ಹಿಂದೂ ಸಮಾಜದಲ್ಲಿ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸುವ ಮಾಧ್ಯಮ !
‘ಕಳೆದ ಕೆಲವು ವರ್ಷಗಳಿಂದ ೨ ದೊಡ್ಡ ಸಂಕಟಗಳು ಹಿಂದೂ ಧರ್ಮದ ಮೇಲೆ ದಾಳಿ ಮಾಡುತ್ತಿವೆ ! ಒಂದೆಂದರೆ ‘ಲವ್ ಜಿಹಾದ್ ಮತ್ತೊಂದು ಹಿಂದೂ ಗಳ ಮತಾಂತರ ! ಕೆಲವು ವರ್ಷಗಳ ವರೆಗೆ ಲವ್ ಜಿಹಾದ್ ಎಂಬುದು ಅಸ್ತಿತ್ವದಲ್ಲಿಯೇ ಇಲ್ಲ, ಎಂದು ಹೇಳಿ ಹಿಂದೂಗಳ ಬಳಿ ಅದರ ಪುರಾವೆ ಗಳನ್ನು ಕೇಳಲಾಗುತ್ತಿತ್ತು, ಅಲ್ಲದೇ ಮತಾಂತರಕ್ಕೂ ಒಳ್ಳೆಯ ಅವಕಾಶಗಳಿದ್ದವು; ಆದರೆ ಇವೆರಡೂ ದಾಳಿಗಳ ಬಗ್ಗೆ ಹಿಂದುತ್ವನಿಷ್ಠರು ವೈಚಾರಿಕ, ವೈಜ್ಞಾನಿಕ, ಸಾಮಾಜಿಕ, ಶೈಕ್ಷಣಿಕ, ಹಾಗೆಯೇ ಕೌಟುಂಬಿಕ ಮಟ್ಟದಲ್ಲಿ ಜಾಗೃತಗೊಳಿಸಿರು ವುದರಿಂದ ಇಂದು ಅದರ ಪರಿಣಾಮದಿಂದ ಇವೆರಡೂ ದಾಳಿಗಳನ್ನು ಹಿಮ್ಮೆಟ್ಟಿಸಲು ಹಾಗೆಯೇ ಅದರ ವಿರುದ್ಧ ಕಠೋರ ಕಾನೂನುಗಳನ್ನು ತರಲು ಹಿಂದು ಸಮಾಜವು ಮಹಾರಾಷ್ಟ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿಯಿತು. ಲವ್ ಜಿಹಾದ್ ಮತ್ತು ಹಿಂದೂಗಳ ಹೆಚ್ಚುತ್ತಿರುವ ಮತಾಂತರದ ಬಗ್ಗೆ ಇಂದು ಹಿಂದೂಗಳ ಮನಸ್ಸಿನಲ್ಲಿ ತುಂಬಾ ಆಕ್ರೋಶವಿದೆ. ಈ ದಾಳಿಗಳ ವಿರುದ್ಧ ಸಂಘರ್ಷವಾಗಬೇಕೆಂಬ ಭಾವನೆಯು ಈಗ ಬಲವಾಗತೊಡಗುತ್ತಿದೆ. ನಾವು ನಮ್ಮ ಭಗಿನಿಯರನ್ನು ಕತ್ತರಿಸಿದ್ದನ್ನು ಇನ್ನೆಷ್ಟು ದಿನ ನೋಡಬೇಕು ? ಇನ್ನೆಷ್ಟು ದಿನ ನಮ್ಮ ಹೆಣ್ಣುಮಕ್ಕಳನ್ನು ವಂಚಿಸಿ ಅವರನ್ನು ಒತ್ತಾಯಪೂರ್ವಕವಾಗಿ ಮತಾಂತರ ಮಾಡಲಿ ದ್ದಾರೆ ? ಮತ್ತು ನಾವು ಇನ್ನೂ ಸಹಿಸಿಕೊಳ್ಳಬೇಕೇ ? ಎಂಬ ಸಿಟ್ಟು ಮನಸ್ಸಿನಲ್ಲಿಟ್ಟು ಮಹಾರಾಷ್ಟ್ರದಲ್ಲಿನ ಹಿಂದುಗಳು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಗಾಗಿ ಬೀದಿಗಿಳಿದರು. ‘ಲವ್ ಜಿಹಾದ್ ವಿರುದ್ದ ಕಾಯಿದೆ’ ಮತ್ತು ‘ಮತಾಂತರ ನಿಷೇಧ ಕಾಯಿದೆ’ಗಳನ್ನು ಜಾರಿಯಲ್ಲಿ ತರಲು ಬೇಡಿಕೆಯು ಒಂದು ನಿಮಿತ್ತವಾಗಿತ್ತು ! ಈ ಪ್ರತಿಭಟನೆಗಳು ಕೆಲಮೊಮ್ಮೆ ಹಿಂದೂ ಜನಸಂಘರ್ಷ ಹೋರಾಟದ ರೂಪದಲ್ಲಿ ಕಾಣಿಸಿದರೆ, ಕೆಲವೊಮ್ಮೆ ಹಿಂದೂ ಜನಾಕ್ರೋಶದ ರೂಪದಲ್ಲಿ, ಕೆಲವೊಮ್ಮೆ ಹಿಂದೂ ಗರ್ಜನೆಯ ರೂಪದಲ್ಲಿ ಕಾಣಿಸಿಕೊಂಡವು ! ಮನೆಮನೆಗಳಲ್ಲಿನ ಹಿಂದುಗಳು ‘ಧರ್ಮಹಾನಿ ಯನ್ನು ತಡೆಯಲು ಬೀದಿಗಿಳಿದರು, ಇದು ಹಿಂದೂ ರಾಷ್ಟ್ರದ ದಿಶೆಯತ್ತ ಮಾರ್ಗಕ್ರಮಣವೇ ಆಗುತ್ತಿದೆ’, ಎಂದು ಹೇಳಬಹುದು. ಮುಂಬೈ, ಪುಣೆ, ಕೊಲ್ಲಾಪುರ, ಸಾತಾರಾ, ಜಳಗಾವ, ನಾಗಪುರ, ಸಂಭಾಜಿನಗರ ಮುಂತಾದ ರಾಜ್ಯಗಳಲ್ಲಿನ ೫೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಮೆರವಣಿಗೆಗಳಾದವು. ಇವುಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಕೆಲವು ಮೆರವಣಿಗೆಯ ಮುಂದಾಳತ್ವವನ್ನು ವಹಿಸಿತು. ಈ ಮೆರವಣಿಗೆಗಳು ಎಷ್ಟೊಂದು ಭವ್ಯ ಸ್ವರೂಪದಲ್ಲಿ ನಡೆಯಿತೆಂದರೆ ರಾಷ್ಟ್ರೀಯ ಸ್ತರದ ಪ್ರಸಿದ್ಧಿಮಾಧ್ಯಮಗಳಿಗೂ ಹಿಂದೂಗಳ ಸಂಘಟನಾಶಕ್ತಿಯನ್ನು ಗಮನಿಸಬೇಕಾಯಿತು. ಈ ಮೆರವಣಿಗೆಯ ಸಮಯದಲ್ಲಿ ಬಂದಿರುವ ಕೆಲವು ಅನುಭವಗಳನ್ನು ಇಲ್ಲಿ ಕೊಡುತ್ತಿದ್ದೇನೆ. |
ಮಹಾರಾಷ್ಟ್ರದ ಸಂಭಾಜಿನಗರದ ಆಂದೋಲನದಲ್ಲಿ ‘ಲವ್ ಜಿಹಾದ್‌ದ ವಿರೋಧಿ ಕಾನೂನು’ ಮತ್ತು ‘ಮತಾಂತರ ನಿಷೇಧ ಕಾನೂನು’ ಈ ವಿಷಯದಂತೆ ‘ಔರಂಗಾಬಾದ್’ಅನ್ನು ‘ಛತ್ರಪತಿ ಸಂಭಾಜಿನಗರ’ವೆಂದು ಮರುನಾಮಕರಣಕ್ಕೆ ಬೆಂಬಲಿಸುವುದೂ ಮಹತ್ವದ ವಿಷಯವಾಗಿತ್ತು. ಇದಕ್ಕೆ ಛತ್ರಪತಿ ಸಂಭಾಜಿ ನಗರದ ಹಿಂದೂಗಳು ಭಾರೀ ಬೆಂಬಲ ನೀಡಿದರು. ಇದರಲ್ಲಿ ೭೫ ಸಾವಿರಕ್ಕೂ ಹೆಚ್ಚು ಹಿಂದೂಗಳು ಭಾಗವಹಿಸಿದ್ದರು.
