ಅಮೇರಿಕಾದಲ್ಲಿನ ಜಾರ್ಜಿಯ ರಾಜ್ಯದಲ್ಲಿ ಅಕ್ಟೋಬರ್ ತಿಂಗಳು ‘ಹಿಂದೂ ಪರಂಪರೆಯ ತಿಂಗಳನ್ನು’ ಎಂದು ಘೋಷಣೆ !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಜಾರ್ಜಿಯ ರಾಜ್ಯದಲ್ಲಿ ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆಯ ತಿಂಗಳು’ ಎಂದೂ ಘೋಷಿಸಿದ್ದಾರೆ. ರಾಜ್ಯದಲ್ಲಿ ಹಿಂದೂ ನಾಗರೀಕರ ಕೊಡುಗೆ ನೋಡಿ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ದಸರಾ ಮತ್ತು ದೀಪಾವಳಿ ಹಬ್ಬಗಳು ಬರುವುದರಿಂದ ಜಾರ್ಜಿಯಾದಲ್ಲಿನ ಹಿಂದೂ ಸಂಘಟನೆಗಳು ಅನೇಕ ವರ್ಷದಿಂದ ಇದನ್ನು ಒತ್ತಾಯಿಸುತ್ತಿದ್ದರು.

೧. ಜಾರ್ಜಿಯಾದ ರಾಜ್ಯಪಾಲ ಬ್ರ್ಯನ್ ಕೆಮ್ಪ ಇವರು ಅಕ್ಟೋಬರ್ ತಿಂಗಳನ್ನು ‘ಹಿಂದೂ ಪರಂಪರೆಯ ತಿಂಗಳು’ ಎಂದೂ ಘೋಷಿಸುತ್ತಾ, ‘ಹಿಂದೂ ಪರಂಪರೆಯ ತಿಂಗಳು’ ಹಿಂದೂಗಳ ಸಂಸ್ಕೃತಿ ಮತ್ತು ಭಾರತದಲ್ಲಿನ ವಿವಿಧ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಗಮನಿಸಿ ಆಚರಿಸಲಾಗುತ್ತದೆ.
೨. ರಾಜ್ಯಪಾಲ ಬ್ರ್ಯನ್ ಕೆಮ್ಪ ಇವರು ಹಿಂದುಗಳ ಸಂಘಟನೆ ‘ಕೊಲಿಸನ್ ಆಫ್ ಹಿಂದೂ ಆಫ್ ನಾರ್ಥ್ ಅಮೇರಿಕಾ’ವು ಈ ಸಂದರ್ಭದಲ್ಲಿ ಆಭಾರ ವ್ಯಕ್ತಪಡಿಸುವ ಪತ್ರ ನೀಡಿದೆ. ಈ ಸಂಘಟನೆ, ಹಿಂದೂ ಧರ್ಮದಿಂದ ಅಮೇರಿಕಾಕ್ಕೆ ಸಾಂಸ್ಕೃತಿಕ ಸ್ತರದಲ್ಲಿ ಅಪಾರ ಕೊಡಿಗೆ ನೀಡಿದೆ. ಜಾರ್ಜಿಯ ಹಿಂದೂ ಮತ್ತು ಹಿಂದೂ ಧರ್ಮದ ಕೊಡುಗೆ ಅರಿತಿದೆ ಎಂದು ಹೇಳಿದೆ.