ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ !
ಇಂದಿನ ಒತ್ತಡಮಯ ಜೀವನದಲ್ಲಿ ಪ್ರತಿಯೊಬ್ಬರು ಮತ್ತು ಯಾವುದೇ ಸಮಯದಲ್ಲಿ ಸೋಂಕುರೋಗಗಳನ್ನು ಅಥವಾ ಇತರ ಯಾವುದಾದರೂ ರೋಗಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ತಕ್ಷಣ ತಜ್ಞವೈದ್ಯಕೀಯ ಸಲಹೆ ಸಿಗ ಬಹುದೆಂದು ಹೇಳಲು ಆಗುವುದಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ (ಎಸಿಡಿಟಿ) ಇಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗುತ್ತದೆ. ಹೋಮಿಯೋಪಥಿ ಚಿಕಿತ್ಸಾಪದ್ಧತಿ ಸಾಮಾನ್ಯ ಜನರಿಗೆ ಬಹಳ ಉಪಯುಕ್ತವಾಗಿದೆ. ಇದನ್ನು ಮನೆಯಲ್ಲಿ ಹೇಗೆ ಉಪಯೋಗಿಸಬಹುದು ? ಹೋಮಿಯೋಪಥಿ ಔಷಧಗಳನ್ನು ಹೇಗೆ ತಯಾರಿಸಬೇಕು ?
ಅವುಗಳನ್ನು ಹೇಗೆ ಸಂಗ್ರಹಿಸಿಡಬೇಕು ? ಇಂತಹ ಅನೇಕ ವಿಷಯಗಳ ಮಾಹಿತಿಯನ್ನು ಈ ಹೊಸ ಲೇಖನಮಾಲೆಯ ಮೂಲಕ ನೀಡುತ್ತಿದ್ದೇವೆ. ‘ಸನಾತನ ಪ್ರಭಾತ’ದ ವಾಚಕರೊಂದಿಗೆ ಸಾಧಕರು, ಕಾರ್ಯಕರ್ತರು, ಹಿತಚಿಂತಕರು ಮುಂತಾದ ವರೆಲ್ಲರಿಗೂ ಇದರಿಂದ ಲಾಭವಾಗಬಹುದು. ೨೪/೫೧ ರ ಸಂಚಿಕೆಯಲ್ಲಿ ಪ್ರಕಾಶನವಾದ ಲೇಖನದಲ್ಲಿ ನಾವು ‘ಹೋಮಿಯೋಪಥಿ ಚಿಕಿತ್ಸಾಪದ್ಧತಿಯ ಮೂಲಭೂತ ತತ್ತ್ವ ಗಳು’, ಎಂಬ ವಿಷಯವನ್ನು ಓದಿದೆವು. ಇಂದು ಈ ಲೇಖನದ ಮುಂದಿನ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ.
ಭಾಗ ೩
ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. ಸೌ. ಸಂಗೀತಾ ಭರಮಗುಡೆ
೪. ಹೋಮಿಯೋಪಥಿ ಉಪಚಾರದ ಲಾಭಗಳು
ಅ. ಹೋಮಿಯೋಪಥಿ ಔಷಧಗಳು ಎಲ್ಲ ವಯಸ್ಸಿನ ರೋಗಿಗಳಿಗೆ ಸುರಕ್ಷಿತ (ಸ್ಚಿಜಿಎ) ಆಗಿವೆ. ಈಗಷ್ಟೇ ಹುಟ್ಟಿದ ನವಜಾತ ಶಿಶು ಮತ್ತು ತುಂಬಾ ವಯಸ್ಸಾದ ವೃದ್ಧರಿಗೂ ಇದು ಅತಿ ಸುರಕ್ಷಿತವಾಗಿದೆ.
