೧. ಮತಾಂತರ ನಿಷೇಧ ಕಾನೂನಿನ ಭಯವೇ ಇಲ್ಲದ ಉತ್ತರಪ್ರದೇಶದ ಮಿಷನರಿಗಳು !
ಉತ್ತರಪ್ರದೇಶದ ಕಾನಪುರ ನಗರವು ಕ್ರೈಸ್ತ ಮಿಷನರಿಗಳಿಗೆ ಮತಾಂತರ ಚಟುವಟಿಕೆಗಳ ಬೀಡಾಗಿದೆ. ನಗರದಲ್ಲಿನ ಘಾಟಮಪುರ, ಶಾಮನಗರ, ರಾವತಪುರ, ಕರ್ನಲ್ ಗಂಜ ಮತ್ತು ಮನ್ನಿಪರವ ಮುಂತಾದ ಪ್ರದೇಶಗಳಲ್ಲಿ ನೂರಾರು ಹಿಂದೂ ಕುಟುಂಬಗಳನ್ನು ಆಮಿಷ ತೋರಿಸಿ ಮತಾಂತರಿಸಲಾಗಿದೆ.
೨. ಇದು ಸರಕಾರಿ ವ್ಯವಸ್ಥೆಯ ವೈಫಲ್ಯದ ಸಂಕೇತವೇ ?
ಹೆಚ್ಚುತ್ತಿರುವ ‘ಲವ್ ಜಿಹಾದ್’ ಮತ್ತು ಮತಾಂತರಗಳ ಪ್ರಕರಣಗಳಿಗೆ ಕಡಿವಾಣ ಹಾಕಲು ಮಧ್ಯಪ್ರದೇಶದ ಅಶೋಕ ನಗರ ಜಿಲ್ಲೆಯ ೪ ಗ್ರಾಮಗಳಲ್ಲಿ ಮುಸಲ್ಮಾನ ಮತ್ತು ಕ್ರೈಸ್ತ ವ್ಯಾಪಾರಿಗಳಿಗೆ ಪ್ರವೇಶ ನಿಷೇಧ ಹೇರಲಾಗಿದೆ. ಸಮಸ್ತ ಗ್ರಾಮಸ್ಥರ ಅಭಿಪ್ರಾಯದಂತೆ ಗ್ರಾಮಪಂಚಾಯತಿಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
೩. ‘ಲವ್ ಜಿಹಾದ್’ನಿಂದ ಭಾರತಮಾತೆಯ ಹತ್ಯೆಯಾಗುವುದಿಲ್ಲವೇ ?
ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಇವರು ಮಾತನಾಡುತ್ತಾ, ‘ನೀವು (ಮೋದಿ ಸರಕಾರ) ಮಣಿಪುರದಲ್ಲಿ ‘ಭಾರತ ಮಾತೆ’ಯ ಕೊಲೆ ಮಾಡಿದ್ದೀರಿ. ಪ್ರಧಾನಿಗಳು ಮಣಿಪುರವನ್ನು ಭಾರತದ ಪ್ರದೇಶ ಎಂದು ತಿಳಿದಿಲ್ಲ. ಆದ್ದರಿಂದ ಅವರು ಇದು ವರೆಗೂ ಮಣಿಪುರಕ್ಕೆ ಹೋಗಿಲ್ಲ’, ಎಂದಿದ್ದಾರೆ.
೪. ಪ್ರಗತಿಪರರೆಂದು ಬೆನ್ನು ತಟ್ಟಿಕೊಳ್ಳುವ ಹಿಂದೂಗಳಿಗೆ ಕಪಾಳಮೋಕ್ಷ !
ಕೋಲಕಾತಾ ಉಚ್ಚ ನ್ಯಾಯಾಲಯವು ಭೂಮಿ ವಿವಾದದ ಪ್ರಕರಣವೊಂದರಲ್ಲಿ ಸ್ವಯಂಭೂ ಶಿವಲಿಂಗವನ್ನು ತೆರವು ಗೊಳಿಸಲು ಆದೇಶಿಸಿದ ತೀರ್ಪು ಬರೆಯುತ್ತಿರುವಾಗ ಉಪ ನಿಬಂಧಕ ವಿಶ್ವನಾಥ ರಾಯ್ ಆಕಸ್ಮಿಕವಾಗಿ ಕುಸಿದು ಮೂರ್ಛೆ ಹೋದರು. ಆದ್ದರಿಂದ ನ್ಯಾಯಮೂರ್ತಿ ಜಾಯ್ ಸೇನಗುಪ್ತಾ ಇವರು ತಕ್ಷಣ ಆದೇಶವನ್ನು ಹಿಂಪಡೆದರು.
೫. ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !
ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸಿದ ನಂತರ ಮೊದಲ ಬಾರಿ ಓರ್ವ ಮುಸಲ್ಮಾನನಿಗೆ ಶಿಕ್ಷೆಯಾಗಿದೆ. ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಬಲಾತ್ಕರಿಸಿ ಅವಳನ್ನು ಮತಾಂತರಿಸಲು ಪ್ರಯತ್ನಿಸಿದ ಆರೋಪದಲ್ಲಿ ಇಂದೋರದಲ್ಲಿನ ಮಹಮ್ಮದ ಸಾಬಿರ ಖಾನ್ ಇವನಿಗೆ ೨೦ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
೬. ೬೦ ವರ್ಷಗಳ ಅಧಿಕಾರದಲ್ಲಿದ್ದ ಕಾಂಗ್ರೆಸ್ ಇದನ್ನು ಮಾಡಲಿಲ್ಲ !
ಭಾರತದ ಗಡಿಯನ್ನು ಇನ್ನಷ್ಟು ಭದ್ರಪಡಿಸಲಾಗುತ್ತಿದೆ. ೨೦೧೪ ರ ನಂತರ ಭಾರತವು ಗಡಿ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆರಂಭಿಸಿದೆ, ಎಂದು ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರರು ಹೇಳಿದ್ದಾರೆ.
೭. ನಾಳೆ ಅಲ್ಲಿ ಹಿಂಸಾಚಾರ ನಡೆದರೆ ಆಶ್ಚರ್ಯ ಪಡುವಂತಿಲ್ಲ !
ರಾಷ್ಟ್ರೀಯ ಚುನಾವಣಾ ಆಯೋಗವು ಅಸ್ಸಾಂ ರಾಜ್ಯ ದಲ್ಲಿನ ಮತಕ್ಷೇತ್ರದಲ್ಲಿ ಮಾಡಿದ ಬದಲಾವಣೆಯಲ್ಲಿ ಐದು ಮುಸ್ಲಿಂ ಬಹುಸಂಖ್ಯಾತ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಸ್ಥಾನಗಳನ್ನು ಮುಸಲ್ಮಾನರ ಬದಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕಾಯ್ದಿರಿಸಿದೆ. ಇದರಿಂದಾಗಿ ಅಲ್ಲಿಯ ಮತಾಂಧ ಮುಸಲ್ಮಾನರು ಉದ್ರೇಕಗೊಂಡಿದ್ದಾರೆ.