ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ ?

೧. ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿತ ವಾಗುತ್ತದೆ. ಋಷಿಮುನಿಗಳು ಮತ್ತು ಸಂತರು ಶಾಸ್ತ್ರಗಳನ್ನು ಬರೆದಿದ್ದಾರೆ. ಅವರಿಗೆ ದೇವತೆಗಳ ಸಾಕ್ಷಾತ್ಕಾರವು ಹೇಗೆ ಆಗಿದೆಯೋ, ಹಾಗೇ ಅವರು ದೇವತೆಗಳನ್ನು ಶಾಸ್ತ್ರದಲ್ಲಿ ವರ್ಣಿಸಿದ್ದಾರೆ; ಆದುದರಿಂದ ಶಾಸ್ತ್ರದಲ್ಲಿ ಹೇಳಿದಂತೆ ಮೂರ್ತಿಯನ್ನು ತಯಾರಿಸಿದರೆ ಅದು ಸಾತ್ತ್ವಿಕವಾಗುತ್ತದೆ.

೨. ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಪ್ರತಿಯೊಂದು ದೇವತೆ ಎಂದರೆ ಒಂದು ವಿಶಿಷ್ಟ ತತ್ತ್ವವಾಗಿದೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’, ಈ ಸಿದ್ಧಾಂತಕ್ಕನುಸಾರ ಮೂರ್ತಿವಿಜ್ಞಾನದಂತೆ ಮೂರ್ತಿಯನ್ನು ತಯಾರಿಸಿದರೆ ಆ ಮೂರ್ತಿಯಲ್ಲಿ ಆ ದೇವತೆಯ ತತ್ತ್ವವು ಆಕರ್ಷಿತವಾಗುತ್ತದೆ.

(ಆಧಾರ : ಸನಾತನ ನಿರ್ಮಿತ ಕಿರುಗ್ರಂಥ ‘ಶ್ರೀ ಗಣೇಶಮೂರ್ತಿಯು ಶಾಸ್ತ್ರಾಕ್ಕನುಸಾರ ಇರಬೇಕು’)