‘ಇಸ್ರೋ’ದ ಮುಂದಿನ ಮಿಷನ್ `ಗಗನಯಾನ’ ಮೂಲಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ!

ಜನವರಿಯಿಂದ ಮಾರ್ಚ್ 2024 ರವರೆಗೆ ಕಾರ್ಯಗತಗೊಳಿಸಲಿದೆ !

ಬೆಂಗಳೂರು – ‘ಮಂಗಳಯಾನ’ ಮತ್ತು ‘ಚಂದ್ರಯಾನ-3’ ಅಭಿಯಾನಗಳ ಗಮನಸೆಳೆಯುವ ಯಶಸ್ಸಿನ ನಂತರ, ಇಸ್ರೋ ‘ಗಗನಯಾನ’ ಅಭಿಯಾನ ಈಗ ಭಾರತಿಯರ ಗಮನ ಸೆಳೆದಿದೆ. ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸಲು ‘ಇಸ್ರೋ’ ಮಹತ್ವಾಕಾಂಕ್ಷೆಯ ಅಭಿಯಾನವಾಗಿದೆ. ಅಭಿಯಾನವನ್ನು ಜನವರಿಯಿಂದ ಮಾರ್ಚ್ 2024 ಕಾಲಾವಧಿಯಲ್ಲಿ ಕಾರ್ಯಗತಗೊಳಿಸಲಾಗುವುದು. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಈ ಅಭಿಯಾನಕ್ಕೆ ಹೊಡೆತ ಬಿದ್ದಿತು, ಇಲ್ಲದಿದ್ದರೆ ಇಲ್ಲಿಯವರೆಗೆ ಭಾರತದ ಈ ಅಭಿಯಾನ ಯಶಸ್ವಿಗೊಳಿಸಿ ತೋರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. 2018 ರಲ್ಲಿಯೇ ಪ್ರಧಾನಮಂತ್ರಿಗಳು ಈ ಅಭಿಯಾನವನ್ನು ಘೋಷಿಸಿದ್ದರು. ಈ ಅಭಿಯಾನಕ್ಕೆ ಒಟ್ಟು 9 ಸಾವಿರದ 23 ಕೋಟಿ ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ.

1. ಅಮೇರಿಕಾ, ಆಗಿನ ಸೋವಿಯತ್ ಒಕ್ಕೂಟ ಮತ್ತು ಚೀನಾ ಈ ಮೂರು ದೇಶಗಳು ಇಲ್ಲಿಯವರೆಗೆ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸಿವೆ. ಇದರ ನಂತರ, ಈ ಮೊದಲ ಬಾರಿಗೆ, ಇಸ್ರೋ ಈ ಕಾರ್ಯಾಚರಣೆಯನ್ನು ಯೋಜಿಸಿದೆ.

2. ಇದರಲ್ಲಿ ಭೂಮಿಯ ಸುತ್ತ 400 ಕಿ.ಮೀ ಕಕ್ಷೆಯಲ್ಲಿ ಮೂವರು ಗಗನಯಾತ್ರಿಗಳನ್ನು ಮೂರು ದಿನಗಳ ಕಾಲ ಕಳುಹಿಸಲಾಗುವುದು. ಅಲ್ಲಿನ ಪ್ರಯೋಗಗಳ ನಂತರ ಅವರನ್ನು ಸುರಕ್ಷಿತವಾಗಿ ಹಿಂದೂ ಮಹಾಸಾಗರದಲ್ಲಿ ಇಳಿಸಲು ಇಸ್ರೋ ಪ್ರಯತ್ನಿಸಲಿದೆ.

‘ಗಗನಯಾನ’ದ 3 ಪ್ರಮುಖ ಹಂತಗಳು ಹೀಗಿರಲಿವೆ !

‘ಗಗನಯಾನ’ ಅಭಿಯಾನವನ್ನು 3 ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುವುದು.

1. ಮೊದಲ ಹಂತದಲ್ಲಿ ‘ಎಲ್.ಎಂ.ವಿ. 3’ ಲಾಂಚರ್ ಅನ್ನು ಬಾಹ್ಯಾಕಾಶಕ್ಕೆ ಸೀಸೆಯಲ್ಲಿ ಹಾರಿಸಲಾಗುವುದು ಮತ್ತು ಅಲ್ಲಿಂದ ಅದನ್ನು ಸುರಕ್ಷಿತವಾಗಿ ಭೂಮಿಯ ಬಾಹ್ಯಾಕಾಶಕ್ಕೆ ಮರಳಿ ಕರೆತರಲಾಗುತ್ತದೆ.

2. ತದನಂತರ ‘ವ್ಯೋಮಮಿತ್ರ’ ಎಂಬ ರೋಬೋಟ್ ಅನ್ನು ಕೂಡ ಸೀಸೆಯಲ್ಲಿ ಕಳುಹಿಸಲಾಗುವುದು .ಆ ಮೂಲಕ ಪರಿಶೀಲನೆಗಳನ್ನು ನೊಂದಾಯಿಸಲಾಗುವುದು.

3. ಮೂರನೇ ಹಂತದಲ್ಲಿ, ಈ ಸೀಸೆಯನ್ನು ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗುತ್ತದೆ. ಈ ಕಾರ್ಯಾಚರಣೆಗಾಗಿ, ವಾಯುಪಡೆಯ 4 ವೈಮಾನಿಕರಿಗೆ 2020 ರಲ್ಲಿ ರಷ್ಯಾದಲ್ಲಿ ತರಬೇತಿ ನೀಡಲಾಗಿತ್ತು.

“ಗಗನಯಾನ” ದಿಂದ ಭಾರತಕ್ಕೆ ಆಗುವ ಲಾಭಗಳು !

  • ಮಾನವ ಕಾರ್ಯಾಚರಣೆಗಳನ್ನು ಯೋಜಿಸಲು ಅತ್ಯಾಧುನಿಕ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಅವಕಾಶ !
  • ಬಾಹ್ಯಾಕಾಶದಲ್ಲಿ ವೈದ್ಯಕೀಯ, ಜೈವಿಕ ಬಾಹ್ಯಾಕಾಶದ ಮತ್ತು ಎಂಜಿನಿಯರಿಂಗ್ ಪ್ರಯೋಗಗಳನ್ನು ಮಾಡಲು ಸಾಧ್ಯವಾಗಲಿದೆ !
  • ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುವುದು ಮತ್ತು ಅವುಗಳನ್ನು ಅಪೇಕ್ಷಿತ ಸ್ಥಳಕ್ಕೆ ತಂದು ನಿಲ್ಲಿಸುವುದು ಈ ಪ್ರಯೋಗಗಳಿಗೆ ಸಹಾಯ ಮಾಡುತ್ತದೆ !
  • ಇದು ಬಾಹ್ಯಾಕಾಶ ನಿಲ್ದಾಣವನ್ನು (‘ಸ್ಪೇಸ್ ಸ್ಟೇಷನ್’) ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ಇತರ ಗ್ರಹಗಳಿಗೆ ಮಾನವ ಕಾರ್ಯಾಚರಣೆಗಳಿಗಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸಹಕಾರವನ್ನು ಹೆಚ್ಚಿಸಲು ಸಹಾಯವಾಗಲಿದೆ !