ಈ ಮೆರವಣಿಗೆಯಲ್ಲಿ ಹಿಂದೂಗಳ ಒಗ್ಗಟ್ಟು ಕಂಡು ಎಲ್ಲ ರಾಜಕೀಯ ಪಕ್ಷದವರಿಗೆ ತಮ್ಮ ಸ್ವಾರ್ಥವನ್ನು ಬಿಟ್ಟು ಒಂದಾಗಬೇಕಾಯಿತು. ಈ ಮೆರವಣಿಗೆಯು ಹಿಂದೂಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಹಿಂದುತ್ವದ ಮೇಲಿನ ದಾಳಿಗಳ ವಿರುದ್ಧ ಒಟ್ಟಾಗಿ ಹೋರಾಡುವ ಮಾನಸಿಕತೆಯನ್ನುಂಟು ಮಾಡಿ, ಶ್ರೀರಾಮನವಮಿಯಂದು ನಡೆದ ದಾಳಿಯ ನಂತರ ಇದರ ಪರಿಣಾಮವನ್ನು ನೋಡಲು ಸಿಕ್ಕಿತು. ಸಾಮಾನ್ಯವಾಗಿ ಇಂತಹ ಘಟನೆಗಳಾದಾಗ ಹಿಂದೂಗಳಿಗೆ ತುಂಬಾ ಒತ್ತಡ ಬರುತ್ತಿತ್ತು. ಈ ವೇಳೆ ಹಿಂದೂಗಳು ಉದ್ವಿಗ್ನಗೊಳ್ಳದೇ ದೊಡ್ಡ ಸಂಖ್ಯೆಯಲ್ಲಿ ರಸ್ತೆಗಿಳಿದು ಶ್ರೀರಾಮನವಮಿ ಉತ್ಸವ ಆಚರಿಸಿದರು. ಪ್ರತಿಭಟನೆಯ ನಂತರ ಇಂತಹ ಸಕಾರಾತ್ಮಕ ಬದಲಾವಣೆ ಕಂಡುಬಂದಿತು.
೧. ಮೆರವಣಿಗೆಯ ಆಯೋಜನೆ
ಈ ಮೆರವಣಿಗೆಯ ಆಯೋಜನೆಯ ಮೊದಲು ವಿವಿಧ ಸಂಘಟನೆಗಳ ಸಭೆಗಳನ್ನು ತೆಗೆದುಕೊಳ್ಳಲಾಯಿತು. ಅದರಲ್ಲಿ ಪ್ರಸಾರದ ದಿಶೆಯನ್ನು ನಿರ್ಧರಿಸಲಾಯಿತು. ಹೋರ್ಡಿಂಗ್ ಹಚ್ಚುವುದು, ಗ್ರಾಮಗ್ರಾಮಗಳಲ್ಲಿ ಸಭೆಗಳನ್ನು ನಡೆಸುವುದು, ಕರಪತ್ರಗಳನ್ನು ಹಂಚುವುದು, ಫಲಕಪ್ರಸಿದ್ಧಿ ಮಾಡುವುದು, ರಿಕ್ಷಾಗಳಿಂದ ಘೋಷಣೆಯನ್ನು ಮಾಡುವುದು ಮುಂತಾದ ವಿವಿಧ ಮಾಧ್ಯಮಗಳಿಂದ ಮೆರವಣಿಗೆಯನ್ನು ನಡೆಸಲಾಯಿತು. ಸಾಮಾಜಿಕ ಮಾಧ್ಯಮಗಳಿಂದ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಲಾಯಿತು. ಅನೇಕ ಜನರು, ಸಮಿತಿಯು ಮುಂದಾಳತ್ವ ವನ್ನು ವಹಿಸಿ ನಡೆಸುತ್ತಿರುವ ಮೆರವಣಿಗೆಯಲ್ಲಿ ನಾವೂ ಭಾಗ ವಹಿಸಲಿದ್ದೇವೆ ಎಂದು ಹೇಳಿ ಶುಭಾಶಯಗಳನ್ನು ಹಾರೈಸಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಪ್ರತಿಭಟನೆಗಳಿಗಾಗಿ ಸಮಾಜದಿಂದ ಸ್ವಯಂಪ್ರೇರಿತ ಬೆಂಬಲ ಸಿಕ್ಕಿತು.
