ಗಣಪತಿಪುರಾದಲ್ಲಿನ ಶ್ರೀ ಗಣೇಶ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿರುವ ವಿಶೇಷ ಸಂಬಂಧ !

‘ಗಣಪತಿಪುರಾದ ಶ್ರೀ ಗಣೇಶ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಿಶೇಷ ಸಂಬಂಧವಿದೆ’, ಎಂದು ಮಹರ್ಷಿಗಳು ಹೇಳಿದ್ದಾರೆ. ಮುಂದಿನ ಅನುಭೂತಿಯಿಂದ ಮಹರ್ಷಿಗಳ ಈ ಮಾತಿನ ಅನುಭೂತಿಯು ಬರುತ್ತದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ‘ಸಿದ್ಧಿವಿನಾಯಕ’ನನ್ನು ನೋಡಿ ‘ಅದು ಚಿಕ್ಕ ಮಗುವಿದೆ’, ಎಂದೆನಿಸುವುದು

ಮಹರ್ಷಿಗಳು ಹೇಳಿದಂತೆ ೨೨.೩.೨೦೧೯ ರಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಗಣಪತಿಪುರಾದ ಶ್ರೀ ಗಣೇಶ ದೇವಸ್ಥಾನಕ್ಕೆ ಹೋದರು ಮತ್ತು ಅವರು ಶ್ರೀ ಗಣೇಶನ ದರ್ಶನವನ್ನು ಪಡೆದರು. ಆಗ ‘ಶ್ರೀ ಗಣೇಶನೆಂದರೆ ಒಂದು ಚಿಕ್ಕ ಮಗುವಾಗಿದ್ದು ಅವನ ಕಡೆಗೆ ನೋಡುತ್ತಲೇ ಇರಬೇಕು ಮತ್ತು ಅವನನ್ನು ಎತ್ತಿಕೊಂಡು ಆಡಿಸಬೇಕು’, ಎಂದು ಅವರ ಮನಸ್ಸಿನಲ್ಲಿ ಬಂದಿತು. ಅವರು ಈ ಶ್ರೀ ಗಣೇಶನ ಚಿತ್ರವನ್ನು ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ ಇವರಿಗೆ ಕಳುಹಿಸಿದರು. ಆ ಚಿತ್ರವನ್ನು ನೋಡಿ ಅವರಿಗೂ, ‘ಅವನು ಶ್ರೀ ಗಣೇಶನಾಗಿರದೇ ಒಂದು ಮುದ್ದು ಮಗುವಾಗಿದೆ ಮತ್ತು ಆ ಮಗುವನ್ನು ಎತ್ತಿಕೊಳ್ಳಬೇಕು’, ಎಂದೆನಿಸಿತು. ಸದ್ಗುರುಗಳಿಬ್ಬರಿಗೂ ‘ಸಿದ್ಧಿವಿನಾಯಕ’ನಿಗೆ ನೋಡಿ ‘ಅದು ಚಿಕ್ಕ ಮಗುವಾಗಿದೆ ಮತ್ತು ಮಗುವನ್ನು ಎತ್ತಿಕೊಂಡು ಆಡಿಸಬೇಕು’, ಎಂದೆನಿಸಿತು.

೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ‘ಅಂಜಲಿ’ ಎಂಬ ಹೆಸರು ಪಾರ್ವತಿಗೆ ಸಂಬಂಧಿಸಿರುವುದು

ವೈಶಿಷ್ಟ್ಯವೆಂದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಇವರ ‘ಅಂಜಲಿ’ ಎಂಬ ಹೆಸರು ಪಾರ್ವತಿಯೊಂದಿಗೆ ಸಂಬಂಧಪಟ್ಟಿದೆ. ಪಾರ್ವತಿಯ ಒಂದು ಹೆಸರು ‘ಶಿವಾಂಜಲಿ’ ಇರುವುದರಿಂದ ‘ಅಂಜಲಿ’ಯ ಅರ್ಥವು ‘ಪಾರ್ವತಿ’ ಎಂದಾಗುತ್ತದೆ. ಅವರ ತಂದೆಯ ಹೆಸರು ‘ಸದಾಶಿವ’ ಎಂದಿದ್ದೂ ಸಾಂಗಲಿಯಲ್ಲಿನ ಅರಮನೆಯಲ್ಲಿರುವ ಪ್ರಸಿದ್ಧ ಶ್ವೇತ ಗಣಪತಿಯ ಹತ್ತಿರದ ಒಂದು ಆಸ್ಪತ್ರೆಯಲ್ಲಿ ಅವರ ಜನ್ಮವು ಆಗಿದೆ. ಮಹರ್ಷಿಗಳು ನಾಡಿವಾಚನದಲ್ಲಿ ಯಾವಾಗಲೂ ಇದನ್ನು ಉಲ್ಲೇಖಿಸುತ್ತಾರೆ. ಇದರಿಂದ ‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಶ್ರೀ ಗಣೇಶನೊಂದಿಗೆ ಒಂದು ವಿಶೇಷ ಸಂಬಂಧವಿದೆ’, ಎಂದು ಗಮನಕ್ಕೆ ಬರುತ್ತದೆ.

೩. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮೂಲ ಹೆಸರು ‘ಪಾರ್ವತಿ’ ಇರುವುದು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮನೆತನ ದಲ್ಲಿ ಗಣಪತಿ ಪೂಜೆಗೆ ವಿಶೇಷ ಮಹತ್ವವಿದೆ. ಶ್ರೀ ಗಣೇಶನ ಪೂಜೆಗಾಗಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ವಿಶೇಷ ಸಿದ್ಧತೆಯನ್ನೂ ಮಾಡುತ್ತಾರೆ. ಅವರ ವಿವಾಹಪೂರ್ವದ ಹೆಸರೂ ‘ಪಾರ್ವತಿ’ ಎಂದಿದೆ.’ – ಶ್ರೀ. ವಿನಾಯಕ ಶಾನಭಾಗ, ಕುಮಟಾ, ಕರ್ನಾಟಕ.