ಈಗ ಜಾಗತಿಕ ಮಹಾಶಕ್ತಿಯ ರಾಷ್ಟ್ರಾಧ್ಯಕ್ಷರ ಹುದ್ದೆಯಲ್ಲಿ ಟ್ರಂಪ್ ವಿರಾಜಮಾನರಾಗುವರು. ಅಮೇರಿಕಾದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ಇವರು ಶೇ. ೫೧ ಕ್ಕಿಂತಲೂ ಹೆಚ್ಚು ಮತ ಗಳಿಸಿ ಡೆಮೋಕ್ರಟಿಕ್ ಪಕ್ಷದ ಕಮಲಾ ಹ್ಯಾರೀಸ್ (ಶೇ. ೪೭.೫ ಮತಗಳಿಂದ) ಇವರನ್ನು ಸೋಲಿಸಿದರು. ಎಲ್ಲ ‘ಬ್ಯಾಟಲ್‌ಗ್ರೌಂಡ್’ (ರಣರಂಗ) ರಾಜ್ಯಗಳಲ್ಲಿಯೂ ಟ್ರಂಪ್ ಇವರು ಜಯಭೇರಿ ಬಾರಿಸಿದರು. ಈ ರಾಜ್ಯಗಳು (ಸ್ವಿಂಗ್ ಸ್ಟೇಟ್ಸ್) ಆಗಿದ್ದು ಅಲ್ಲಿ ಎರಡೂ ಪಕ್ಷಗಳಲ್ಲಿ ತೀವ್ರ ಪೈಪೋಟಿ ನಡೆಯುತ್ತದೆ ಹಾಗೂ ವಿಜಯ ಪತಾಕೆ ಯಾರ ಮಡಿಲಿಗೂ ಬೀಳಬಹುದು. ಈ ಸಲ ಚುನಾವಣೆಯಲ್ಲಿ ಟ್ರಂಪ್ ಇವರು ಈ ಏಳೂ ರಾಜ್ಯಗಳಲ್ಲಿ ಗೆದ್ದು ಬಂದಿರುವುದರಿಂದ ಇದನ್ನು ಐತಿಹಾಸಿಕವೆಂದೆ ಹೇಳಬೇಕು. ಇದರ ಕಾರಣವೆಂದರೆ ದೇಶದ ಇತಿಹಾಸದಲ್ಲಿ ೧೮೦ ವರ್ಷಗಳ ನಂತರ ಮೊದಲ ಬಾರಿಗೆ ಹೀಗಾಗಿದೆ. ಓರ್ವ ಮಾಜಿ ರಾಷ್ಟ್ರಾಧ್ಯಕ್ಷರು ನಾಲ್ಕು ವರ್ಷಗಳ ನಂತರ ಪುನಃ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ಇನ್ನೊಂದೆಡೆ ಕಮಲಾ ಹ್ಯಾರೀಸ್ ಇವರು ಗೆಲ್ಲುತ್ತಿದ್ದರೆ, ಅಮೇರಿಕಾದ ಮೊದಲ ಮಹಿಳಾ ರಾಷ್ಟ್ರಾಧ್ಯಕ್ಷರಾಗುವ ಖ್ಯಾತಿ ಭಾಜನರಾಗುತ್ತಿದ್ದರು. ಟ್ರಂಪ್ ಇವರು ಅಮೇರಿಕಾದ ೪೭ ನೇ ರಾಷ್ಟ್ರಾಧ್ಯಕ್ಷರಾಗಿದ್ದಾರೆ.
ವಿಜಯದ ಅನ್ವಯಾರ್ಥ !
ಇಂದಿನ ಪರಿಸ್ಥಿತಿಯಲ್ಲಿ ಟ್ರಂಪ್ ಇವರ ಗೆಲುವಿನ ಅನೇಕ ಅನ್ವಯಾರ್ಥಗಳಿವೆ. ಅವರ ಗೆಲುವು ಖಚಿತವಾದ ನಂತರ ಅಮೇರಿಕಾದ ವೇಳೆಗನುಸಾರ ತಡ ರಾತ್ರಿ ಅವರು ತಮ್ಮ ಪಕ್ಷವನ್ನು ಉದ್ದೇಶಿಸಿ ಮಾತನಾಡಿದರು. ಇದರಲ್ಲಿ ಟ್ರಂಪ್ ಮುಂದಿನ ವಿಷಯವನ್ನು ಹೇಳಿದರು, ”ಇದು ಇತಿಹಾಸದಲ್ಲಿನ ಎಲ್ಲಕ್ಕಿಂತ ದೊಡ್ಡ ರಾಜಕೀಯ ಚಳುವಳಿಯಾಗಿತ್ತು. ಇದು ನಂಬಲಸಾಧ್ಯವಾದ ಹಾಗೂ ದೊಡ್ಡ ವಿಜಯವಾಗಿದೆ. ಈಗ ಅಮೇರಿಕಾದ ಸುವರ್ಣ ಯುಗ ಆರಂಭವಾಗುತ್ತಿದೆ. ನಾವು ಮತ್ತೊಮ್ಮೆ ದೊಡ್ಡ ಕನಸು ಕಾಣೋಣ. ಅಮೇರಿಕಾವನ್ನು ಪುನಃ ಶ್ರೇಷ್ಠ ಮಟ್ಟಕ್ಕೊಯ್ಯೋಣ.”
