ಹಿಂದೂ ಜನಜಾಗೃತಿ ಸಮಿತಿಯಿಂದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರ ಭೇಟಿ ಮಾಡಿ ಮನವಿ !

ಮುಂಬಯಿ, ಫೆಬ್ರುವರಿ ೨೦ (ವಾರ್ತೆ) – ರಾಷ್ಟ್ರಪ್ರೇಮ ಜಾಗೃತಗೊಳಿಸುವ ‘ಛಾವಾ’ ಚಲನಚಿತ್ರ ವಿದ್ಯಾರ್ಥಿ, ಯುವಕರ ಸಹಿತ ಎಲ್ಲಾ ವರ್ಗದ ಜನರವರೆಗೆ ತಲುಪಬೇಕು, ಅದಕ್ಕಾಗಿ ಮಹಾರಾಷ್ಟ್ರ ಸರಕಾರವು ಈ ಚಲನಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಏಕನಾಥ ಶಿಂದೆ ಇವರ ಬಳಿ ಆಗ್ರಹಿಸಿದ್ದಾರೆ. ಫೆಬ್ರುವರಿ ೧೯ ರಂದು ನರಿಮನ್ ಪಾಯಿಂಟ್ ಇಲ್ಲಿಯ ‘ಐನಾಸ್ಕ್’ ಚಿತ್ರಮಂದಿರದಲ್ಲಿ ಶಿವಸೇನೆಯ ವತಿಯಿಂದ ‘ಛಾವಾ’ ಚಲನಚಿತ್ರ ಉಚಿತವಾಗಿ ಪ್ರದರ್ಶಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿ ಸಮನ್ವಯಕ ಶ್ರೀ. ಬಲವಂತ ಪಾಠದ ಇವರು ಈ ಸ್ಥಳದಲ್ಲಿ ಏಕನಾಥ ಶಿಂದೆ ಇವರನ್ನು ಭೇಟಿ ಮಾಡಿ ಶಿವಸೇನೆಯ ಈ ಉಪಕ್ರಮದ ಬಗ್ಗೆ ಶ್ಲಾಘಿಸಿದರು. ಧರ್ಮವೀರ ಸಂಭಾಜಿ ಮಹಾರಾಜ ಇವರ ತೇಜಸ್ವಿ ಇತಿಹಾಸ ಹೆಚ್ಚೆಚ್ಚು ಜನರವರೆಗೆ ತಲುಪಬೇಕು, ಅದಕ್ಕಾಗಿ ಮಹಾರಾಷ್ಟ್ರ ಸರಕಾರದಿಂದ ಈ ಚಲನಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು, ಎಂದು ಶ್ರೀ. ಬಳವಂತ ಪಾಠಕ ಇವರು ಈ ಸಮಯದಲ್ಲಿ ಏಕನಾಥ ಶಿಂದೆ ಇವರಲ್ಲಿ ಆಗ್ರಹಿಸಿದರು.
शिवाजी विद्यापीठाचे नामांतर छत्रपती शिवाजी महाराज विद्यापीठ असे व्हावे, छत्रपतींचा एकेरी उल्लेख होऊ नये, या मागणीसाठी….
✊🏻🚩हिंदु राष्ट्र-जागृती आंदोलन🚩✊🏻
🗓️वार, दिनांक: गुरुवार, २० फेब्रुवारी २०२५
🕔वेळ: सायं. ५ वाजता
⛳स्थळ:* छत्रपती शिवाजी महाराज चौक, कोल्हापूर… pic.twitter.com/crArMHJHSl
— Sunil Ghanwat 🛕🛕 (@SG_HJS) February 20, 2025
ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್, ಸಂಸದ ಡಾ. ಶ್ರೀಕಾಂತ ಶಿಂದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹ ಶ್ರೀ. ಭೈಯ್ಯಾಜಿ ಜೋಶಿ, ಚಲನಚಿತ್ರದ ನಿರ್ಮಾಪಕ ಲಕ್ಷ್ಮಣ ಉತೆಕರ್, ಶಿವಸೇನೆಯ ರಾಷ್ಟ್ರೀಯ ವಕ್ತಾರ ಶಾಯನ ಎನ್.ಸಿ., ಸುಪ್ರಸಿದ್ಧ ಗಾಯಕಿ ಅನುರಾಧ ಪೌಡ್ವಾಲ್, ನಾಯಕ ಮತ್ತು ನಿರ್ದೇಶಕ ಭರತ್ ದಾಬೋಳಕರ್, ಮಾಜಿ ಸಂಸದ ಶಿರೀಶ ಶಿಂದೆ, ಮಾಜಿ ಸಂಸದ ಅತುಲ ಶಾಹ, ಕಲಾವಿದ ಮಕರಂದ ಅನಾಸಪುರೆ, ಸೋನಾಲಿ ಕುಲಕರ್ಣಿ, ವಿನೀತ ಸಿಂಗ ಮುಂತಾದ ಗಣ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು. ಚಲನಚಿತ್ರದ ಮೊದಲು ಶಿವಸೇನೆಯ ಅನಿಲ ತ್ರಿವೇದಿ ಇವರು ಪ್ರಸ್ತಾವನೆ ಮಾಡಿದರು. ಚಲನಚಿತ್ರ ಆರಂಭವಾಗುವ ಮೊದಲು ಪ್ರೇಕ್ಷಕರು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಧರ್ಮವೀರ ಸಂಭಾಜಿ ಮಹಾರಾಜ್ ಇವರ ಜಯ ಘೋಷ ನಡೆಸಿದರು. ಛಾವಾದಂತಹ ಐತಿಹಾಸಿಕ ಮತ್ತು ರಾಷ್ಟ್ರಪ್ರೇಮ ಜಾಗೃತಗೊಳಿಸುವ ಚಲನಚಿತ್ರದ ನಿರ್ಮಾಣ ಮಾಡಿರುವುದರ ಬಗ್ಗೆ ನಿರ್ಮಾಪಕ ಲಕ್ಷ್ಮಣ ಉತೆಕರ ಇವರಿಗೆ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಮತ್ತು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಶ್ಲಾಘಿಸಿದರು.