‘ರಿಕ್ಲೆಮುಂಗ್ ಭಾರತ’ ಅತ್ಯಗತ್ಯ !

ಸುಮಾರು 2 ಶತಮಾನಗಳ ಹಿಂದೆ ಭಾರತವನ್ನು ‘ಸೋನೆ ಕಿ ಚಿಡಿಯಾ’ ಎಂಬ ಹೆಸರಿನಿಂದ ಗೌರವಿಸಲಾಯಿತು. ಪ್ರಪಂಚದ ಒಟ್ಟು ‘ಜಿಡಿಪಿ’ (ಒಟ್ಟು ದೇಶೀಯ ಉತ್ಪನ್ನ) ದ ಶೇ. 35 ರಷ್ಟು ಭಾಗ ಭಾರತದ್ದಾಗಿತ್ತು. ಇದು ಆರ್ಥಿಕ ವಲಯದಲ್ಲಿ ‘ಧಾರ್ಮಿಕ ಭಾರತ’ದ ಸಿಂಹಪಾಲು ತೋರಿಸುತ್ತದೆ. ದುರದೃಷ್ಟವಶಾತ್, ಇಂದು ಮನುಷ್ಯನ ನಾಲ್ಕು ಪುರುಷಾರ್ಥಗಳಲ್ಲಿ, ‘ಅರ್ಥ’ ವಿಶಿಷ್ಟವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿಯೊಂದು ಕ್ಷೇತ್ರವೂ ಅದು ರಾಜಕೀಯವಿರಲಿ ಕ್ರೀಡೆ, ಕಲೆ ಅಥವಾ ಶಿಕ್ಷಣ ಎಲ್ಲವೂ ಹಣ ಸಂಪಾದನೆಯ ಸುತ್ತ ಸುತ್ತುತ್ತಿದೆ. ಧರ್ಮವನ್ನು ಮರೆತು ತನ್ನ ಅಧಃಪತನ ಮಾಡಿಕೊಂಡ ಮನುಷ್ಯನು ಈ ಆಡಂಬರದಲ್ಲಿ ಸಿಲುಕಿರುವುದುದೇ ಇದಕ್ಕೆ ಕಾರಣಾವಗಿದೆ ! ಆದ್ದರಿಂದ, ಇಂತಹ ಪ್ರಕರಣಗಳು ಸ್ವಂತ ಹಣಕಾಸಿನ ಆಸಕ್ತಿಗಳನ್ನು ಹೇಗೆ ಸಾಧಿಸಬಹುದು ? ಇದನ್ನು ಕೇಲವ ರಾಜಕಾರಣಿಗಳು ಮಾತ್ರವಲ್ಲ, ಬದಲಾಗಿ ಹೆಚ್ಚಿನ ಜನರು ನಿರತರಾಗಿದ್ದಾರೆ. ಎಲ್ಲೆಲ್ಲೂ ಅನೈತಿಕತೆ ತಾಂಡವವಾಡುತ್ತಿದೆ, ಇದರ ಹಿಂದಿನ ಕಾರಣ ಇದೇ ಆಗಿದೆ ! ಹಾಗಾಗಿ ಪಾಶ್ಚಿಮಾತ್ಯರ ದುಸ್ಥಿತಿಯನ್ನು ನೋಡುವ ಅಗತ್ಯವಿಲ್ಲ, ಏಕೆಂದರೆ ನಮ್ಮ ಭಾರತದಲ್ಲೂ ಅದೇ ಸಂಭವಿಸಿದೆ. ಪ್ರಾಚೀನ ಭಾರತದ ಮಹತ್ವ ಇಲ್ಲಿ ಗಮನಕ್ಕೆ ಬರುತ್ತದೆ. ಪ್ರಾಚೀನ ಭಾರತವು ಧರ್ಮ ಮತ್ತು ಆಧ್ಯಾತ್ಮಿಕತೆಯ ಅಭ್ಯಾಸದ ಬಲದಿಂದ ಪ್ರಪಂಚದ ಔದ್ಯೋಗಿಕ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದೆ ! ಈ ಗುರಿಯನ್ನು ಇಟ್ಟುಕೊಂಡು, ಹಿಂದೂ ಸಂಘಟನೆ ‘ದಿ ಜೈಪುರ ಡೈಲಾಗ್ಸ್’ ಈ ವರ್ಷ ‘ರಿಕ್ಲೈಮಿಂಗ್ ಇಂಡಿಯಾ’ ಎಂಬ ವಿಷಯದೊಂದಿಗೆ 3 ದಿನಗಳ ಪರಿಷತ್ತನ್ನು ಆಯೋಜಿಸಿತ್ತು. ಈ ಸಂಘಟನೆಯನ್ನು ಅಭಿನಂದಿಸುವುದು ಭಾರತದ ಪ್ರತಿಯೊಬ್ಬ ಧರ್ಮಪ್ರೇಮಿ ಮತ್ತು ರಾಷ್ಟ್ರಪ್ರೇಮಿಗಳ ಕರ್ತವ್ಯವಾಗಿದೆ.

