ಹೊಮಿಯೋಪಥಿ ಚಿಕಿತ್ಸಾಪದ್ಧತಿಯ ೭ ಮೂಲಭೂತ ತತ್ತ್ವಗಳು ! ಇಂದಿನ ಒತ್ತಡಮಯ ಜೀವನದಲ್ಲಿ ಪ್ರತಿಯೊಬ್ಬರು ಮತ್ತು ಯಾವುದೇ ಸಮಯದಲ್ಲಿ ಸೋಂಕುರೋಗಗಳನ್ನು ಅಥವಾ ಇತರ ಯಾವುದಾದರೂ ರೋಗಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ತಕ್ಷಣ ತಜ್ಞವೈದ್ಯಕೀಯ ಸಲಹೆ ಸಿಗ ಬಹುದೆಂದು ಹೇಳಲು ಆಗುವುದಿಲ್ಲ. ನೆಗಡಿ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲೇರಿಯಾ, ಮಲಬದ್ಧತೆ, ಅಮ್ಲಪಿತ್ತ (ಎಸಿಡಿಟಿ) ಇಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೆ ಉಪಚಾರ ಮಾಡಲು ಸಾಧ್ಯವಾಗುತ್ತದೆ. ಹೋಮಿಯೋಪಥಿ ಚಿಕಿತ್ಸಾಪದ್ಧತಿ ಸಾಮಾನ್ಯ ಜನರಿಗೆ ಬಹಳ ಉಪಯುಕ್ತವಾಗಿದೆ. ಇದನ್ನು ಮನೆಯಲ್ಲಿ ಹೇಗೆ ಉಪಯೋಗಿಸಬಹುದು ? ಹೋಮಿಯೋಪಥಿ ಔಷಧಗಳನ್ನು ಹೇಗೆ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಿಡಬೇಕು ? ಇಂತಹ ಅನೇಕ ವಿಷಯಗಳ ಮಾಹಿತಿಯನ್ನು ಈ ಹೊಸ ಲೇಖನಮಾಲೆಯ ಮೂಲಕ ನೀಡುತ್ತಿದ್ದೇವೆ. ‘ಸನಾತನ ಪ್ರಭಾತ’ದ ವಾಚಕರೊಂದಿಗೆ ಸಾಧಕರು, ಕಾರ್ಯಕರ್ತರು, ಹಿತಚಿಂತಕರು ಮುಂತಾದ ವರೆಲ್ಲರಿಗೂ ಇದರಿಂದ ಲಾಭವಾಗಬಹುದು. ೨೪/೫೦ ರ ಸಂಚಿಕೆ ಯಲ್ಲಿ ನಾವು ‘ಹೋಮಿಯೋಪಥಿ ಎಂದರೇನು ? ಮತ್ತು ಹೋಮಿಯೋಪಥಿಯ ಜನಕ ಡಾ. ಹಾನೆಮಾನ್’, ಇವರ ವಿಷಯದ ಮಾಹಿತಿಯನ್ನು ಓದಿದೆವು. ಇಂದು ಈ ಲೇಖನದ ಮುಂದಿನ ಭಾಗವನ್ನು ನೋಡೋಣ. ( ಭಾಗ – ೨ ) |
೩. ಹೋಮಿಯೋಪಥಿ ಚಿಕಿತ್ಸಾಪದ್ಧತಿಯ ಮೂಲಭೂತ ತತ್ತ್ವಗಳು (Cardinal Principles of Homeopathy)
ಪ್ರತಿಯೊಂದು ಶಾಸ್ತ್ರವು ಕೆಲವು ಮೂಲಭೂತ ತತ್ತ್ವಗಳ ಮೇಲಾಧಾರಿತವಾಗಿರುತ್ತದೆ. ಹೋಮಿಯೋಪಥಿಯು ಮುಂದಿನ ೭ ಮೂಲಭೂತ ತತ್ತ್ವಗಳ ಮೇಲಾಧಾರಿತವಾಗಿದೆ.
