ಇಸ್ರೋ ಯಶಸ್ಸಿನ ಶ್ರೇಯಸ್ಸು!

’ಚಂದ್ರಯಾನ-3’ ಚಂದ್ರನ ಮೇಲೆ ಇಳಿದಾಗಿನಿಂದ ದೇಶಾದ್ಯಂತ ಜನರಲ್ಲಿ ಸಂತಸ ಮೂಡಿದೆ. ವಿದೇಶದಲ್ಲಿರುವ ಭಾರತೀಯರೂ ಹೆಮ್ಮೆ ಪಡುತ್ತಿದ್ದಾರೆ. ಬಹಳಷ್ಟು ದೇಶಗಳು ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಭಾರತವನ್ನು ಅಭಿನಂದಿಸಿವೆ. ‘ಭಾರತ ಸಾಧಿಸಿರುವ ವಿಷಯ ಶ್ಲಾಘನೀಯವಾಗಿರುವುದರಿಂದ ಅದರ ಶ್ರೇಯಸ್ಸನ್ನು ತಾವು ಪಡೆಯಲು ಪ್ರಯತ್ನಿಸುವುದಿಲ್ಲ’ ಎಂದು ಭಾರತದಲ್ಲಿ ಎಂದಾದರೂ ಆಗುವುದೇ? ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ’ಇಸ್ರೋ’ ’ಚಂದ್ರಯಾನ-3’ ಅಭಿಯಾನವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಹಾಗಾಗಿ ಈ ಯಶಸ್ಸು ಇಸ್ರೋ ಸಂಸ್ಥೆಯದಾಗಿದೆ. ಈ ಸಾಧನೆಗೆ ಇಸ್ರೋದ ವಿಜ್ಞಾನಿಗಳು ಬಹಳಷ್ಟು ಕಷ್ಟ ಪಟ್ಟಿದ್ದಾರೆ ಮತ್ತು ಅದರ ಫಲ ಅವರಿಗೆ ಸಿಕ್ಕಿದೆ. 2019 ರಲ್ಲಿ ಚಂದ್ರಯಾನ-2 ರ ವಿಫಲತೆಯಿಂದ ಪುನಃ ಪ್ರಯತ್ನಿಸಿ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಪ್ರಯತ್ನಿಸುವ ಮೂಲಕ ಇಸ್ರೋ ಈ ಯಶಸ್ಸನ್ನು ಸಾಧಿಸಿದೆ. ಇದು ಹೆಚ್ಚು ಮಹತ್ವದ್ದಾಗಿದೆ. ಭಾರತದ ಜನರು ಇಸ್ರೋವನ್ನು ಹೊಗಳುತ್ತಿದ್ದಾರೆ. ದೇಶದ ಆಡಳಿತಾರೂಢ ಭಾಜಪ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯಶಸ್ಸಿನ ಶ್ರೇಯಸ್ಸನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಟೀಕಿಸಲು ಪ್ರಯತ್ನಿಸುತ್ತಿವೆ. ಚಂದ್ರಯಾನ-3 ಚಂದ್ರನ ಮೇಲೆ ಇಳಿದ ನಂತರ, ‘ನೆಹರೂ ಇಸ್ರೋಗೆ ಅಡಿಪಾಯ ಹಾಕಿದ್ದರಿಂದ ಇಂದು ನಮಗೆ ಈ ಯಶಸ್ಸು ಸಿಗುತ್ತಿದೆ’ ’ಈ ಯಶಸ್ಸಿನ ಹಿಂದೆ ಕಾಂಗ್ರೆಸ್ ಕೈವಾಡವಿದೆ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಧಾನಮಂತ್ರಿ ಮೋದಿಯವರು ಇದರ ಶ್ರೇಯಸ್ಸನ್ನು ತೆಗೆದುಕೊಳ್ಳಬಾರದು ಎಂದು ಹೇಳಲು ಪ್ರಯತ್ನಿಸಿದರು.

ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್

ಈ ಸಂದರ್ಭದಲ್ಲಿ ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇದು ಕಾಂಗ್ರೆಸ್‌ನ ನಿಜಸ್ವರೂಪ ಬಹಿರಂಗ ಪಡಿಸುತ್ತದೆ. ನಂಬಿ ನಾರಾಯಣನ್ ಮಾತನಾಡಿ, ’ಇಸ್ರೋದ ಆರಂಭದ ದಿನಗಳಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಆಗಿನ ಸರ್ಕಾರಗಳು ಆದ್ಯತೆ ನೀಡಲಿಲ್ಲ, ಆಗ ಇಸ್ರೋಗೆ ಸಿಗುತ್ತಿದ್ದ ಹಣವೂ ಅತ್ಯಂತ ಕಡಿಮೆಯಾಗಿತ್ತು. ಸಂಶೋಧನೆಗೆ ಚತುಷ್ಚಕ್ರ ವಾಹನಗಳೂ ಇರಲಿಲ್ಲ. ಒಂದೇ ಒಂದು ಬಸ್ ಇತ್ತು ಮತ್ತು ಅದು ಕೂಡ ಪಾಳಿಯಲ್ಲಿ (ಶಿಫ್ಟ್) ಸಂಚರಿಸುತ್ತಿತ್ತು. ಇದರಿಂದ ಸ್ಪಷ್ಟವಾಗುವುದೇನೆಂದರೆ ಕಾಂಗ್ರೆಸ್ ಈಗ ಯಾವ ಹೇಳಿಕೆಯನ್ನು ನೀಡುತ್ತಿದೆಯೋ, ಅದು ಸಾರಾಸಗಟು ಸುಳ್ಳಾಗಿದೆ. ನಂಬಿ ನಾರಾಯಣನ್ ಹೇಳಿರುವುದನ್ನು ಸಾಬೀತುಪಡಿಸಲು ಕೆಲವು ಸಾರ್ವಜನಿಕ ಪುರಾವೆಗಳಿವೆ. ಇದರಲ್ಲಿ ಇಸ್ರೋ ವಿಜ್ಞಾನಿಗಳು ಸೈಕಲ್ ಮತ್ತು ಎತ್ತಿನ ಗಾಡಿಗಳಲ್ಲಿ ರಾಕೆಟ್ ಭಾಗಗಳನ್ನು ಸಾಗಿಸುತ್ತಿರುವುದು ಕಾಣಿಸುತ್ತಿದೆ. ಆರಂಭದಲ್ಲಿ ಇಸ್ರೋ ವಿಜ್ಞಾನಿಗಳಿಗೆ ಕೇರಳದಲ್ಲಿ ಒಂದು ಗ್ರಾಮ ನೀಡಲಾಗಿತ್ತು. ಅಲ್ಲಿನ ಚರ್ಚ್ ಒಂದರಲ್ಲಿ ಅವರು ಸಂಶೋಧನಾ ಕೇಂದ್ರವನ್ನು ನಡೆಸುತ್ತಿದ್ದರು. ಇಲ್ಲಿಯೇ ವಿಕ್ರಮ್ ಸಾರಾಭಾಯ್ ಮೊದಲ ರಾಕೆಟ್ ಅನ್ನು ನಿರ್ಮಿಸಿದ್ದರು. ಒಂದು ವೇಳೆ ಆಗಿನ ಕಾಂಗ್ರೆಸ್ ಸರಕಾರಕ್ಕೆ ನಿಜವಾಗಿಯೂ ಇಸ್ರೋಗಾಗಿ ಅಥವಾ ಬಾಹ್ಯಾಕಾಶ ಸಂಶೋಧನೆಗಾಗಿ ಏನಾದರೂ ಮಾಡಬೇಕೆಂದು ಬಯಸಿದ್ದರೆ, ಇಸ್ರೋ ಗೆ ಅಂತಹ ಸ್ಥಿತಿ ಇರುತ್ತಿರಲಿಲ್ಲ. ಈ ಬಗ್ಗೆ ಕೆಲವರು, ’ಭಾರತ ಬಡ ರಾಷ್ಟ್ರವಾಗಿರುವುದರಿಂದ ಈ ರೀತಿಯ ಸಂಶೋಧನೆಗೆ ಹಣ ಎಲ್ಲಿಂದ ತರುತ್ತಾರೆ? ಈ ಬಗ್ಗೆ ಸರಕಾರ ಯೋಚಿಸಿರಬೇಕು’ಎನ್ನುತ್ತಾರೆ. ಭಾರತ ಇಂದಿಗೂ ಶ್ರೀಮಂತ ದೇಶವಲ್ಲ ಅಥವಾ ಅಭಿವೃದ್ಧಿ ಹೊಂದಿದ ದೇಶವೂ ಅಲ್ಲ, ಈಗ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ, ಭಾರತವು