜಗಮೀತ ಸಿಂಹನ ‘ನ್ಯೂ ಡೆಮೋಕ್ರಟಿಕ್ ಪಾರ್ಟಿ’ಯ ೨೫ ಸಂಸದರ ಬೆಂಬಲವಿದೆ. ಕೆನಡಾದಲ್ಲಿ ಸುಮಾರು ೮ ಲಕ್ಷ ಸಿಕ್ಖರಿದ್ದಾರೆ. ಜಗಮೀತ ಸಿಂಹ ಹಾಗೂ ಅಲ್ಲಿನ ಖಲಿಸ್ತಾನವಾದಿ ಸಂಘಟನೆಯು ಅಲ್ಲಿರುವ ಎಲ್ಲ ಸಿಕ್ಖರು ಖಲಿಸ್ತಾನಿ ಸಮರ್ಥಕರೆನ್ನುವ ಭ್ರಮೆಯನ್ನು ಮೂಡಿಸುತ್ತಾರೆ. ವಾಸ್ತವದಲ್ಲಿ ಹಾಗಿಲ್ಲ. ‘ಪಾಕಿಸ್ತಾನದ ಐ.ಎಸ್.ಐ. ಸಹ ಈ ಹೇಳಿಕೆಗೆ ಬೆಂಬಲಿಸುತ್ತದೆ’, ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ. ಟ್ರುಡೋ ಇವರು ಈ ಹೇಳಿಕೆಗೆ ಮರುಳಾಗಿದ್ದು ಖಲಿಸ್ತಾನವಾದಿಗಳನ್ನು ತೃಪ್ತಿಪಡಿಸಲು ಅವರ ಸಹಾನುಭೂತಿಯ ಪ್ರಯತ್ನವಾಗಿದೆ, ಎಂದು ಕೂಡ ಹೇಳಲಾಗುತ್ತದೆ. ಇನ್ನೊಂದೆಡೆ ಕೆನಡಾದ
ಪ್ರತಿಯೊಬ್ಬ ನಾಗರಿಕನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಅಧಿಕಾರವಿದೆ ಎಂದು ಪುನರುಚ್ಚರಿಸುವ ಕೆನಡಾವು ಖಲಿಸ್ತಾನಿಗಳ ಭಾರತದ್ವೇಷಿ ಹೇಳಿಕೆಗಳನ್ನು ವಿರೋಧಿಸುವುದಿಲ್ಲ, ಎಂಬುದನ್ನು ಒಪ್ಪಿಕೊಳ್ಳೋಣ; ಆದರೆ ಈ ಖಲಿಸ್ತಾನವಾದಿಗಳು ಕಳೆದ ೨ ವರ್ಷಗಳಲ್ಲಿ ೧೨ ಕ್ಕಿಂತಲೂ ಹೆಚ್ಚು ಹಿಂದೂ ದೇವಸ್ಥಾನಗಳ ಮೇಲೆ ಆಕ್ರಮಣ ಮಾಡಿದರು, ಅಲ್ಲಿ ಭಾರತವಿರೋಧಿ ಘೋಷಣೆಗಳನ್ನು ಬರೆದರು, ಕೆಲವು ತಿಂಗಳ ಹಿಂದೆ ಕೆನಡಾದ ಭಾರತೀಯ ರಾಯಭಾರಿ ಕಚೇರಿಗೆ ನುಗ್ಗಿ ಹಿಂಸಾಚಾರ ಮಾಡಿದರು. ಇಂತಹ ಹಿಂಸಾಚಾರದ ವಿಷಯದಲ್ಲಿ ಭಾರತೀಯ ಗುಪ್ತಚರ ಸಂಘಟನೆ ‘ರಾ’ದ ಮಾಜಿ ಮುಖ್ಯಸ್ಥ ವಿಕ್ರಮ ಸೂದ ಇವರು, ‘ಅಭಿವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಈ ಹಿಂಸಾಚಾರವನ್ನು ಸಹಿಸಿಕೊಳ್ಳುವುದು ಕೆನಡಾದ ಹಾಗೂ ಟ್ರುಡೋ ಇವರ ದ್ವಿಮುಖ ನಿಲುವು ಅಲ್ಲವೇ ?’, ಎಂದು ನೇರವಾಗಿ ಪ್ರಶ್ನಿಸಿದ್ದಾರೆ

