ನಿರ್ಣಾಯಕ ‘ಬಿಬಿಸಿ ಟ್ರಯಲ್’ !

ಭಾರತ ಮತ್ತು ಹಿಂದೂಗಳ ಬಗ್ಗೆ ನರನಾಡಿಗಳಲ್ಲಿ ದ್ವೇಷ ತುಂಬಿರುವ ಅಂತಾರಾಷ್ಟ್ರೀಯ ವಾರ್ತಾವಾಹಿನಿಯ ಇನ್ನೊಂದು ಹೆಸರೇ ‘ಬಿ.ಬಿ.ಸಿ. (ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌)’ ! ಅದೇ ರೀತಿ ‘ದ ಗಾರ್ಡಿಯನ್‌’, ‘ನ್ಯೂಯಾರ್ಕ್ ಟೈಮ್ಸ್‌’, ‘ವಾಷಿಂಗ್ಟನ್‌ ಪೋಸ್ಟ್‌’, ‘ಟೈಮ್‌’, ‘ಅಲ್‌ ಜಝೀರಾ’ ಮುಂತಾದ ಪಾಶ್ಚಿಮಾತ್ಯ ಪ್ರಸಾರ ಮಾಧ್ಯಮಗಳು ಸಹ ಇದೇ ರೀತಿ ಇವೆ; ಆದರೆ ‘ಬಿಬಿಸಿ’ ಇದು ಅದರ ಶಿಖರದಲ್ಲಿದೆ. ಭಾರತದ ಕುರಿತು ಸುಳ್ಳು ಕಥೆಗಳನ್ನು ಮಂಡಿಸುವುದಕ್ಕಾಗಿ ವೈಚಾರಿಕ ವಿಷಬೀಜ ಬಿತ್ತುವಲ್ಲಿ ‘ಬಿಬಿಸಿ’ ಮುಂಚೂಣಿಯಲ್ಲಿದೆ. ಭಾರತ ಎಂದರೆ ಬಡವರ, ನಿರ್ಗತಿಕರ ಮತ್ತು ‘ರಾಕ್ಷಸೀ ಧರ್ಮ’ದವರ (ಸನಾತನ ಧರ್ಮದವರ) ದೇಶವಾಗಿದೆ, ಈ ರೀತಿ ವಿಕೃತ ಮತ್ತು ನಿರಾಧಾರ ಚಿತ್ರಣ ಬಣ್ಣಿಸುತ್ತಾ ಬಂದಿದೆ. ‘ಬಿಬಿಸಿ’ ೧೦೨ ವರ್ಷಗಳ ಹಿಂದೆ ಹುಟ್ಟಿತ್ತು. ಈ ಅಂತಾರಾಷ್ಟ್ರೀಯ ವೈಚಾರಿಕ ಗೂಂಡಾನ ಬಗ್ಗೆ ಇಲ್ಲಿ ಉಲ್ಲೇಖಿಸುವ ಕಾರಣವೆಂದರೆ ಈ ವಾರ್ತಾವಾಹಿನಿಯ ಮನಸ್ಸಿನ ಸ್ಥಿತಿಯನ್ನು ಬಯಲಿಗೆಳೆಯುವ ‘ಡಾಕ್ಯುಮೆಂಟ್ರಿ’ಯು ಅಕ್ಟೋಬರ್‌ ೨೫ ರಂದು ಜಗತ್ತಿನಾದ್ಯಂತ ಪ್ರಸಾರವಾಯಿತು.

