‘ಸನಾತನ ಧರ್ಮ’ ಎಂದರೆ HIV ಮತ್ತು ಕುಷ್ಠರೋಗವಿದ್ದಂತೆ !’ – ದ್ರಮುಕ ಸಂಸದ ಎ. ರಾಜಾ

ಉದಯನಿಧಿ ಸ್ಟಾಲಿನ್ ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ದ್ರಮುಕ ಸಂಸದ ಎ. ರಾಜಾ ಇವರ ಖೇದಕರ ಹೇಳಿಕೆ !

ಚೆನ್ನೈ (ತಮಿಳುನಾಡು) – ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ಹೇಳಿಕೆಗಳು ಮೃದುವಾಗಿವೆ. ಅವರು ಸನಾತನ ಧರ್ಮವನ್ನು ಕೇವಲ ಮಲೇರಿಯಾ, ಡೆಂಗ್ಯೂ ಎಂದು ಹೇಳಿದರು; ಆದರೆ ಇದು ಸಮಾಜದಲ್ಲಿ ಮಾರಕವೆಂದು ಪರಿಗಣಿಸಲ್ಪಟ್ಟ ರೋಗಗಳಲ್ಲ. ಒಂದು ವೇಳೆ ನಿಮಗೆ ಸನಾತನವನ್ನು ವ್ಯಾಖ್ಯಾನಿಸುವುದಿದ್ದರೆ, HIVಯನ್ನು ನೋಡಿರಿ. ಸಮಾಜಕ್ಕಾಗಿ ಸನಾತನ ಇದೇ ರೀತಿ ಕೆಲಸ ಮಾಡುತ್ತಿದೆ. ಸನಾತನದ ತುಲನೆಯನ್ನು HIV ಗೆ ಮತ್ತು ಕುಷ್ಠರೋಗದಂತಹ ಸಾಮಾಜಿಕ ಕಳಂಕಿತ ಕಾಯಿಲೆಗಳೊಂದಿಗೆ ಮಾಡಬೇಕು ಎಂದು ದ್ರಮುಕ ಸಂಸದ ಎ. ರಾಜಾ ಇವರು ಕಾರ್ಯಕ್ರಮವೊಂದರಲ್ಲಿ ಖೇದಕರ ಹೇಳಿಕೆ ನೀಡಿದರು.

ಪ್ರಧಾನಮಂತ್ರಿ ಮೋದಿ ಮತ್ತು ಅಮಿತ್ ಶಾ ಇವರು ನನ್ನೊಂದಿಗೆ ಚರ್ಚಿಸಬೇಕು !

ಸಂಸದ ಎ. ರಾಜಾ ಮಾತು ಮುಂದುವರಿಸಿ, ಪ್ರಧಾನಮಂತ್ರಿ ಮೋದಿಯವರು ‘ಸನಾತನ ಧರ್ಮವನ್ನು ಪಾಲಿಸಿರಿ’ ಎಂದು ಹೇಳುತ್ತಾರೆ. ಸನಾತನ ಧರ್ಮದಲ್ಲಿ ‘ಸಮುದ್ರವನ್ನು ದಾಟಬಾರದು’, ಎಂದು ಹೇಳಲಾಗಿದೆ. (ರಾಮಾಯಣ 5 ಲಕ್ಷ ವರ್ಷಗಳ ಹಿಂದೆ ನಡೆದಿತ್ತು. ಆ ಸಮಯದಲ್ಲಿ ಹನುಮಂತನು ಸಮುದ್ರವನ್ನು ದಾಟಿದನು. ಹಾಗೆಯೇ ಪ್ರಭು ಶ್ರೀರಾಮಚಂದ್ರನು ಕೂಡ ಸಮುದ್ರವನ್ನು ದಾಟಿದ್ದನು. ಧರ್ಮದ ಯಾವ ನಿಯಮಗಳನ್ನು ಎಲ್ಲಿ ಅನ್ವಯಿಸಬೇಕು ಎಂದು ಹಿಂದೂ ಧರ್ಮದಲ್ಲಿ ಸವಿಸ್ತಾರವಾಗಿ ಬರೆಯಲಾಗಿದೆ. ಅದರಲ್ಲಿ ತಮಗೆ ಬೇಕಾದ ಸೂತ್ರಗಳನ್ನು ತೆಗೆದುಕೊಂಡು ಟೀಕಿಸುವ ಹಿಂದೂ ದ್ವೇಷಿ ದ್ರಮುಕರು ! – ಸಂಪಾದಕರು) ಮೋದಿಯವರು ಸನಾತನ ಧರ್ಮವನ್ನು ಪಾಲನೆ ಮಾಡಿ ವಿದೇಶ ಪ್ರವಾಸಕ್ಕೆ ಹೋಗಬಾರದು. ಪ್ರಧಾನಮಂತ್ರಿ ಮೋದಿಯವರು ಮಂತ್ರಿಮಂಡಳದ ಸಭೆ ನಡೆಸಿ ಸನಾತನ ವಿಷಯದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವಂತೆ ಆದೇಶ ನೀಡುತ್ತಿದ್ದಾರೆ. ನಾನು ಪ್ರಧಾನಮಂತ್ರಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರಿಗೆ ನನ್ನೊಂದಿಗೆ ಸನಾತನ ಧರ್ಮದ ಬಗ್ಗೆ ಚರ್ಚೆ ನಡೆಸಬೇಕು ಎಂದು ಸವಾಲು ಹಾಕುತ್ತೇನೆ. ದೆಹಲಿಯಲ್ಲಿ 1 ಕೋಟಿ ಜನರನ್ನು ಕರೆಸಿರಿ, ಶಂಕರಾಚಾರ್ಯರನ್ನೂ ಆಹ್ವಾನಿಸಿರಿ ಎಂದು ಹೇಳಿದರು.