ಬಾಹ್ಯಾಕಾಶ ಅನ್ವೇಷಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ವಿಶೇಷವಾಗಿ, ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಭಾರತದಲ್ಲಿ ಬಾಹ್ಯಾಕಾಶ ಅಥವಾ ಒಟ್ಟು ಸಂಶೋಧನೆಯನ್ನು ನೋಡುವ ದೃಷ್ಟಿ ಬದಲಾಗಿದೆ. ಜಗತ್ತು ವಿಜ್ಞಾನದತ್ತ ಮುಖ ಮಾಡುತ್ತಿರುವ ವೇಗವನ್ನು ನೋಡಿದರೆ, ಭಾರತವು ಮುಂದೆ ಬರಲು ಅದರಡೆಗೆ ಗಮನಹರಿಸುವ ಆವಶ್ಯಕತೆ ನಿರ್ಮಾಣವಾಗಿದೆ ಮತ್ತು ಸಂಶೋಧನೆಯ ಮೇಲೆ ವೆಚ್ಚ ಮಾಡಲು ಹಣ ಒದಗಿಸಿದರೂ;ಅದು ಇತರೆ ದೇಶಗಳ ತುಲನೆಯಲ್ಲಿ ಅತ್ಯಲ್ಪವಿದೆ. 1975ರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಭಾರತ ಪರಮಾಣು ಬಾಂಬ್ ಪರೀಕ್ಷೆ ನಡೆಸಿತ್ತು. ಆದರೆ ಆ ನಂತರ ಭಾರತ ಯಾವತ್ತೂ ಅಣುಬಾಂಬ್ ತಯಾರಿಸಲಿಲ್ಲ. 1975 ರ ನಂತರ ನೇರವಾಗಿ, 1998 ರಲ್ಲಿ ಭಾರತವು ತನ್ನ ಎರಡನೇ ಪರಮಾಣು ಬಾಂಬ್ ಪರೀಕ್ಷೆಯನ್ನು ನಡೆಸಿತು. ಮಧ್ಯಂತರದ ಕಾಲಾವಧಿಯಲ್ಲಿ ಆಗಿನ ಸರ್ಕಾರಗಳು ಪರಮಾಣು ಬಾಂಬ್‌ಗೆ ಸಂಬಂಧಿಸಿದಂತೆ ಏಕೆ ಪ್ರಗತಿ ಸಾಧಿಸಲು ಪ್ರಯತ್ನಿಸಲಿಲ್ಲ ಹೀಗೇಕಾಯಿತು? ಎನ್ನುವುದನ್ನು ವಿಚಾರ ಮಾಡುವುದು ಆವಶ್ಯಕವಿದೆ. ಭಾರತ ಬಡ ದೇಶ ಎನ್ನುವುದು ಇಸ್ರೋ ಸಂಶೋಧಕರಿಗೂ ತಿಳಿದಿದೆ ಮತ್ತು ಅವರು ಇತರ ಅಮೇರಿಕಾ, ರಷ್ಯಾ, ಚೀನಾ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ’ಚಂದ್ರಯಾನ-3’ ಅಭಿಯಾನವನ್ನು ನಡೆಸಿದ್ದಾರೆ. ಇದರ ವಿಚಾರವನ್ನೂ ಮಾಡುವುದು ಆವಶ್ಯಕವಿದೆ. ಇತ್ತೀಚೆಗೆ ಪ್ರತಿಯೊಂದು ರಾಜಕೀಯ ಪಕ್ಷಗಳು ಮತ್ತು ನಾಯಕರು ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವಾಗ, ಭಾರತೀಯ ವಿಜ್ಞಾನಿಗಳು ಹಣವನ್ನು ಉಳಿಸುವುದು ಮತ್ತು ದೇಶದ ಹೆಸರನ್ನು ಜಗತ್ತಿನಾದ್ಯಂತ ತಲುಪಿಸುವುದು ಹೇಗೆ ಎಂದು ಯೋಚಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು.

