೧೬ ಜನರನ್ನು ರಕ್ಷಿಸುವಲ್ಲಿ ಯಶಸ್ಸು
ಚಮೋಲಿ (ಉತ್ತರಾಖಂಡ) – ಬದ್ರಿನಾಥ ಧಾಮದ ಮಾನಾ ಗ್ರಾಮದ ಬಳಿ ಸಂಭವಿಸಿದ ಹಿಮಪಾತದಲ್ಲಿ ೫೭ ಕಾರ್ಮಿಕರು ಹಿಮದಡಿಯಲ್ಲಿ ಹೂತುಹೋಗಿದ್ದಾರೆ. ಅದರಲ್ಲಿ ೧೬ ಕಾರ್ಮಿಕರನ್ನು ಹೊರತೆಗೆಯಲಾಗಿದ್ದು, ಉಳಿದ ಕಾರ್ಮಿಕರನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ. ಹೊರತೆಗೆದ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರಾಖಂಡದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಮಪಾತದಿಂದ ಈ ಘಟನೆ ಸಂಭವಿಸಿದೆ. ಎಲ್ಲಾ ಕಾರ್ಮಿಕರು ಭಾರತೀಯ ಸೇನೆಯ ‘ಬಿಆರ್‌ಒ’ (‘ಬಾರ್ಡರ್ ರೋಡ್ ಆರ್ಗನೈಸೇಶನ್’ – ಗಡಿ ರಸ್ತೆ ಸಂಸ್ಥೆ) ಜೊತೆ ಒಪ್ಪಂದ ಮಾಡಿಕೊಂಡಿರುವ ಗುತ್ತಿಗೆದಾರರದ್ದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ರಕ್ಷಣಾ ತಂಡಗಳಿಂದ ಸಹಾಯ ಕಾರ್ಯ ನಡೆಯುತ್ತಿದೆ. ಎಲ್ಲಾ ಕಾರ್ಮಿಕ ಸಹೋದರರ ಸುರಕ್ಷತೆಗಾಗಿ ನಾನು ಭಗವಾನ್ ಬದ್ರಿ ವಿಶಾಲನ ಬಳಿ ಪ್ರಾರ್ಥಿಸುತ್ತೇನೆ, ಎಂದು ಹೇಳಿದರು.