ಜ್ಞಾನ ಮತ್ತು ಸಂಘಟನೆ !

‘ದಿ ಜೈಪುರ ಡೈಲಾಗ್ಸ್’ ಈ ಹಿಂದೂಗಳ ಅಂತರಾಷ್ಟ್ರೀಯ ವೈಚಾರಿಕ ಉತ್ಸವವನ್ನು ಆಯೋಜಿಸಿದ್ದು ಇದು ಒಂಬತ್ತನೇ ವರ್ಷ ! ಕಾರ್ಯಕ್ರಮದ ಆರಂಭದಲ್ಲಿ ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ ಇವರ ಸುಭಹಸ್ತದಿಂದ ಉದ್ಘಾಟಿಸಿದರು. ಅವರು, “ಭಾರತದ ಪ್ರಾಚೀನ ಜ್ಞಾನ ಪರಂಪರೆ, ಇತಿಹಾಸ ಮತ್ತು ಸಂಸ್ಕೃತಿ ಶ್ರೀಮಂತವಾಗಿದೆ. ಭಾರತೀಯರು ಜ್ಞಾನಾರ್ಜನೆಗೆ ಸದಾ ಸಿದ್ಧರಿರುತ್ತಾರೆ ಮತ್ತು ನಾವು ಅದನ್ನು ಮುಂದುವರಿಸಬೇಕು” ಎಂದು ಹೇಳಿದರು. ಇಲ್ಲಿ ‘ವಿದ್ಯಾ ರಾಜಸು ಪೂಜ್ಯತೇ ನ ಹಿ ಧನಂ ವಿದ್ಯಾವಿಹೀನಃ ಪಶುಃ’ ಈ ಪ್ರಸಿದ್ಧ ಸಂಸ್ಕೃತ ಶ್ಲೋಕದ ನೆನಪಾಗುತ್ತದೆ ಇದರ ಅರ್ಥ ರಾಜಮನೆತನದಲ್ಲಿ ಜ್ಞಾನವು ಸದಾ ಪೂಜ್ಯನೀಯವಾಗಿದೆ – ಅಂದರೆ ಜ್ಞಾನ ರೂಪದ ಪ್ರಾಣಿಗೆ ಹೋಲಿಸಿದರೆ ಹಣಕ್ಕೂ ಯಾವುದೇ ಪ್ರಾಮುಖ್ಯತೆ ಇಲ್ಲ. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಪ್ರೀತಿಯ ಹಿರಿಯ ಪತ್ರಕರ್ತ ಭಾವು ತೋರ್ಸೇಕರ್ ಅವರು ವಿಶೇಷ ಅತಿಥಿಗಳಾಗಿ ಉದ್ಘಾಟನಾ ಅಧಿವೇಶನದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರನಿಷ್ಠ ಹಿಂದೂಗಳಿಗೆ ‘ಇಕೊಸಿಸ್ಟಂ’ ನಿರ್ಮಿಸಲು ಸದೃಢಗೊಳಿಸಲು ಕರೆ ನೀಡಿದರು. ಇಂದು, ನಮ್ಮ ದೇಶವು ‘ಡೀಪ್ ಸ್ಟೇಟ್’, ‘ಕಮ್ಯುನಿಸಮ್ ಇನ್ ವೋಸಿಸಂ’, ಇಸ್ಲಾಂ, ಕ್ರೈಸ್ತ ಪಂಥ ಇತ್ಯಾದಿಗಳಿಂದ ಸುತ್ತುವರೆದಿರುವಾಗ, ಜಾಗತಿಕ ‘ಹಿಂದು ಇಕೊಸಿಸ್ಟಂ’ಗೆ ಭಗೀರಥ ಪ್ರಯತ್ನ ಮಾಡಲು ಕಾಲದ ಬೇಡಿಕೆ ಇದೆ. ಭಾವು ತೋರ್ಸೇಕರ್ ಅವರ ಅನುಭವಗಳಿಂದ ಪ್ರಯೋಜನ ಪಡೆಯಬೇಕು. ಈ ಸಂದರ್ಭದಲ್ಲಿ ‘ದಿ ಜೈಪುರ ಡೈಲಾಗ್ಸ್’ ಅಧ್ಯಕ್ಷ ಸಂಜಯ ದೀಕ್ಷಿತ್ ಅವರು ಬರೆದ ‘ಕೃಷ್ಣ ಗೋಪೇಶ್ವರ್’ ಮತ್ತು ‘ಸರ್ವ ಪಂಥ್ ಏಕ್ ಸಮಾನ ನಹಿ’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.

