೭ ಸೆಪ್ಟಂಬರ್‌ ೨೦೨೩ ರಂದು ಮೊಸರು ಕುಡಿಕೆಯ ಹಬ್ಬ ಇದೆ. ಆ ನಿಮಿತ್ತ…..

‘ಮೊಸರುಕುಡಿಕೆಯನ್ನು ಒಡೆಯುವುದು ಅಥವಾ ಮೊಸರು, ಹಾಲು ಮತ್ತು ಬೆಣ್ಣೆಯನ್ನು ತೆಗೆದುಕೊಂಡು ಹೋಗುವ ಗೋಪಿಯರ ಮಡಕೆಗಳನ್ನು ಶ್ರೀಕೃಷ್ಣನು ಒಡೆಯುವುದು’, ಇದರ ಬಗ್ಗೆ ಶ್ರೀ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಅರಿವಾದ ಭಾವಾರ್ಥ !

‘ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್‌ |

ದೇವಕಿಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್‌ ||

ಅರ್ಥ : ವಸುದೇವನ ಪುತ್ರ; ಕಂಸ, ಚಾಣೂರ ಮುಂತಾದವರನ್ನು ನಾಶ ಮಾಡಿದ, ದೇವಕಿಮಾತೆಗೆ ಪರಮಾನಂದವನ್ನು ನೀಡಿದ ಮತ್ತು ಸಂಪೂರ್ಣ ಜಗತ್ತಿಗೆ ಗುರುಸ್ಥಾನದಲ್ಲಿರುವ ಭಗವಾನ ಶ್ರೀಕೃಷ್ಣನಿಗೆ ನಾನು ನಮಸ್ಕರಿಸುತ್ತೇನೆ. ಧರ್ಮವು ಹೇಳಿದ ಸಂಪ್ರದಾಯಗಳ ಬಗ್ಗೆ ಚಿಂತನೆ ಮಾಡಿದಾಗ ಪ್ರತಿಯೊಂದು ವಿಷಯದ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಅರ್ಥವು ಸಂಪೂರ್ಣವಾಗಿ ಅರ್ಥವಾಗುತ್ತದೆ ಮತ್ತು ಅನಂತರ ಧರ್ಮಾಚರಣೆಯು ಸುಲಭ ಮತ್ತು ಆನಂದ ದಾಯಕವಾಗುತ್ತದೆ. ಗೋಕುಲದ ಹಾಲು ಮಾರುವ ಹೆಂಗಸರು ಮತ್ತು ಗೋಪಿಯರು ಮಡಕೆಗಳಲ್ಲಿ ಹಾಲು, ಮೊಸರು, ಬೆಣ್ಣೆ ಯನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಆಗ ಬಾಲಕೃಷ್ಣನು ಆ ಮಡಕೆಗಳನ್ನು ಒಡೆದುಹಾಕುತ್ತಿದ್ದನು. ನನ್ನ ಮನಸ್ಸಿನಲ್ಲಿ ‘ಈ ಬಾಲಲೀಲೆಯ ಅರ್ಥವೇನು ? ಅಥವಾ ಜನ್ಮಾಷ್ಟಮಿಯಂದೇ ಮೊಸರುಕುಡಿಕೆಯನ್ನು ಒಡೆಯಲಾಗುತ್ತದೆ, ಇದರ ಭಾವಾರ್ಥವೇನು ?’, ಎಂಬ ಸುಪ್ತ ಪ್ರಶ್ನೆ ಇತ್ತು. ಒಂದು ಸಲ ‘ನಕೊ ವಾಜವು ಶ್ರೀಹರಿ ಮುರಲಿ’ (ಮುರಲಿಯನ್ನು ಬಾರಿಸದಿರು ಶ್ರೀಹರಿಯೇ) ಈ ಭಜನೆಯನ್ನು ಕೇಳುವಾಗ ಶ್ರೀ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಈ ಎಲ್ಲ ಪ್ರಶ್ನೆಗಳಿಗೆ ಆಧ್ಯಾತ್ಮಿಕ ಉತ್ತರಗಳು ದೊರಕಿದವು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