ಆ. ಹೋಮಿಯೋಪಥಿ ಉಪಚಾರಪದ್ಧತಿ ಸಾಮಾನ್ಯ ಜನರಿಗೆ ಆರ್ಥಿಕ ದೃಷ್ಟಿಯಿಂದಲೂ ಕೈಗೆಟುಕುವಂತಹದ್ದಾಗಿದೆ.
ಇ. ಈ ಔಷಧಗಳನ್ನು ಹೆಚ್ಚಿನಂಶ ಸಕ್ಕರೆಯ ಚಿಕ್ಕ ಗುಳಿಗೆಗಳಲ್ಲಿ ಹಾಕಿರುವುದರಿಂದ ಎಲ್ಲರೂ ಈ ಔಷಧಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ.
ಈ. ಈ ಔಷಧಗಳನ್ನು ಸೇವಿಸುವಲ್ಲಿ ರೋಗಿಗೆ ಯಾವುದೇ ರೀತಿಯ ಕ್ಲಿಷ್ಟತೆ ಇರುವುದಿಲ್ಲ.
ಉ. ಗರ್ಭವತಿಯರಿಗೆ ಅನೇಕ ಔಷಧಗಳು ವರ್ಜ್ಯವಾಗಿರುತ್ತವೆ, ಆದರೆ ಹೋಮಿಯೋಪತಿ ಔಷಧಗಳನ್ನು ಗರ್ಭವತಿಯರೂ ಸೇವಿಸಬಹುದು.
ಊ. ಮಲಬದ್ಧತೆ, ವೇದನೆ, ನಿದ್ರಾಹೀನತೆ ಇವುಗಳಂತಹ ಇತರ ರೋಗಗಳಿಗೆ ಪಥಿಗಳ (ಪದ್ಧತಿಗಳ) ಔಷಧಗಳಿಂದ ರೋಗಿಗಳಿಗೆ ಹವ್ಯಾಸವೇ (ಚಟ) ಆಗುತ್ತದೆ; ಆದರೆ ಹೋಮಿಯೋಪತಿ ಔಷಧಗಳ ಅಭ್ಯಾಸ ಆಗುವುದಿಲ್ಲ. (ಊಚಿಬಿಣ ಆಗುವುದಿಲ್ಲ.)
ಎ. ಸಂಧಿವಾತ, ಉಬ್ಬಸ (ಅಸ್ತಮಾ), ಮಧುಮೇಹ (ಆಇಚಿಬೆಣೈಸ್), ಅಪಸ್ಮಾರ (ಎಠೀಟಎಠಿಸ್ಥಿ), ಮೂತ್ರಪಿಂಡಗಳ ರೋಗ (ಏಇಜಟಿಎಥಿ ಫ್ಡಿಒಬ್ಟಎಮ್ಸ್), ಇಂತಹ ಹಳೆಯ ದೀರ್ಘ ಕಾಲೀನ ರೋಗಗಳಿಗೆ ದೀರ್ಘಕಾಲ ಔಷಧಗಳನ್ನು ಸೇವಿಸ ಬೇಕಾಗುವುದರಿಂದ ಅವುಗಳ ಅಡ್ಡಪರಿಣಾಮ(ಶಿಜಎ ಇಜಿಜಿಎಛಿಣ) ಆಗುತ್ತವೆ; ಆದರೆ ಹೋಮಿಯೋಪತಿ ಔಷಧಗಳಿಂದ ಅಡ್ಡಪರಿಣಾಮವಾಗುವುದಿಲ್ಲ.
