ಬೆಂಗಳೂರು – ಸೂರ್ಯ ಮತ್ತು ಅದರ ಸುತ್ತಲಿನ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ಸೆಪ್ಟೆಂಬರ್ ತಿಂಗಳಿನಲ್ಲಿ ‘ಆದಿತ್ಯ ಎಲ್1’ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇದು ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋದ ಮೊದಲ ಅಭಿಯಾನವಾಗಿದೆ. ಈ ಅಭಿಯಾನಕ್ಕೆ 378 ಕೋಟಿ ವೆಚ್ಚ ತಗಲಿದೆ. ಈ ಅಭಿಯಾನದ ಅವಧಿ 5 ವರ್ಷಗಳಾಗಿವೆ.
Aditya-L1 mission to study Sun likely to be launched next month: ISRO chief S Somanath
Read @ANI Story | https://t.co/r9H1Pvkv8L#AdityaL1 #ISRO #SSomanath #Chandrayaan3 pic.twitter.com/5CsDZfYr3C
— ANI Digital (@ani_digital) August 23, 2023
1. ‘ಆದಿತ್ಯ ಎಲ್1’ ಅನ್ನು ಭೂಮಿ ಮತ್ತು ಸೂರ್ಯನ ನಡುವಿನ ‘ಲೋವರ್ ಅರ್ಥ್ ಆರ್ಬಿಟ್’ ವರೆಗೆ ಕೊಂಡೊಯ್ಯಲಾಗುತ್ತದೆ. (‘ಲೋವರ್ ಅರ್ಥ್ ಆರ್ಬಿಟ್’ ಎಂದರೆ ಸಂಬಂಧಿಸಿದ ಗ್ರಹದಿಂದ ಅತ್ಯಂತ ಹತ್ತಿರದ ಅಂತರ. ಇದರ ಸುತ್ತಳತೆ 160 ಕಿ.ಮೀ ನಿಂದ 2 ಸಾವಿರ ಕಿ.ಮೀಗಳಷ್ಟು ಇರುತ್ತದೆ.) ಈ ಅಂತರವು ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ.ಅಂತರದಲ್ಲಿದೆ. ಈ ಸ್ಥಳದಿಂದ ಯಾವುದೇ ಅಡೆತಡೆಗಳಿಲ್ಲದೆ ಸೂರ್ಯನ ಮೇಲಿನ ಅಡೆತಡೆಗಳನ್ನು ಅಧ್ಯಯನ ಮಾಡಲು ಸಾಧ್ಯವಾಗಲಿದೆ. ಅಲ್ಲಿಂದ ಭೂಮಿಗೆ ಕಳುಹಿಸುವ ಸಂದೇಶಗಳು ಕೂಡ ಕಡಿಮೆ ಸಮಯದಲ್ಲಿ ತಲುಪಬಹುದು.
2. ಈ ಬಾಹ್ಯಾಕಾಶ ನೌಕೆಯ ಮೂಲಕ ಸೂರ್ಯನ ಮೇಲೆ ವಿದ್ಯಮಾನಗಳಿಂದ ವಾತಾವರಣದಲ್ಲಿ ನಿರ್ಮಾಣವಾಗುವ ಉಷ್ಣತೆ ಮತ್ತು ಜ್ವಾಲೆಗಳನ್ನು ನಿರೀಕ್ಷಣೆ ಮಾಡುತ್ತದೆ, ಹಾಗೆಯೇ ಸೌರ ಬಿರುಗಾಳಿಗಳು ಮತ್ತು ಸೌರ ಸ್ಫೋಟಗಳಿಂದ ನಿರ್ಮಾಣವಾಗುವ ಜ್ವಾಲೆಗಳ ಪ್ರಕ್ರಿಯೆಗಳನ್ನು ಸಹ ಅಧ್ಯಯನ ಮಾಡುತ್ತದೆ. ಬಾಹ್ಯಾಕಾಶ ವಾತಾವರಣದ ಮೇಲೆ ಪರಿಣಾಮ ಬೀರುವ ಸೌರ ಮಾರುತದ ಮೂಲ, ಅದರ ಘಟಕಗಳು ಮತ್ತು ಇತರ ವಿದ್ಯಮಾನಗಳನ್ನು ಅಧ್ಯಯನ ಮಾಡಲಾಗುತ್ತದೆ.