೧. ನಿಗೂಢ ಜ್ಞಾನದ ಸಂದೇಹ ನಿವಾರಿಸಿ ಜ್ಞಾನವನ್ನು ನೀಡುವ ಶ್ರೀ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘ಭಗವಾನ ಶ್ರೀಕೃಷ್ಣನು ಗೀತೆಯಲ್ಲಿ, ‘ಈ ನನ್ನ ಗುಪ್ತ ಜ್ಞಾನ ವನ್ನು (ಗೀತಾಸಾರ, ಗೀತಾಜ್ಞಾನ) ಇತರರಿಗೆ ಹೇಳುವ ನನ್ನ ಭಕ್ತನು ನನಗೆ ಹೆಚ್ಚು ಪ್ರಿಯನಾಗಿದ್ದಾನೆ’, ಎಂದು ಹೇಳಿದ್ದಾನೆ. ಪ್ರಸ್ತುತ ಭಗವದ್ಗೀತೆಯನ್ನು ಎಲ್ಲರೂ ಓದುತ್ತಾರೆ, ಅದನ್ನು ಇತರರಿಗೆ ಹಂಚುತ್ತಾರೆ ಅಥವಾ ಅದನ್ನು ಪಠಿಸುತ್ತಾರೆ ಸಹ; ಆದರೆ ಅದರಲ್ಲಿ ಶ್ರೀಕೃಷ್ಣನಿಗೆ ಅಪೇಕ್ಷಿತವಿರುವ ನಿಗೂಢ ಜ್ಞಾನವು ಎಲ್ಲರಿಗೂ ತಿಳಿಯುವುದು ಅಸಾಧ್ಯವಿದೆ. ಸ್ವತಃ ಶ್ರೀ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾವಿರಾರು ಸಾಧಕರ ಮಾಧ್ಯಮದಿಂದ ಅಧ್ಯಾತ್ಮದ ಹಲವು ನಿಗೂಢ ಜ್ಞಾನಗಳ ಸಂದೇಹ ನಿವಾರಿಸಿ ಅವುಗಳನ್ನು ಜಗತ್ತಿನೆದುರು ಇಟ್ಟಿದ್ದಾರೆ. ಶ್ರೀಕೃಷ್ಣನ ಬಾಲಲೀಲೆಗಳ, ಜನ್ಮಾಷ್ಟಮಿಯಂದು ಮೊಸರು ಕುಡಿಕೆಯನ್ನು ಒಡೆಯುವುದು ಮುಂತಾದ ಘಟನೆಗಳ ಬಗ್ಗೆ ಅವರು ಅರಿವು ಮಾಡಿಕೊಟ್ಟ ಭಾವಾರ್ಥವು ಕೆಳಗಿನಂತಿದೆ.

೨. ಮೊಸರು, ಹಾಲು ಅಥವಾ ಬೆಣ್ಣೆಯನ್ನು ತೆಗೆದುಕೊಂಡು ಹೋಗುವ ಗೋಪಿಯರ ಮಡಕೆಗಳನ್ನು ಭಗವಾನ ಶ್ರೀಕೃಷ್ಣನು ಒಡೆಯುವುದು ಅಥವಾ ಜನ್ಮಾಷ್ಟಮಿಯಂದು ಮೊಸರು ಕುಡಿಕೆಯನ್ನು ಒಡೆಯುವುದು