೨. ವಿವಿಧ ನಗರಗಳಲ್ಲಿನ ಮೆರವಣಿಗೆಗಳು ಮತ್ತು ಅನುಭವ
೨ ಅ. ನಾಗಪುರ : ಇಲ್ಲಿ ವಿಧಿಮಂಡಲದ ಚಳಿಗಾಲದ ಅಧಿವೇಶನದಲ್ಲಿ ೨೧ ಡಿಸೆಂಬರ್ ೨೦೨೨ ರಂದು ನಡೆದ ಮೆರವಣಿಗೆಯಲ್ಲಿ ೨೭ ಸಂಘಟನೆಗಳು ಭಾಗವಹಿಸಿದ್ದವು. ಯಾವ ಸಂಘಟನೆಗಳ ವರೆಗೆ ಪ್ರತ್ಯಕ್ಷ ತಲುಪಲು ಸಾಧ್ಯವಾಗು ತ್ತಿರಲಿಲ್ಲವೋ, ಆ ಸಂಘಟನೆಗಳೂ ಸಾಮಾಜಿಕ ಮಾಧ್ಯಮ ಗಳಿಂದಾದ ಪ್ರಸಾರದಿಂದ ಈ ಮೆರವಣಿಗೆಯಲ್ಲಿ ಭಾಗವಹಿಸಿ ದವು. ಅನೇಕ ಜನರು ತಾವಾಗಿಯೇ ಅನ್ನದಾನ ಮಾಡಿ, ಧ್ವಜಗಳನ್ನು ಕೊಟ್ಟು ಮೆರವಣಿಗೆಗೆ ಸಹಕರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಹೊರಟ ಈ ಮೆರವಣಿಗೆಯ ನಂತರ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ. ಏಕನಾಥ ಶಿಂದೆ ಇವರಿಗೆ ಮನವಿಯನ್ನು ನೀಡಿ ಹಿಂದೂಗಳ ಬೇಡಿಕೆಗಳನ್ನು ತಲುಪಿಸಲಾಯಿತು.
೨ ಆ. ಕೊಲ್ಹಾಪುರ : ಜಿಲ್ಲೆಯ ಗಡಹಿಂಗ್ಲಜನಲ್ಲಿ ಜನವರಿ ೨೦೨೩ ರಲ್ಲಿ ಸಮಿತಿಯ ‘ಹಿಂದೂ ರಾಷ್ಟ್ರಜಾಗೃತಿ ಸಭೆ’ ನಡೆದಿತ್ತು. ಈ ಸಭೆಯ ನಂತರ ತಕ್ಷಣ ‘ಹಿಂದೂ ಜನ ಸಂಘರ್ಷ ಆಂದೋಲನ’ವನ್ನು ಘೋಷಿಸಲಾಯಿತು. ಮೆರವಣಿಗೆಯ ಮೊದಲು ಗಡಹಿಂಗ್ಲಜನ್ನು ‘ಪ್ರಗತಿಪರ ನಗರ’ ಎನ್ನಲಾಗುತ್ತಿತ್ತು. ಈ ಗುರುತನ್ನು ಅಳಿಸಿ ‘ಹಿಂದುತ್ವನಿಷ್ಠ ಗಡಹಿಂಗ್ಲಜ’ ಎಂದಾಗಲು ಮೆರವಣಿಗೆಯನ್ನು ಆಯೋಜಿಸÀಲಾಯಿತು. ಗಡಹಿಂಗ್ಲಜ ನಗರದಲ್ಲಿ ಬಹುಶಃ ಮೊದಲ ಬಾರಿಗೆ ೧೦ ಸಾವಿರಕ್ಕಿಂತ ಹೆಚ್ಚು ಹಿಂದೂಗಳ ಜನಸಂಘರ್ಷ ಮೆರವಣಿಗೆ ನಡೆಯಿತು.