‘ಬಿಬಿಸಿ ಆನ್‌ ಟ್ರಯಲ್’ (‘ಬಿಬಿಸಿ’ಯ ವಿರುದ್ಧ ಮೊಕದ್ದಮೆ) ಎಂಬ ಹೆಸರಿನಲ್ಲಿರುವ ಡಾಕ್ಯುಮೆಂಟ್ರಿಯಲ್ಲಿ ‘ಬಿಬಿಸಿ’ಯ ಭಾರತದ ವಿರುದ್ಧದ ಅಪಪ್ರಚಾರಗಳ ಬಹಳ ಅಭ್ಯಾಸಪೂರ್ಣ ಚಿತ್ರಣವಿದೆ. ‘ಗ್ಲೋಬಲ್‌ ಹಿಂದೂ ಫೌಂಡೇಶನ್‌’, ‘ಪ್ರಾಚ್ಯಮ್‌’, ‘ಸ್ಟ್ರಿಂಗ್‌ ಜಿಯೋ’ ಮತ್ತು ‘ಜೈಪುರ್‌ ಡೈಲಾಗ್ಸ್‌’ ಈ ಹಿಂದುತ್ವನಿಷ್ಠ ಆನ್‌ಲೈನ್‌ ವಾಹಿನಿಗಳಿಂದ ‘ಬಿಬಿಸಿ ಆನ್‌ ಟ್ರಯಲ್’ ಆಂಗ್ಲ ಭಾಷೆಯಲ್ಲಿ ಪ್ರದರ್ಶನವಾಯಿತು. ಶೀರ್ಘದಲ್ಲೇ ಹಿಂದಿ, ತಮಿಳು, ಮರಾಠಿ ಮುಂತಾದ ಭಾರತೀಯ ಭಾಷೆಗಳಲ್ಲಿ ಕೂಡ ಅದನ್ನು ಅನುವಾದ ಮಾಡಿರುವ ಆವೃತ್ತಿ ಪ್ರಸಾರವಾಗುವುದು.

ತೀವ್ರ ಭಾರತದ್ವೇಷ !

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಯಾವ ‘ಡೀಪ್‌ ಸ್ಟೇಟ್’ ಸಕ್ರಿಯವಾಗಿದೆ, ಅದರಲ್ಲಿ ಬಿ.ಬಿ.ಸಿ. ಒಂದು ಮಹತ್ವದ ಪಾತ್ರ ವಹಿಸುತ್ತದೆ. ಭಾರತದ, ಅಂದರೆ ಹಿಂದೂಗಳ ವಿರುದ್ಧ ‘ಬಿ.ಬಿ.ಸಿ.’ ಇದು ‘ಗೋಬೆಲ್‌ ನೀತಿ’ಯನ್ನು ಅನುಸರಿಸಿ ಜಗತ್ತಿಗೆ ‘ಭಾರತದಲ್ಲಿರುವ ಹಿಂದೂಗಳು ಹೇಗೆ ಮುಸಲ್ಮಾನದ್ವೇಷಿ, ಹಿಂಸಾಚಾರಿಗಳು ಮತ್ತು ಅಸಹಿಷ್ಣು ಆಗಿದ್ದಾರೆ’, ಎಂಬ ಚಿತ್ರಣವನ್ನು ಮೂಡಿಸಲು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ. ಹಾಗೆ ನೋಡಿದರೆ ‘ಬಿಬಿಸಿ’ಯ ಈ ದ್ವೇಷಭರಿತ ವಾರ್ತೆಗಳ ಬಗ್ಗೆ ಅನೇಕ ದಶಕಗಳ ಇತಿಹಾಸವಿದೆ.