ವಿಜ್ಞಾನಿಗಳನ್ನು ಪೀಡಿಸಿದ ಆಡಳಿತಗಾರರು!

ಕಾಂಗ್ರೆಸ್ ಶ್ರೇಯಸ್ಸನ್ನು ತೆಗೆದುಕೊಳ್ಳಲು ಯೋಚಿಸುತ್ತಿರುವಾಗ ಸ್ವತಃ ಆಡಳಿತಾವಧಿಯಲ್ಲಿ ಭಾರತೀಯ ವಿಜ್ಞಾನಿಗೆ ಹೇಗೆ ತೊಂದರೆ ಕೊಟ್ಟರು? ಅವರನ್ನು ಹೇಗೆ ಪೀಡಿಸಲಾಯಿತು ಎನ್ನುವ ವಿಷಯದ ಮೇಲೆಯೂ ಚರ್ಚಿಸುವ ಆವಶ್ಯಕತೆಯಿದೆ. ವಿಜ್ಞಾನಿ ನಂಬಿ ನಾರಾಯಣನ್ ರಾಕೆಟ್ ಉಡಾವಣೆಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಅಗತ್ಯವಿರುವ ’ಕ್ರಯೋಜೆನಿಕ್ ಎಂಜಿನ್’ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದರು. ಅಮೇರಿಕಾ ಈ ಎಂಜಿನ್ ಅನ್ನು ಭಾರತಕ್ಕೆ ನೀಡಲು ನಿರಾಕರಿಸಿತ್ತು. ನಂಬಿ ನಾರಾಯಣನ್ ಕೂಡ ಇಂಜಿನ್‌ಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗುವುದರಲ್ಲಿದ್ದರು; ಆದರೆ ಅದೇ ಸಮಯದಲ್ಲಿ, ಅವರ ವಿರುದ್ಧ ಸಂಚು ರೂಪಿಸಿ, ಅವರನ್ನು ದೇಶದ್ರೋಹದ ಸುಳ್ಳು ಅಪರಾಧದ ಅಡಿಯಲ್ಲಿ ಸಿಲುಕಿಸಿ ಅವರನ್ನು ಬಂಧಿಸಲಾಯಿತು ಮತ್ತು ಜೈಲಿಗೆ ಹಾಕಲಾಯಿತು. ಅವರನ್ನು ತೀವ್ರವಾಗಿ ಹಿಂಸಿಸಲಾಯಿತು. ಈ ಸಮಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿತ್ತು ಎಂಬುದನ್ನು ಗಮನಿಸಬೇಕು.