ಐ. ಮೈಮೇಲೆ ಪಿತ್ತಗಳು ಏಳುವುದು (ಊಡಿಣೈಛಿಚಿಡೀಚಿ), ಸಂಧಿವಾತ, ಸ್ವಯಂ ರೋಗಪ್ರತಿಕಾರಕ ರೋಗಗಳು (ಚಿಉಣಒಇಮ್ಮುಟಿಎ ಜೈಸೆಚಿಸೆ) ಇಂತಹ ಸಂಪೂರ್ಣ ಗುಣ (ಛಿಉಡಿಎ) ಆಗದಿರುವ ರೋಗಗಳನ್ನು ನಿಯಂತ್ರಣದಲ್ಲಿಡಲು ಜೀವಮಾನವಿಡೀ ಔಷಧ ಗಳನ್ನು ಸೇವಿಸಬೇಕಾಗುತ್ತದೆ. ಇಂತಹ ರೋಗಗಳನ್ನು ಶಾಶ್ವತ ವಾಗಿ ಗುಣಪಡಿಸುವ ಹೋಮಿಯೋಪಥಿ ಔಷಧಗಳಿವೆ.
ಓ. ಸ್ತ್ರೀಯರ ಜೀವನದಲ್ಲಿ ವಯಸ್ಸಿಗೆ ಬರುವುದು (ರಜಸ್ವಲೆಯಾಗುವುದು) (ಠಿಉಬೆಡಿಣಥಿ), ಪ್ರೌಢಾವಸ್ಥೆ, (ಚಿಜಒಟಎಸ್ಛಿಎಟಿಛಿಎ) ರಜೋನಿವೃತ್ತಿ (ಮೆಟಿಒಠಿಚಿಉಸೆ). ಈ ಕಾಲಾವಧಿಯಲ್ಲಿ ಶರೀರದ ಅಂತಃಸ್ರಾವಗಳ (ಹೊಡಿಮೊಟಿಎಸ್ ಗಳ) ಪ್ರಮಾಣದಲ್ಲಿ ಬಹಳ ಏರಿಳಿತವಾಗುತ್ತಿರುತ್ತದೆ. ಅದರಿಂದಾಗುವ ಶಾರೀರಿಕ ವಿಶೇಷವಾಗಿ ಮನಸ್ಸಿನ ಸ್ತರದ ತೊಂದರೆಗಳಿಗೆ ಹೋಮಿಯೋಪಥಿ ಔಷಧಗಳು ಬಹಳ ಉಪಯುಕ್ತವಾಗಿವೆ. ಮುಖ್ಯವಾಗಿ ಹೋಮಿಯೋಪಥಿ ಔಷಧಗಳನ್ನು ಸೇವಿಸುವುದÀ ರಿಂದ ಅಂತಃಸ್ರಾವ (ಊಒಡಿಮೊಟಿಚಿಟ ಣಡಿಎಚಿಣಮೆಟಿಣ) ಉಪಚಾರದ ಅವಶ್ಯಕತೆ ಬೀಳುವುದಿಲ್ಲ. ಇದರಿಂದ ಅಂತಃಸ್ರಾವಗಳ ಇತರ ಅಡ್ಡಪರಿಣಾಮಗಳನ್ನು ಸಹಿಸಿಕೊಳ್ಳಬೇಕಾಗುವುದಿಲ್ಲ.
ಔ. ಕೆಲವು ರೋಗಗಳಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ, ಉದಾ. ಟಾನ್ಸಿಲ್ಸ್ (ಮೂಗಿನ ಹಿಂಬದಿಗೆ ಗಂಟಲಿನಲ್ಲಿರುವ ಗ್ರಂಥಿಗಳು), ನರೋಲಿ (ತಿಚಿಡಿಣಸ್), ಕಾಲಿನಲ್ಲಿನ ಆಣಿಗಳು (ಛಿಒಡಿಟಿಸ್), ಇವು ಹೋಮಿಯೋಪಥಿ ಔಷಧಗಳಿಂದ ಶಸ್ತ್ರಚಿಕಿತ್ಸೆ ಇಲ್ಲದೆ ಗುಣವಾಗುತ್ತವೆ.