೧೯೭೦ ರಲ್ಲಿ ಅದು ಭಾರತದ ಕುರಿತು ‘ಫಂಟಮ್‌ ಇಂಡಿಯಾ’ ಮತ್ತು ‘ಕ್ಯಾಲಕಟ’ ಈ ಹೆಸರಿನಿಂದ ಎರಡು ‘ಡಾಕ್ಯುಮೆಂಟ್ರೀಜ್’ ಪ್ರಸಾರ ಮಾಡಿತ್ತು. ಅದರಲ್ಲಿ ಭಾರತದಲ್ಲಿನ ದಾರಿದ್ರ್ಯ ಮತ್ತು ದೇಶದ ನಿರಾಶಾವಾದಿ ಚಿತ್ರಣ ಬಿಂಬಿಸಲಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ೨೫ ವರ್ಷ ಕಳೆದಿತ್ತು. ಭಾರತ ಬಹಳ ಪ್ರಗತಿ ಸಾಧಿಸಿತ್ತು, ಆದರೂ ಅದರ ಇಲ್ಲಸಲ್ಲದ ವಿಕೃತ ಮತ್ತು ಪೂರ್ವಗ್ರಹಪೀಡಿತ ರೂಪ ಚಿತ್ರಿಸಲು ‘ಬಿಬಿಸಿ’ ಪ್ರಯತ್ನಿಸಿತು. ಕಾಶ್ಮೀರದ ಬಗ್ಗೆ ‘ಬಿಬಿಸಿ’ಯ ಭಾರತವಿರೋಧಿ ನಿಲುವಿನ ಬಗ್ಗೆ ಎಲ್ಲರಿಗೂ ತಿಳಿದಿದೆ, ಅದರಲ್ಲಿ ಪಾಕಿಸ್ತಾನ ಮತ್ತು ಜಿಹಾದಿ ಭಯೋತ್ಪಾದಕರ ಪರವಾಗಿ ಅದು ಅತ್ಯಂತ ಪಕ್ಷಪಾತದಿಂದ ವರದಿ ಮಾಡುತ್ತದೆ. ೧೯೯೫ ರಲ್ಲಿ ಜಿಹಾದಿ ಭಯೋತ್ಪಾದಕರು ಕಾಶ್ಮೀರದ ‘ಚರಾರ-ಎ-ಶರೀಫ್‌’ನ್ನು ಗುರಿ ಮಾಡಿ ಅದನ್ನು ಸುಟ್ಟು ಹಾಕಿದ್ದರು. ಆದರೆ ‘ಬಿಬಿಸಿ’ಯು ಅದರ ವಾರ್ತೆ ತೋರಿಸುವಾಗ ಚೆಚನಿಯದಲ್ಲಿ ರಷ್ಯಾದ ಟ್ಯಾಂಕರ್‌ ಮೇಲೆ ಕಾರ್ಯಾಚರಣೆ ಮಾಡುತ್ತಿರುವ ವಿಡಿಯೋ ಪ್ರಸಾರಗೊಳಿಸಿತ್ತು. ಇದರಿಂದ ಭಯೋತ್ಪಾದಕರಲ್ಲ, ಬದಲಾಗಿ ಭಾರತದ ಸೈನ್ಯವು ‘ಚರಾರ-ಎ-ಶರೀಫ’ ಮೇಲೆ ದಾಳಿ ನಡೆಸಿದೆ ಎಂದು ತೋರಿಸಲಾಯಿತು.