೩ ಅ. ಸಾಮ್ಯತೆಯ ತತ್ತ್ವ (Law of Similia) : ಹೋಮಿಯೋ ಪಥಿಯಲ್ಲಿ ನೀಡಲಾಗುವ ಔಷಧಗಳು ವನಸ್ಪತಿ, ಪ್ರಾಣಿ, ಖನಿಜ ಮುಂತಾದ ನೈಸರ್ಗಿಕ ವಸ್ತುಗಳಿಂದ ತಯಾರಾಗಿರುತ್ತವೆ. ಮೊದಲು ಈ ಔಷಧಗಳನ್ನು ಆರೋಗ್ಯವಂತ ವ್ಯಕ್ತಿಗಳಿಗೆ ನೀಡಿ ‘ಆರೋಗ್ಯವಂತ ವ್ಯಕ್ತಿಯಲ್ಲಿ ಯಾವ ವಿಶಿಷ್ಟ ಲಕ್ಷಣ ಗಳನ್ನು ನಿರ್ಮಿಸುವ ಕ್ಷಮತೆ ಅವುಗಳಲ್ಲಿದೆಯೇ ?’, ಎಂಬುದನ್ನು ಪರೀಕ್ಷಿಸಲಾಗುತ್ತದೆ. ಆರೋಗ್ಯವಂತ ವ್ಯಕ್ತಿ ಯಲ್ಲಿ ನಿರ್ಮಾಣವಾದ ಈ ಲಕ್ಷಣಗಳಿಗೆ ಆ ‘ಔಷಧದ ಲಕ್ಷಣಗಳು’ ಅಥವಾ ‘ಔಷಧದ ಗುಣಧರ್ಮಗಳು’, ಎಂದು ಹೇಳಲಾಗುತ್ತದೆ. ಯಾವುದಾದರೊಬ್ಬ ರೋಗಿಯಲ್ಲಿ ನಿರ್ಮಾಣ ವಾದ ಲಕ್ಷಣಗಳು ಮತ್ತು ಯಾವುದಾದರೊಂದು ಔಷಧದ ಲಕ್ಷಣಗಳಲ್ಲಿ ಸಾಮ್ಯತೆ ಕಂಡುಬಂದರೆ, ಆಗ ಆ ಔಷಧವನ್ನು ಆ ರೋಗಿಗೆ ಕೊಡಲಾಗುತ್ತದೆ ಮತ್ತು ಆ ಔಷಧ ರೋಗಿಯ ಕಾಯಿಲೆಯನ್ನು ಗುಣಪಡಿಸುತ್ತದೆ.
೩ ಆ. ಸರಳತೆಯ ತತ್ತ್ವ (Law of Simplex) : ಹೋಮಿಯೋ ಪಥಿಯ ಈ ಮೂಲಭೂತ ತತ್ತ್ವಕ್ಕನುಸಾರ ರೋಗಿಯಲ್ಲಿ ವಿವಿಧ ಲಕ್ಷಣಗಳು ಕಾಣಿಸುತ್ತಿದ್ದರೂ ರೋಗಿಯನ್ನು ಗುಣ ಪಡಿಸಲು ಒಮ್ಮೆ ಒಂದೇ ಔಷಧವನ್ನು ನೀಡಲಿಕ್ಕಿರುತ್ತದೆ. ಹೋಮಿಯೋಪಥಿಯಲ್ಲಿ ನೀಡುವ ಔಷಧಗಳನ್ನು ಮೊದಲು ಆರೋಗ್ಯವಂತ ವ್ಯಕ್ತಿಗೆ ಒಮ್ಮೆ ಒಂದೇ ಔಷಧವನ್ನು ನೀಡಿ ಔಷಧ
ದಿಂದ ಆ ವ್ಯಕ್ತಿಯಲ್ಲಿ ಯಾವ ಯಾವ ಲಕ್ಷಣಗಳು ಕಾಣಿಸುತ್ತವೆ ಎಂಬುದನ್ನು ಪರೀಕ್ಷಿಸಿ ಅದರ ನೋಂದಣಿಯನ್ನು ಮಾಡಿ, ಅವುಗಳನ್ನು ತಯಾರಿಸಲಾಗಿರುತ್ತದೆ. ಆದ್ದರಿಂದ ಅಂತಹ ಲಕ್ಷಣಗಳಿರುವ ಕಾಯಿಲೆ ಬಂದಾಗ ಆ ಒಂದೇ ಔಷಧವನ್ನು ನೀಡುವುದು ಅಪೇಕ್ಷಿತವಿರುತ್ತದೆ ಮತ್ತು ಒಂದೇ ಔಷಧ ನೀಡಿದರೆ ಸಾಕಾಗುತ್ತದೆ.