ಕೆನಡಾದ ಖಲಿಸ್ತಾನಿಪ್ರೇಮ ಹೊಸತೇನಲ್ಲ, ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಕಾಲದಿಂದಲೂ ಅಲ್ಲಿನ ಖಲಿಸ್ತಾನಿಗಳನ್ನು ಬೆಂಬಲಿಸುವುದು ಕೆನಡಾದ ರಾಜಕೀಯ ಇತಿಹಾಸವಿದೆ. ಆದರೆ ಅಂದಿನ ಭಾರತದ ಸ್ಥಿತಿ ಬೇರೆಯಾಗಿತ್ತು. ಇಂದಿನ ಭಾರತ ಬೇರೆಯಾಗಿದೆ. ‘ಜಾಗತಿಕ ಮಹಾಶಕ್ತಿಯ ರೂಪದಲ್ಲಿ ಉದಯವಾಗುತ್ತಿರುವ ಭಾರತ ದೊಂದಿಗೆ ವೈರತ್ವವನ್ನು ಬೆಳೆಸಿ ಕೆನಡಾ ತನ್ನ ಕಾಲಿಗೇ ತಾನೇ ಕೊಡಲಿ ಏಟು ಹಾಕಿಕೊಳ್ಳುತ್ತಿದೆ’, ಎಂಬುದನ್ನು ಅದಕ್ಕೆ ಯಾರು ಹೇಳುವರು ? ಭಾರತವು ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಶಾಶ್ವತ ಸದಸ್ಯತ್ವವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಈ ಪರಿಷತ್ತಿನ ಶಾಶ್ವತ ಸದಸ್ಯರಲ್ಲಿ ಕೆನಡಾ ಇಲ್ಲ. ಅಷ್ಟು ಮಾತ್ರವಲ್ಲ, ಮುಂದಿನ ೧೦೦ ವರ್ಷಗಳ ವರೆಗೂ ಅದಕ್ಕೆ ಅದರಲ್ಲಿ ಸ್ಥಾನ ಸಿಗುವುದು ಅಸಾಧ್ಯವಾಗಿದೆ. ಆದ್ದರಿಂದ ಭವಿಷ್ಯದಲ್ಲಿಯೂ ಕೆನಡಾ ರಾಷ್ಟ್ರೀಯ ಭದ್ರತಾ ಪರಿಷತ್ತಿನಲ್ಲಿ ಎಂದಾದರೂ ‘ವಿಟೋ ಪಾವರ್’ ಉಪಯೋಗಿಸಿ ಭಾರತದ ಆಕಾಂಕ್ಷೆಗೆ ಚೀನಾದಂತೆ ಅಡ್ಡಗಾಲು ಇಡುವ ಪ್ರಶ್ನೆಯೆ ಉದ್ಭವಿಸುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಮಾಡಿದ ಆಮೂಲಾಗ್ರ ಬದಲಾವಣೆಗಳ ಮಹತ್ವವನ್ನು ರಷ್ಯಾ-ಯುಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಜಗತ್ತು ಅನುಭವಿಸಿದೆ. ಇತ್ತೀಚೆಗೆ ದೆಹಲಿಯಲ್ಲಿ ನೆರವೇರಿದ ಜಿ-೨೦’ ಪರಿಷತ್ತಿನಲ್ಲಿ ಭಾರತ ತನ್ನ ರಾಜತಾಂತ್ರಿಕ ನೀತಿಯ ಯಶಸ್ಸನ್ನು ಪುನಃ ಜಗತ್ತಿಗೆ ತೋರಿಸಿದೆ. ‘ಗ್ಲೋಬಲ್ ಸೌಥ್’ನಲ್ಲಿನ ೭೫ ಕ್ಕಿಂತಲೂ ಹೆಚ್ಚು ದೇಶಗಳ ಮುಖಂಡನೆಂದು ಭಾರತವು ಪ್ರವರ್ಧನಮಾನಕ್ಕೆ ಬಂದಿದೆ.

ತನ್ನ ಸ್ವಾರ್ಥಕ್ಕಾಗಿ ಬಡದೇಶಗಳನ್ನು ಆರ್ಥಿಕ ಸಂಕಟಕ್ಕೀಡು ಮಾಡುವ ಚೀನಾದಿಂದ ವಿಕಸಿತ ದೇಶಗಳೂ ಸೋತು ಹೋಗಿವೆ. ‘ಭಾರತವು ಎಂದಿಗೂ ಹಾಗೆ ವರ್ತಿಸಲಿಕ್ಕಿಲ್ಲ’, ಎನ್ನುವ ವಿಶ್ವಾಸ ಎಲ್ಲರಿಗೂ ಇದೆ. ಆದ್ದರಿಂದ ‘ಬಡವರ ಸಹಾಯಕ’ ಎಂದು ಭವಿಷ್ಯದಲ್ಲಿ ಭಾರತದ ಹೆಸರು ರಾರಾಜಿಸುವುದು. ಇದರಿಂದಲೇ ಅಮೇರಿಕಾ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಮುಂತಾದ ಮಹಾಶಕ್ತಿಗಳೂ ಭಾರತ-ಕೆನಡಾದ ಹಳಿತಪ್ಪಿದ ಸಂಬಂಧದ ಬಗ್ಗೆ ಜಾಗರೂಕರಾಗಿದ್ದಾರೆ. ಅಮೇರಿಕಾ ಭಾರತದ ಹೆಸರನ್ನು ಉಲ್ಲೇಖಿಸದೆ ಕೆನಡಾದ ಸ್ಥಿತಿಗೆ ಚಿಂತೆಯನ್ನು ವ್ಯಕ್ತಪಡಿಸಿದೆ. ಕೆನಡಾವನ್ನು ನೋಯಿಸ ಬಾರದೆಂದು ಅಮೇರಿಕಾಗೆ ಸಹಜವಾಗಿ ಅನಿಸಬಹುದು; ಆದರೆ ಭಾರತದ ಉಲ್ಲೇಖವನ್ನು ಮಾಡದಿರುವುದರಿಂದಲೂ ಬಹಳಷ್ಟು ಸಾಧ್ಯವಾಗಿದೆ. ಇಂಗ್ಲೆಂಡ್ ಕೂಡ, ಕೆನಡಾದ ಭಾರತ ವಿರುದ್ಧದ ಗಂಭೀರ ಆರೋಪದಿಂದ ಭಾರತ-ಇಂಗ್ಲೆಂಡ್‌ನ ನಡುವಿನ ವ್ಯಾಪಾರಿ ಸಂಬಂಧದಲ್ಲಿ ಯಾವುದೇ ಪರಿಣಾಮವಾಗಲಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಅರಿವಾಗುವುದೇನೆಂದರೆ, ಭಾರತ ಜಾಗತಿಕ ಶಕ್ತಿಯ ಕೇಂದ್ರವಾಗುತ್ತಿದೆ. ಆರ್ಥಿಕವ್ಯವಸ್ಥೆಯಲ್ಲಿ ಭಾರತ ಕೆನಡಾವನ್ನು ಈ ಹಿಂದೆಯೇ ಹಿಂದೆ ಸರಿಸಿದೆ, ಹಾಗೂ ಮುಂದಿನ ೪-೫ ವರ್ಷಗಳಲ್ಲಿ ಭಾರತೀಯ ಅರ್ಥಿಕ ಸ್ಥಿತಿ ಜಪಾನ್ ಮತ್ತು ಜರ್ಮನಿಯನ್ನೂ ಹಿಂದಿಕ್ಕಲಿದೆ. ವ್ಯಾಪಾರದ ವಿಷಯದಲ್ಲಿ ಭಾರತಕ್ಕೆ ಕೆನಡಾದ ಆವಶ್ಯಕತೆಯಿಲ್ಲ; ಆದರೆ ಕೆನಡಾಗೆ ಭಾರತದ ಆವಶ್ಯಕತೆಯಿದೆ.

ಸಶಕ್ತ ಭಾರತ !

ಪಂಜಾಬನ್ನು ವಿಭಜಿಸಿ ಭಾರತದ ಅಖಂಡತ್ವವನ್ನು ಮುರಿಯಲು ಪ್ರಯತ್ನಿಸುವ ಅಂತಾರಾಷ್ಟ್ರೀಯ ಶಕ್ತಿಗಳೊಂದಿಗೆ ಹೋರಾಡುವುದಷ್ಟೇ ಈಗ ಭಾರತದ ಮುಂದಿರುವ ಪರ್ಯಾಯ ವಾಗಿದೆ. ಸಶಕ್ತ ರಾಷ್ಟ್ರಹಿತದ ಸಮಸ್ಯೆ ಬಂದರೆ ಭಾರತ ಯಾರಿಗೂ ತಲೆಬಾಗುವುದಿಲ್ಲ, ಎಂಬುದು ಖಲಿಸ್ತಾನಿಗಳ ನೆಲೆಯಾಗುತ್ತಿರುವ ಅಮೇರಿಕಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ರಾಷ್ಟ್ರ ಪ್ರಮುಖರಿಗೆ ಈಗ ಚೆನ್ನಾಗಿ ತಿಳಿದಿರಬಹುದು. ಆದ್ದರಿಂದ ಭಾರತದ ಖಲಿಸ್ತಾನವಾದಿಗಳನ್ನು ಸಂಪೂರ್ಣ ನಾಶಗೊಳಿಸಬೇಕು ಎಂಬ ಭವಿಷ್ಯದಲ್ಲಿನ ಆಗ್ರಹದ ಮುಂದೆ ಅವರು ಮೃದುವಾಗುವರು ಹಾಗೂ ಅವರು ಕ್ರಮತೆಗೆದುಕೊಳ್ಳುವಂತೆ ಮಾಡಬಹುದು, ಎಂಬುದೂ ಅಷ್ಟೇ ಸತ್ಯ ! ಅದಿರಲಿ, ಜಸ್ಟಿನ್ ಟ್ರುಡೋ ಇವರ ಆರೋಪ ಹಾಗೂ ಕಾರ್ಯಾಚರಣೆಯ ಘಟನೆಯಿಂದ ಈಗ ಜಾಗತಿಕ ಸ್ತರದಲ್ಲಿ ಅವರು ಅಪಹಾಸ್ಯಕ್ಕೀಡಾಗಿದ್ದಾರೆ, ಎಂಬುದನ್ನು ಮಾತ್ರ ಮರೆಯುವ ಹಾಗಿಲ್ಲ !