ಕ್ಯಾಲಿಫೋರ್ನಿಯಾ ರಾಜ್ಯ (ಅಮೇರಿಕಾ) ಅಂಗೀಕರಿಸಿದ ಜಾತಿ ತಾರತಮ್ಯ ವಿರೋಧಿ ಮಸೂದೆಗೆ ಹಿಂದೂಗಳ ವಿರೋಧ!

ವಾಷಿಂಗ್ಟನ್ (ಅಮೆರಿಕಾ) – ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಶಾಸಕಾಂಗವು ಜಾತಿ ತಾರತಮ್ಯ ವಿರೋಧಿ ಮಸೂದೆಯನ್ನು ಅಂಗೀಕರಿಸಿದ ನಂತರ, ಹಿಂದೂ ಸಂಘಟನೆಯಾದ ‘ಎ ಕೊಯಲಿಷನ್ ಆಫ್ ಹಿಂದೂಸ್ ಆಫ್ ನಾರ್ಥ್ ಅಮೆರಿಕಾ (ಕೊಹ್ನಾ)’ ಇದನ್ನು ವಿರೋಧಿಸಿದೆ. “ಇದು ಕ್ಯಾಲಿಫೋರ್ನಿಯಾ ಇತಿಹಾಸದಲ್ಲಿ ಕರಾಳ ದಿನವಾಗಿದೆ. ಈ ಮಸೂದೆಯು ರಾಜ್ಯದ ಸಮಾನ ನಾಗರಿಕ ಹಕ್ಕುಗಳ ಕಾಯಿದೆ, ಶಿಕ್ಷಣ ಮತ್ತು ವಸತಿ ಕೋಡ್‌ಗಳನ್ನು ವಂಶಾವಳಿಯ ಅಡಿಯಲ್ಲಿ ಸಂರಕ್ಷಿತ ವರ್ಗವಾಗಿ ಸೇರಿಸಲು ತಿದ್ದುಪಡಿ ಮಾಡುತ್ತದೆ. ಈ ಮಸೂದೆಯು ಅಮೆರಿಕಾದಲ್ಲಿರುವ ಹಿಂದೂಗಳನ್ನು ಗುರಿಯಾಗಿಸುವ ಗುರಿ ಹೊಂದಿದೆ’, ಎಂದು ಸಂಘಟನೆ ಆರೋಪಿಸಿದೆ. ಈ ಮಸೂದೆಯನ್ನು ಅನುಮೋದಿಸುವ ಮೂಲಕ, ಕ್ಯಾಲಿಫೋರ್ನಿಯಾ ತನ್ನ ತಾರತಮ್ಯ-ವಿರೋಧಿ ಕಾನೂನುಗಳಲ್ಲಿ ಜನಾಂಗವನ್ನು ಸಂರಕ್ಷಿತ ವರ್ಗವಾಗಿ ಸೇರಿಸಿದ ಅಮೇರಿಕಾದ ಮೊದಲ ರಾಜ್ಯವಾಯಿತು. ಈ ಮಸೂದೆಯನ್ನು ಅಮೇರಿಕಾದ ಜನಾಂಗೀಯ ಸಮಾನತೆಯ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಸಂಸ್ಥೆಗಳು ಬೆಂಬಲಿಸಿವೆ.