‘ಬಿಬಿಸಿ’ಯ ಸುಳ್ಳುತನವನ್ನು ಅಂದಾಜಿಸಲು ಇದೊಂದು ಉದಾಹರಣೆ ಸಾಕಾಗಿದೆ. ಪತ್ರಕರ್ತೆ ಮತ್ತು ಲೇಖಕಿ ಅಶಾಲಿ ವರ್ಮಾ ಇವರು, ‘ನಾನು ಒಮ್ಮೆ ಕೆಲಸಕ್ಕಾಗಿ ಭಾರತದಲ್ಲಿನ ‘ಬಿಬಿಸಿ’ಯ ಪತ್ರಕರ್ತರ ಕಕ್ಷೆಗೆ ಹೋಗಿದ್ದೆ. ಅಲ್ಲಿ ಉಪಸ್ಥಿತ ಪತ್ರಕರ್ತರ ಸಮೂಹವು ಹತ್ಯೆ, ಬಲಾತ್ಕಾರ ಅಥವಾ ಹಿಂಸಾಚಾರ ಇದಕ್ಕೆ ಸಂಬಂಧಪಟ್ಟ ಘಟನೆಗಳನ್ನು ಹುಡುಕುವುದರಲ್ಲಿ ಮಗ್ನವಿತ್ತು.’ ೧೪೦ ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಇಂತಹ ನಕಾರಾತ್ಮಕ ಘಟನೆಗಳನ್ನು ಹುಡುಕುವುದರಲ್ಲಿ ತಲ್ಲೀನವಾಗಿರುವ ಈ ಅಂತಾರಾಷ್ಟ್ರೀಯ ವಾರ್ತಾವಾಹಿನಿಯ ವೈಚಾರಿಕ ಮಟ್ಟವನ್ನು ತಿಳಿಯಲು ಇದೊಂದು ಉದಾಹರಣೆ !’ ಎಂದು ಹೇಳಿದರು. ೨೦೦೨ ರಲ್ಲಿ ಗೋಧ್ರಾ ಹತ್ಯಾಕಾಂಡವನ್ನು ನಿರ್ಲಕ್ಷಿಸಿ ಅದರ ನಂತರ ಭುಗಿಲೆದ್ದ ಗಲಭೆಯ ಬಗ್ಗೆ ಕೋಲಾಹಲವೆಬ್ಬಿಸಿ ಮತ್ತು ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರ ಬಗ್ಗೆ ದುರುದ್ದೇಶಪೂರಿತ ಕೆಸರೆರಚುವುದು ಇರಬಹುದು ಅಥವಾ ೨೦೧೨ ರಲ್ಲಿ ದೆಹಲಿಯ ನಿರ್ಭಯಾ ಬಲಾತ್ಕಾರ ಮತ್ತು ಹತ್ಯಾಕಾಂಡದಿಂದ ಇಡೀ ದೇಶ ಒಗ್ಗೂಡಿದಾಗ ಬಲಾತ್ಕಾರಿಯನ್ನು ವೈಭವೀಕರಿಸುವುದು ಹಾಗೂ ‘ದೆಹಲಿ ಇದು ಜಗತ್ತಿನ ಬಲಾತ್ಕಾರದ ರಾಜಧಾನಿ’ ಎಂದು ಅಣಕಿಸಿದ್ದು ಸಹ ಇದೇ ‘ಬಿಬಿಸಿ’ !

ಭಾರತದ್ವೇಷದಿಂದ ಕೂಡಿರುವ ‘ಬಿಬಿಸಿಯ’ ಸತ್ಯ ಸ್ವರೂಪವನ್ನು ಈ ‘ಡಾಕ್ಯುಮೆಂಟ್ರಿ’ಯಿಂದ ಜಗತ್ತಿನ ಎದುರು ತರಲಾಗಿದೆ.

‘ಬಿಬಿಸಿ’ಗೆ ಹಿಂದೂ ಗೋರಕ್ಷಕರು ‘ಗೂಂಡಾ’ ಹಾಗೂ ಮುಸಲ್ಮಾನ ಗೋಹಂತಕರು ‘ಸಂತ್ರಸ್ತರು’ ಆಗಿರುತ್ತಾರೆ; ‘ದ ಕಾಶ್ಮೀರ ಫೈಲ್ಸ್‌’ ಈ ಚಲನಚಿತ್ರ ಮುಸಲ್ಮಾನದ್ವೇಷಿ ಹಾಗೂ ‘ಪಿಕೆ’ ಚಲನಚಿತ್ರ ಇದು ಹಿಂದೂಗಳ ಅಂಧಶ್ರದ್ಧೆಯ ವಿರುದ್ಧ ಹೋರಾಟವಾಗಿರುತ್ತದೆ; ೧೦ ಕೋಟಿ ಮರಗಳನ್ನು ಕಡಿದು ಆಚರಿಸುವ ಕ್ರೈಸ್ತರ ಕ್ರಿಸ್ಮಸ್‌ ಇದು ‘ಬಿಬಿಸಿ’ಗೆ ಆನಂದೋತ್ಸವ ಹಾಗೂ ಹಿಂದೂಗಳ ಗಣೇಶೋತ್ಸವ ಇದು ಪರಿಸರವಿರೋಧಿ ಆಗಿರುತ್ತದೆ ?