೩ ಇ. ಕನಿಷ್ಠ ಪ್ರಮಾಣದ ತತ್ತ್ವ (Law of Minimum) : ಈ ತತ್ತ್ವಕ್ಕನುಸಾರ ಶರೀರಕ್ಕೆ ತನ್ನನ್ನು ಗುಣಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕಾರ್ಯನಿರತಗೊಳಿಸಲು ಆವಶ್ಯಕವಿರುವ ಔಷಧವನ್ನು ಅತಿ ಕಡಿಮೆ ಪ್ರಮಾಣದಲ್ಲಿ ನೀಡಲಿಕ್ಕಿರುತ್ತದೆ. ಪರಿಣಾಮ ಕಾಣಿಸಲು ಆವಶ್ಯಕ ಹೋಮಿಯೋಪಥಿ ಔಷಧದ ಅತಿ ಕಡಿಮೆ ಪ್ರಮಾಣ, ಇದು ಯಾವುದೇ ಕಾಯಿಲೆಗೆ ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ ಪ್ರಮಾಣ (dose) ಆಗಿರು ತ್ತದೆ; ಏಕೆಂದರೆ ಹೊಮಿಯೋಪಥಿ ಔಷಧಿಯು ರೋಗವಾದ ಅವಯವಗಳ ಮೇಲೆ ಕಾರ್ಯವನ್ನು ಮಾಡುವುದಿಲ್ಲ, ಅದು ವ್ಯಕ್ತಿಯ ನಿಸ್ತೇಜವಾಗಿರುವ ಚೈತನ್ಯ ಶಕ್ತಿಯ (Vital Force) ಮೇಲೆ ಕಾರ್ಯವನ್ನು ಮಾಡುತ್ತದೆ. ಚೈತನ್ಯ ಶಕ್ತಿಯು ಮೊದಲಿ ನಂತೆ ಕಾರ್ಯನಿರತವಾಯಿತೆಂದರೆ ಅದು ತಾನಾಗಿ ಆ ವ್ಯಕ್ತಿಗೆ ವಿವಿಧ ಸ್ತರಗಳಲ್ಲಾದ ತೊಂದರೆಗಳನ್ನು ಸರಿ ಪಡಿಸುತ್ತದೆ. ಚೈತನ್ಯ ಶಕ್ತಿ ಕ್ರಿಯಾತ್ಮಕವಾಗಿರುತ್ತದೆ (dynamic) ಮತ್ತು ನೀಡಿರುವ ಹೋಮಿಯೋಪಥಿ ಔಷಧವೂ ಕ್ರಿಯಾತ್ಮಕವಾಗಿರುತ್ತದೆ. ಆದ್ದರಿಂದ ಹೋಮಿಯೋಪಥಿ ಚಿಕಿತ್ಸಾಪದ್ಧತಿಯಲ್ಲಿ ಔಷಧಿಯಿಂದ ಆ ರೋಗಿಯಲ್ಲಿ ಸುಧಾರಣೆಯಾಗಲು ಆವಶ್ಯಕ ಔಷಧಿಯನ್ನು ಅತ್ಯಲ್ಪ ಪ್ರಮಾಣದಲ್ಲಿ ನೀಡುವುದು ಅಪೇಕ್ಷಿತವಿರುತ್ತದೆ.
೩ ಈ. ಔಷಧವನ್ನು ಸಿದ್ಧಮಾಡುವ ತತ್ತ್ವ (Doctrine of Drug Proving) : ಹೋಮಿಯೋಪಥಿಯಲ್ಲಿನ ಎಲ್ಲ ಔಷಧಗಳನ್ನು ಆರೋಗ್ಯಶಾಲಿ ವ್ಯಕ್ತಿಗಳ ಮೇಲೆ ತಪಾಸಣೆ ಮಾಡಲಾಗುತ್ತದೆ. ಕಠಿಣ ನಿಯಮಗಳನ್ನು ಪಾಲಿಸಿ ಈ ತಪಾಸಣೆಯನ್ನು (called aproving) ಮಾಡಲಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳಿಗೆ (called prover) ಅವರಲ್ಲಿ ಔಷಧದ ಲಕ್ಷಣಗಳು ಕಾಣಿಸುವ ತನಕ ಪ್ರತಿದಿನ ಆ ಔಷಧವನ್ನು ನೀಡಲಾಗುತ್ತದೆ. ಯಾವಾಗ ತಪಾಸಣೆಯಲ್ಲಿ ಭಾಗವಹಿಸಿದ ವ್ಯಕ್ತಿಗಳಲ್ಲಿ ಹೊಸ ಲಕ್ಷಣಗಳು ಕಾಣಿಸುವುದು ನಿಲ್ಲುತ್ತದೆಯೋ ಆಗ ಅವರಿಗೆ ಔಷಧವನ್ನು ನೀಡುವುದನ್ನೂ ನಿಲ್ಲಿಸಲಾಗುತ್ತದೆ.
ಔಷಧಿ ಸೇವಿಸುವುದನ್ನು ನಿಲ್ಲಿಸಿದ ನಂತರ ಆ ಲಕ್ಷಣಗಳು ತನ್ನಿಂದತಾನೇ ನಿಲ್ಲುತ್ತವೆ ಅಥವಾ ಲಕ್ಷಣಗಳನ್ನು ನಿಲ್ಲಿಸಲು ಆ ಔಷಧದ ಪ್ರಭಾವವನ್ನು ತಗ್ಗಿಸುವ ಔಷಧವನ್ನು (antidote) ನೀಡಲಾಗುತ್ತದೆ. ಅನಂತರ ತಪಾಸಣೆಯಲ್ಲಿ ಭಾಗವಹಿಸಿದ ಪ್ರತಿ ಯೊಬ್ಬ ವ್ಯಕ್ತಿಯಲ್ಲಿ ನಿರ್ಮಾಣವಾದ ಲಕ್ಷಣಗಳ ಮಾಹಿತಿ ಯನ್ನು ಪಡೆದು ಅದರ ಸವಿಸ್ತಾರ ನೋಂದಣಿಯನ್ನು ಮಾಡಲಾಗುತ್ತದೆ. ಈ ಲಕ್ಷಣಗಳ ನೋಂದಣಿಯನ್ನು ‘ಔಷಧದ ಲಕ್ಷಣಗಳು’ ಎಂದು ಹೇಳಲಾಗುತ್ತದೆ. ಅವು ‘ಕಾಯಿಲೆಯ ಲಕ್ಷಣಗಳಲ್ಲ,’ ಎಂಬುದನ್ನು ಗಮನದಲ್ಲಿಡಬೇಕು. ಹೀಗೆ ಪ್ರತಿಯೊಂದು ತಪಾಸಣೆಯಿಂದ ಕೆಲವು ಒಂದೇ ರೀತಿಯ (ಕಾಮನ್) ಲಕ್ಷಣಗಳು ಕಾಣಿಸುತ್ತವೆ, ಅವು ಆ ಔಷಧದ ಗುಣಧರ್ಮದ ತಿರುಳಾಗಿರುತ್ತವೆ ಮತ್ತು ಅವು ಆ ಔಷಧದ ಅಭ್ಯಾಸದಲ್ಲಿ ಅತೀ ಹೆಚ್ಚು ಯೋಗದಾನ ನೀಡುತ್ತವೆ. ಕೆಲವು ವ್ಯಕ್ತಿಗಳಲ್ಲಿ ಬೇರೆಯೇ ಮತ್ತು ಕ್ಲಿಷ್ಟಕರ ಲಕ್ಷಣಗಳೂ ಕಾಣಿಸುತ್ತವೆ. ಅವುಗಳನ್ನೂ ನೋಂದಣಿ ಮಾಡಲಾಗುತ್ತದೆ. ಈ ಔಷಧದ ಲಕ್ಷಣಗಳೊಂದಿಗೆ, ಅಂದರೆ ಈ ಔಷಧದ ಗುಣಧರ್ಮ ಗಳೊಂದಿಗೆ ಸಾಮ್ಯವಿರುವ ಲಕ್ಷಣಗಳಿರುವ ಕಾಯಿಲೆ ಯಾರಿಗಾದರೂ ಆದಾಗ ಅವರಿಗೆ ಈ ಔಷಧವನ್ನು ನೀಡ ಬಹುದು. ಒಂದು ವೇಳೆ ಯಾವುದಾದರೊಂದು ಕಾಯಿಲೆ ಅಥವಾ ವ್ಯಾಧಿಯ ಲಕ್ಷಣಗಳು ಆ ಔಷಧದಿಂದ ನಿರ್ಮಾಣ ವಾಗುವ ಲಕ್ಷಣಗಳಿಗೆ ಹೊಂದಾಣಿಕೆಯಾಗುತ್ತಿದ್ದರೆ, ಆ ಔಷಧದಿಂದ ವ್ಯಕ್ತಿಯ ಆ ಕಾಯಿಲೆ ಸಂಪೂರ್ಣ ಗುಣವಾಗುತ್ತದೆ.