೨ ಇ. ಜಳಗಾವ : ಇಲ್ಲಿ ಮೆರವಣಿಗೆಯ ಸಭೆಯಾದ ನಂತರ ‘ಸಮಸ್ತ ವ್ಯಾಪಾರಿ ಅಸೋಸಿಯನ್’ ಇದು ಮೆರವಣಿಗೆಯನ್ನು ಯಶಸ್ವಿಗೊಳಿಸಲು ನಿರ್ಧರಿಸಿತು. ಅದಕ್ಕನುಸಾರ ಶನಿವಾರ ಮೆರವಣಿಗೆಯಿದ್ದರೂ ಎಲ್ಲ ವ್ಯಾಪಾರಿಗಳು ತಮ್ಮ ವ್ಯವಸಾಯ ವನ್ನು ಬಿಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದರು. ಜಳಗಾವದ ಇತಿಹಾಸದಲ್ಲಿ ಮೊದಲ ಬಾರಿ ಇಂತಹ ಘಟನೆ ನಡೆಯಿತು. ೨ ಈ. ಮುಂಬೈ : ಘಾಟಕೊಪರನಲ್ಲಿಯೂ ೨೨ ಮಾರ್ಚ್ ೨೦೨೩ ರಂದು ಮೆರವಣಿಗೆಯನ್ನು ನಡೆಸಲಾಯಿತು. ಆರಂಭದಲ್ಲಿ ಆಡಳಿತವು ‘ಮೆರವಣಿಗೆಗೆ ಅನುಮತಿ ನೀಡುವುದಿಲ್ಲ’, ಎಂಬ ನಿಲುವು ತಾಳಿತು. ‘ಮೆರವಣಿಗೆಗಾಗಿ ಹಾಕಿದ ಎಲ್ಲ ಫಲಕಗಳನ್ನೂ ಪೊಲೀಸರು ತೆಗೆದರು. ‘ಮೆರವಣಿಗೆಯ ಕುರಿತಾದ ಎಲ್ಲ ಬ್ಯಾನರ್‌ಗಳನ್ನು ತೆಗೆದರೆ ಮಾತ್ರ ನಾವು ಅನುಮತಿ ಕೊಡು ವೆವು’, ಎಂದು ಷರತ್ತನ್ನು ವಿಧಿಸಿದರು. ಆದರೂ ಹಿಂದೂಗಳು ‘ಎಷ್ಟೇ ಸಂಘರ್ಷವಾದರೂ, ಮೆರವಣಿಗೆಯನ್ನು ನಡೆಸಲು ನಿರ್ಧರಿಸಿದರು’. ಕೊನೆಗೆ ಅನೇಕ ಅಡಚಣೆಗಳನ್ನು ಪರಿಹರಿಸಿ
ಸಾವಿರಾರು ಸಂಖ್ಯೆಯಲ್ಲಿ ಘಾಟಕೊಪರದಲ್ಲಿಯೂ ಹಿಂದೂಗಳ ಮೆರವಣಿಗೆ ನಡೆಸಲಾಯಿತು !