‘ಬಿಬಿಸಿ’ಯ ‘ಬಿಬಿಸಿ ಗ್ಲೋಬಲ್‌ ಡಿಸೈನ್ಫಾರ್ಮೆಶನ್‌ ಟೀಂ’ ಮತ್ತು ‘ಬಿಬಿಸಿ ವೆರಿಫೈ’ ಎರಡು ವಿಭಾಗಗಳು ಹಿಂದೂದ್ವೇಷ ಮುಂದುವರಿಸುವುದಕ್ಕಾಗಿ ಹಿಂದೂವಿರೋಧಿ ಘಟನೆಗಳನ್ನೆಲ್ಲ ‘ಅವು ಹಿಂದೂವಿರೋಧಿಯಲ್ಲ, ಮುಸಲ್ಮಾನದ್ವೇಷದಿಂದ ಘಟಿಸಿರುವುದು’, ಎಂದು ಬಣ್ಣಿಸುವುದರಲ್ಲಿ ಮಗ್ನವಾಗಿರುತ್ತವೆ. ಈ ವಿಭಾಗವು ಬಾಂಗ್ಲಾದೇಶದಲ್ಲಿ ಆಗಸ್ಟ್ ೨೦೨೪ ರಲ್ಲಿ ಮುಸಲ್ಮಾನರು ನಡೆಸಿದ ನೂರಾರು ಹಿಂದೂವಿರೋಧಿ ದಾಳಿಗಳನ್ನು ಕೂಡ ‘ಹಿಂದುತ್ವನಿಷ್ಠರಿಂದ ಆಗಿರುವ ಅಪಪ್ರಚಾರ’ ಎಂದೇ ಬಣ್ಣಿಸಿತ್ತು ಹಾಗೂ ಕಳೆದ ವರ್ಷ ಹರಿಯಾಣಾದಲ್ಲಿನ ನೂಹ ಇಲ್ಲಿ ಹಿಂದೂಗಳ ಬ್ರಜಮಂಡಲ್‌ ಯಾತ್ರೆಯ ಮೇಲೆ ಮುಸಲ್ಮಾನರಿಂದ ನಡೆದ ದಾಳಿಯನ್ನು ‘ಹಿಂದೂಗಳ ಗುಂಪಿನಿಂದ ಮುಸಲ್ಮಾನರ ಮೇಲೆ ದಾಳಿ’, ಎಂದು ವರದಿ ಮಾಡಿತ್ತು. ಬಹಳಷ್ಟು ಹಿಂದೂ ಜನಾಂಗ ಇಂತಹ ಅಂತಾರಾಷ್ಟ್ರೀಯ ಕಪಟನಾಟಕದಿಂದ ಪರಿಚಿತರಿಲ್ಲದಿರುವುದರಿಂದ ಅದು ಈ ರೀತಿಯ ವಿಷಕ್ಕೆ ಬಲಿಯಾಗುತ್ತದೆ. ‘ಬಿಬಿಸಿ’ ಹೇಳುವ ಪ್ರಕಾರ ಭಾರತವೊಂದರಲ್ಲಿಯೇ ಪ್ರತಿವಾರ ಕನಿಷ್ಠ ೮ ಕೋಟಿ ಜನರು ಅದರ ವಾರ್ತೆ ಓದುತ್ತಾರೆ. ಇದರಿಂದ ‘ಬಿಬಿಸಿ’ಯ ಪ್ರಭಾವ ಎಷ್ಟಿದೆ, ಎಂಬುದು ಗಮನಕ್ಕೆ ಬರುತ್ತದೆ.