೨ ಅ. ಮಡಕೆ ಅಥವಾ ಕುಡಿಕೆ : ಆಧ್ಯಾತ್ಮಿಕ ದೃಷ್ಟಿ ಯಿಂದ ಜೀವಕ್ಕೆ (ಪ್ರಾಣಿಗೆ, ಮನುಷ್ಯನಿಗೆ) ‘ಘಟ’ ಎಂದು ಕರೆಯಲಾಗುತ್ತದೆ. ಘಟ-ಘಟಗಳಲ್ಲಿ ಅಂತರ್ಬಾಹ್ಯ ಚೈತನ್ಯಸ್ವರೂಪದಲ್ಲಿ ಶ್ರೀ ಸಚ್ಚಿದಾನಂದ ಪರಬ್ರಹ್ಮರು ವ್ಯಾಪಿಸಿ ದ್ದಾರೆ, ಹಾಗೆಯೇ ವ್ಯಾವಹಾರಿಕ ಜೀವನದಲ್ಲಿ ಘಟ ಎಂದರೆ ಗಡಿಗೆ, ಮಡಕೆ, ಕೊಡ ಅಥವಾ ಹಂಡೆ.

೨ ಆ. ವ್ಯವಹಾರದ ಹಾಲು, ಮೊಸರು ಅಥವಾ ಬೆಣ್ಣೆ ಈ ವಿವಿಧ ಸ್ಥಿತಿಗಳು ಇವು ಸಾಧಕನ ಸಾಧನೆಯ ಸ್ಥಿತಿಗಳ ಪ್ರತೀಕವಾಗಿರುವುದು : ವ್ಯಾವಹಾರಿಕ ದೃಷ್ಟಿಯಿಂದ ಬೆಣ್ಣೆಯನ್ನು ತೆಗೆಯುವ ಮೊದಲು ಹಾಲಿಗೆ ಹೆಪ್ಪು ಹಾಕಿ ಅದರಿಂದ ಮೊಸರನ್ನು ತಯಾರಿಸ ಲಾಗುತ್ತದೆ. ನಂತರ ಆ ಮೊಸರನ್ನು ಕಡೆಗೋಲಿನಿಂದ ಕಡೆದು ಮಜ್ಜಿಗೆಯನ್ನು ಮಾಡುವಾಗ ಬೆಣ್ಣೆಯು ಮೇಲೆ ಬರುತ್ತದೆ. ಸಾಧನೆಯಲ್ಲಿಯೂ ಶ್ರೀಗುರುಗಳು ವಿವಿಧ ಪ್ರಕ್ರಿಯೆಗಳ ಮೂಲಕ ಸಾಧಕನ ಮನಸ್ಸು, ಬುದ್ಧಿ ಮತ್ತು ಚಿತ್ತವನ್ನು ಕಡೆದು ಅವನನ್ನು ಸಾಧನೆಯ ವಿವಿಧ ಸ್ಥಿತಿಗಳಿಂದ ಕರೆದೊಯ್ಯುತ್ತಾರೆ. ಅದರಿಂದ ಕೊನೆಗೆ ಅವನಿಗೆ ಬೆಣ್ಣೆಯಂತೆ ಶುದ್ಧ, ಅಂದರೆ ಶುದ್ಧ ಚಿತ್ತದ ಒಂದು ದಿವ್ಯ ಸ್ಥಿತಿಯು ಪ್ರಾಪ್ತವಾಗುತ್ತದೆ. ಯಾವ ರೀತಿ ಪ್ರಸವವೇದನೆಯ ಅಗ್ನಿಪರೀಕ್ಷೆಯ ನಂತರ ಸ್ತ್ರೀಯರಲ್ಲಿ ವಾತ್ಸಲ್ಯವು ಉತ್ಪನ್ನವಾಗುತ್ತದೆಯೋ ಮತ್ತು ಅವಳಿಗೆ ಮಾತೃತ್ವವು ಲಭಿಸುತ್ತದೆಯೋ, ಅದೇ ರೀತಿ ಗುರುಗಳ ಮಾರ್ಗದರ್ಶನದಲ್ಲಿ ಸಮರ್ಪಿತ ಭಾವದಿಂದ ಶ್ರಮಿಸುವ ಸಾಧಕರಲ್ಲಿ ಭಾವಭಕ್ತಿಯು ಉದಯಿಸುತ್ತದೆ. ಮಗುವಿನ ಬಗ್ಗೆ ತಾಯಿಯ ಹೃದಯದಲ್ಲಿ ವಾತ್ಸಲ್ಯವು ಅಂಕುರಿಸಿ ತಾಯಿಯ ಸ್ತನಗಳಲ್ಲಿ ಹಾಲು ಉತ್ಪನ್ನವಾಗುವ ರೀತಿಯಲ್ಲಿ ಗುರುಗಳ ವಿಷಯದಲ್ಲಿ, ಭಗವಂತನ ವಿಷಯದಲ್ಲಿ ಸಾಧಕರ ಮನಸ್ಸಿನಲ್ಲಿ ಪ್ರೀತಿಯು ಉತ್ಪನ್ನವಾಗಿ ಅವರಲ್ಲಿ ಭಾವಭಕ್ತಿಯು ಮೊಳಕೆಯೊಡೆಯುತ್ತದೆ. ಹಾಲು ಸತ್ತ್ವಗುಣದ ಪ್ರತೀಕವಾಗಿದ್ದು, ಮೊಸರು ಸತ್ತ್ವಗುಣದ ಲಯದ ಆರಂಭವನ್ನು ದರ್ಶಿಸುವ, ಮತ್ತು ಬೆಣ್ಣೆಯು ಗುಣಾತೀತ ಸ್ಥಿತಿಯ ಪ್ರತೀಕವಾಗಿದೆ. ಸಾಧಕ ನಲ್ಲಿನ ಸತ್ತ್ವಗುಣದ ಲಯವಾಗಿ ಸಾಧಕನಿಗೆ ಗುಣಾತೀತ ಸ್ಥಿತಿಯು ಪ್ರಾಪ್ತವಾಗುವುದು, ಇದು ಸಾಧನೆಯ ಅಂತಿಮ ಸಾಧ್ಯವಾಗಿರುತ್ತದೆ. ಗೋಪಿಯರ ಮಡಕೆಗಳನ್ನು ಬಾಲಕೃಷ್ಣನು ಒಡೆಯುವುದು ಇದು ಒಂದು ರೀತಿಯಲ್ಲಿ ಗೋಪಿಯರನ್ನು (ಸಾಧಕರನ್ನು) ಸತ್ತ್ವಗುಣದಿಂದ ಮುಂದೆ ಗುಣಾತೀತ ಸ್ಥಿತಿಗೆ ಕರೆದುಕೊಂಡು ಹೋಗಿ ಅದ್ವೈತದ ಅನುಭೂತಿಯನ್ನು ನೀಡುವ ಆಧ್ಯಾತ್ಮಿಕ ಲೀಲೆಯ ಸಂಕೇತವಾಗಿದೆ.