ಅಂ. ಯಾವ ರೋಗಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯ
ವಾಗಿದೆಯೋ, ಅಲ್ಲಿಯೂ ಶಸ್ತ್ರಕ್ರಿಯೆಯ ನಂತರ ಹೋಮಿಯೋಪಥಿ ಔಷಧಗಳನ್ನು ಸೇವಿಸಿದರೆ ರೋಗಿಗಳು ಶೀಘ್ರ ಗುಣಮುಖರಾಗುತ್ತಾರೆ (ಖಎಛಿಒವೆಡಿಥಿ ಬೇಗ ಆಗುತ್ತದೆ).
ಕ. ಈ ಪದ್ಧತಿಯಲ್ಲಿ ಉಪಚಾರದ ದೃಷ್ಟಿಯಿಂದ ರೋಗಿಯನ್ನು ಗುಣಪಡಿಸುವುದಕ್ಕಿಂತ ರೋಗದ ಲಕ್ಷಣಗಳಿಗೆ ಮಹತ್ವವನ್ನು ನೀಡಲಾಗುತ್ತದೆ. ಲಕ್ಷಣಗಳಿಗನುಸಾರ ರೋಗಿಗೆ ಔಷಧಗಳನ್ನು ನೀಡಲಾಗುತ್ತದೆ. ಆದ್ದರಿಂದ ರೋಗ ಗುಣಪಡಿಸಲು ತಜ್ಞ ಆಧುನಿಕ ವೈದ್ಯರು ಅಥವಾ ರಕ್ತ ಮತ್ತು ಇನ್ನಿತರ ಪ್ರಗತ ತಪಾಸಣೆಗಳು ಉಪಲಬ್ದವಿಲ್ಲದಿದ್ದರೂ ರೋಗಕ್ಕೆ ಹೋಮಿಯೋಪಥಿ ಔಷಧಗಳಿಂದ ಯಶಸ್ವಿಯಾಗಿ ಉಪಚಾರ ಮಾಡಬಹುದು.
೫. ಹೋಮಿಯೋಪಥಿ ‘ಸ್ವಉಪಚಾರ’ ಪದ್ಧತಿಯ ಬಗ್ಗೆ ಮಾರ್ಗದರ್ಶಕ ಅಂಶಗಳು
ನಾವು ಈ ಹಿಂದೆ ೨೪/೫೦ ಮತ್ತು ೨೪/೫೧ ರ ಸಂಚಿಕೆಗಳಲ್ಲಿ ಪ್ರಕಾಶಿಸಿದ ಲೇಖನಗಳಲ್ಲಿ ‘ಹೋಮಿಯೋಪಥಿ ಅಂದರೇನು ?’, ಹೋಮಿಯೋಪಥಿ ಉಪಚಾರಪದ್ಧತಿಯ ಮೂಲಭೂತ ತತ್ತ್ವಗಳು’ ಇತ್ಯಾದಿ ಅಂಶಗಳನ್ನು ತಿಳಿದು ಕೊಂಡೆವು. ಅವುಗಳನ್ನು ತಾವು ಇಲ್ಲಿಯವರೆಗೆ ಓದಿರದಿದ್ದರೆ, ಮೊದಲು ಅವುಗಳನ್ನು ಓದಿ ತಿಳಿದುಕೊಳ್ಳಬೇಕು. ಅವುಗಳನ್ನು ತಿಳಿದುಕೊಂಡರೆ ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಉಪಚಾರ ಮಾಡುವುದರ ಹಿಂದಿನ ಮೂಲತತ್ತ್ವಗಳನ್ನು ತಿಳಿದುಕೊಳ್ಳಲು ಸುಲಭವಾಗುವುದು.