ಮುಂಬೈಯಲ್ಲಿ ರಝಾ ಅಕಾಡೆಮಿಯ ಮತಾಂಧರು ಬಹಿರಂಗವಾಗಿ ‘ಅಮರ ಜ್ಯೋತಿ’ ಸ್ಮಾರಕವನ್ನು ಅಪಮಾನಿಸಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ; ಆದರೆ ಹಿಂದೂಗಳಿಗೆ ನ್ಯಾಯ ಸಿಗಲು ಕಾನೂನುರೀತ್ಯಾ ನಡೆಸಲಾದ ಮೆರವಣಿಗೆಗೂ ಹೋರಾಡಬೇಕಾ ಯಿತು, ಇದು ದುರಂತವಾಗಿದೆ. ಮುಂಬೈಯ ಮೆರವಣಿಗೆಯೂ ಯಶಸ್ವಿ ಆಯಿತು. ಅನುಮತಿ ನೀಡಲು ವಿರೋಧಿಸಿದ್ದ ಪೊಲೀಸ ಆಡಳಿತವು ಮೆರವಣಿಗೆಯ ಉತ್ತಮ ಆಯೋಜನೆ ಕಂಡು ಸಮಿತಿಯ ಪ್ರಶಂಸೆ ಮಾಡಿತು.
೩. ಸಂಘರ್ಷದ ಜ್ವಾಲೆಯು ಜನಮನದಿ ಉರಿಯುತ್ತಿರಲಿ !
ಒಟ್ಟಿನಲ್ಲಿ ಈ ಮೆರವಣಿಗೆ ಎಂದರೆ ಹಿಂದೂ ರಾಷ್ಟ್ರದ ದೃಷ್ಟಿಯಲ್ಲಿ ಹಿಂದೂ ಸಮಾಜದಲ್ಲಿ ಕ್ರಾಂತಿಯ ಜ್ವಾಲೆಯನ್ನು ಬೆಳಗಿಸುವ ಮಾಧ್ಯಮವಾಗಿದೆ. ಇಂದಿನ ಈ ಮಾರ್ಗವು ಹೋರಾಟ ದ್ದಾಗಿದ್ದರೂ ವಿಜಯ ನಮ್ಮದೇ, ಎಂಬ ಭಾವನೆ ಯನ್ನು ಪ್ರತಿಯೊಬ್ಬ ಹಿಂದೂಗಳು ತಮ್ಮ ಮನಸ್ಸಿನಲ್ಲಿಡ ಬೇಕು. ಜಾಗೃತಗೊಂಡ ಹಿಂದೂಗಳ ಮನಸ್ಸಿನಲ್ಲಿ ಈಗ ಧರ್ಮಕ್ರಾಂತಿಯು ಆರಂಭವಾಗಿದೆ. ಈಗ ನಾವು ಇಲ್ಲಿಗೇ ನಿಲ್ಲದೇ ನಿರಂತರ ಸಂಘಟಿತರಾಗಿ ಮುಂಬರುವ ಕಾಲ ದಲ್ಲಿಯೂ ವಿವಿಧ ವಿಷಯಗಳನ್ನು ಮೆರವಣಿಗೆಯ ರೂಪದಲ್ಲಿ ಬೆಳಕಿಗೆ ತರಬೇಕಾಗಿದೆ. ನಮ್ಮ ಮಾತೃಭೂಮಿಯಲ್ಲಿ ಲವ್ ಜಿಹಾದ್ ರೂಪಿ ಮತ್ತು ಮತಾಂತರರೂಪಿ ವಿಷವೃಕ್ಷದ ಬೇರನ್ನು ನಾಶಗೊಳಿಸುವವರೆಗೆ ಮತ್ತು ನಾವೆಲ್ಲರೂ ಸೇರಿ ಹಿಂದೂ ರಾಷ್ಟ್ರದ ಉದಯವನ್ನು ಕಾಣುವವರೆಗೆ ಈ ಸಂಘರ್ಷದ ಜ್ವಾಲೆಯು ಜನರ ಮನದಲ್ಲಿ ಉರಿಯುತ್ತಿರಲಿ, ಎಂದು ಆಶಾಭಾವನೆಯನ್ನು ವ್ಯಕ್ತಪಡಿಸುತ್ತೇನೆ.
– ಕು. ಪ್ರಿಯಾಂಕಾ ಲೊಣೆ, ಸಂಭಾಜಿನಗರ, ಮಹಾರಾಷ್ಟ್ರ