‘ಫೆಕ್ ನರೆಟಿವ್’ಯೊಂದಿಗೆ ಸೆಟೆದು ನಿಲ್ಲುವುದು !

‘ಫೆಕ್ ನರೆಟಿವ್’ ಅಂದರೆ ಸುಳ್ಳು ಕಥೆಯನ್ನು ನಿರ್ಮಿಸಿ ಜಗತ್ತಿನೆಲ್ಲೆಡೆ ಹಿಂದೂಗಳ ಅಪಹಾಸ್ಯ ಮಾಡಲಾಗುತ್ತಿದೆ. ಇದರ ವಿರುದ್ಧ ಸೆಟೆದು ನಿಲ್ಲಲು ಹಿಂದೂ ಜಾಗೃತಿ ಅಗತ್ಯವಾಗಿದೆ. ಹಿಂದೂಗಳು ‘ಅನ್‌ಲರ್ನ್‌’ (ತಪ್ಪಾದ ವಿಷಯಗಳನ್ನು ಮರೆತುಬಿಡಬೇಕು) ಮತ್ತು ‘ರಿ-ಲರ್ನ್’ (ಸರಿಯಾದ ಜ್ಞಾನವನ್ನು ಕಲಿಸಬೇಕು). ಜಗತ್ತಿನಾದ್ಯಂತ ಹಿಮದು ವಿರೋಧಿ ವಾತಾವರಣವನ್ನು ನಿರ್ಮಾಮ ಮಾಡುವ ಬಿಬಿಸಿಯ ಮುಖವಾಡ ಕಳಚಲು ಬಹು ನಿರೀಕ್ಷಿತ ಸಾಕ್ಷ್ಯಚಿತ್ರ ‘ಬಿಬಿಸಿ ಆನ್ ಟ್ರಯಲ್’ ಮೂಲಕ ಇದನ್ನು ಸಾಧಿಸಲಾಗುವುದು. ಇದನ್ನು ಮೊದಲು ಈ ಕಾರ್ಯಕ್ರಮದ ವೇದಿಕೆಯಿಂದ ಪ್ರಸಾರ ಮಾಡಲಾಯಿತು. ‘ಗ್ಲೋಬಲ್ ಹಿಂದೂ ಫೆಡರೇಶನ್’ನ ಅಧ್ಯಕ್ಷ ಪಂಡಿತ ಸತೀಶ ಶರ್ಮಾ ಇವರು ಲಂಡನ್‌ನಿಂದ ಭಾರತಕ್ಕೆ ಬಂದಿದ್ದಾರೆ. ಇವರೊಂದಿಗೆ ‘ವಿಡಿಯೋ’ಗಳ ಮೂಲಕ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಷಡ್ಯಂತ್ರಗಳನ್ನು ಬಯಲಿಗೆಳೆದ ‘ರಾಷ್ಟ್ರನಿಷ್ಠ ಧ್ರುವ ರಾಠಿ’ ಎಂದೇ ಬಿಂಬಿಸಬಹುದಾದ ‘ಸ್ಟ್ರಿಂಗ್ ಜಿಯೋ’ದ ವಿನೋದ ಕುಮಾರ್ ಕೂಡ ಇದ್ದರು. ಹಿಂದೂ ಧರ್ಮಕ್ಕಾಗಿ ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಭಗೀರಥ ಪ್ರಯತ್ನಕ್ಕೆ ಈ ಸಾಕ್ಷ್ಯಚಿತ್ರವು ಉತ್ತಮ ಉದಾಹರಣೆಯಾಗಿದೆ.