೫ ಅ. ಯಾವ ರೋಗಗಳಿಗೆ ನಾವು ಹೋಮಿಯೋಪಥಿ ಸ್ವ ಉಪಚಾರ ಮಾಡಬಹುದು ? : ಹೋಮಿಯೋಪಥಿಯ ಆಳವಾದ ಅಧ್ಯಯನ (ಅಭ್ಯಾಸ) ಇಲ್ಲದಿದ್ದರೂ ಕಡಿಮೆ ಕಾಲಾವಧಿಯ ರೋಗಗಳಿಗೆ (ಚಿಛಿಉಣಎ ಇಟಟಟಿಎಸ್ಸೆಸ್ಗಳಿಗೆ) ಉದಾ. ನೆಗಡಿ, ಕೆಮ್ಮು, ಕೆಂಗಣ್ಣುರೋಗ (ಛಿಒಟಿರಿಉಟಿಛಿಣೈವಿಣೈಸ್), ಜ್ವರ, ಭೇದಿ, ಪ್ರಯಾಣದಲ್ಲಿ ವಾಂತಿ ಆಗುವುದು (ಖಿಡಿಚಿವೆಟಟೈಟಿಗ್ ಶಿಛಿಞಟಿಎಸ್ಸ್), ಮೊದಲಾದ ಅನಾರೋಗ್ಯಗಳಿಗೆ ನಾವು ಸ್ವಉಪಚಾರವನ್ನು ಮಾಡಿಕೊಳ್ಳಬಹುದು. ಅರ್ಥಾತ್ ವೈದ್ಯಕೀಯ ಸಹಾಯ ಸಿಗುತ್ತಿದ್ದರೆ ಆಗ ನಾವು ಅವಶ್ಯ ಅದರ ಲಾಭ ಪಡೆಯಬೇಕು. ಗಂಭೀರ ಗಾಯಗಳಾದಾಗ (ಸೆಡೀಔಸ್ ಇಟಿರಿಉಡೀಎಸ್) ಹಾಗೂ ಗಂಭೀರ ರೋಗಗಳಿಗೆ ತಜ್ಞರ ಸಲಹೆಯ ಹೊರತು ಉಪಚಾರ ಮಾಡಬಾರದು; ಆದರೆ ವೈದ್ಯಕೀಯ ಸಹಾಯ ಸಿಗದಿರುವಾಗ ಅಥವಾ ಅಲ್ಲಿಗೆ ತಲುಪಲು ತುಂಬಾ ಸಮಯ ತಗಲಿದರೆ, ಆಗ ತಜ್ಞರ ಸಲಹೆ ಸಿಗುವವರೆಗೆ ಹೋಮಿಯೋಪಥಿಯ ಒಂದು ಡೋಸ್ ಔಷಧ ಸೇವಿಸಬಹುದು.
೫ ಆ. ಈಗ ನಾವು ಅನಾರೋಗ್ಯಕ್ಕೆ ಈ ಲೇಖನಮಾಲೆಯ ಸಹಾಯದಿಂದ ಪ್ರತ್ಯಕ್ಷ ಉಪಚಾರವನ್ನು ಹೇಗೆ ಮಾಡಬೇಕು ಅಥವಾ ತಮ್ಮ ಮೇಲೆ ಹೇಗೆ ಮಾಡಿಕೊಳ್ಳಬೇಕು ? ಎಂಬುದನ್ನು ಕ್ರಮವಾಗಿ ತಿಳಿದುಕೊಳ್ಳೋಣ.
