ಮಾರ್ಕ್ ಟುಲೀ ಇವರು ‘ಬಿಬಿಸಿ’ಯ ಪತ್ರಕರ್ತ ಸೇವೆಯಿಂದ ನಿವೃತ್ತರಾದರು. ಆಗ ‘ಬಿಬಿಸಿ’ಯಲ್ಲಿ ಅವರೊಂದಿಗೆ ಸಂದರ್ಶನ ನಡೆಯಿತು. ಸಂದರ್ಶಕರು ಅವರನ್ನು ಕೇಳಿದರು, ”ನೀವು ಭಾರತದಲ್ಲಿ ಇಷ್ಟು ವರ್ಷಗಳಿಂದ ಕೆಲಸ ಮಾಡಿದ್ದೀರಿ ಮತ್ತು ಸ್ವಾತಂತ್ರ್ಯಾ ನಂತರ ನಿಮಗೆ ಏನಾದರೂ ಬದಲಾವಣೆ ಕಂಡಿದೆಯಾ ?”, ಆಗ ಮಾರ್ಕ್ ಟುಲೀ ಅವರು ಮುಂದಿನಂತೆ ಉತ್ತರಿಸಿದರು, ‘ಭಾರತದಲ್ಲಿ ಬ್ರಿಟಿಷರ ಆಡಳಿತ ಹೋಗಿದ್ದರೂ ಅದು ಇಲ್ಲಿ ಜೀವಂತವಾಗಿದೆ; ಏಕೆಂದರೆ ಇಲ್ಲಿ ಯಾವುದೇ ಪ್ರಾಂತ್ಯದ ಯಾವುದೇ ವ್ಯಕ್ತಿ ತನ್ನ ಮಾತೃಭಾಷೆ ಇದ್ದರೂ ಅದನ್ನು ಶುದ್ಧವಾಗಿ ಮಾತನಾಡುವುದಿಲ್ಲ, ಏಕೆಂದರೆ ರಾಷ್ಟ್ರೀಯತೆಯ ಆಚರಣೆಗೆ ಯಾವುದೇ ಒತ್ತಾಯವಿಲ್ಲ, ಜರ್ಮನ್ ಮತ್ತು ರಷ್ಯಾ ನಾಯಕರು ವಿದೇಶಕ್ಕೆ ಹೋಗುತ್ತಾರೆ. ಆಗಲೂ ಅವರು ತಮ್ಮ ಭಾಷೆಯಲ್ಲಿ ಸಂಭಾಷಣೆ ಮಾಡುತ್ತಾರೆ. ರಾಷ್ಟ್ರೀಯತೆಯ ಸಂಸ್ಕಾರ ಇಲ್ಲದಿರುವುದರಿಂದ ಈ ದೇಶದ ಗಣಿತವೇ ತಪ್ಪಾಗಿದೆ ಎಂದು ಅನ್ನಿಸುತ್ತಿದೆ.’’
– ಶ್ರೀ ರಾಜೇಶ್ವರ ಪಾರವೇಕರ, ಕಾರ್ಯಾಧ್ಯಕ್ಷ, ಸ್ವಾತಂತ್ರ್ಯವೀರ ಸಾವರಕರ ಸಾಹಿತ್ಯ ಅಧ್ಯಯನ ಮಂಡಳಿ. ಆಧಾರ : ‘ಸ್ವಾತಂತ್ರ್ಯವೀರ’ ಜೂನ್-೨೦೦೫