ಮುಂದೆ ಹಲವು ವರ್ಷಗಳ ವರೆಗೆ ಖಟ್ಲೆ ನಡೆದು ನ್ಯಾಯಾಲಯ ನಂಬಿ ನಾರಾಯಣನ್ ಅವರನ್ನು ನಿರ್ದೋಷಿಯೆಂದು ತೀರ್ಪು ನೀಡಿ ಆ ಖಟ್ಲೆಯಿಂದ ಖುಲಾಸೆಗೊಳಿಸಿ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತು. ಅವರನ್ನು ಸಂಚಿನಲ್ಲಿ ಸಿಲುಕಿಸಿದ್ದರಿಂದ ಭಾರತಕ್ಕೆ ದೊಡ್ಡ ನಷ್ಟವಾಯಿತು. ಯಾವ ಕ್ರಯೋಜೆನಿಕ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುವಲ್ಲಿ ನಂಬಿ ನಾರಾಯಣನ್ ಯಶಸ್ವಿಯಾಗಲಿದ್ದರೋ, ಅದನ್ನು ಮುಂದೆ ಅಭಿವೃದ್ಧಿಪಡಿಸಲು ಭಾರತಕ್ಕೆ ಹಲವು ವರ್ಷಗಳೇ ಬೇಕಾಯಿತು. ಇದರಿಂದ ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಅನೇಕ ವರ್ಷಗಳ ಕಾಲ ಹಿಂದುಳಿಯಿತು. ಆಗ ನಂಬಿ ನಾರಾಯಣನ್ ಯಶಸ್ವಿಯಾಗಿದ್ದರೆ, ಬಹುಶಃ ಭಾರತ ಈಗಾಗಲೇ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಿರುತ್ತಿತ್ತು ಅಥವಾ ಇನ್ನೂ ಅನೇಕ ಸಂಶೋಧನೆಗಳನ್ನು ಮಾಡಿರುತ್ತಿತ್ತು. ಈ ನಷ್ಟವು ನಂಬಿ ನಾರಾಯಣನ್ ಅವರ ವೈಯಕ್ತಿಕ ಜೀವನಕ್ಕಿಂತ ದೊಡ್ಡದಾಗಿದೆ ಮತ್ತು ಭರಿಸಲು ಆಗದಂತಹದು. ಈ ಬಗ್ಗೆ ಕಾಂಗ್ರೆಸಿಗರು ಹಾಗೂ ಇತರೆ ರಾಜಕೀಯ ಪಕ್ಷಗಳು ಬಾಯಿ ಬಿಡುತ್ತಿಲ್ಲ. ನಂಬಿ ನಾರಾಯಣನ್ ಅವರು ವ್ಯಕ್ತಪಡಿಸಿರುವ ವಿಚಾರಗಳನ್ನು ಗಮನಿಸಿದರೆ ಭಾರತ ಸರ್ಕಾರ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವಂತೆಯೂ ಕಾಣುತ್ತದೆ. ಭವಿಷ್ಯದಲ್ಲಿ ಭಾರತದ ಗಗನಯಾತ್ರಿ ಚಂದ್ರನ ಮೇಲೆ ಇಳಿಯುತ್ತಾನೆ ಎಂದು ಭಾರತೀಯರು ದೃಢನಿಶ್ಚಯವನ್ನು ಹೊಂದಬೇಕು ಎಂದು ಸಧ್ಯದ ಪರಿಸ್ಥಿತಿಯಿಂದ ತೋರುತ್ತದೆ. ಇಸ್ರೋದ ಯಶಸ್ಸಿನ ಶ್ರೇಯಸ್ಸನ್ನು ಪಡೆಯಲು ನೋಡುತ್ತಿರುವ; ಆದರೆ ಸ್ವತಃ ತನ್ನದೇ ಆಡಳಿತಾವಧಿಯಲ್ಲಿ ವಿಜ್ಞಾನಿಯನ್ನು ಜೈಲಿಗೆ ದೂಡುವ ಮೂಲಕ ದೇಶಕ್ಕೆ ಹಾನಿ ಮಾಡಿರುವ ಕಾಂಗ್ರೆಸ್!