ಹೋಮಿಯೋಪಥಿಯ ಜನಕ ಡಾ. ಹಾನೆಮಾನ್ ಇವರು ತಮ್ಮ ಜೀವಮಾನದಲ್ಲಿ ಸುಮಾರು ೧೦೦ ಔಷಧಗಳನ್ನು ಈ ರೀತಿ ಸಿದ್ಧಪಡಿಸಿದರು. ಅವರ ನಂತರ ಅವರ ಅನುಯಾಯಿ ಗಳು ಅದನ್ನು ಮುಂದುವರಿಸಿದರು ಮತ್ತು ಈಗ ೪ ಸಾವಿರ ಕ್ಕಿಂತಲೂ ಹೆಚ್ಚು ಹೋಮಿಯೋಪಥಿ ಔಷಧಗಳನ್ನು ಸಿದ್ಧಪಡಿಸಲಾಗಿದೆ ಮತ್ತು ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ.
೩ ಉ. ಹಳೆಯ (ದೀರ್ಘಕಾಲದ) ಕಾಯಿಲೆಗಳ ಸಿದ್ಧಾಂತ (Theory of Chronic Diseases) : ಡಾ. ಹಾನೆಮಾನ್ ಇವರು ಸಮಾನತೆಯ ತತ್ತ್ವಕ್ಕನುಸಾರ ಔಷಧಗಳನ್ನು ನೀಡಲು ಆರಂಭಿಸಿದ ನಂತರ ಬಹಳಷ್ಟು ರೋಗಿಗಳ ಕಾಯಿಲೆ ತಕ್ಷಣ ಮತ್ತು ಸಂಪೂರ್ಣ ಗುಣವಾದವು, ಆದರೆ ಕೆಲವರ ವಿಷಯದಲ್ಲಿ ‘ಕಾಯಿಲೆಗಳು ಸ್ವಲ್ಪ ಸಮಯದ ನಂತರ ಮರುಕಳಿಸುತ್ತವೆ’, ಎಂಬುದು ಅವರ ಗಮನಕ್ಕೆ ಬಂದಿತು. ಆಗ ‘ಈ ಕಾಯಿಲೆಗಳು ಕಡಿಮೆ ಕಾಲಾವಧಿಯದ್ದಾಗಿರದೇ (acute) ದೀರ್ಘಕಾಲೀನ ಅಥವಾ ಹಳೆಯ (chronic) ಕಾಯಿಲೆ’, ಎಂಬುದನ್ನು ತಿಳಿದುಕೊಂಡು ‘ಇಂತಹ ಹಳೆಯ ಕಾಯಿಲೆ ಗಳಿಗಾಗಿ ಹೆಚ್ಚು ಆಳವಾಗಿ ಪರಿಣಾಮ ಬೀರುವ ವ್ಯಕ್ತಿ-ವಿಶಿಷ್ಟ (ಛಿಒಟಿಸ್ಣೈಣಉಣೈಒಟಿಚಿಟ) ಆಗಿರುವ ಔಷಧಗಳನ್ನು ನೀಡಬೇಕಾಗುತ್ತದೆ’, ಎಂಬ ನಿಷ್ಕರ್ಷಕ್ಕೆ ಅವರು ಬಂದರು. ವ್ಯಕ್ತಿ-ವಿಶಿಷ್ಟ ಔಷಧವನ್ನು ನೀಡಿದರೆ ಹಳೆಯ ಕಾಯಿಲೆಗಳಿಗೆ ಹೋಮಿಯೋಪಥಿ ಔಷಧ ಅತ್ಯಂತ ಗುಣಕಾರಿಯಾಗಿದೆ.
