ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೊವ್ ಆರೋಪ !
ನವ ದೆಹಲಿ – ‘ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಹಾಳಾಗುತ್ತಿದೆ’, ಎಂದು ಭಾರತದಲ್ಲಿರುವ ರಷ್ಯಾದ ರಾಯಭಾರಿ ಡೆನಿಸ ಅಲಿಪೋವ್ ಇವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ. ಅಮೇರಿಕದ ಈ ಪ್ರಯತ್ನ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
( ಸೌಜನ್ಯ : WION)
ಡೆನಿಸ್ ಮುಂದೆ ಮಾತನಾಡುತ್ತಾ, ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್ ರವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ‘ಚಂದ್ರಯಾನ-೩’ ರ ಯಶಸ್ಸಿಗೆ ಅಭಿನಂದನೆ ಹೇಳಿದ್ದಾರೆ. ಭಾರತದೊಂದಿಗೆ ಬಾಹ್ಯಾಕಾಶ ಕಾರ‍್ಯಕ್ರಮ ನಡೆಸಲು ರಷ್ಯಾ ಯೋಜಿಸಿದೆ. ರಷ್ಯಾ ‘ಜಿ-೨೦’ ಶೃಂಗಸಭೆಯಲ್ಲಿ ಭಾರತದ ಆದ್ಯತೆಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಆಫ್ರಿಕಾ ದೇಶವನ್ನು ‘ಜಿ ೨೦’ ಶೃಂಗಸಭೆಗೆ ಸೇರಿಸುವ ನಿರ್ಧಾರವನ್ನು ರಷ್ಯಾ ಸಂಪೂರ್ಣ ಬೆಂಬಲಿಸುತ್ತದೆ ‘ಜಿ-೨೦’ ಗೆ ಉಕ್ರೇಅನ್ನು ಸೇರಿಸುವ ಬಗ್ಗೆ ನಿರ್ಮಾಣವಾದ ವಿವಾದದಿಂದ ಜಂಟಿ ಹೇಳಿಕೆ ಬಿಡುಗಡೆಗೆ ಅಡ್ಡಿಯಾಗಿದೆ. ಒಂದು ಕಡೆ ‘ಗಿ-೭’ ದೇಶಗಳಿದ್ದರೆ ಇನ್ನೊಂದು ಕಡೆ ರಷ್ಯಾ ಮತ್ತು ಚೀನಾ ಒಂದಾಗಿದೆ, ಪ್ರಸ್ತುತ ಚರ್ಚೆ ಸ್ಥಗಿತಗೊಂಡಂತೆ ತೋರುತ್ತಿದೆ. ಎಂದು ಹೇಳಿದರು.