ಸೃಷ್ಟಿಯ ನಿರ್ಮಿತಿಯಿಂದಲೂ ಪೂರ್ಣ ಜಗತ್ತು ಸನಾತನಮಯ ವಾಗಿತ್ತು. ಸತ್ಯ ಹಾಗೂ ಧರ್ಮ ಇವು ಸೃಷ್ಟಿಯ ನೇತ್ರಗಳಾಗಿದ್ದವು. ಅನಾದಿ ಹಾಗೂ ಅನಂತವಾಗಿರುವ ಸನಾತನ ಧರ್ಮಾಧಾರಿತ ಸುಸಂಸ್ಕೃತ ಹಾಗೂ ಅತ್ಯಂತ ಸಂಪದ್ಭರಿತ ರಾಷ್ಟ್ರ ವ್ಯವಸ್ಥೆ ಇತ್ತು.
ನಮ್ಮ ಪೂರ್ವಜರು ಈ ಸ್ಥಿತಿ ಯನ್ನು ಅನುಭವಿಸಿದ್ದರು. ಅದೇ ಭಾವನೆಯಿಂದ ‘ವಸುಧೈವ ಕುಟುಂಬಕಮ್’ನಂತಹ (ಸಂಪೂರ್ಣ ಪೃಥ್ವಿಯೇ ಒಂದು ಕುಟುಂಬವಾಗಿದೆ.) ವ್ಯಾಪಕತೆಯಿತ್ತು. ನಮ್ಮ ಋಷಿಮುನಿಗಳು ‘ಕೃಣ್ವಂತೋ ವಿಶ್ವಮಾರ್ಯಮ್ |’ (ಇಡೀ ವಿಶ್ವವನ್ನು ಆರ್ಯ (ಸುಸಂಸ್ಕೃತವನ್ನಾಗಿ) ಮಾಡೋಣ), ಎಂದು ಘೋಷಣೆ ಮಾಡಿದರು. ಗುರು-ಶಿಷ್ಯ ಪರಂಪರೆಯು ಅದರ ರಕ್ಷಣೆ ಮಾಡುತ್ತಾ ಬಂದಿತ್ತು. ಕೇವಲ ೫೩ ವರ್ಷಗಳ ಹಿಂದೆ ‘ಧರ್ಮನಿರಪೇಕ್ಷ’ ಎಂಬ ಶಬ್ದದಿಂದ ಹಿಂದೂಗಳು ಗತ ವೈಭವವನ್ನು ಮರೆತರು. ಹಿಂದೂಗಳು ಈ ನಿರರ್ಥಕ ಶಬ್ದ ವನ್ನು ರಕ್ತಗತ ಮಾಡಿಕೊಳ್ಳುವ ಆವಶ್ಯಕತೆಯೇನಿತ್ತು ? ಇತರ ಧರ್ಮೀಯರು ಧರ್ಮನಿರಪೇಕ್ಷತೆಯನ್ನು ಕಡೆಗಣಿಸಿ ತಮ್ಮ ಪಂಥದಲ್ಲಿ ಶ್ರದ್ಧೆಯನ್ನು ದೃಢಗೊಳಿಸಿದರು. ಹೀಗಿರುವಾಗ ಈ ದೇಶದ ಹಿಂದೂಗಳು ಧರ್ಮನಿರಪೇಕ್ಷತೆಯನ್ನು ಏಕೆ ಸ್ವೀಕರಿಸಿದರು ? ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದ ಕಾರಣ ಅವರು ಧರ್ಮಾಚರಣೆಯನ್ನಂತೂ ಮಾಡುವುದಿಲ್ಲ, ಆದರೂ ಅದೇ ಹಿಂದೂಗಳು ಈ ಧರ್ಮವನ್ನು ಅವಮಾನಿಸುತ್ತಿದ್ದಾರೆ. ಇಂದು ಹಿಂದೂಗಳಿಗೆ ಧರ್ಮದ ವಿಷಯದಲ್ಲಿ ನಾಸ್ತಿಕವಾದಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಬರುವುದಿಲ್ಲ; ಆದ್ದರಿಂದಲೇ ಈಗ ಹಿಂದೂಗಳು ಶ್ರೀಮಂತನಾಗಿದ್ದರೂ ಬಡವರಾಗಿದ್ದಾರೆ.
ನಮ್ಮ ದುರ್ಭಾಗ್ಯವೆಂದರೆ, ಇಂತಹ ವೈಭವಶಾಲಿ ಧರ್ಮ-ಸಂಸ್ಕೃತಿಯನ್ನು ತಿಳಿದುಕೊಳ್ಳದಿರುವುದರಿಂದ ಇಂದು ನಾವು ಬಡವರಾಗಿದ್ದೇವೆ, ಎಂಬುದನ್ನು ಎಷ್ಟು ಹಿಂದೂಗಳು ಸ್ವೀಕಾರ ಮಾಡಿದ್ದಾರೆ ? ನಾವು ನಮ್ಮ ಗತವೈಭವವನ್ನು ವಾಪಾಸು ಪಡೆಯಬೇಕು, ಎಂದು ಎಷ್ಟು ಹಿಂದೂಗಳಿಗೆ ಅನಿಸುತ್ತದೆ ? ಬೆರಳೆಣಿಕೆಯಷ್ಟೇ ಜನರಿಗೆ ಅನಿಸಬಹುದು ! ‘ಧರ್ಮ ಉಳಿದರೆ ರಾಷ್ಟ್ರ ಉಳಿಯಬಹುದು ಹಾಗೂ ರಾಷ್ಟ್ರ ಉಳಿದರೆ ನಾವು ಉಳಿಯಬಹುದು’, ಎಂಬ ಕಟುಸತ್ಯವನ್ನು ತಿಳಿದುಕೊಂಡು ಹಿಂದೂಗಳು ಅಂತರ್ಮುಖರಾಗಿ ಕೃತಿಶೀಲರಾಗಬೇಕು. ಧರ್ಮನಿರಪೇಕ್ಷತೆಯ ಸೋಗು ಸನಾತನ ಹಿಂದೂಗಳಿಗೆ ಅನ್ವಯವಾಗುವುದಿಲ್ಲ, ನಿಜವಾದ ಸನಾತನ ಹಿಂದೂ ಧರ್ಮ ವನ್ನು ಬಿಟ್ಟು ಇತರರ ಧರ್ಮವನ್ನು ಏಕೆ ಆರಿಸಬೇಕು ? ಎಂದು ಧರ್ಮನಿರಪೇಕ್ಷ ಹಿಂದೂಗಳಿಗೆ ಪ್ರಶ್ನಿಸಬೇಕಾಗುತ್ತದೆ.
– ಶ್ರೀ. ಗುರುಪ್ರಸಾದ ಗೌಡ, ಮಂಗಳೂರು (೪.೭.೨೦೨೩)