ಸಂಪಾದಕೀಯ ನಿಲಿವು

  • ನಾಲಿಗೆಗೆ ಎಲುಬು ಇಲ್ಲ ಎಂದು ಬಾಯಿಗೆ ಬಂದ ಹಾಗೆ ಮಾತನಾಡುವ ದ್ರಮುಕ ನಾಯಕರು ! “ನಾವು ಸನಾತನ ಧರ್ಮವನ್ನು ಎಷ್ಟು ಕೀಳುಮಟ್ಟಕ್ಕೆ ಹೋಗಿ ಟೀಕಿಸಿದರೂ, ನಮಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ”, ಎಂದು ದ್ರಮುಕರಿಗೆ ಅನಿಸುತ್ತಿರುವುದರಿಂದ ಅವರು ಉದ್ಧಟತನದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹವರ ಮೇಲೆ ಪೊಲೀಸರಲ್ಲಿ ದೂರು ದಾಖಲಿಸಿ ಅವರನ್ನು ಜೈಲಿಗೆ ಅಟ್ಟುವುದು ಆವಶ್ಯಕವಾಗಿದೆ !
  • ದಲಿತರು ಮತ್ತು ಹಿಂದುಳಿದ ವರ್ಗಗಳ ಪಾರಂಪರಿಕವಾಗಿ ಮತಗಳನ್ನು ಪಡೆಯಲು ದ್ರಮುಕ ನಾಯಕರು ಉದ್ದೇಶಪೂರ್ವಕವಾಗಿ ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ, ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ಧರ್ಮಾಭಿಮಾನಿ ಹಿಂದೂಗಳು ಇದನ್ನು ಸಂಘಟಿತರಾಗಿ ವಿರೋಧಿಸಬೇಕು !
  • ಸನಾತನ ಧರ್ಮದ ಅನುಯಾಯಿಗಳು ಸಹಿಷ್ಣುಗಳಾಗಿರುವುದರಿಂದ ಅವರು ಕಾನೂನನ್ನು ಕೈಗೆತ್ತಿಕೊಂಡು ಯಾವುದೇ ಕೃತ್ಯವನ್ನು ಮಾಡುವುದಿಲ್ಲ. ಇತರೆ ಧರ್ಮಗಳ ವಿಷಯದಲ್ಲಿ ಯಾರಾದರೂ ಇಂತಹ ಹೇಳಿಕೆ ನೀಡಿದ್ದರೆ ಏನಾಗುತ್ತಿತ್ತು ಎನ್ನುವುದು ಎಲ್ಲರಿಗೂ ತಿಳಿದಿದೆ !