ಶೀಘ್ರದಲ್ಲಿ “ಎಕ್ಸ್” ನ ಮೂಲಕ ನಂಬರ್ ಇಲ್ಲದೇ ಆಡಿಯೋ ಮತ್ತು ವಿಡಿಯೋ ಕರೆ ಮಾಡಬಹುದು !

‘ಎಕ್ಸ್’ (ಹಿಂದಿನ ಟ್ವಿಟರ್)ನ ಮಾಲಿಕ ಎಲಾನ್ ಮಾಸ್ಕ್ ನ ಘೋಷಣೆ !

ನವ ದೆಹಲಿ – ಸಾಮಾಜಿಕ ಮಾಧ್ಯಮ “ಎಕ್ಸ್” (ಹಿಂದಿನ ಟ್ವಿಟರ್) ಕಂಪನಿಯ ಮಾಲೀಕ ಎಲಾನ್ ಮಸ್ಕ್ ಇವರು, ಶೀಘ್ರದಲ್ಲಿಯೇ ‘ಎಕ್ಸ್’ ಮೂಲಕ ಆಡಿಯೋ ಮತ್ತು ವಿಡಿಯೋ ಕರೆಗಳು ಲಭ್ಯವಾಗಲಿದೆ ಎಂದು ಘೋಷಿಸಿದ್ದಾರೆ. ಈ ಸೌಲಭ್ಯವು ಐಒಎಸ್, ಆಂಡ್ರಾಯ್ಡ್ ಮತ್ತು ಮ್ಯಾಕ್ ಸಿಸ್ಟಮ್ ಗಳಲ್ಲಿ ಲಭ್ಯವಿರುತ್ತದೆ. ಇದಕ್ಕಾಗಿ ಯಾವುದೇ ನಂಬರ್ ಅವಶ್ಯಕತೆ ಇರುವುದಿಲ್ಲ.