೫ ಆ ೧. ಅನಾರೋಗ್ಯವಾದಾಗ ಉತ್ಪನ್ನವಾಗಿರುವ ಲಕ್ಷಣಗಳು, ಹಾಗೆಯೇ ಅವುಗಳಿಗೆ ಸಂಬಂಧಿಸಿದ ಅಂಶಗಳನ್ನು ಸೂಕ್ಷ್ಮವಾಗಿ (Detail) ನಿರೀಕ್ಷಿಸಿ ಬರೆದುಕೊಳ್ಳಬೇಕು : ನಮಗೆ ಏನಾದರೂ ತೊಂದರೆಗಳು ಪ್ರಾರಂಭವಾದಾಗ (ಉದಾ. ಜ್ವರ ಬಂದಾಗ), ‘ಗಾಯಗಳಾದಾಗ, ಹೊರಗೆ ತಂಪು ಗಾಳಿಗೆ ಹೋದಾಗ, ಮಳೆಯಲ್ಲಿ ಒದ್ದೆಯಾದಾಗ ಇತ್ಯಾದಿ’ಗಳಿಂದ ಅನಾರೋಗ್ಯವಾಗುತ್ತದೆ. (ಉದಾ. ಜ್ವರ ಬರುವುದು) ಇದಕ್ಕೆ ನಮ್ಮ ಆರೋಗ್ಯದಲ್ಲಿ ಹಂತಹಂತವಾಗಿ ಆಗಿರುವ ಬದಲಾವಣೆಯೇ ಕಾರಣವಾಗಿರುತ್ತದೆ. ಹಾಗೂ ನಮಗೆ ಜ್ವರದಿಂದಾಗಿ ‘ಕಿರಿ ಕಿರಿ ಹೆಚ್ಚಾಗಿದೆಯೆ ? ಹೆಚ್ಚು ನೀರು ಕುಡಿಯಬೇಕೆಂದು ಅನಿಸುತ್ತದೆಯೇ, ವಿಶಿಷ್ಟವಾಗಿ ಏನಾದರೂ ತಿನ್ನಬೇಕು-ಕುಡಿಯಬೇಕೆಂದು ಎಂದು ಅನಿಸುತ್ತದೆಯೆ ?’, ಇತ್ಯಾದಿ ಬೇರೆ ಬೇರೆ ಎಲ್ಲ ಲಕ್ಷಣಗಳು ಹಾಗೂ ನಮಗೆ ಆಗುವ ತೊಂದರೆಗಳು ಯಾವುದರಿಂದ ಕಡಿಮೆಯಾಗುತ್ತವೆ ? ಯಾವುದರಿಂದ ಹೆಚ್ಚಾಗುತ್ತವೆ ? ಇತ್ಯಾದಿ ನಮ್ಮ ರೋಗಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ‘ಎಲ್ಲಕ್ಕಿಂತ ಮಹತ್ವದ ಹಾಗೂ ಎಲ್ಲಕ್ಕಿಂತ ತೀವ್ರ, ಎಲ್ಲಕ್ಕಿಂತ ಮೊದಲು’ ಈ ಕ್ರಮದಲ್ಲಿ ಬರೆದುಕೊಳ್ಳಬೇಕು.
೫ ಆ ೨. ಅನಂತರ ಲೇಖನಮಾಲೆಯಲ್ಲಿನ ನಮ್ಮ ರೋಗಕ್ಕೆ ಸಂಬಂಧಿತ (ಉದಾ. ಜ್ವರ) ಪ್ರಕರಣವನ್ನು ತೆರೆದು ಸಂಪೂರ್ಣ ಓದಬೇಕು. ಅದರಲ್ಲಿ ನಮ್ಮ ಅನಾರೋಗ್ಯದ ಬಗ್ಗೆ (ಉದಾ. ಜ್ವರದ) ಇರುವ ಮಾಹಿತಿಯನ್ನು ಓದಿ ಹಾಗೂ ನೀಡಿರುವ ಇತರ ಅಂಶಗಳನ್ನು ಓದಿ ಉದಾ. ‘ಥರ್ಮಾಮೀಟರ್’ನಲ್ಲಿ ಜ್ವರ ಎಷ್ಟು ಬಂದಿದೆ ? ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಜ್ವರ ಕೇವಲ ೧೦೦ ಫೆÀರನ್ಹಾಯಿಟ್ ಇದ್ದರೆ ತಕ್ಷಣ ಔಷಧ ತೆಗೆದುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಅದಕ್ಕಿಂತ ಹೆಚ್ಚಿದ್ದರೆ, ಔಷಧ ತೆಗೆದುಕೊಳ್ಳಬೇಕಾಗುತ್ತದೆ.