೩ ಊ. ಔಷಧದ ಗುಣಪ್ರಭಾವನ ಪದ್ಧತಿ (Doctrine of Drug Dynamisation) : ಹೋಮಿಯೋಪಥಿಯ ಔಷಧಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ, ಆದರೆ ಅವು ಯಾವ ನೈಸರ್ಗಿಕ ಸ್ಥಿತಿಯಲ್ಲಿ ಕಂಡುಬರುತ್ತವೆಯೋ, ಆ ಸ್ಥಿತಿಯಲ್ಲಿಯೇ ಅವುಗಳನ್ನು ಔಷಧಗಳೆಂದು ಉಪಯೋಗಿಸಲು ಬರುವುದಿಲ್ಲ. ಮೂಲ ನೈಸರ್ಗಿಕ ವಸ್ತುಗಳ ಗುಣಪ್ರಭಾವನ ಪ್ರಕ್ರಿಯೆ (dynamisation or potentisation) ಮಾಡಿದ ನಂತರ ಅವುಗಳಲ್ಲಿ ಮೂಲ ವಸ್ತುವಿನ ಸ್ಥೂಲ (crude) ಭಾಗ ಅತ್ಯಲ್ಪ ಪ್ರಮಾಣದಲ್ಲಿ ಉಳಿಯುತ್ತದೆ. ಅನಂತರ ಆ ಔಷಧಿಯ ಸಿದ್ಧಿಕರಣಕ್ಕಾಗಿ ಒಬ್ಬ ಆರೋಗ್ಯವಂತ ವ್ಯಕ್ತಿಗೆ ನೀಡಿದರೆ, ಅವನಲ್ಲಿ ಹೆಚ್ಚು ಸೂಕ್ಷ್ಮ (finer) ಲಕ್ಷಣಗಳು ಕಂಡುಬರುತ್ತವೆ. ಮರಳಿನಿಂದ ‘ಸಿಲಿಶಿಯಾ’, ಎಂಬ ಒಂದು ಮಹತ್ವದ ಔಷಧವನ್ನು ತಯಾರಿಸಲಾಗುತ್ತದೆ. ಆದರೆ ಯಾರಾದರೂ ಒಂದು ಮುಷ್ಟಿ ಮರಳನ್ನು ಸೇವಿಸಿದರೆ ಅದರಿಂದ ‘ಸಿಲಿಶಿಯಾ’ದ ಔಷಧಿಯ ಪರಿಣಾಮವಾಗುವುದಿಲ್ಲ. ಮರಳಿನಲ್ಲಿನ ಸುಪ್ತ ಔಷಧದ ಗುಣಧರ್ಮ ಪ್ರಕಟವಾಗಲು ಗುಣಪ್ರಭಾವನ ಪದ್ದತಿಯನ್ನು ಉಪಯೋಗಿಸಲಾಗುತ್ತದೆ .