ಟ್ರಂಪ್ ಇವರ ಸೋಲಿಗಾಗಿ ‘ಡೀಪ್ ಸ್ಟೇಟ್’ನ ಕಾರ್ಯ ಆರಂಭವಾಗಿತ್ತು. ಅದರಿಂದಲೆ ೪ ವರ್ಷಗಳ ಹಿಂದೆ ಅವರಿಗೆ ಸೋಲಾಗಿತ್ತು. ‘ಡೀಪ್ ಸ್ಟೇಟ್’ ಎಂಬುದು ಉದಾರಮತ, ಸಾಮ್ಯವಾದ ಮತ್ತು ಬಂಡವಾಳಶಾಹಿಗಳ ಹಿತ ಭಯಸುತ್ತದೆ. ಅದರಿಂದ ಈ ಸಲ ಹ್ಯಾರೀಸ್ ಇವರ ಸೋಲೆಂದರೆ, ‘ಡೀಪ್ ಸ್ಟೇಟ್’ಗೆ ಸಂಪೂರ್ಣ ಸೋಲು ! ಕಳೆದ ೩-೪ ತಿಂಗಳ ಅವಧಿಯಲ್ಲಿ ಟ್ರಂಪ್ ಇವರ ಮೇಲೆ ಎರಡು ಸಲ ಆಗಿರುವ ಮಾರಣಾಂತಿಕ ಹಲ್ಲೆಯ ಹಿಂದೆ ಯಾರಿದ್ದರು ? ಎಂಬುದು ಪತ್ತೆ ಹಚ್ಚುವ ವಿಷಯವಾಗಿರಬಹುದು; ಆದರೆ ಇದನ್ನು ಕಡೆಗಣಿಸಿ ಟ್ರಂಪ್ ಇವರು ಮುನ್ನುಗ್ಗಿದರು, ಆದ್ದರಿಂದಲೂ ಈ ಗೆಲುವು ಅವಿಶ್ವಸನೀಯವಾಗಿದೆ.
ರಾಷ್ಟ್ರವಾದಿಗಳ ವಿಜಯ !
ಇದು ರಾಷ್ಟ್ರವಾದಿ ಶಕ್ತಿಗಳ ವಿಜಯವಾಗಿದೆ. ಇದನ್ನು ಟ್ರಂಪ್ ಇವರ ‘ಎಕ್ಸ್’ ಖಾತೆಯಿಂದ ನೋಡಬಹುದು. ‘ಎಕ್ಸ್’ ಇದು ವೈಚಾರಿಕ ವೇದಿಕೆಯ ಜಾಗತಿಕ ಸಾಮಾಜಿಕ ಮಾಧ್ಯಮವು ಮೂಲಭೂತವಾದಿ ಸಾಮ್ಯವಾದಿ ಜ್ಯಕ್ ಡಾರ್ಸೆ ಇವರಲ್ಲಿರುವಾಗ ಅವರು ಟ್ರಂಪ್ ಇವರ ಖಾತೆಯನ್ನು ನಿಷೇಧಿಸಿದ್ದರಯ. ಅಗರ್ಭ ಶ್ರೀಮಂತ ಹಾಗೂ ಪ್ರಖರ ರಾಷ್ಟ್ರವಾದಿ ಎಲಾನ್ ಮಸ್ಕ್ ಇವರು ‘ಎಕ್ಸ್’ಅನ್ನು ಖರೀದಿಸಿದ ನಂತರ ಗಣಿತ ಬದಲಾಯಿತು ಮತ್ತು ಟ್ರಂಪ್ ಇವರ ಖಾತೆ ಪುನಃ ಆರಂಭಿಸುವುದರೊಂದಿಗೆ ರಾಷ್ಟ್ರವಾದಿ ಶಕ್ತಿಗೆ ಒಂದು ಜಾಗತಿಕ ಹಕ್ಕಿನ ವೇದಿಕೆ ಸಿಕ್ಕಿತು. ಇಂದಿನ ‘ಇನ್ಫಾರ್ಮೇಶನ್ ಏಜ್’ನಲ್ಲಿ ‘ಟ್ರಂಪ್ ಇವರ ವಿಜಯದಿಂದ ಅಂತಾರಾಷ್ಟ್ರೀಯ ಸ್ತರದ ಸಾಮ್ಯವಾದಿ ಶಕ್ತಿಗಳಿಗೆ ಆಘಾತವಾಗಿದೆ, ಆದರೆ ರಾಷ್ಟ್ರನಿಷ್ಠ ಶಕ್ತಿಗಳಿಗೆ ಸುಗ್ಗಿಯ ಕಾಲ ಆರಂಭವಾಗಿದೆ’, ಎಂದು ಹೇಳಿದರೆ ತಪ್ಪೇನಿಲ್ಲ. ಮಸ್ಕ್ ಇವರು ಟ್ರಂಪ್ ಇವರ ಚುನಾವಣೆಯ ಪ್ರಚಾರಕ್ಕಾಗಿ ಬಹಿರಂಗವಾಗಿ ಬೆಂಬಲ ಮತ್ತು ಈಗ ಅವರ ವಿಜಯವಾದ ನಂತರ ಮಸ್ಕ್ ಇವರು ‘ನೀವೇ (‘ಎಕ್ಸ್’ ಬಳಕೆದಾರರು) ಈಗ ಪ್ರಸಾರಮಾಧ್ಯಮವಾಗಿದ್ದೀರಿ’, ಎನ್ನುವ ‘ಎಕ್ಸ್’ ಪೋಸ್ಟ್‌ನ ಅರ್ಥ ಅದನ್ನೆ ತೋರಿಸುತ್ತದೆ.
ಆರ್ಥಿಕ ಲೆಕ್ಕಾಚಾರ !
ಟ್ರಂಪ್ ಇವರ ಹಿಂದಿನ ಆಡಳಿತಾವಧಿಯಲ್ಲಿ ಅವರು ಅಮೇರಿಕಾದ ರಕ್ಷಣೆಗಾಗಿ ಉದ್ಯೋಗ-ವ್ಯವಸಾಯಗಳನ್ನು ಹೆಚ್ಚಿಸುವುದರೊಂದಿಗೆ ಮೆಕ್ಸಿಕೋ ಹಾಗೂ ಮುಸಲ್ಮಾನ ದೇಶಗಳಿಂದ ಬರುವ ಶರಣಾರ್ಥಿಗಳಿಗೆ ಅಂಕುಶ ಹಾಕಿದ್ದರು. ಈಗಲೂ ಅವರು ಅದನ್ನು ಮುಂದುವರಿಸುವರು. ಹಣದುಬ್ಬರದ ಕರಿನೆರಳಿನಲ್ಲಿರುವ ಅಮೇರಿಕಾದ ಅರ್ಥವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಅವರು ತತ್ಪರರಾಗಿರುವರು. ಈ ಮೂಲಕ ಅಮೇರಿಕಾದ ಆರ್ಥಿಕ ಹಾಗೂ ವ್ಯಾವಸಾಯಿಕ ನಿಲುವು ಇತರ ದೇಶಗಳಿಗೆ ಮಾರಕವಾಗಬಹುದು. ಭಾರತವೂ ಅದಕ್ಕೆ ಅಪವಾದವಾಗಿರುವುದಿಲ್ಲ. ಅಮೇರಿಕಾದ ಉತ್ಪಾದನೆಗಳಿಗೆ ಭಾರತದಿಂದ ಹೇರಲ್ಪಡುವ ಹೆಚ್ಚುವರಿ ಆಮದು ಶುಲ್ಕ ಕಡಿಮೆಗೊಳಿಸಲು ಚುನಾವಣೆಯ ಪ್ರಚಾರದ ಅವಧಿಯಲ್ಲಿ ಟ್ರಂಪ್ ಇವರು ಭಾರತದ ಮೇಲೆ ಚಾಟಿ ಬೀಸಿದ್ದರು. ಅವರು ಭಾರತವನ್ನು ‘ಟ್ಯಾರಿಫ್ ಕಿಂಗ್’ ಎಂದು ಸಂಬೋಧಿಸಿದ್ದರು. ‘ಹಾರ್ಲಿ ಡೆವಿಡ್ಸನ್’ ಈ ದ್ವಿಚಕ್ರ ವಾಹನ ಕಂಪನಿಗೆ ಭಾರತೀಯ ಮಾರುಕಟ್ಟೆ ಬೇಕಾಗಿರುವುದರಿಂದ ಟ್ರಂಪ್ ಇವರು ಅದಕ್ಕಾಗಿ ಆಗ್ರಹಿಸುವರು. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಅಮೇರಿಕಾದ ಅಭಿವೃದ್ಧಿಗಾಗಿ ಟ್ರಂಪ್ ಭಾರತಸಹಿತ ಜಗತ್ತಿನಾದ್ಯಂತ ಪ್ರಯತ್ನಿಸುವರು.