೨ ಇ. ಗೋಪಿಯರು ಹಾಲು, ಮೊಸರು ಅಥವಾ ಬೆಣ್ಣೆ ಇವುಗಳ ಮಡಕೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುವುದು ಮತ್ತು ಶ್ರೀಕೃಷ್ಣನು ಅವುಗಳನ್ನು ಒಡೆಯುವುದು (ಅದೇ ರೀತಿ ಜನ್ಮಾಷ್ಟಮಿಯಂದು ಮೊಸರು ಕುಡಿಕೆಯನ್ನು ಒಡೆಯುವುದು) ಇದರ ಜೀವದ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಸ್ಥಿತಿ ಯೊಂದಿಗಿರುವ ಸಂಬಂಧ : ಗೋಪಿಯರು ಹಾಲು, ಮೊಸರು ಅಥವಾ ಬೆಣ್ಣೆ ಇವುಗಳ ಮಡಕೆಗಳನ್ನು ತಲೆಯ ಮೇಲಿಟ್ಟುಕೊಂಡು ಹೋಗುವುದು ಮತ್ತು ಶ್ರೀಕೃಷ್ಣನು ಅವುಗಳನ್ನು ಒಡೆಯುವುದು ಅಥವಾ ಜನ್ಮಾಷ್ಟಮಿಯಂದು ಮೊಸರುಕುಡಿಕೆಯನ್ನು ಒಡೆಯುವುದು ಇದು ಜೀವದ ಸಾಧನೆಯ ಪ್ರವಾಸದ, ಅಂದರೆ ಪೂರ್ಣತ್ವದ ಕಡೆಗೆ ಹೋಗುವ ವಿವಿಧ ಸತ್ತ್ವಗುಣಗಳಿಂದ ಗುಣಾತೀತ ಹಂತಗಳ ಪ್ರತೀಕವಾಗಿದೆ. ಜೀವವು ಅಧೋಮುಖಿ ಮತ್ತು ಪರಮಾತ್ಮನು ಊರ್ಧ್ವಮುಖಿಯಾಗಿರುತ್ತಾನೆ. ಆಧ್ಯಾತ್ಮಿಕ ದೃಷ್ಟಿಯಿಂದ ಮೊಸರು ಕುಡಿಕೆಯಲ್ಲಿ ಎರಡು ಘಟಗಳು (ಗಡಿಗೆಗಳು) ಇರುತ್ತವೆ. ಅದರಲ್ಲಿನ ಒಂದರ ಮುಖ ಕೆಳಗೆ, ಅಂದರೆ ಅಧೋಮುಖಿ ಇರುವ ಮತ್ತು ಇನ್ನೊಂದರ ಮೇಲೆ ಅಂದರೆ ಊರ್ಧ್ವಮುಖಿ ಇರುತ್ತದೆ. ಪರಮಾತ್ಮನ ಪ್ರತೀಕವಾಗಿರುವ ಊರ್ಧ್ವಮುಖಿ ಘಟದ ಪ್ರತೀಕವು ಮೊಸರುಗಡಿಗೆಯನ್ನು ಒಡೆಯಲು ಕಟ್ಟಿದ ಮಡಕೆ ಮತ್ತು ಮೊಸರು ಕುಡಿಕೆಯನ್ನು ಒಡೆಯುವವನು ಮುಮುಕ್ಷು (ಮನುಷ್ಯ) ಇವನು ಅಧೋಮುಖಿ ಘಟದ ಪ್ರತೀಕವಾಗಿದ್ದಾನೆ. ಅವುಗಳ ವರ್ಣನೆ ಮುಂದಿನಂತಿದೆ.