೩ ಎ. ಚೈತನ್ಯಶಕ್ತಿಯ ಸಿದ್ಧಾಂತ (Theory of Vital Force) : ಹೋಮಿಯೋಪಥಿಗನುಸಾರ ವ್ಯಕ್ತಿಯ ಶರೀರದ ಕಾರ್ಯ ವನ್ನು ಮುಖ್ಯವಾಗಿ ಅವನಲ್ಲಿನ ಚೈತನ್ಯ ಶಕ್ತಿ (ಗೀಣಚಿಟ ಈಒಡಿಛಿಎ) ನಡೆಸುತ್ತದೆ. ಈ ಶಕ್ತಿಯ ಹೊರತು ವ್ಯಕ್ತಿ ಶವನಾಗುತ್ತಾನೆ. ಈ ನಿರಾಮಯ ಚೈತನ್ಯ ಶಕ್ತಿಯ ಮೇಲೆ ಕಾಯಿಲೆಯನ್ನುಂಟು ಮಾಡುವ ಘಟಕಗಳ ಪರಿಣಾಮವಾಗಿ ಚೈತನ್ಯ ಶಕ್ತಿಯು ನಿಸ್ತೇಜವಾಗುತ್ತದೆ. ಆದ್ದರಿಂದ ಶರೀರದ ವಿವಿಧ ಅವಯವಗಳ ಮತ್ತು ಸಂಸ್ಥೆಗಳ ಕಾರ್ಯ ಕುಸಿಯುತ್ತದೆ ಮತ್ತು ಕಾಯಿಲೆಯ ಸ್ಥಿತಿ ಉದ್ಭವಿಸುತ್ತದೆ. ಇದೊಂದು ಹೋಮಿಯೋಪಥಿಯ ಮಹತ್ವದ ಮೂಲಭೂತ ಸಿದ್ಧಾಂತ ಆಗಿರುವುದರಿಂದ ಕಾಯಿಲೆಯ ನಿರ್ಮಿತಿ ಮತ್ತು ಅದರ ಉಪಚಾರ ಪದ್ಧತಿಯಲ್ಲಿಯೂ ಈ ಸಿದ್ಧಾಂತಕ್ಕನುಸಾರ ವಿಚಾರ ಮಾಡಲಾಗುತ್ತದೆ. ಆದ್ದರಿಂದ ಹೋಮಿಯೋಪಥಿಯಲ್ಲಿ ರೋಗಕ್ಕೀಡಾದ ಅವಯವಗಳನ್ನು ಗುಣಪಡಿಸಲಿಕ್ಕಲ್ಲ, ಚೈತನ್ಯ ಶಕ್ತಿಯನ್ನು ಮೊದಲಿನಂತೆ ಮಾಡಲು ಔಷಧಗಳನ್ನು ನೀಡಲಾಗುತ್ತದೆ. ಮೊದಲಿನಂತೆ ಆಗಿರುವ ಚೈತನ್ಯ ಶಕ್ತಿಯೇ ಕಾಯಿಲೆಯನ್ನು ಉಂಟುಮಾಡುವ ಘಟಕಗಳ ಪ್ರಭಾವವನ್ನು ನಾಶಗೊಳಿಸಿ ಶರೀರವನ್ನು ಪುನಃ ಮೂಲ ಆರೋಗ್ಯ ಸ್ಥಿತಿಗೆ ತೆಗೆದುಕೊಂಡು ಬರುತ್ತದೆ.’
ತಜ್ಞ ವೈದ್ಯಕೀಯ ಸಲಹೆ ಅಥವಾ ಪೇಟೆಯಲ್ಲಿ ಔಷಧಗಳು ಲಭ್ಯವಿಲ್ಲದಿರುವಾಗ ಕೂಡ ತಮ್ಮ ಮೇಲೆ ಅಥವಾ ಇತರರ ಮೇಲೆ ಹೋಮಿಯೋಪಥಿ ಚಿಕಿತ್ಸಾಪದ್ಧತಿಗನುಸಾರ ಸ್ವಲ್ಪ ಮಟ್ಟಿಗಾದರೂ ಉಪಚಾರ ಮಾಡಲು ಸಾಧ್ಯವಾಗಬೇಕೆಂದು ಈ ಗ್ರಂಥವನ್ನು ರಚಿಸಲಾಗಿದೆ.
ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. ಸೌ. ಸಂಗೀತಾ ಭರಮಗುಡೆ
ಮುಂಬರಲಿರುವ ಗ್ರಂಥ ‘ಮನೆಯಲ್ಲಿಯೆ ಮಾಡುವ ‘ಹೋಮಿಯೋಪಥಿ’ ಉಪಚಾರ ! ಇದರಿಂದ ಆಯ್ದ ಅಂಶ ಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನದ ರೂಪದಲ್ಲಿ ಪ್ರಸಿದ್ಧ ಮಾಡಲಾಗುವುದು. ಆದ್ದರಿಂದ ಸಾಧಕರು, ವಾಚಕರು, ರಾಷ್ಟ್ರ ಮತ್ತು ಧರ್ಮಪ್ರೇಮಿಗಳು, ಹಿತಚಿಂತಕರು, ದಾನಿಗಳು ಈ ಲೇಖನವನ್ನು ಸಂಗ್ರಹದಲ್ಲಿಟ್ಟುಕೊಳ್ಳಬೇಕು. |