ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನವನ್ನು ಟೀಕಿಸಿದೆ ಮತ್ತು ಭಾರತವನ್ನು ಹೊಗಳಿದೆ. ‘ಭಾರತ ಇಂದು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ’, ಎಂದು ಟಿಟಿಪಿ ಹೇಳಿದೆ. ಟಿಟಿಪಿಯು, ಪಾಕಿಸ್ತಾನದಲ್ಲಿ ಷರಿಯಾ ಕಾನೂನನ್ನು ಜಾರಿಗೊಳಿಸುವ ಮೂಲಕ ಶೀಘ್ರದಲ್ಲೇ ತಮ್ಮ ಸಂಘಟನೆಯು ಪಾಕಿಸ್ತಾನಕ್ಕೆ ನಿಜವಾದ ಸ್ವಾತಂತ್ರ್ಯವನ್ನು ತರಲಿದೆ ಎಂದು ದಾವೆ ಮಾಡಿದೆ.
(ಸೌಜನ್ಯ : TIMES NOW)
ಟಿಟಿಪಿಯು, ಆಗಸ್ಟ್ 14, 1947 ರಂದು ಪಾಕಿಸ್ತಾನಕ್ಕೆ ಸಿಕ್ಕಿದ ಸ್ವಾತಂತ್ರ್ಯದಿಂದ ಪ್ರಯೋಜನವಾಗಲಿಲ್ಲ. ಆರ್ಥಿಕ ಬಿಕ್ಕಟ್ಟು, ಬಡತನ, ಹಿಂಸೆ, ಭ್ರಷ್ಟಾಚಾರ, ಇಸ್ಲಾಮಿಕ್ ವ್ಯವಸ್ಥೆಯ ಕೊರತೆಯಿಂದಾಗಿ ದೇಶದ ಶಾಂತಿ ಮತ್ತು ಸಮೃದ್ಧಿ ದೂರ ಉಳಿದಿದೆ. 76 ವರ್ಷಗಳ ಸ್ವಾತಂತ್ರ್ಯದಲ್ಲಿ ಪಾಕಿಸ್ತಾನವು ಸ್ವಾವಲಂಬಿ ರಾಷ್ಟ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ. ಪ್ರಸ್ತುತ ಪಾಕಿಸ್ತಾನದ ಬಿಕ್ಕಟ್ಟಿಗೆ ಪಾಕಿಸ್ತಾನ ಸೇನೆಯೇ ಕಾರಣ ಎಂಬ ಆರೋಪವೂ ಮಾಡಿದೆ.