ಭೂರಾಜಕಾರಣ !
ಟ್ರಂಪ್ ಇವರ ಗೆಲುವಿನಿಂದ ಜಾಗತಿಕ ರಾಜಕಾರಣದ ಮೇಲೆ ವಿಶೇಷ ಪ್ರಭಾವ ಬೀರಲಿದೆ. ಮಧ್ಯ-ಪೂರ್ವದಲ್ಲಿ ಇಸ್ರೈಲ್‌ಗೆ ಸಮರ್ಥನೆ ನೀಡಲು ಅಮೇರಿಕಾ ತತ್ಪರವಾಗಿತ್ತು. ಬೈಡೇನ್ ಆಡಳಿತದ ಈ ನಿಲುವಿನ ವಿಷಯದಲ್ಲಿ ಟ್ರಂಪ್ ಇವರ ಅಭಿಪ್ರಾಯ ಬದಲಾಗಲಿಕ್ಕಿಲ್ಲ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಇಸ್ರೈಲ್‌ಗೆ ಸಮರ್ಥನೆ ಅನಾಯಾಸವಾಗಿ ಮುಂದುವರಿಯುವುದು, ಹಾಗೆ ನೋಡಿದರೆ ಇರಾನ್ ಇದರ ಪ್ರಖರ ವಿರೋಧಿ ಆಗಿರುವ ಟ್ರಂಪ್ ರಾಷ್ಟ್ರಾಧ್ಯಕ್ಷ ಆಗಿರುವುದರಿಂದ ಯುದ್ಧ ಇನ್ನೂ ಉಲ್ಭಣವಾಗುವ ಸಾಧ್ಯತೆಯಿದೆ. ಮುಖ್ಯ ಸಮಸ್ಯೆಯೆಂದರೆ ರಷ್ಯಾ-ಯುಕ್ರೇನ್ ಯುದ್ಧ.
ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತೀನ್ ಇವರ ಸಮೀಪದವರಾದ ಟ್ರಂಪ್ ಇವರ ಮೊದಲ ಪ್ರಾಧಾನ್ಯತೆ ಹಣಕಾಸು ದುಬ್ಬರದಿಂದ ಹೊರತರುವುದಾಗಿರುವುದರಿಂದ ಅವರು ಯುಕ್ರೇನ್‌ನಿಂದ ಕಾಲ್ಕೀಳುವ ಸಾಧ್ಯತೆಯಿದೆ. ಇದರಿಂದ ಯುಕ್ರೇನ್ ಕವುಚಿ ಬೀಳುವುದೋ ಎನ್ನುವ ವಿಚಾರದಿಂದ ಯುಕ್ರೇನ್‌ನ ಜನರು ಭಯಭೀತರಾಗಿದ್ದಾರೆ. ‘ನಾಟೋ’ದ ಈ ಯುದ್ಧಕ್ಕೆ ಸಂಬಂಧಿಸಿದ ಮುಂದಿನ ನಿಲುವು ಕಾಲದ ಗರ್ಭದಲ್ಲಿ ಅಡಗಿದೆ. ಟ್ರಂಪ್ ಇವರ ಸೂಚನೆಗನುಸಾರ ಅವರು ಯುದ್ಧವನ್ನು ಆರಂಭಿಸುವರು ಹಾಗೂ ಯುದ್ಧವನ್ನು ನಿಲ್ಲಿಸುವರು, ಎನ್ನುವ ಅವರ ಹೇಳಿಕೆಯಿಂದ ಎರಡುವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಯುಕ್ರೇನ್ ಯುದ್ಧದ ಮೇಲೆ ಪರಿಣಾಮವಾಗುವುದು ಎಂಬುದನ್ನು ನಿಶ್ಚಿತವಾಗಿ ಹೇಳಬಹುದಾಗಿದೆ. ಅಲ್ಲಿ ಅಮೇರಿಕಾದ ಎದುರಾಳಿ ಆಗಿರುವ ಚೀನಾಗೆ ಭಯಹುಟ್ಟಿಸಲು ಟ್ರಂಪ್ ಪ್ರಯತ್ನಿಸುವರು. ‘ಕ್ವಾಡ್’ಅನ್ನು (ಕ್ವಾಡ್’ ಎಂದರೆ ಭಾರತ, ಅಮೇರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾ ಈ ನಾಲ್ಕು ದೇಶಗಳ ಗುಂಪು) ಸಕ್ಷಮಗೊಳಿಸುವುದರೊಂದಿಗೆ ತೈವಾನ್‌ಗೆ ಬೆಂಬಲ ನೀಡುವುದು ಹಾಗೂ ಭಾರತದ ಘನತೆಯನ್ನು ಹೆಚ್ಚಿಸುವುದು, ಇದು ಟ್ರಂಪ್ ಇವರ ಪ್ರಾಧಾನ್ಯತೆಯಲ್ಲಿ ಮೇಲಿನ ಕ್ರಮಾಂಕದಲ್ಲಿರುವುದು. ಆದರೂ ನರೇಂದ್ರ ಮೋದಿ ಮತ್ತು ಟ್ರಂಪ್ ಇವರಲ್ಲಿನ ಮೈತ್ರಿ ಜಗಜ್ಜಾಹೀರಾಗಿದೆ. ಅದರಿಂದ ಖಲಿಸ್ತಾನಿಗಳೊಂದಿಗೆ ಹೋರಾಡಲು ಭಾರತಕ್ಕೆ ಲಾಭವಾಗಬಹುದು. ಈ ದೃಷ್ಟಿಯಿಂದ ಮೋದಿ ಇವರು ಟ್ರಂಪ್ ಇವರ ಮೇಲೆ ಒತ್ತಡ ಹೇರಿದರೆ, ಅದರಿಂದ ಭಾರತದ ಹಿತ ಸಾಧಿಸಬಹುದು, ಎಂದು ಆಶಿಸೋಣ.
ಭಾರತದಲ್ಲಿನ ದೇಶವಿರೋಧಿ ಶಕ್ತಿಗಳಿಗೆ ಮೋದಿಯವರ ಮಿತ್ರ ಟ್ರಂಪ್ ಇವರ ವಿಜಯ ಕಂಟಕವಾಗಲಿಕ್ಕಿದೆ ! ವ್ಯಾಪಾರದ ದೃಷ್ಟಿಯಿಂದ ಟ್ರಂಪ್ ಇವರ ವಿಜಯ ಭಾರತಕ್ಕೆ ಸಮ್ಮಿಶ್ರ ಆಗಿದ್ದರೂ, ಭಾರತದಲ್ಲಿನ ದೇಶವಿರೋಧಿ ಶಕ್ತಿಗಳಿಗೆ ಮೋದಿಯವರ ಮಿತ್ರರಾಗಿರುವ ಟ್ರಂಪ್ ಇವರ ಗೆಲುವು ಮಾರಕವಾಗಲಿಕ್ಕಿದೆ ! ರಾಹುಲ ಗಾಂಧಿ ಹೇಗೆ ಅಮೇರಿಕಾದಲ್ಲಿ ಸಹಜವಾಗಿ ಭಾರತವನ್ನು ಅವಮಾನ ಮಾಡುತ್ತಿದ್ದಾರೆ, ಈಗ ಅದು ಸುಲಭವಾಲಿಕ್ಕಿಲ್ಲ. ಕೊನೆಗೆ ತನ್ನ ದೇಶದ ಹಿತಕ್ಕಾಗಿ ಟ್ರಂಪ್ ಇವರು ಕಮಲಾ ಹ್ಯಾರೀಸ್ ಇವರ ತುಲನೆಯಲ್ಲಿ ಹೆಚ್ಚು ಬಲಪಂಥೀಯರಾಗಿದ್ದಾರೆ ಹಾಗೂ ಅಮೇರಿಕಾವನ್ನು ಸುವರ್ಣಯುಗದತ್ತ ಕೊಂಡೊಯ್ಯಲು ತತ್ಪರರಾಗಿದ್ದಾರೆ ! ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಡೋನಾಲ್ಡ್ ಟ್ರಂಪ್ ಇವರಲ್ಲಿನ ಮೈತ್ರಿಯಿಂದ ಖಲಿಸ್ತಾನವಾದಕ್ಕೆ ಕಡಿವಾಣ ಬೀಳಬಹುದೆಂದು ಆಶಿಸೋಣ !