‘ಕಾಶಿ ಮಥುರಾ ಹಿಂದೂ ನರೆಟಿವ್’ ಈ ಚರ್ಚಾಕೂಟದಲ್ಲಿ, ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಇವರು ಮಾತನಾಡಿ, “ದೇವಾಲಯವನ್ನು ಕೆಡವುವುದರಿಂದ ವಿಗ್ರಹದ ಅಸ್ತಿತ್ವವು ಕೊನೆಗೊಳ್ಳುವುದಿಲ್ಲ. ದೇವರು ಅಲ್ಲಿ ಪರೋಕ್ಷವಾಗಿ ವಾಸಿಸುತ್ತಾನೆ. ಮಸೀದಿಯನ್ನು ಸ್ಥಳಾಂತರಿಸಬಹುದು, ಆದರೆ ದೇವಾಲಯವಲ್ಲ.” ಎಂದು ಹೇಳಿದರು. ಹಿಂದೂಗಳಿಗೆ ದೇವಾಲಯಗಳು ಸರ್ವಸ್ವವೆಂದು ಜೈನ್ ಸೂಚಿಸಲು ಬಯಸುತ್ತಾರೆ. ಹಿಂದೂಗಳ ರಕ್ಷಣೆಯಾಗಬೇಕಾದರೆ, ಅವರಿಗೆ ಚೈತನ್ಯದ ಮಹಾನ ಶಕ್ತಿಯನ್ನು ಜಪಿಸಬೇಕು. ಈ ದೇವಾಲಯಗಳ ಮೇಲೆ ದಾಳಿ ನಡೆಸಿದವರ ಬಗ್ಗೆ ಸತ್ಯವನ್ನು ಬಹಿರಂಗಪಡಿಸುವಾಗ ಡಾ. ಕುಲದೀಪ ದತ್ತಾ ಇವರು ಮಾತನಾಡಿ, “ಹೆಚ್ಚಿನ ಮುಸ್ಲಿಮರಿಗೆ ಉರ್ದು ಅಥವಾ ಅರೇಬಿಕ್ ಬರಲ್ಲ, ಅಥವಾ ಅವರಿಗೆ ಕುರಾನ್ ಓದಲು ಬರಲ್ಲ. ಅವರು ಮೌಲ್ವಿಗಳ ಮಾತುಗಳನ್ನು ಮಾತ್ರ ಸರಿ ಎಂದು ಒಪ್ಪಿಕೊಳ್ಳುತ್ತಾರೆ.” ಎಂದು ಹೇಳಿದರು.

ಸರಕಾರದ ಸುಧಾರಣೆ

ಕಾರ್ಯಕ್ರಮದಲ್ಲಿ ಬಹಳ ಮುಖ್ಯವಾದ ಚರ್ಚಾಕೂಟ ಎಂದರೆ ‘ಡಿಕೊಲೊನೈಜಿಂಗ್ ಇಂಡಿಯಾ ಮೈಂಡ್’, ಅಂದರೆ ಭಾರತೀಯ ಮನಸ್ಸನ್ನು ವಸಾಹತುಶಾಹಿ ಮನಸ್ಥಿತಿಯಿಂದ ಹೊರ ತರುವುದು ! ಇದರಲ್ಲಿ ಸಂಕ್ರಾಂತ ಸಾನು ಬಹಳ ಖಾರವಾಗಿ ಹೇಳಿದರು, “ಕಳೆದ ಒಂದೂವರೆ ನೂರು ವರ್ಷಗಳಿಂದ ನಾವು ನಮ್ಮದೇ ಸಮಾಜದ ಸುಧಾರಣೆಯನ್ನು ಅನುಸರಿಸುತ್ತಿದ್ದೇವೆ. ವಾಸ್ತವವಾಗಿ, ನಮ್ಮ ಸಮಾಜವು ಪಶ್ಚಿಮಕ್ಕಿಂತ ಬಹಳ ಮುಂದಿದೆ. ನಮಗೆ ಬೇಕಿರುವುದು ಸಮಾಜ ಸುಧಾರಣೆಯಲ್ಲ, ಸರಕಾರದ ಸುಧಾರಣೆಬೇಕಿದೆ.” ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳ ಮೇಲಿನ ಎಲ್ಲಾ ಹಂತಗಳಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿರ್ಮೂಲನೆ ಮಾಡಬೇಕು. ಇದಕ್ಕಾಗಿ ಹಿಂದೂಗಳು ಹಿಂದೂ ಹಿತಾಸಕ್ತಿಗಳ ಪರವಾಗಿ ಸರಕಾರದ ಕಾನೂನುಗಳನ್ನು ತಿದ್ದುಪಡಿ ಮಾಡಬೇಕು ಎಂದು ಹೇಳಿದರು.