ಗಡಿಪಾರು ಮಾಡಿ !

ಅಂತಾರಾಷ್ಟ್ರೀಯ ವಾರ್ತಾವಾಹಿನಿ ‘ಅಲ್‌ ಜಝೀರಾ’ವು ಯುದ್ಧದ ವರದಿ ಮಾಡುವಾಗ ಹಮಾಸ್‌ನ ಪರ ಎತ್ತಿ ಹಿಡಿದ ಕಾರಣ ಸ್ವಾಭಿಮಾನಿ ಇಸ್ರೈಲ್‌ ಅಲ್ಲಿಯ ಅದರ ಕಾರ್ಯಾಲಯಕ್ಕೆ ನುಗ್ಗಿ ಅದನ್ನು ಮುಚ್ಚಿತು. ಈಗ ಯುದ್ಧ ಇದು ಶಸ್ತ್ರಾಸ್ತ್ರಗಳಿಗಿಂತ ವಿಚಾರಗಳಿಂದ ಮಾಡಲಾಗುತ್ತಿರುವಾಗ ಭಾರತಕ್ಕೂ ಭವಿಷ್ಯದಲ್ಲಿ ಇಸ್ರೈಲ್‌ನಂತೆ ನಿಲುವು ತಾಳಬೇಕಾಗುವುದು. ‘ಬಿಬಿಸಿ ಆನ್‌ ಟ್ರಯಲ್’ ಇದು ಅದೇ ದಿಕ್ಕಿನತ್ತ ಸಾಗುತ್ತಿರುವ ಮೊದಲ ಸ್ವಾಗತಾರ್ಹ ಹೆಜ್ಜೆ ಆಗಿದೆ. ‘ಗ್ಲೋಬಲ್‌ ಹಿಂದೂ ಫೌಂಡೇಶನ್‌’ನ ಅಧ್ಯಕ್ಷ ಪಂಡಿತ ಸತೀಶ ಶರ್ಮ ಇವರು ಇದಕ್ಕಾಗಿ ಕಳೆದ ಒಂದುವರೆ ವರ್ಷದಿಂದ ನಿರಂತರ ಪರಿಶ್ರಮ ತೆಗೆದುಕೊಂಡು ಇದನ್ನು ನಿರ್ಮಿಸಿದ್ದಾರೆ. ಸತೀಶ ಶರ್ಮ ಇವರು, ‘ತಾನು ಕಳೆದ ೮ ವರ್ಷ ಲಂಡನ್ನಿನ ‘ಬಿಬಿಸಿ’ ಕಾರ್ಯಾಲಯಕ್ಕೆ ಹೋಗಿ ಭಾರತವಿರೋಧಿ ವರದಿಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದೇನೆ; ಆದರೆ ‘ಬಿಬಿಸಿ’ ಎಂದಿಗೂ ಅವರನ್ನು ಲೆಕ್ಕಿಸಲಿಲ್ಲ. ಆದ್ದರಿಂದ ನಾನು ‘ಬಿಬಿಸಿ ಆನ್‌ ಟ್ರಯಲ್‌’ನ ನಿರ್ಮಿಸಿದೆ. ಅದರ ಪ್ರಚಾರ ಪ್ರಸಾರ ಎಲ್ಲವೂ ದೂರವಾಗಿ ‘ಬಿಬಿಸಿ’ಯನ್ನು ಭಾರತದಿಂದ ಗಡಿಪಾರು ಮಾಡುವ ಜನಾಂದೋಲನಕ್ಕೆ ಈ ‘ಡಾಕ್ಯುಮೆಂಟರಿ’ ನಿರ್ಣಾಯಕ ಕಿಡಿಯಾಗುವ ಅಪೇಕ್ಷೆ ಇದೆ ! ಎಂದು ಹೇಳುತ್ತಾರೆ.