ಶ್ರೀಕೃಷ್ಣನ ಚಿತ್ರವನ್ನು ನೋಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಮತ್ತು ಸಾಧಕರಿಗೆ ಬಂದ ಅನುಭೂತಿ

‘ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರು ನಾವು ಸೇವೆ ಮಾಡುತ್ತಿದ್ದ ಗಣಕಯಂತ್ರದ ಒಂದು ಮೇಜಿನ ಮೇಲಿದ್ದ ಶ್ರೀಕೃಷ್ಣನ ಚಿತ್ರವನ್ನು ನೋಡಿ ಹೀಗೆಂದರು, ”ಈ ಛಾಯಾಚಿತ್ರ ಇಲ್ಲಿಯೇ ಇದ್ದರೂ ನನಗೆ ಅದರ ಕಡೆಗೆ ಗಮನ ಹೋಗಿರಲಿಲ್ಲ; ಆದರೆ ಇಂದು ಅನಿರೀಕ್ಷಿತವಾಗಿ ಗಮನ ಹೋಯಿತು”, ಎಂದರು. ಆ ಮೇಲೆ ಅವರು ‘ಆ ಚಿತ್ರವನ್ನು ನೋಡಿದಾಗ ಏನನಿಸುತ್ತದೆ ?’, ಎಂಬುದರ ಪ್ರಯೋಗ ಮಾಡಿಸಿದರು. ಆಗ ಪರಾತ್ಪರ ಗುರು ಡಾಕ್ಟರರಿಗೆ ಹಾಗೂ ಸಾಧಕರಿಗೆ ಈ ಮುಂದಿನಂತೆ ಅನುಭೂತಿಗಳು ಬಂದವು.’

– ಕು. ತೃಪ್ತಿ ಕುಲಕರ್ಣಿ

೧. ಅನುಭೂತಿಗಳು

ಅ. ಪರಾತ್ಪರ ಗುರು ಡಾ. ಆಠವಲೆ : ಭಾವಜಾಗೃತಿ ಆಯಿತು.

ಆ. ಸೌ. ಜಾಹ್ನವಿ ಶಿಂದೆ : ಭಾವಜಾಗೃತವಾಯಿತು.

ಇ. ಕು. ತೃಪ್ತಿ ಕುಲಕರ್ಣಿ : ಇಂದು ಬೆಳಿಗ್ಗೆಯೆ ನನ್ನ ಮನಸ್ಸಿನಲ್ಲಿ ‘ಶ್ರೀಕೃಷ್ಣನ ಚಿತ್ರ ನಿರ್ಗುಣಕ್ಕೆ ಹೋಗುತ್ತಿದೆ’ ಎಂಬ ವಿಚಾರ ಬಂದಿತ್ತು.

ಈ. ಸೌ. ಅರುಣಾ ತಾವಡೆ : ಒಳ್ಳೆಯದೆನಿಸಿತು.

ಉ. ಕು. ಕರುಣಾ ಮುಳ್ಯೆ : ಚಿತ್ರ ಜೀವಂತ ಆಗಿರುವಂತೆ ಕಾಣಿಸುತ್ತದೆ.

೨. ‘ಯು.ಎ.ಎಸ್‌.’ ಉಪಕರಣದ ಮೂಲಕ ಶ್ರೀಕೃಷ್ಣನ ಚಿತ್ರದ ಪರಿಶೀಲನೆ

ಅನಂತರ ಪರಾತ್ಪರ ಗುರು ಡಾಕ್ಟರರು ಶ್ರೀಕೃಷ್ಣನ ಚಿತ್ರವನ್ನು ‘ಯು.ಎ.ಎಸ್‌.’ (ಯುನಿವರ್ಸಲ್‌ ಆರಾ ಸ್ಕ್ಯಾನರ್‌)’ಈ ಉಪಕರಣದ ಮೂಲಕ ವೈಜ್ಞಾನಿಕ ಪರಿಶೀಲನೆ ಮಾಡಲು ಹೇಳಿದರು. ಅದರ ನಿರೀಕ್ಷಣೆ ಈ ಮುಂದಿನಂತಿದೆ.