ರಾಜ್ಯ ಸರಕಾರಗಳು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರಬಹುದು; ಆದರೆ ದೇಶದ ಆಂತರಿಕ ಭದ್ರತೆಗಾಗಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕು. ದೇಶದ್ರೋಹಿಗಳು, ನುಸುಳುಕೋರರು ಹಿಂದೂಗಳ ಶಹಾಮೃಗ ಮನಸ್ಥಿತಿಯಿಂದ ಹೊರಬಂದು ಶತ್ರುಗಳಿಗೆ ಹೊರಗಿನ ಮಾರ್ಗವನ್ನು ತೋರಿಸಬೇಕಾಗಿದೆ ಎಂದು ಕೊನೆಯ ದಿನ ಹಿಂದುತ್ವನಿಷ್ಠ ಚಿಂತಕರು ಮಹತ್ವದ ಚಿಂತನೆಗಳನ್ನು ವ್ಯಕ್ತಪಡಿಸಿದರು.

ಮುಖ್ಯವಾಗಿ, ‘ಜೈಪುರ ಡೈಲಾಗ್ಜ್’ದಂತಹ ಕಾರ್ಯಕ್ರಮಗಳ ಪ್ರಬುದ್ಧ ಚಿಂತನೆಗಳನ್ನು ಹಿಂದೂಗಳು ಕೇಳಿ ಬಿಟ್ಟು ಬಿಡುವುದಿಲ್ಲವೇ ಎಂಬುದನ್ನು ನೋಡಬೇಕಾಗಿದೆ. ಈ ವಿಚಾರಗಳನ್ನು ಕಾರ್ಯರೂಪಕ್ಕೆ ತಂದರೆ, ಈ ಕಾರ್ಯಕ್ರಮದ ಉದ್ದೇಶ ಸಾಧ್ಯವಾಗಬಹುದು. ಪ್ರತಿಯೊಬ್ಬ ಹಿಂದೂ ತನ್ನ ಸಾಮರ್ಥ್ಯ, ಸ್ವಭಾವ ಮತ್ತು ಆಸಕ್ತಿಗೆ ಅನುಗುಣವಾಗಿ ಧರ್ಮದ ರಕ್ಷಣೆಯಲ್ಲಿ ತನ್ನನ್ನು ತಾನು ಸಿದ್ಧುಪಡಿಸಬೇಕು. ಸಾಮಾನ್ಯ ಹಿಂದೂಗಳ ಪ್ರಯತ್ನದ ಜೊತೆಗೆ, ಹಿಂದುತ್ವನಿಷ್ಠ ಸಂಘಟನೆಗಳು ಕೂಡ ಒಗ್ಗೂಡಿ ಈ ಕಾರ್ಯಕ್ರಮಗಳನ್ನು ಆಯೋಜಿಸಲು ಸೀಮಿತವಾಗದೆ ಹಿಂದೂಗಳ ರಕ್ಷಣೆಗಾಗಿ ಸಾರ್ವತ್ರಿಕ ‘ಹಿಂದು ಇಕೊಸಿಸ್ಟಂ’ನ ನಿರ್ಣಾಯಕ ಹೆಜ್ಜೆ ಇಡಬೇಕು ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು !