ವಾಷಿಂಗ್ಟನ್ (ಅಮೇರಿಕ) – ಪ್ರಸ್ತುತ ಅಮೆರಿಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಂಟಕಿ, ಜಾರ್ಜಿಯಾ, ವರ್ಜೀನಿಯಾ, ವೆಸ್ಟ್ ವರ್ಜೀನಿಯಾ, ಟೆನೆಸಿ ಮತ್ತು ಇಂಡಿಯಾನಾ ಈ 6 ರಾಜ್ಯಗಳಿಗೆ ಪ್ರವಾಹದ ಬಿಸಿ ತಟ್ಟಿದೆ. ಕೆಂಟಕಿ ರಾಜ್ಯದಲ್ಲಿ ಹನ್ನೆರಡು ಜನರ ಸಾವಾಗಿದೆ. ಪಶ್ಚಿಮ ವರ್ಜೀನಿಯಾ ಮತ್ತು ಜಾರ್ಜಿಯಾದ ರಾಜ್ಯಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಮತ್ತೊಂದೆಡೆ, ಅಮೆರಿಕದ ಪೂರ್ವ ಭಾಗದ ರಾಜ್ಯಗಳಲ್ಲಿ ಅಂದಾಜು 9 ಕೋಟಿ ಜನರು ತೀವ್ರ ಚಳಿಯನ್ನು ಎದುರಿಸುತ್ತಿದ್ದಾರೆ. ತಾಪಮಾನವು ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿದೆ, ಶಾಲೆಗಳನ್ನು ಮುಚ್ಚಲಾಗಿದೆ, ಪೈಪ್‌ಗಳು ಒಡೆದಿವೆ. 14 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಕಡಿತಗೊಂಡಿದೆ. ಮತ್ತು 17 ಸಾವಿರ ಸ್ಥಳಗಳಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದೆ. ಮಧ್ಯಪಶ್ಚಿಮದ ಕೆಲವು ಭಾಗಗಳಲ್ಲಿ ತಾಪಮಾನವು ಮೈನಸ್ 50 ರಿಂದ ಮೈನಸ್ 60 ಡಿಗ್ರಿವರೆಗೆ ತಲುಪಿದೆ.