೩. ಶ್ರೀಕೃಷ್ಣನ ಚಿತ್ರದಲ್ಲಿ ಅಪಾರ ನಕಾರಾತ್ಮಕ ಊರ್ಜೆ ಇದ್ದರೂ ಎಲ್ಲರಿಗೂ ಚಿತ್ರದ ಕುರಿತು ಒಳ್ಳೆಯ ಅನುಭೂತಿ ಬರುವುದರ ಹಿಂದಿನ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ : ಶ್ರೀಕೃಷ್ಣನ ಚಿತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಇರುವ ಕಾರಣವೆಂದರೆ ‘ಕಾಲಮಹಿಮೆ’ ಆಗಿದೆ. ಇದು ಯುಗ-ಪರಿವರ್ತನೆಯ (ಸಂಧಿಕಾಲ) ಕಾಲವಾಗಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ಅಂತಿಮ ಘನಘೋರ ಸೂಕ್ಷ್ಮ ಯುದ್ಧ ನಡೆಯುತ್ತಿರುವುದರಿಂದ ವಾತಾವರಣದಲ್ಲಿ ತೊಂದರೆದಾಯಕ ಸ್ಪಂದನಗಳ ಪ್ರಮಾಣ ತುಂಬಾ ಹೆಚ್ಚಾಗಿದೆ. ಇದರಿಂದ ಎಲ್ಲರ ಮೇಲೆ ನಕಾರಾತ್ಮಕ ಪರಿಣಾಮವಾಗುವುದು ಸ್ವಾಭಾವಿಕವಾಗಿದೆ. ಹಾಗಾಗಿ ಎಲ್ಲ ವಿಷಯಗಳ ಮೇಲೆ ತೊಂದರೆದಾಯಕ ಆವರಣ ಬರುತ್ತಿದೆ. ನಾವು ಹಿಂದೂ ರಾಷ್ಟ್ರದ ದಿಕ್ಕಿಗೆ ಪ್ರಯಾಣ ಬೆಳೆಸುತ್ತಾ ಮುಂದೆ ಮುಂದೆ ಸಾಗಿದಂತೆ (ಅಂದರೆ ಹೊಸ ಯುಗದಲ್ಲಿ ಪ್ರವೇಶ ಮಾಡುತ್ತೇವೆ) ಹಾಗೆಯೇ ಈ ಆವರಣ ಕಡಿಮೆ ಯಾಗುತ್ತಾ ಹೋಗುವುದು. ಆಗ ಶ್ರೀಕೃಷ್ಣನ ಚಿತ್ರದಲ್ಲಿನ ಆವರಣವೂ ಇಲ್ಲವಾಗಿ ಅದರಿಂದ ಪ್ರಕ್ಷೇಪಿಸಲ್ಪಡುವ ಚೈತನ್ಯವು ಸಂಪೂರ್ಣ ವಾತಾವರಣದಲ್ಲಿ ಪ್ರಕ್ಷೇಪಣೆ ಯಾಗಲು ಆರಂಭವಾಗುವುದು. ನಾವು ರೈಲಿನಲ್ಲಿ ಪ್ರವಾಸ ಮಾಡು ವಾಗ ಕೆಲವೊಮ್ಮೆ ಕತ್ತಲೆಯ ಗುಹೆಯ ಮೂಲಕ ಹೋಗುತ್ತೇವೆ, ಆಗ ಹೇಗನಿಸುತ್ತದೆಯೋ, ಇದು ಸಹ ಅದೇ ರೀತಿಯಿದೆ. ಹಿಂದೂ ರಾಷ್ಟ್ರದ ಈ ‘ದಿವ್ಯ ಪ್ರವಾಸವನ್ನು ಸಾಧಕರು ಮತ್ತು ಸಂತರು ಅನುಭವಿಸುತ್ತಿದ್ದಾರೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಇಂದಿನ ಸ್ಥೂಲದ ಸ್ಥಿತಿಯನ್ನು ಈ ಯಂತ್ರವು ತೋರಿಸಿದೆ. ಯಂತ್ರದಿಂದ ಸೂಕ್ಷ್ಮತರ ಸ್ಪಂದನವನ್ನು ತೋರಿಸಲು ಸಾಧ್ಯವಾಗುವುದಿಲ್ಲ; ಇದು ಯಂತ್ರದ ಮಿತಿಯಾಗಿದೆ. ಸನಾತನದ ಸಾಧಕರು ಮಾತ್ರ ಹಾಗಿಲ್ಲ; ಏಕೆಂದರೆ, ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದÀ ಯೋಗ್ಯ ಸಾಧನೆಯಿಂದ ಅವರಲ್ಲಿ ಸೂಕ್ಷ್ಮದ ಸ್ಪಂದನಗಳನ್ನು ಗುರುತಿಸುವ ಕ್ಷಮತೆ ಉಂಟಾಗಿದೆ. ಅವರಿಗೆ ಬಂದಿರುವ ಆನಂದ, ಭಾವ ಇತ್ಯಾದಿ ಅನುಭೂತಿಗಳು ಅದರದ್ದೆ ನಿದರ್ಶನವಾಗಿದೆ.’

– ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೬.೧೧.೨೦೨೦)

೪. ನಿಷ್ಕರ್ಷ

ಪರಾತ್ಪರ ಗುರು ಡಾ. ಆಠವಲೆ

ಈ ಪರಿಶೀಲನೆಯಿಂದ ಅರಿವಾಗಿದೆಯೇನೆಂದರೆ, ಶ್ರೀಕೃಷ್ಣನ ಚಿತ್ರ ಸಾತ್ತ್ವಿಕ ಆಗಿರುವುದರಿಂದ ಅದನ್ನು ನೋಡಿ ಎಲ್ಲರ ಭಾವಜಾಗೃತಿಯಾಯಿತು.

– ಸಚ್ಚಿದಾನಂದ ಪರಬ್ರಹ್ಮ ಡಾ ಆಠವಲೆ