೨ ಇ ೧. ಮೊದಲ ಘಟ : ಇದು ಮೊಸರು ಕುಡಿಕೆಗಾಗಿ ಕಟ್ಟಿದ ಮಡಕೆ, ಅಂದರೆ ಪರಮಾತ್ಮನ ಪ್ರತೀಕವಾಗಿದೆ.

ಅ. ಭಾವಾರ್ಥ : ವ್ಯಾವಹಾರಿಕ ದೃಷ್ಟಿಯಿಂದ ಮೊಸರುಕುಡಿಕೆಗಾಗಿ ಗೋಪಾಲಕಾಲದ ಸಮಯದಲ್ಲಿ ತುಂಬಿದ ಮಡಕೆಯನ್ನು ಹಗ್ಗಕ್ಕೆ ಸ್ವಲ್ಪ ಎತ್ತರದಲ್ಲಿ ಕಟ್ಟಲಾಗುತ್ತದೆ. ಈ ಮಡಕೆಯ ಮುಖ ಊರ್ಧ್ವದಿಶೆಗೆ(ಕೆಳಮುಖ) ಇರುತ್ತದೆ. ಅದು ಎಂದರೆ ಅವತರಿಸಲು ಉತ್ಸುಕನಾಗಿರುವ ಸಚ್ಚಿದಾನಂದ ಪರಬ್ರಹ್ಮನ ಪ್ರತೀಕವಾಗಿದೆ. ಯಾವ ರೀತಿ ಘಟಸ್ಥಾಪನೆಯಂದು ನಾವು ಘಟದಲ್ಲಿ ಶಕ್ತಿಯ ಆವಾಹನೆ ಮಾಡುತ್ತೇವೆಯೋ, ಅದೇ ರೀತಿ ಮೊಸರುಕುಡಿಕೆಯಲ್ಲಿ ಪರಮಾತ್ಮನನ್ನು ಆವಾಹನೆ ಮಾಡ ಲಾಗುತ್ತದೆ. ಮೊಸರು ಕುಡಿಕೆಯನ್ನು ಒಡೆಯುವಾಗ ಆ ಮಡಕೆಯನ್ನು ಕೆಳಗಿನಿಂದ ಒಡೆಯಲಾಗುತ್ತದೆ. ಇದು ಭಕ್ತನಿಗೆ ಭಗವಂತನ ಕೆಳಗಿನ ಸ್ಥಿತಿಗೆ ಅವತರಿಸುವ ಸಂಕೇತವಾಗಿದೆ.ಇದು ಭಗವಂತನು ಭಕ್ತನಿರುವ ಸ್ಥಿತಿಗೆ ಅವತರಿಸುವುದರ ಸಂಕೇತವಾಗಿದೆ.

೨ ಇ ೨. ಎರಡನೇ ಘಟ : ಆಧ್ಯಾತ್ಮಿಕ ದೃಷ್ಟಿಯಿಂದ ಪ್ರತಿ ಯೊಂದು ಪ್ರಾಣಿಯ ದೇಹವನ್ನು ಘಟ ಎಂದು ತಿಳಿಯ ಲಾಗುತ್ತದೆ. ಆ ಪ್ರಾಣಿಯನ್ನು ಚೈತನ್ಯದಿಂದಾಗಿ ಜೀವಂತ ಎಂದು ತಿಳಿಯಲಾಗುತ್ತದೆ. ಮಾನವದೇಹವನ್ನು ‘ನವದ್ವಾರ ಪುರಿ’ ಎನ್ನಲಾಗುತ್ತದೆ. ಅದರ ದಶಮದ್ವಾರ ಎಂದರೆ ಬ್ರಹ್ಮ ರಂಧ್ರ ! ಅದನ್ನು ತೆರೆದಾಗ ಜೀವವು ಪರಮಾತ್ಮನೊಂದಿಗೆ ಮಿಲನವಾಗುತ್ತದೆ ಮತ್ತು ಜೀವವು ಜನ್ಮಮೃತ್ಯುವಿನ ಚಕ್ರಗಳಿಂದ ಬಿಡುಗಡೆ ಯಾಗುತ್ತದೆ. ಇದೇ ಅದ್ವೈತವಾಗಿದೆ. ಸಾಮಾನ್ಯವಾಗಿ ಮನುಷ್ಯರೂಪಿ ಘಟವು ಅಧೋಮುಖಿ (ಕೆಳಮುಖ) ಇರುತ್ತದೆ ಮತ್ತು ಬ್ರಹ್ಮರಂಧ್ರದ ದ್ವಾರವು ತೆರೆದ ನಂತರ ಅದು ಊರ್ಧ್ವಮುಖಿ (ಮೇಲ್ಮುಖ)ಯಾಗುತ್ತದೆ.

