ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
‘ರಾಷ್ಟ್ರ-ಧರ್ಮಾಭಿಮಾನಿಗಳೇ, ಕೇವಲ ತಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ವ್ಯಾಪಕವಾಗುವುದಕ್ಕಾಗಿ ವೈದ್ಯಕೀಯ, ನ್ಯಾಯಾಂಗ, ಪೊಲೀಸ್, ಸರಕಾರೀ ಕಛೇರಿ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲಿ ನಡೆಯುವ ಅನ್ಯಾಯಗಳನ್ನು ಪತ್ತೆ ಹಚ್ಚಿ ಅದರ ವಿರುದ್ಧ ಕಾನೂನುಮಾರ್ಗದಲ್ಲಿ ಧ್ವನಿ ಎತ್ತಿ.’
ಸಾಧನೆ ಮಾಡುವುದು ತುಂಬ ಆವಶ್ಯಕ !
‘ಸಂಕಷ್ಟದ ಸಮಯದಲ್ಲಿ ಸಹಾಯ ವಾಗಲೆಂದು ನಾವು ಬ್ಯಾಂಕ್‌ನಲ್ಲಿ ಹಣ ಇಡುತ್ತೇವೆ. ಅದೇ ರೀತಿ ಸಂಕಷ್ಟದ ಸಮಯ ದಲ್ಲಿ ಸಹಾಯವಾಗಲೆಂದು ನಮ್ಮ ಬಳಿ ಸಾಧನೆಯೆಂಬ ಧನವಿರುವುದು ಆವಶ್ಯಕ.’
ಕಲಿಯುಗದಲ್ಲಿ ತಂದೆ-ತಾಯಿಯರು ಹೀಗೂ ಇರುತ್ತಾರೆ !
‘ತಾವು ಭ್ರಷ್ಟಾಚಾರ ಮಾಡಿ ತಮ್ಮ ಮಕ್ಕಳ ಮುಂದೆ ಭ್ರಷ್ಟಾಚಾರ ಮಾಡುವ ಆದರ್ಶವನ್ನಿಡುವ ಕಲಿಯುಗದ ತಂದೆ-ತಾಯಿಯರು.’
ಸನಾತನ ಸಂಸ್ಥೆಯ ಆಶ್ರಮದ ಅದ್ವಿತೀಯತೆ !
‘ಸಮಾಜದಲ್ಲಿ, ಕಾರ್ಯಾಲಯಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಹಂಕಾರ, ಸುಳ್ಳು ಹೇಳುವುದು, ಭ್ರಷ್ಟಾಚಾರ ಇತ್ಯಾದಿ ಅಂಶಗಳ ಅನುಕರಣೆ ಮಾಡಲಾಗುತ್ತದೆ; ಆದರೆ ಸನಾತನ ಆಶ್ರಮದಲ್ಲಿ ಒಳ್ಳೆಯ ಗುಣಗಳ ಅನುಕರಣೆ ಮಾಡಲಾಗುತ್ತದೆ.
ಹಿಂದೂಗಳು ಹಿಂದೂ ರಾಷ್ಟ್ರಕ್ಕಾಗಿಯೇ ಪ್ರಯತ್ನಶೀಲರಾಗಿರುವುದು ಆವಶ್ಯಕ !
ಹಿಂದೂಗಳೇ, ಕೇವಲ ರಾಮಮಂದಿರಕ್ಕಾಗಿ ಅಲ್ಲ, ಹಿಂದೂ ರಾಷ್ಟ್ರಕ್ಕಾಗಿ ಪ್ರಯತ್ನಶೀಲರಾಗಿರಿ; ಇಲ್ಲದಿದ್ದರೆ ಭಯೋತ್ಪಾದಕರು ರಾಮ ಮಂದಿರವನ್ನು ನಾಶ ಮಾಡಿಬಿಡುವರು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