ಅ. ಭಾವಾರ್ಥ : ನಡುಮಧ್ಯದಲ್ಲಿ ಕಟ್ಟಿದ ಘಟವನ್ನು, ಅಂದರೆ ಮೊಸರುಕುಡಿಕೆಗಳನ್ನು ಅನೇಕ ಸ್ಥಳಗಳಲ್ಲಿ ಒಡೆಯಲಾಗುತ್ತದೆ; ಆದರೆ ‘ಮೊಸರುಕುಡಿಕೆಯನ್ನು ಒಡೆಯುವುದು’, ಆಧ್ಯಾತ್ಮಿಕ ದೃಷ್ಟಿಯಿಂದ ಮುಮುಕ್ಷುವಿಗೆ ಪರಮಾತ್ಮನ ಕೃಪೆಯ ಪ್ರಾಪ್ತಿಯ ಸಂಕೇತವಾಗಿದ್ದು ಅದನ್ನು ಒಡೆಯುವ ಸಾಧಕನಿಗೆ ಆನಂದಪ್ರಾಪ್ತಿ, ಅಂದರೆ ಈಶ್ವರಪ್ರಾಪ್ತಿಯಾದುದರ ದ್ಯೋತಕವಾಗಿದೆ.

ಸದ್ಗುರು (ಡಾ.) ಚಾರುದತ್ತ ಪಿಂಗಳೆ

೩. ‘ಹಾಲು, ಮೊಸರು ಅಥವಾ ಬೆಣ್ಣೆಯನ್ನು ತೆಗೆದುಕೊಂಡು ಹೋಗುವ ಗೋಪಿಯರ ಮಡಕೆಗಳನ್ನು ಶ್ರೀಕೃಷ್ಣನು ಒಡೆಯುವುದು’, ಇದರ ಭಾವಾರ್ಥ

೩ ಅ. ಶ್ರೀಕೃಷ್ಣನು ಗೋಪ-ಗೋಪಿಯರ (ಭಕ್ತರ) ಮಡಕೆಗಳನ್ನು ಒಡೆಯುವುದು, ಅಂದರೆ ದ್ವೈತವನ್ನು ನಾಶ ಮಾಡಿ ಅವರಿಗೆ ಅದ್ವೈತದ ಅನುಭೂತಿಯನ್ನು ನೀಡುವುದು : ಸಾಧಕರಿಗೆ, ಭಕ್ತರಿಗೆ ವ್ಯಷ್ಟಿ ಸ್ತರದಲ್ಲಿ ಆತ್ಮಸ್ವರೂಪದ ಅನುಭೂತಿ ಬಂದ ನಂತರವೂ ಸರ್ವವ್ಯಾಪಿ ಪರಮಾತ್ಮ ನೊಂದಿಗೆ ಏಕರೂಪತೆ ಯನ್ನು ಅನುಭವಿಸುವ ಅವರ ಪ್ರಕ್ರಿಯೆ ಮುಂದುವರೆದಿರುತ್ತದೆ. ಮೊಸರುಕುಡಿಕೆಯನ್ನು ಒಡೆದು ಭಗವಂತ ಅಥವಾ ಶ್ರೀ ಗುರುಗಳು ಶಿಷ್ಯನ ದ್ವೈತವನ್ನು ನಾಶ ಮಾಡಿ ಅದ್ವೈತ ಸ್ಥಿತಿ ಯಲ್ಲಿ ಸ್ಥಿರಗೊಳಿಸುತ್ತಾರೆ. ಈ ಪ್ರಕ್ರಿಯೆಗೆ ‘ಮಡಕೆ ಒಡೆಯಿತು (ಅಂತರ ಕೊನೆಗೊಂಡಿತು ಅಥವಾ ದ್ವೈತ ನಾಶವಾಯಿತು)’, ಎನ್ನುತ್ತಾರೆ. ಮೊಸರುಕುಡಿಕೆಯನ್ನು ಒಡೆಯುವುದು ಇದು ಪರಮಾತ್ಮನ ಪೂರ್ಣಕೃಪೆಯ ದ್ಯೋತಕವಾಗಿದೆ. ಪೂರ್ಣಕೃಪೆ ಯಾದುದರಿಂದ ಭಕ್ತನ ದಶಮದ್ವಾರವು (ಬ್ರಹ್ಮದ್ವಾರ) ತೆರೆದು ಭಕ್ತನಿಗೆ ಊರ್ಧ್ವಗತಿಯು ಲಭಿಸುತ್ತದೆ ಮತ್ತು ಅವನಿಗೆ ಏಕತ್ವದ, ಅಂದರೆ ಅದ್ವೈತದ ಅನುಭೂತಿ ಬರುತ್ತದೆ.

೩ ಆ. ಶ್ರೀಕೃಷ್ಣನು ಗೋಪ-ಗೋಪಿಯರ ಮಡಕೆಗಳನ್ನು ಒಡೆಯುವುದು, ಅಂದರೆ ಸಲೋಕ ಮುಕ್ತಿಯಿಂದ ಸಾಯುಜ್ಯ ಮುಕ್ತಿಯನ್ನು ಪ್ರದಾನಿಸುವುದು : ಅನೇಕ ಜನ್ಮಗಳಿಂದ ಭಗವದ್‌ ಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವ ಋಷಿಮುನಿಗಳು ಮಧುರಾ ಭಕ್ತಿಯ ಮೂಲಕ ಭಗವಂತನೊಂದಿಗೆ ಏಕರೂಪ ವಾಗಲು ಗೋಪ-ಗೋಪಿಯರ ರೂಪದಲ್ಲಿ ಅವತರಿಸಿದ್ದರು. ಭಗವಾನ ಶ್ರೀಕೃಷ್ಣನ ಬಾಲರೂಪದಲ್ಲಿ ಅವರ ಸಾನ್ನಿಧ್ಯದಲ್ಲಿದ್ದು ಸಲೋಕ, ಸಮೀಪ ಮುಕ್ತಿ ಮತ್ತು ನಂತರ ಭಗವಂತನಿಂದ ದೂರ ಮತ್ತು ವಿರಹದಲ್ಲಿದ್ದು ಸ್ವರೂಪ ಮತ್ತು ಸಾಯುಜ್ಯ ಮುಕ್ತಿ (ಭಗವಂತನೊಂದಿಗೆ ಏಕರೂಪತೆಯನ್ನು ಅನುಭವಿಸುವುದು)ಯನ್ನು ಪ್ರಾಪ್ತಮಾಡಿಕೊಳ್ಳುವುದಕ್ಕಾಗಿ ಅವರಿಗೆ ಈ ಜನ್ಮವು ಲಭಿಸಿತ್ತು. ಮಹಾಭಾರತದಲ್ಲಿ ಭಗವಂತನ ಲೀಲೆ ಯಲ್ಲಿ ‘ಶ್ರೀಕೃಷ್ಣನು ಅನುಕ್ರಮವಾಗಿ ಗೋಪ-ಗೋಪಿಯರ ಮಡಕೆ ಗಳನ್ನು ಒಡೆಯುವುದು, ಎಂದರೆ ಭಗವದ್‌ಕೃಪೆಯಿಂದ ಅವರ ದಶಮದ್ವಾರವನ್ನು ತೆರೆದು ಅವರ ದ್ವೈತಭಾವವನ್ನು ಲಯ ಗೊಳಿಸಿ ಅದ್ವೈತಾನುಭೂತಿಯನ್ನು ನೀಡಿದನು ಮತ್ತು ನಂತರ ಅವರು ಮಥುರೆಗೆ ಪ್ರಯಾಣ ಬೆಳೆಸಿದರು’, ಎಂಬ ಅರ್ಥ ವಾಗುತ್ತದೆ. ಸ್ವಲ್ಪದರಲ್ಲಿ ಶ್ರೀಕೃಷ್ಣನು ಗೋಪಿಯರಿಗೆ ಸಲೋಕ, ಸಮಿಪ ಮುಕ್ತಿಯಿಂದ ಈಗ ಸ್ವರೂಪ ಮತ್ತು ಸಾಯುಜ್ಯ ಮುಕ್ತಿಯನ್ನು ಪ್ರದಾನಿಸಿದನು.’

– ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೧೪.೯.೨೦೧೭)